ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಲಾಡ್ಜ್‌ನಲ್ಲಿ ವ್ಯಕ್ತಿಯನ್ನು ಕೂಡಿ ಹಾಕಿ ಹಲ್ಲೆ: ವಿಡಿಯೋ ವೈರಲ್

ಲಾಡ್ಜ್‌ನಲ್ಲಿ ವ್ಯಕ್ತಿಯನ್ನು ಕೂಡಿ ಹಾಕಿ ಹಲ್ಲೆ: ವಿಡಿಯೋ ವೈರಲ್

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಆನಂದ ಲಾಡ್ಜ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಕಾಂಗ್ರೆಸ್ ಮುಖಂಡ ಶೇಖರ ಕಾಶಿ ಹಾಗೂ ಅವರ ಪುತ್ರ ಸಂತೋಷ್ ಕಾಶಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತುಮಕೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗದಂತೆ ಕ್ರಮ: ಶಾಸಕ ಜಿ.ಬಿ. ಜ್ಯೋತಿಗಣೇಶ್

ತುಮಕೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗದಂತೆ ಕ್ರಮ

Tumkur News: ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಈಗ ಬುಗುಡನಹಳ್ಳಿ ಕೆರೆಯಲ್ಲಿ ಲಭ್ಯವಿರುವ ನೀರು ಜನವರಿವರೆಗೆ ಸಾಕಾಗಬಹುದು, ನಾಗರೀಕರಿಗೆ ತೊಂದರೆ ಆಗದಂತೆ ನೀರು ಪೂರೈಕೆ ಮಾಡಬೇಕು. ನೀರು ಶುದ್ಧೀಕರಣ ಘಟಕಗಳು ಹಾಗೂ ನೀರು ಪೂರೈಕೆ ಸಂಬಂಧಿಸಿದ ಯಂತ್ರಗಳು ಕೆಟ್ಟು ಹೋಗಿ ತೊಂದರೆ ಆಗದಂತೆ ಮುನ್ನೆಚ್ಚರವಹಿಸಬೇಕು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಗಂಭೀರ ಸೂಚನೆ ನೀಡಿರುವುದಾಗಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದ್ದಾರೆ.

ಸ್ಟಿಂಗ್‌ ಆಪರೇಷನ್‌ ವಿರುದ್ಧ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ; ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಸ್ಟಿಂಗ್‌ ಆಪರೇಷನ್‌ ವಿರುದ್ಧ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ

Sting Operation: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಾವು ಹೆಚ್ಚಾಗುತ್ತಿದೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಸರ್ಕಾರವನ್ನು ಕುಟುಕುತ್ತಿದ್ದಾರೆ. ಅಲ್ಲದೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ಸ್ಟಿಂಗ್‌ ಆಪರೇಷನ್‌ ಮಾಡಿದವರನ್ನು ಬಂಧಿಸಬೇಕು ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ.

ವಿಶ್ವ ಆಘಾತ ದಿನದಂದು ಜೀವ ಉಳಿಸುವ "ಪ್ಲಾಟಿನಂ 10 ನಿಮಿಷ"ಗಳಿಗಾಗಿ ಪ್ರಥಮ ಸ್ಪಂದಕರಿಗೆ ತರಬೇತಿ ನೀಡಿದ ಹಾಸ್ಪಿಟಲ್

