ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ಕೆನರಾ ಬ್ಯಾಂಕ್ ನಿಂದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಪಿಠೋಪಕರಣಗಳ ವಿತರಣೆ ಮಾಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಪ್ರೌಢಶಾಲೆಗೆ ಪಿಠೋಪಕರಣಗಳ ವಿತರಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಕೆನರಾ ಬ್ಯಾಂಕ್ ವತಿಯಿಂದ ಮಾಡುವ ಸಹಾಯ ಸರ್ಕಾರಿ ಶಾಲೆಯ ಮಕ್ಕಳಿಗೆ ಸಿಗಬೇಕು ಎಂದು ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯನ್ನೇ ಶಿಫಾರಸ್ಸು ಮಾಡಿದ್ದು, ಈ ಶಾಲೆಗೆ ನೀರಿನ ಸೌಲಭ್ಯಕ್ಕಾಗಿ ಪಕ್ಕದ ಶಾಲೆ ಬಳಿ ಇರುವ ಕೊಲವೆ ಬಾವಿಯಿಂದ ಪೈಪ್ ಲೈನ್ ಹಾಕಿಸಿ ಕೊಡುವುದಾಗಿ ಕೆನರಾ ಬ್ಯಾಂಕ್ ಅಧಿಕಾರಿಗಳು  ಭರವಸೆ ನೀಡಿದರು

Chikkaballapur News: ತಾಯಿಯ ಸ್ಮರಣಾರ್ಥ ಪೌರ ಕಾರ್ಮಿಕರಿಗೆ ಸ್ಪೆಟರ್ ವಿತರಿಸಿದ ನಗರಸಭೆ ಮಾಜಿ ಸದಸ್ಯ ಆರ್.ಮಟಮಪ್ಪ

ಸ್ಪೆಟರ್ ವಿತರಿಸಿದ ನಗರಸಭೆ ಮಾಜಿ ಸದಸ್ಯ ಆರ್.ಮಟಮಪ್ಪ

ನಗರಸಭೆಯ ಆವರಣದಲ್ಲಿ ಬುಧವಾರ ನಗರಸಭೆಯ ಮಾಜಿ ಸದಸ್ಯ ವಕೀಲ ಆರ್.ಮಟಮಪ್ಪ ತಮ್ಮ ತಾಯಿ ಲಕ್ಷ್ಮಮ್ಮ 5ನೇವರ್ಷದ ಪುಣ್ಯಸ್ಮರಣೆ ಅಂಗ ವಾಗಿ ಮಾತಾಶ್ರೀ ಲಕ್ಷಮ್ಮ ಸೇವಾ ಟ್ರಸ್ಟ್ನಿಂದ ನಗರಸಭೆಯ 100 ಮಂದಿ ಪೌರ ಕಾರ್ಮಿಕರಿಗೆ ಸ್ಪೆಟರ್‌ಗಳನ್ನು ವಿತರಿಸಲಾಯಿತು.

Gudibande News: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸಿಪಿಎಂ ಪಕ್ಷದಿಂದ ಡಿ.21 ರಂದು ಬೃಹತ್ ಪ್ರತಿಭಟನೆ

ಸಿಪಿಎಂ ಪಕ್ಷದಿಂದ ಡಿ.21 ರಂದು ಬೃಹತ್ ಪ್ರತಿಭಟನೆ

ಚುನಾವಣೆಗಳ ಸಮಯದಲ್ಲಿ ಸುಳ್ಳು ಭರವಸೆಗಳನ್ನು ಕೊಟ್ಟು ಎಲ್ಲರಿಗೂ ಮಂಕುಬೂದಿ ಎರಚಿ ಅಧಿಕಾರ ಗಿಟ್ಟಿಸಿಕೊಳ್ಳುತ್ತವೆ. ಚುನಾವಣೆಯ ಬಳಿಕ ಎಲ್ಲರನ್ನೂ ಮರೆತೆ ಹೋಗು ತ್ತಾರೆ. ಫಾರಂ ನಂ 57 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಇಲ್ಲಿಯವರೆಗು ಭೂಮಿ ನೀಡಿಲ್ಲ. ಅದರ ಬದಲಿಗೆ ಅರ್ಜಿ ಹಾಕಿದ ಪಹಣಿಯಲ್ಲಿ ಗೋಮಾಳ ಎಂದು ನಮೂದಾಗಿದ್ದರೇ, ಅಂತಹ ಜಮೀನು ಮಂಜೂರು ಮಾಡಬಾರದೆಂಬ ಮಾರ್ಗಸೂಚಿ ಬಂದಿದೆ.

