ಸೇವಾ ಹಿರಿತನಕ್ಕಿಲ್ಲ ಕಿಮ್ಮತ್ತು, ಕೊಪ್ಪಳ ವಿವಿಯಲ್ಲಿ ನಿಯಮ ಮೀರಿ ನೇಮಕ
ಮಂಡಳಿಗೆ ಅಧ್ಯಕ್ಷ ಹಾಗೂ ಐವರು ಸದಸ್ಯರನ್ನು ನೇಮಕ ಮಾಡಿ ಆದೇಶಿಸಿದೆ. ಸಾಮಾನ್ಯವಾಗಿ ವಿವಿ ವ್ಯಾಪ್ತಿಯ ಕಾಲೇಜುಗಳ ಹಿರಿಯ ಪ್ರಾಧ್ಯಾಪಕರರನ್ನು ಅಧ್ಯಕ್ಷರು ಹಾಗೂ ಸದಸ್ಯರಾಗಿ ನೇಮಕ ಮಾಡಬೇಕು. ಆದರೆ, ಸೇವಾ ಹಿರಿತನ ಕಡೆಗಣಿಸಿ ಅತ್ಯಂತ ಕಿರಿಯ ಪ್ರಾಧ್ಯಾಪಕರನ್ನು ಬಿಒಇ ಅಧ್ಯಕ್ಷ ರಾಗಿ ನೇಮಿಸಲಾಗಿದೆ. ವಿವಿಯ ಈ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.