"ಪ್ಲಾಟಿನಂ 10 ನಿಮಿಷ"ಗಳಿಗಾಗಿ ಪ್ರಥಮ ಸ್ಪಂದಕರಿಗೆ ತರಬೇತಿ

ಸಾಮಾನ್ಯವಾಗಿ, ಅಪಘಾತ ಸ್ಥಳಕ್ಕೆ ಮೊದಲು ತಲುಪುವವರು ವೈದ್ಯರಲ್ಲ — ಪೊಲೀಸರು ಅಥವಾ ಹೋಮ್ ಗಾರ್ಡ್‌ಗಳೇ ಆಗಿರುತ್ತಾರೆ. ಹಾಗಾಗಿ ಈ ತರಬೇತಿಯಲ್ಲಿ ಪೊಲೀಸ್ ಸಿಬ್ಬಂದಿ, ಟ್ರಾಫಿಕ್ ಪೊಲೀಸ್, ರೆಡ್ ಕ್ರಾಸ್ ಸ್ವಯಂಸೇವಕರು, NCC ವಿದ್ಯಾರ್ಥಿಗಳು, ಹೋಮ್ ಗಾರ್ಡ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಭಾಗವಹಿಸಿದ್ದರು. ಆಂಬ್ಯುಲೆನ್ಸ್ ಬರುವ ಮೊದಲೇ, ಅಪಘಾತ ಸ್ಥಳದಲ್ಲಿ ಸುರಕ್ಷಿತ ನೆರವು ನೀಡುವ ಸಾಮರ್ಥ್ಯ ಅವರಿಗೆ ಸಿಗುವಂತೆ ಮಾಡುವುದು ಇದರ ಗುರಿಯಾಗಿತ್ತು.

ಮೈಸೂರಿನಲ್ಲಿ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ ಗಲ್ಲು ಶಿಕ್ಷೆ ಪ್ರಕಟ

ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕನಿಗೆ ಗಲ್ಲು ಶಿಕ್ಷೆ

ಕಳೆದ ವರ್ಷ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕಾರ್ತಿಕ್‌ಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ವಸ್ತುಪ್ರದರ್ಶನ ಬಳಿ ಟೆಂಟ್‌ನಲ್ಲಿ ಮಲಗಿದ್ದಾಗ 9 ವರ್ಷದ ಬಾಲಕಿಯನ್ನು ಕಾರ್ತಿಕ್ ಎಳೆದೊಯ್ದು ಅತ್ಯಾಚಾರ ಮಾಡಿ, ಭೀಕರವಾಗಿ ಕೊಲೆ ಮಾಡಿದ್ದ.

ರಾಜ್ಯದಲ್ಲಿ ಮಳೆ ಕೊರತೆ; ಹಬ್ಬದ ಖುಷಿಯಲ್ಲಿದ್ದ ಗ್ರಾಹಕರಿಗೆ ಬೇಳೆಕಾಳುಗಳ ಬೆಲೆ ಏರಿಕೆ ಬಿಸಿ

ಹಬ್ಬದ ಖುಷಿಯಲ್ಲಿದ್ದ ಗ್ರಾಹಕರಿಗೆ ಬೇಳೆಕಾಳುಗಳ ಬೆಲೆ ಏರಿಕೆ ಬಿಸಿ

ಸಾಲು ಸಾಲು ಹಬ್ಬಗಳು ಈಗಾಗಲೇ ಶುರುವಾಗಿದ್ದು, ಗ್ರಾಹಕರ ಖುಷಿಗೆ ಬೆಲೆ ಏರಿಕೆ ತಣ್ಣೀರೆರೆಚಿದಂತಾಗಿದೆ. ಈಗಾಗಲೇ ಅಕ್ಕಿ ಬೆಲೆಯಲ್ಲಿ ಏರಿಕೆ ಉಂಟಾಗಿದ್ದು, ಎಲ್ ನಿನೋ ಎಫೆಕ್ಟ್‌ನಿಂದ ಮಳೆ ಕೊರತೆ ಉಂಟಾಗಿ ತೊಗರಿ ಬೇಳೆ ಇಳುವರಿ ಕುಸಿದಿದೆ. ಇದರ ಪರಿಣಾಮ ತೊಗರಿ ಬೆಳೆ ಸೇರಿದಂತೆ ಹಲವು ಕಾಳುಗಳ ದರ ಗಗನೆಕ್ಕೇರಿದೆ.