ಡಿ.21ರಂದು ಎಲುಬು ಸಾಂದ್ರತೆ ಪರೀಕ್ಷೆ

ಮೊಣಕಾಲು-ಬೆನ್ನುಮೂಳೆ ನೋವು ಚಿಕಿತ್ಸಾ ಶಿಬಿರ

ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ಅಮೃತ ಪಾಲಿ ಕ್ಲಿನಿಕ್‌ನಲ್ಲಿ ಡಿ.21 ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 12 ರವರೆಗೆ ಉಚಿತ ಎಲುಬು ಸಾಂದ್ರತೆ ಹಾಗೂ ಮೊಣಕಾಲು ಮತ್ತು ಬೆನ್ನುಮೂಳೆ ನೋವು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಕ್ಯೂರಾ ಆಸ್ಪತ್ರೆ ಮೊಣಕಾಲು ನೋವು ತಜ್ಞ ಡಾ.ಅಬ್ರಾರ್ ಮಹ ಮ್ಮದ್ ತಿಳಿಸಿದರು.

ಪೌರಾಯುಕ್ತ ಪಟ್ಟ ಒಂದೇ ದಿನ; ವಿಶ್ವವಾಣಿ ವರದಿ ಉಲ್ಲೇಖಿಸಿ ವಿಧಾನ ಪರಿಷತ್‌ನಲ್ಲಿ ರಮೇಶಬಾಬು ಕಿಡಿ

ಪೌರಾಯುಕ್ತ ಪಟ್ಟ ಒಂದೇ ದಿನ; ವಿಶ್ವವಾಣಿ ವರದಿ ಉಲ್ಲೇಖಿಸಿ ರಮೇಶಬಾಬು ಕಿಡಿ

ಚಿಕ್ಕನಾಯಕನಹಳ್ಳಿ ಪುರಸಭೆ ಮುಖ್ಯಾಧಿಕಾರಿ ಮಂಜಮ್ಮ ಅವರು ಪೌರಾಯುಕ್ತರಾಗಿ ಪದೋನ್ನತಿ ಪಡೆದಿದ್ದರು. ನಿಯಮದಂತೆ ಅವರು ಹೊಸ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕಿತ್ತು. ಆದರೆ, ಕೇವಲ ಒಂದು ದಿನ ಪೌರಾಯುಕ್ತರಾಗಿ, ಮರುದಿನವೇ ತಮಗೆ ಲಾಭದಾಯಕವಾಗಿರುವ ಹಳೆಯ ಹುದ್ದೆಗೆ ವಾಪಸ್ ಬಂದಿದ್ದಾರೆ. ಈ ಬಗ್ಗೆ ಸದನದಲ್ಲಿ ಎಂಎಲ್‌ಸಿ ರಮೇಶಬಾಬು ಆಕ್ರೋಶ ಹೊರಹಾಕಿದ್ದಾರೆ.