ಕಂಬಳ ಜತೆಗೆ ತುಳುವರ ಬದುಕು, ಜಾನಪದ ಸಂಸ್ಕೃತಿ ಪ್ರದರ್ಶನ : ಮೈಸೂರಿನಲ್ಲಿ ತುಳು ಸಂಸ್ಕೃತಿಯ ಅನಾವರಣ

ಮೈಸೂರಿನಲ್ಲಿ ತುಳು ಸಂಸ್ಕೃತಿಯ ಅನಾವರಣ

ತುಳುನಾಡಿನ ಬದುಕಿನ ಕಥೆ ಹೇಳುವ ಪ್ರಾಚೀನ ವಸ್ತುಗಳು, ಕಾಲದ ಪಯಣಕ್ಕೆ ಸಾಕ್ಷಿಯಾಗಿರುವ ಹಳೆಯ ನಾಣ್ಯಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಛಾಪು ಮೂಡಿಸಿರುವ 25 ಮಂದಿ ಸಾಧಕರಿಗೆ ಗೌರವ ಸನ್ಮಾನ ಹಾಗೂ ಕನ್ನಡತುಳು ಭಾಷೆಗಳ ಸಂಗೀತ ಸಂಭ್ರಮ ಹೀಗೆ ನಾಲ್ಕು ವಿಶಿಷ್ಟ ಆಯಾಮ ಗಳಲ್ಲಿ ರೂಪುಗೊಂಡಿರುವ ಈ ಸಾಂಸ್ಕೃತಿಕ ಹಬ್ಬವು ಅ.18 ಮತ್ತು 19ರಂದು ಕಂಬಳದ ಸಮೀಪದ ಸಾಂಸ್ಕೃತಿಕ ವೇದಿಕೆಯಲ್ಲಿ ಜನಮನ ಸೆಳೆಯಲಿದೆ.

ಅರಮನೆ ನಗರಿಯಲ್ಲಿ ಕರಾವಳಿಯ ಕಂಬಳ ವೈಭವ: ಅ.18, 19ರಂದು ದಸರಾ ಕಂಬಳ ಸಂಭ್ರಮ

ಅರಮನೆ ನಗರಿಯಲ್ಲಿ ಕರಾವಳಿಯ ಕಂಬಳ ವೈಭವ

ಎರಡು ದಿನಗಳ ಕಾಲ ಸುಮಾರು 48 ಗಂಟೆಗಳ ನಿರಂತರ ಕಂಬಳ ಸ್ಪರ್ಧೆ ನಡೆಯಲಿದ್ದು, ಕರಾವಳಿಯ 150 ಜೋಡಿ ಕೋಣಗಳ ಓಟವನ್ನು ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದು ಕೇವಲ ಕೋಣಗಳ ಓಟವಲ್ಲ, ಕರಾವಳಿಯ ಕೃಷಿ ಸಂಸ್ಕೃತಿ, ಗ್ರಾಮೀಣ ಬದುಕು, ಪ್ರಾಣಿ ಸಾಕಾಣಿಕೆಯ ಪರಂಪರೆ ಮತ್ತು ತಲೆಮಾರುಗಳಿಂದ ಉಳಿದುಬಂದ ಜಾನಪದ ಕ್ರೀಡೆಯನ್ನು ನಾಡಿನ ಸಾಂಸ್ಕೃತಿಕ ರಾಜಧಾನಿಗೆ ಪರಿಚಯಿಸುವ ಮಹತ್ವದ ಪ್ರಯತ್ನವೂ ಹೌದು.