ಲೈಂಗಿಕ ದೌರ್ಜನ್ಯ; 70 ವರ್ಷದ ಪತಿ ವಿರುದ್ಧ ದೂರು ನೀಡಿದ ನಿವೃತ್ತ ಪ್ರಾಧ್ಯಾಪಕಿ

ಲೈಂಗಿಕ ದೌರ್ಜನ್ಯ; 70 ವರ್ಷದ ಪತಿ ವಿರುದ್ಧ ದೂರು ನೀಡಿದ ಮಹಿಳೆ

Bengaluru News: ದಾಂಪತ್ಯ ಜೀವನದುದ್ದಕ್ಕೂ ನಿರಂತರ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಂಡನ ವಿರುದ್ಧ ಬೆಂಗಳೂರಿನ ಗೋವಿಂದರಾಜನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ವಿವಾಹವಾದ ಬರೋಬ್ಬರಿ 42 ವರ್ಷಗಳ ಬಳಿಕ ವೃದ್ಧ ಮಹಿಳೆ ಮೌನ ಮುರಿದಿದ್ದಾರೆ.

MGNREGA Recruitment 2025: ಮನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಅವಕಾಶ

ರಾಯಚೂರು ಜಿಲ್ಲಾ ಪಂಚಾಯತ್‌ನಲ್ಲಿದೆ ಉದ್ಯೋಗಾವಕಾಶ

ರಾಯಚೂರು ಜಿಲ್ಲಾ ಪಂಚಾಯತ್‌ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ ಇತರೆ ಅರ್ಹತೆಗಳನ್ನು ತಿಳಿದು ಅರ್ಜಿ ಸಲ್ಲಿಸಿ.

Pralhad Joshi: ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಪ್ರಲ್ಹಾದ್‌ ಜೋಶಿ

ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಜೋಶಿ

ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಇನ್ನೈದು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (DPR) ಸಿದ್ಧವಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ ಮಾಹಿತಿ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕಾರವಾರಕ್ಕೆ ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ!

ವಲಸೆ ಬಂದ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ!

ಕಳೆದ ವರ್ಷ ಕೂಡ ಕಾರವಾರದ ಬಳಿ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿದ್ದ ರಣಹದ್ದು ಕಂಡು ಬಂದಿತ್ತು. ಅದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿದೆ. ಹೀಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Karnataka Winter Session: ಕೆಳಮನೆಯಲ್ಲಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ಅಂಗೀಕಾರ

ಕೆಳಮನೆಯಲ್ಲಿ ಬೆಂಗಳೂರು ಭೂಸಾರಿಗೆ ಪ್ರಾಧಿಕಾರ ಮಸೂದೆ ಅಂಗೀಕಾರ

DK Shivakumar: ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ (ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಜಿಬಿಎ ಮೂಲಕ ಐದು ಪಾಲಿಕೆಗಳನ್ನು ಮಾಡಲಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದಲ್ಲಿ ಬಿಬಿಎಂಪಿ ಮೇಯರ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರು ಎಂಬುದನ್ನು ಗ್ರೇಟರ್ ಬೆಂಗಳೂರಿನ ವಿವಿಧ ನಗರ ಪಾಲಿಕೆಯ ಹೆಸರುಗಳನ್ನು ಸೇರಿಸಿ ಬದಲಾವಣೆ ಮಾಡಲಾಗುತ್ತಿದೆ. ಇದರ ಹೊರತಾಗಿ ಬೇರೆ ಯಾವುದೇ ಬದಲಾವಣೆ ಇಲ್ಲ. ಕಾನೂನು ಪ್ರಕಾರ ಇದನ್ನು ಮಾಡಲೇಬೇಕಾಗಿರುವ ಕಾರಣ ಈ ತಿದ್ದುಪಡಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿಯರಿಗೆ ಸಚಿವೆ ಹೆಬ್ಬಾಳ್ಕರ್‌ ಮೋಸ ಮಾಡಿದ್ದೇಕೆ?: ಆರ್‌.ಅಶೋಕ್‌ ಪ್ರಶ್ನೆ