Vishweshwar Bhat: ವಿಶ್ವವಾಣಿ ಕ್ಲಬ್‌ಹೌಸ್ ಮಹತ್ವದ ಸಾಧನೆ: ವಿಶ್ವೇಶ್ವರ ಭಟ್

ವಿಶ್ವವಾಣಿ ಕ್ಲಬ್‌ಹೌಸ್ ಮಹತ್ವದ ಸಾಧನೆ: ವಿಶ್ವೇಶ್ವರ ಭಟ್

ಕ್ಷಣಿಕ ಮನರಂಜನೆ ಮತ್ತು ಒಂದು ನಿಮಿಷದ ರೀಲ್ಸ್‌ಗಳ ಪ್ರಭಾವ ಹೆಚ್ಚುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ, ಜ್ಞಾನ ಪೂರ್ಣ ಚರ್ಚೆಗಳಿಗೆ ವೇದಿಕೆಯಾಗಿರುವ ವಿಶ್ವವಾಣಿ ಕ್ಲಬ್‌ಹೌಸ್ 1500 ಸಂಚಿಕೆ (1500 Episodes) ಪೂರೈಸಿರುವುದು ಮಹತ್ವದ ಸಾಧನೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್(Vishweshwar Bhat) ಹೇಳಿದರು.

ತಲಕಾವೇರಿಗೆ ಸಹಸ್ರಾರು ಭಕ್ತರ ಆಗಮನ ನಿರೀಕ್ಷೆ: ತೀರ್ಥೋದ್ಭವಕ್ಕೆ ಕ್ಷಣಗಣನೆ

ತೀರ್ಥೋದ್ಭವಕ್ಕೆ ಕ್ಷಣಗಣನೆ

ಭಾಗಮಂಡಲದ ತ್ರಿವೇಣಿ ಸಂಗಮದ ಹೂಳು ತೆಗೆದು ನದಿಯ ಹರಿವಿಗೆ ಮರದ ಹಲಗೆಗಳನ್ನು ಅಳವಡಿಸಿ ಪವಿತ್ರ ಸ್ಥಾನಕ್ಕೆ ನೀರಿನ ಶೇಖರಣೆ ಮಾಡಲಾಗಿದೆ. ಪಕ್ಕದಲ್ಲೇ ಕೇಶ ಮುಂಡನ ಮತ್ತು ಪಿಂಡ ಪ್ರದಾನಕ್ಕೆ ಸ್ಥಳಾವಕಾಶ ಒದಗಿಸಲಾಗಿದೆ. ಭಾಗಮಂಡಲದಿಂದ ತಲ ಕಾವೇರಿಗೆ ತೆರಳುವ ಭಕ್ತರಿಗೆ ಸಾರಿಗೆ ನಿಗಮದ ಬಸ್‌ಗಳನ್ನು ಕಲ್ಪಿಸಲಾಗುತ್ತಿದೆ. ಶ್ರೀ ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯಗಳನ್ನು ವಿದ್ಯುತ್ ಬೆಳಕಿನಿಂದ ಸಿಂಗರಿಸಲಾಗಿದೆ.

ಕುಮಾರಸ್ವಾಮಿ ಸರಕಾರದ ವಿರುದ್ದ ಮುಗಿಬಿದ್ದರೂ ಬಿಜೆಪಿಯಲ್ಲಿ ಮೌನವ್ರತ : ಸ್ಟಿಂಗ್ ಗದ್ದಲದಲ್ಲಿ ತಣ್ಣಗೆ ಕುಳಿತ ಬಿಜೆಪಿ!

ಸ್ಟಿಂಗ್ ಗದ್ದಲದಲ್ಲಿ ತಣ್ಣಗೆ ಕುಳಿತ ಬಿಜೆಪಿ!

ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಎಚ್ಚರಿಕೆ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಆರೋಪ ಕೇಳಿ ಬಂದಾಗಿನಿಂದಲೂ ಈ ವಿಷಯದಲ್ಲಿ ಬಿಜೆಪಿ ‘ತಣ್ಣಗೆ’ ಮಲಗಿದೆ. ಇಡೀ ಪ್ರಕರಣಕ್ಕೂ, ತನಗೂ ಯಾವುದೇ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ರಾಜ್ಯ ಬಿಜೆಪಿ ಘಟಕ ನಡೆದುಕೊಳ್ಳುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಿದ್ದರಾಮಯ್ಯಗೆ ಪ್ರಿಯಾಂಕ್ ವಿವರಣೆ, ಡಿಕೆ ಭೇಟಿ ರದ್ದು: ಬಯಲಾಗದ ಸ್ಟಿಂಗ್‌ ರಹಸ್ಯ

ಬಯಲಾಗದ ಸ್ಟಿಂಗ್‌ ರಹಸ್ಯ

ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಚಟುಕು ಕಾರ್ಯಚರಣೆಯ ಎಚ್ಚರಿಕೆ ನೀಡಿದ ಬಳಿಕ, ರಾಜ್ಯಾ ದ್ಯಂತ ಸ್ಟಿಂಗ್ ಆಪರೇಷನ್ ಗದ್ದಲ ಜೋರಾಗಿದೆ. ಈ ನಡುವೆ ಸಿದ್ದರಾಮಯ್ಯ ಅವರೂ ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ವಿಡಿಯೊಗೆ ಸಂಬಂಧಿಸಿದಂತೆ ದೂರು ನೀಡಿದ್ದರಿಂದ ರಾಜಕೀಯ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ.

ಚುನಾವಣಾ ಕರ್ತವ್ಯದಲ್ಲಿ ಪಾರದರ್ಶಕತೆ, ತಟಸ್ಥತೆ ಕಾಪಾಡಿ: ಚುನಾವಣಾ ವೀಕ್ಷಕ ಡಾ. ಪಿ.ಸಿ. ಜಾಫರ್

ಚುನಾವಣಾ ಕರ್ತವ್ಯದಲ್ಲಿ ಪಾರದರ್ಶಕತೆ, ತಟಸ್ಥತೆ ಕಾಪಾಡಿ

ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಮಹತ್ವದ್ದಾಗಿದ್ದು, ಮತದಾನದಿಂದ ಹಿಡಿದು ಮತ ಎಣಿಕೆಯವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.  ಚುನಾವಣಾ ಆಯೋಗದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಎಲ್ಲರೂ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಬಡಗವಾರ ಹಳ್ಳಿ, ಮೈಕಳಸೊನ್ನೆನಹಳ್ಳಿ, ಕೊಂಗತಿಮ್ಮನಹಳ್ಳಿ, ಕಾಗತಿ ಹಾಗೂ ಕನಿಶೆಟ್ಟಿಹಳ್ಳಿ ಗ್ರಾಮಗಳ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

MAHE ಮಣಿಪಾಲ್‌ನಲ್ಲಿ ನಡೆದ ನೇಚರ್ ಕಾನ್ಫರೆನ್ಸ್ ಇಂಡಿಯಾ 2026ರಲ್ಲಿ ಸಾಂಕ್ರಾಮಿಕ ರೋಗಗಳ ಅಪಾಯಗಳ ಮೇಲೆ ವೈಜ್ಞಾನಿಕ ಗಮನ ಕೇಂದ್ರೀಕರಣ

MAHE ಮಣಿಪಾಲ್‌ನಲ್ಲಿ ನಡೆದ ನೇಚರ್ ಕಾನ್ಫರೆನ್ಸ್ ಇಂಡಿಯಾ 2026

ಮೂರು ದಿನಗಳ ನೇಚರ್ ಸಮ್ಮೇಳನವು ಆಂಟಿಮೈಕ್ರೊಬಿಯಲ್ ಪ್ರತಿರೋಧ, ಕ್ಷಯರೋಗದ ಪತ್ತೆ, ಲಸಿಕೆಗಳು, ಹವಾಮಾನಕ್ಕೆ ಸಂಬಂಧಿಸಿದ ರೋಗಗಳು ಮತ್ತು ಸಾಂಕ್ರಾಮಿಕ ರೋಗಗಳ ಸಿದ್ಧತೆಯಂತಹ ವಿಷಯಗಳನ್ನು ಚರ್ಚಿಸಲು ಜಾಗತಿಕ ಮಟ್ಟದ ಪ್ರಮುಖ ಸಂಶೋಧಕರನ್ನು ಮಣಿಪಾಲ್‌ಗೆ ಕರೆ ತಂದಿತು.