ಗೃಹಲಕ್ಷ್ಮಿಯರಿಗೆ ಸಚಿವೆ ಹೆಬ್ಬಾಳ್ಕರ್‌ ಮೋಸ ಮಾಡಿದ್ದೇಕೆ?: ಅಶೋಕ್‌

Gruhalakshmi Scheme: ಗೃಹಲಕ್ಷ್ಮಿ ಹಣ ಬರುತ್ತದೆ, ಪಡಿತರ ಪಡೆಯೋಣ ಎಂದು ಬಡವರು ಕಾಯುತ್ತಾರೆ. ಅವರ ಆಸೆಯ ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿದ್ದಾರೆ ಎಂದು ಟೀಕಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, 10 ಜಿಲ್ಲೆಗಳಿಗೆ ಹಣ ಕೊಟ್ಟಿಲ್ಲ. ಜಿಲ್ಲಾ ಕಚೇರಿಗಳಿಂದ ಮಾಹಿತಿ ಕೇಳಿದರೆ ಕೊಡದಂತೆ ಎಲ್ಲರಿಗೂ ಧಮ್ಕಿ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

CM Siddaramaiah: ಸಿಎಂ ಸಿದ್ದರಾಮಯ್ಯಗೆ ತೀವ್ರ ಹೊಟ್ಟೆನೋವು; ಬೆಳಗಾವಿ ಸರ್ಕೀಟ್‌ ಹೌಸ್‌ನಲ್ಲಿ ವಿಶ್ರಾಂತಿ

ಸಿಎಂ ಸಿದ್ದರಾಮಯ್ಯಗೆ ತೀವ್ರ ಹೊಟ್ಟೆನೋವು; ವಿಶ್ರಾಂತಿಗೆ ವೈದ್ಯರ ಸೂಚನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ವಿಚಾರ ತಿಳಿಯುತ್ತಿದ್ದಂತೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿ ಸರ್ಕೀಟ್‌ ಹೌಸ್‌ಗೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಹಾಗೂ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಸೇರಿ ಹಲವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಎಲ್ಲೆಂದರಲ್ಲಿ ಪಾರಿವಾಳಗಳಿಗೆ ಆಹಾರ ಹಾಕುತ್ತೀರಾ? 2 ವರ್ಷದವರೆಗೆ ಜೈಲೂಟ ಫಿಕ್ಸ್!

ಪಾರಿವಾಳಗಳಿಗೆ ಆಹಾರ ಹಾಕುತ್ತೀರಾ? ಈ ಸುದ್ದಿ ಓದ್ಲೇಬೇಕು

Pigeon feeding ban: ಕರ್ನಾಟಕ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಪೂರೈಸುವ ಕಾರ್ಯಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ನಿಷೇಧವನ್ನು ಜಾರಿಗೆ ತರಲು ಮುಂದಾಗಿದೆ. ನಿಯಮಗಳನ್ನು ಉಲ್ಲಂಘಿಸಿದವರಿಗೆ ಗಂಭೀರ ದಂಡಾತ್ಮಕ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರೇಣುಕಾ ಸ್ವಾಮಿ ತಾಯಿಗೆ ಕ್ರಾಸ್‌ ಎಕ್ಸಾಮಿನೇಷನ್; ವಿಚಾರಣೆ ನಾಳೆಗೆ ಮುಂದೂಡಿಕೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಾಳೆಗೆ ಮುಂದೂಡಿಕೆ

Renukaswamy Murder Case: ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ಪವಿತ್ರಾಗೌಡ ಪರ ವಕೀಲ ಬಾಲನ್‌ ಅವರು, ರೇಣುಕಾಸ್ವಾಮಿ ತಾಯಿಗೆ ಒಂದಿಷ್ಟು ಕ್ರಾಸ್‌‌ ಎಕ್ಸಾಮಿನೇಷನ್ ಪ್ರಶ್ನೆಗಳನ್ನು ಕೇಳಿದ್ದಾರೆ. ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದೆ.