K M Suresh: ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಗುಬ್ಬಿಯಲ್ಲಿ ಮತದಾರರ ಸಭೆ

ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ : ಗುಬ್ಬಿಯಲ್ಲಿ ಮತದಾರರ ಸಭೆ

ಜೆಡಿಎಸ್(JDS) ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಶೇಕಡಾ 50 ಕ್ಕೂ ಅಧಿಕ ಮತಗಳು ಶಿಕ್ಷಕದ್ದಾಗಿದೆ. ಕಾಂಗ್ರೆಸ್ ದುರಾಡಳಿತ ಜನರಿಗೆ ಬೇಸರ ತಂದಿದೆ. ಗ್ಯಾರಂಟಿ ಹೆಸರಿನಲ್ಲಿ ಮೂಗಿಗೆ ತುಪ್ಪ ಸವರಿ ಅಭಿವೃದ್ದಿ ವಿಚಾರದಲ್ಲಿ ಶೂನ್ಯ ತೋರಿದೆ. ಹಿಂದಿನ ಬಾಗಿಲಲ್ಲಿ ಲೂಟಿ ಮಾಡುವ ಈ ಕಾಂಗ್ರೆಸ್ ಸರ್ಕಾರ ವೈಫಲ್ಯ ಈ ಚುನಾವಣೆಯಲ್ಲಿ ಮತದಾರರು ತೋರಲಿದ್ದಾರೆ ಎಂದರು.

Varthur-Gunjur Road: ವರ್ತೂರು-ಗುಂಜೂರು ರಸ್ತೆ ಅಗಲೀಕರಣಕ್ಕೆ ವೇಗ ನೀಡಿದ ಲಿಂಬಾವಳಿ ತಂಡ

ವರ್ತೂರು-ಗುಂಜೂರು ರಸ್ತೆ ಅಗಲೀಕರಣಕ್ಕೆ ವೇಗ ನೀಡಿದ ಲಿಂಬಾವಳಿ ತಂಡ

Aravind Limbavali: ಬೆಂಗಳೂರಿನ ಮಹದೇವಪುರ ಭಾಗದ ಪ್ರಮುಖ ರಸ್ತೆಯಾಗಿರುವ ವರ್ತೂರು-ಗುಂಜೂರು ಫ್ಲೈಓವರ್‌ ಕಾಮಗಾರಿ ಚುರುಕು ಪಡೆದುಕೊಂಡಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಮಂಜುಳಾ ಲಿಂಬಾವಳಿ ಅವರು ಸ್ಥಳೀಯರನ್ನು ಹಾಗೂ ಗುತ್ತಿಗೆದಾರರನ್ನು ವಿಶ್ವಾಸಕ್ಕೆ ಪಡೆದುಕೊಂಡು ಕಾಮಗಾರಿಗೆ ವೇಗ ನೀಡಿದ್ದಾರೆ.

VAO Exam Answer Key 2026: ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಯ ಪರಿಷ್ಕೃತ ಕೀ ಉತ್ತರ ಪ್ರಕಟಿಸಿದ ಕೆಇಎ

ಗ್ರಾಮ ಆಡಳಿತಾಧಿಕಾರಿ ಹುದ್ದೆ ಪರೀಕ್ಷೆಯ ಪರಿಷ್ಕೃತ ಕೀ ಉತ್ತರ ಪ್ರಕಟ

KEA Exam: ಈ ಹಿಂದೆ ಪ್ರಕಟಿಸಿದ್ದ ಕೀ ಉತ್ತರಗಳಿಗೆ ಬಂದ ಆಕ್ಷೇಪಣೆಗಳನ್ನು ವಿಷಯ ತಜ್ಞರು ಪರಿಶೀಲಿಸಿದ ನಂತರ ಎರಡೂ ಪತ್ರಿಕೆಗಳ ಪರಿಷ್ಕೃತ ಕೀ ಉತ್ತರಗಳನ್ನು ಶುಕ್ರವಾರ ಕೆಇಎ ಪ್ರಕಟಿಸಿದೆ. ಉಳಿಕೆ ಮೂಲ ವೃಂದದ 505 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅ.04ರಂದು ರಾಜ್ಯದ ಒಟ್ಟು 1,037 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.

Government jobs: ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ, ಸೇವಾವಧಿ 10-15 ವರ್ಷ ಮಾತ್ರ; ಹೊಸ ಪ್ಲ್ಯಾನ್‌ ಬಿಚ್ಚಿಟ್ಟ ಎಚ್‌ಡಿಕೆ

ಸರ್ಕಾರಿ ನೌಕರಿ ಅವಧಿ 10-15 ವರ್ಷ ಮಾತ್ರ; ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗ

ಕೆಪಿಎಸ್​​ಸಿ ಹಗರಣ ಸಂಬಂಧ ವಿಜಯನಗರದ ಬಂಟರ ಸಂಘದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳೊಂದಿಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸವಾಮಿ ಅವರು ಶುಕ್ರವಾರ ಸಂವಾದ ನಡೆಸಿದ್ದಾರೆ. ಈ ವೇಳೆ ನಿರುದ್ಯೋಗ ಸಮಸ್ಯೆ ನಿವಾರಣೆಗೆ ತಮ್ಮ ಹೊಸ ಚಿಂತನೆ ಬಗ್ಗೆ ಹಂಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಈ ಯೋಜನೆ ಅನುಷ್ಠಾನಕ್ಕೆ ತರುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜಿಯಾಗಬೇಡಿ: ಡಾ. ವಿಷ್ಣು ಭರತ್ ಆಲಂಪಲ್ಲಿ

ವಿದ್ಯಾರ್ಥಿಗಳು ಮೌಲ್ಯಗಳೊಂದಿಗೆ ಎಂದಿಗೂ ರಾಜೀಯಾಗಬೇಡಿ

ಎಪಿಎಸ್(APS) ಸಮೂಹ ಸಂಸ್ಥೆಗಳ ಅಧ್ಯಕ್ಷ ಸಿ.ಎ ಡಾ. ವಿಷ್ಣು ಭರತ್ ಆಲಂಪಲ್ಲಿ ಮಾತನಾಡಿ, ಶಿಕ್ಷಣ ಕೇವಲ ಜ್ಞಾನವನ್ನಷ್ಟೇ ಅಲ್ಲದೆ ಪ್ರತಿಭೆ, ಶಿಸ್ತು ಮತ್ತು ವ್ಯಕ್ತಿತ್ವವನ್ನು ಬೆಳೆಸಬೇಕು. ಸಾಧನೆಗೆ ಎಂದೂ ಮಿತಿ ವಿಧಿಸಬಾರದು. ತಾತ್ಕಾಲಿಕ ಯಶಸ್ಸಿಗಾಗಿ ನಿಮ್ಮ ಮೌಲ್ಯಗಳೊಂದಿಗೆ ಎಂದಿಗೂ ರಾಜಿ ಮಾಡಿ ಕೊಳ್ಳಬೇಡಿ. ಪ್ರಾಮಾಣಿಕತೆ, ನೈತಿಕತೆ ಮತ್ತು ಉತ್ತಮ ವ್ಯಕ್ತಿತ್ವವೇ ಶಾಶ್ವತ ಸಾಧನೆಯ ಅಡಿಪಾಯಗಳು ಎಂದರು

ರಾಮ ಮಂದಿರ ವೃತ್ತದಲ್ಲಿ ರೈತರ ಆಕ್ರೋಶ, ರಸ್ತೆ ಪಕ್ಕದಲ್ಲಿ ಪ್ರತಿಭಟನೆಗೆ ಅನುವು: ಹೋರಾಟದ ಟೆಂಟ್ ತೆರವು: 9 ಜನರ ವಶಕ್ಕೆ