A Narayanaswamy: ಸಮರ್ಪಕವಾಗಿ ಒಳಮೀಸಲಾತಿ ಜಾರಿಗೊಳಿಸದಿದ್ರೆ ಸರ್ಕಾರ ಕಿತ್ತೊಗೆಯುವ ಸಂಕಲ್ಪ: ಎ. ನಾರಾಯಣಸ್ವಾಮಿ

ರಾಜ್ಯದಲ್ಲಿ ಸಮರ್ಪಕವಾಗಿ ಒಳಮೀಸಲಾತಿ ಜಾರಿಗೊಳಿಸಿ: ಎ. ನಾರಾಯಣಸ್ವಾಮಿ

ಮುಂಬಡ್ತಿ ಮೀಸಲಾತಿ ಅನುಷ್ಠಾನ ಸಂಬಂಧ ಈ ಸದನದಲ್ಲಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಹರಿಯಾಣ, ಪಂಜಾಬ್, ಆಂಧ್ರ ಪ್ರದೇಶದಲ್ಲಿ ಮುಂಬಡ್ತಿ ಮೀಸಲಾತಿ ಇದೆ. ತಮಿಳುನಾಡಿನಲ್ಲೂ ಇದೆ. ಕರ್ನಾಟಕದಲ್ಲಿ ಇದು ಆಗಬೇಕು. ಕಳೆದ 20 ವರ್ಷಗಳಿಂದ ನಾನು ಹೋರಾಟದ ಭಾಗವಾಗಿದ್ದೇನೆ ಎಂದು ತಿಳಿಸಿದ್ದಾರೆ.

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ, ಅವರ ಸುಳ್ಳು ಕೇಸ್‌ಗಳಿಗೆ ಆಯುಷ್ಯವಿಲ್ಲ: ಡಿ.ಕೆ. ಶಿವಕುಮಾರ್ ಟೀಕೆ

ದ್ವೇಷ ರಾಜಕಾರಣ ಬಿಜೆಪಿ ಆಸ್ತಿ ಎಂದ ಡಿ.ಕೆ. ಶಿವಕುಮಾರ್

National Herald Case: ಬಿಜೆಪಿ ಎಷ್ಟೇ ಪಿತೂರಿ ಮಾಡಿದರೂ ನಮಗೆ ನ್ಯಾಯ ಸಿಕ್ಕಿದೆ. ಬಿಜೆಪಿ ಎಂದರೆ ಬುರುಡೆ ಜನತಾ ಪಕ್ಷವಾಗಿದೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಲು ಪಿತೂರಿ ಮಾಡಲಾಗಿದೆ. ಈ ದ್ವೇಷ ರಾಜಕಾರಣ ಇಲ್ಲಿಗೆ ಕೊನೆಯಾಗಬೇಕು. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಪ್ರತಿಭಟನೆ ಮುಂದುವರಿಯಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Karnataka Winter Session: ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ನಕಲು ಮಾಡಿ ಬೇರೆ ರಾಜ್ಯಗಳಲ್ಲಿ ಗೆಲ್ಲುತ್ತಿದೆ: ಡಿ.ಕೆ.ಶಿವಕುಮಾರ್‌

ನಮ್ಮ ಗ್ಯಾರಂಟಿಗಳನ್ನು ಬಿಜೆಪಿ ನಕಲು ಮಾಡಿ ಗೆಲ್ಲುತ್ತಿದೆ: ಡಿಕೆಶಿ

ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲು ಸಾಧ್ಯವಾಗದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಒಪ್ಪಿಕೊಳ್ಳಿ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಾಡಿದ ಟೀಕೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಮ್ಮ ಯೋಜನೆಗಳನ್ನು ನಕಲು ಮಾಡಿಯೇ ಎನ್‌ಡಿಎ ಇಡೀ ದೇಶದಲ್ಲಿ ಬೇರೆ ರಾಜ್ಯಗಳಲ್ಲಿ ಚುನಾವಣೆ ಗೆದ್ದು ಅಧಿಕಾರ ಪಡೆಯುತ್ತಿದೆ ಎಂದು ಟೀಕಿಸಿದ್ದಾರೆ.

ಬೈಕ್‌ನಲ್ಲಿ ಹೋಗುವಾಗಲೇ ಗಂಡನಿಗೆ ಹೃದಯಾಘಾತ; ರಸ್ತೆಯಲ್ಲಿ ಪತ್ನಿ ಅಂಗಲಾಚಿದ್ರೂ ಸಿಗಲಿಲ್ಲ ಸಹಾಯ

ಬೈಕ್‌ನಲ್ಲಿ ಹೋಗುವಾಗಲೇ ಹೃದಯಾಘಾತ; ಅಂಗಲಾಚಿದ್ರೂ ಸಿಗಲಿಲ್ಲ ಸಹಾಯ

Bengaluru News: ಬೆಂಗಳೂರಿನ ಬನಶಂಕರಿ ಮೂರನೇ ಸ್ಟೇಜ್ ಇಟ್ಟುಮಡುವಿನ ಬಾಲಾಜಿ ನಗರದ ನಿವಾಸಿ ಬೈಕ್‌ನಲ್ಲಿ ಹೋಗುವಾಗಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಸಮಾಜದಲ್ಲಿ ಮಾನವೀಯತೆ ಸತ್ತಿದೆ. ನನ್ನ ಗಂಡ ಹೃದಯಾಘಾತದಿಂದ ರಸ್ತೆಯಲ್ಲಿ ಬಿದ್ದಾಗ, ಸಹಾಯ ಮಾಡುವಂತೆ ಅಂಗಲಾಚಿದೆ. ಆದರೆ, ಯಾರೂ ಮುಂದೆ ಬರಲಿಲ್ಲ ಎಂದು ಮೃತ ವ್ಯಕ್ತಿಯ ಪತ್ನಿ ನೋವು ತೋಡಿಕೊಂಡಿದ್ದಾರೆ.

ಬಿಜೆಪಿ ತನ್ನ ತಪ್ಪು ಮರೆಮಾಚಲು ಕಾಂಗ್ರೆಸ್ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ: ಸಿಎಂ ಸಿದ್ದರಾಮಯ್ಯ

National Herald Case: ರಾಜ್ಯ ಹಾಗೂ ದೇಶದುದ್ದಕ್ಕೂ ಬಿಜೆಪಿಯ ಕುತಂತ್ರ ನೀತಿಯನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಕಾಂಗ್ರೆಸ್ ಎಂದಿಗೂ ಕೈಕಟ್ಟಿ ಕೂರುವ ಪಕ್ಷವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟದ್ದು ಕಾಂಗ್ರೆಸ್ ಪಕ್ಷ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಆದರೆ ಈಗ ದ್ವೇಷ ರಾಜಕಾರಣವನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Music Mailari Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಗಾಯಕ ಮ್ಯೂಸಿಕ್ ಮೈಲಾರಿ ಅರೆಸ್ಟ್

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಗಾಯಕ ಮ್ಯೂಸಿಕ್ ಮೈಲಾರಿ ಅರೆಸ್ಟ್

Bagalkot News: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಡಗುಂಟಿ ಗ್ರಾಮದ ನಿವಾಸಿಯಾಗಿರುವ ಮ್ಯೂಸಿಕ್ ಮೈಲಾರಿ ವಿರುದ್ಧ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿತ್ತು. ಇದೀಗ ಆರೋಪಿಯನ್ನು ಪೊಲೀಸರು ವಿಜಯಪುರದ ತಿಕೋಟಾದಲ್ಲಿ ಬಂಧಿಸಿದ್ದಾರೆ.

ಪ್ರವಾಸಿ ತಾಣವಾಗಿರುವ ಗೋಕರ್ಣಕ್ಕೆ ಬೇಕಿದೆ ಅಗ್ನಿಶಾಮಕ ದಳ

ಪ್ರವಾಸಿ ತಾಣವಾಗಿರುವ ಗೋಕರ್ಣಕ್ಕೆ ಬೇಕಿದೆ ಅಗ್ನಿಶಾಮಕ ದಳ

ಡಿಸೆಂಬರ್, ಜನವರಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕೆಲವೊಮ್ಮೆ-- ಒಂದು ದಿನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಗೋಕರ್ಣಕ್ಕೆ ಪೊಲೀಸ್ ಠಾಣೆ ಯಿದ್ದು, ಒಬ್ಬ ಪಿಐ, ಇಬ್ಬರು ಪಿಎಸ್‌ಐ, ಎಎಸ್‌ಐ ಹಾಗೂ ಸಿಬ್ಬಂದಿಗಳಿದ್ದಾರೆ. ಹಾಗೇ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಹೀಗಾಗಿ ಇಲ್ಲಿಯೂ ಕೂಡ ಅಗ್ನಿಶಾಮಕ ದಳ ಬೇಕು ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ.