ಹೋರಾಟದ ಟೆಂಟ್ ತೆರವು: 9 ಜನರ ವಶಕ್ಕೆ

ಕಳೆದ ನಾಲ್ಕು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹಾಕಲಾಗಿದ್ದ ಹೋರಾಟದ ಟೆಂಟ್‌ ನ್ನು ಪೊಲೀಸರು ಶುಕ್ರವಾರ ರಾತ್ರಿ ತೆರವುಗೊಳಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಪೊಲೀಸರ ಕ್ರಮವನ್ನು ಖಂಡಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಂತಿಯುತ ವಾಗಿ ಹೋರಾಟ ನಡೆಸುತ್ತಿದ್ದರೂ ಟೆಂಟ್ ತೆರವುಗೊಳಿಸಿ ಹೋರಾಟಗಾರರನ್ನು ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶವನ್ನು ಅಭದ್ರಗೊಳಿಸಲು ಕರ್ನಾಟಕ ಕಾಂಗ್ರೆಸ್ ಸರಕಾರದಿಂದ ಫಂಡಿಂಗ್: ಎಚ್.ಡಿ.ಕುಮಾರಸ್ವಾಮಿ ಆರೋಪ

ದೇಶವನ್ನು ಅಭದ್ರಗೊಳಿಸಲು ಕರ್ನಾಟಕ ಕಾಂಗ್ರೆಸ್ ಸರಕಾರ ಫಂಡಿಂಗ್

H.D. Kumaraswamy: ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಹೋರಾಟಗಳಿಗೆ ಕಾಂಗ್ರೆಸ್‌ನಿಂದ ನೆರವು ಸಿಗುತ್ತಿದೆ ಎಂಬುದನ್ನು ಸ್ವತಃ ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಗುರುವಾರ ಖರ್ಗೆ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Chikkaballapur News: ಸಾದಲಿ ಪಶು ಆಹಾರ ಘಟಕದ ವಿರುದ್ಧ ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ಕೋಲಾರ, ಚಿಕ್ಕಬಳ್ಳಾಪುರ ರೈತರಿಂದ ಅ.17ರಂದು ಬೃಹತ್ ಪ್ರತಿಭಟನೆ

ಸಾದಲಿ ಸಮೀಪ ಪಶು ಆಹಾರ ಘಟಕ ಸ್ಥಾಪಿಸಲು ನಾಲ್ಕು ವರ್ಷಗಳ ಹಿಂದೆ ಕೋಚಿಮುಲ್ ಮುಂದಾಗಿದ್ದಾಗ ಕೆಎಂಎಫ್ ಅನುಮತಿ ನೀಡಿರಲಿಲ್ಲ. ಬಳಿಕ ಎರಡೂ ಜಿಲ್ಲೆಗಳ ಆಡಳಿತ ಮಂಡಳಿಗಳ ಗಮನಕ್ಕೆ ತಾರದೆ, ಕೋಚಿಮುಲ್ ಒಡೆತನದ 26 ಎಕರೆ ಜಮೀನನ್ನು ಆಂಧ್ರಪ್ರದೇಶದ ಖಾಸಗಿ ಸಂಸ್ಥೆಯೊAದಕ್ಕೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆಗೆ ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರದ ಆತಂಕದ ನಡುವೆ ಹಾವೇರಿಗೆ ಮಳೆರಾಯನ ಸಿಂಚನ; ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದ ಗುಡುಗು ಸಹಿತ ಮಳೆ

ಬರದ ಆತಂಕದ ನಡುವೆ ಹಾವೇರಿಗೆ ಮಳೆರಾಯನ ಸಿಂಚನ!

Haveri News: ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಮಳೆ ಸುರಿದಿದೆ. ಬರದ ಆತಂಕ ಹಾಗೂ ಮಳೆಯ ನಿರೀಕ್ಷೆಯಲ್ಲಿದ್ದ ಹಾವೇರಿ ಜಿಲ್ಲೆಯ ಜನತೆಗೆ ಮಳೆರಾಯ ತಂಪಿನ ಸಿಂಚನ ನೀಡಿದ್ದಾನೆ.

Loading...