Dharwad News: ಬೆತ್ತಲೆ ಮಸಾಜ್‌ ಮಾಡಿಸಿಕೊಂಡ ಸ್ವಾಮೀಜಿಯ ವಿಡಿಯೊ ಬಯಲು, ಬ್ಲ್ಯಾಕ್‌ಮೇಲ್‌

ಸ್ವಾಮೀಜಿಯ ಬೆತ್ತಲೆ ಮಸಾಜ್‌ ವಿಡಿಯೊ ಬಯಲು, ಬ್ಲ್ಯಾಕ್‌ಮೇಲ್‌ ಕೇಸ್

ಸುಮಾರು 5 ಜನರ ಗುಂಪು ಈ ವಿಡಿಯೋವನ್ನಿಟ್ಟುಕೊಂಡು ಸ್ವಾಮೀಜಿಯನ್ನ ಬ್ಲ್ಯಾಕ್‌ಮೇಲ್ ಮಾಡಿ 20 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿತ್ತು. ಗ್ರಾಮದ ವ್ಯಕ್ತಿಯೊಬ್ಬರ ಸಮ್ಮುಖದಲ್ಲಿ 10 ಲಕ್ಷಕ್ಕೆ ಡೀಲ್ ಓಕೆ ಆಗಿತ್ತು. ಬಳಿಕ ಸ್ವಾಮೀಜಿ ವಿಡಿಯೋ ಡಿಲೀಟ್‌ ಮಾಡುವಂತೆ ಹೇಳಿ ಮಠಕ್ಕೆ ಕರೆಸಿಕೊಂಡು 7 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಬಾಕಿ 3 ಲಕ್ಷ ಹಣ ಬಂದಿಲ್ಲ ಅಂತ ಗುಂಪಿನವರು ವಿಡಿಯೋ ವೈರಲ್‌ ಮಾಡಿದ್ದಾರೆ.

National Herald Case: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಬೆಳಗಾವಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಬೆಳಗಾವಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸುವರ್ಣಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು. ಪ್ಲೇ ಕಾರ್ಡ್ ಹಿಡಿದುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Karnataka Weather: ರಾತ್ರಿ ಗಡಗಡ ಚಳಿ, ಹಗಲು ಚುರುಚುರು ಬಿಸಿಲು; ವಿಜಯಪುರದಲ್ಲಿ ದಾಖಲಾಯ್ತು 7 ಡಿಗ್ರಿ ತಾಪಮಾನ

ರಾತ್ರಿ ಗಡಗಡ ಚಳಿ, ಹಗಲು ಚುರುಚುರು ಬಿಸಿಲು; ವಿಜಯಪುರದಲ್ಲಿ 7 ಡಿಗ್ರಿ

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಜನರಿಗೆ ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ನೀರು ಬಳಸುವುದು ಹಾಗೂ ಮುಂಜಾನೆ ಮತ್ತು ಸಂಜೆ ವಾಕಿಂಗ್‌ಗೆ ತೆರಳದಂತೆ ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ (Bengaluru weather) ಸಂಜೆ, ರಾತ್ರಿ ಹಾಗೂ ಮುಂಜಾನೆ ತಾಪಮಾನ ಎಂದಿಗಿಂತ ಕಡಿಮೆ ಪ್ರಮಾಣದಲ್ಲಿರಲಿದೆ. ಹಿರಿಯ ನಾಗರಿಕರು ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.

Loading...