ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ದ್ವಿತೀಯ ಪಿಯು ರಿಸಲ್ಟ್‌ ಗೊಂದಲಕ್ಕೆ ತೆರೆ; ಏಪ್ರಿಲ್‌ 9ರ ಅಪರಾಹ್ನ 3 ಗಂಟೆಗೆ ಫಲಿತಾಂಶ ಘೋಷಣೆ

ಏಪ್ರಿಲ್‌ 9ರ ಅಪರಾಹ್ನ 3 ಗಂಟೆಗೆ ಪಿಯು ರಿಸಲ್ಟ್‌ ಫಲಿತಾಂಶ ಘೋಷಣೆ

2nd PUC Result: ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕ ಗೊಂದಲಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ ತೆರೆ ಎಳೆದಿದೆ. ಏಪ್ರಿಲ್​​ 9ರ ಅಪರಾಹ್ನ 3 ಗಂಟೆಗೆ ರಿಸಲ್ಟ್‌ ಹೊರ ಬೀಳಲಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಮಂಡಳಿಯಿಂದ ಅಧಿಕೃತವಾಗಿ ಘೋಷಣೆಯಾಗಿದೆ.

ಅಪಾಯಕ್ಕೆ ಆಹ್ವಾನ ಒಡ್ಡಿರುವ ರಾಜ ಕಾಲುವೆ

ಅಪಾಯಕ್ಕೆ ಆಹ್ವಾನ ಒಡ್ಡಿರುವ ರಾಜ ಕಾಲುವೆ

ವ್ಯಾಪಕ ಪ್ರಮಾಣದಲ್ಲಿ ಗಬ್ಬು ವಾಸನೆಯಿಂದಾಗಿ ನಿವಾಸಿಗಳು ಹೊರಗೆ ಬಾರಲು ಸಹ ಸಾಧ್ಯ ವಾಗದ ಪರಿಸ್ಥಿತಿ ಇದೆ. 1 ಕಿ.ಮೀ. ಉದ್ದಕ್ಕೂ ತ್ಯಾಜ್ಯಗಳಿಂದ ತುಂಬಿಕೊಂಡಿರುವ ಈ ರಾಜ ಕಾಲುವೆಯ ಗಬ್ಬು ವಾಸನೆಯ ನರಕ ಯಾತನೆಯೂ ನಿವಾಸಿಗಳನ್ನು ಹೈರಾಣಾಗಿಸಿದ್ದು, ಈ ರಾಜಕಾಲುವೆಗೆ ಸ್ಲ್ಯಾಬ್ ಇಲ್ಲದೇ ಕಸದ ತೊಟ್ಟಿಯೂ ಆಗಿದೆ.

Bagalakote news: ಬಾಗಲಕೋಟೆ: ಪ್ರೇಮಿ ಜತೆ ಜಗಳದಿಂದ ನೊಂದು ಯುವತಿ ಆತ್ಮಹತ್ಯೆ, ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ

ಜಗಳದಿಂದ ನೊಂದು ಯುವತಿ ಆತ್ಮಹತ್ಯೆ, ಸುದ್ದಿ ತಿಳಿದು ಪ್ರಿಯಕರನೂ ನೇಣಿಗೆ

ಮೃತ ಕಾರ್ತಿಕ್ ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದವನಾಗಿದ್ದು, ಪವಿತ್ರಾ ಬನಹಟ್ಟಿಯ ಕೆ ಹೆಚ್ ಡಿ ಸಿ ಕಾಲೋನಿ ನಿವಾಸಿಯಾಗಿದ್ದಾಳೆ. ನಿನ್ನೆ ಪವಿತ್ರಾ ಹಾಗೂ ಕಾರ್ತಿಕ್ ಜಗಳ ಮಾಡಿಕೊಂಡಿದ್ದರು. ಜಗಳವೇ ಕಾರಣವಾಗಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

kalaburagi news: ಕಲಬುರಗಿಯಲ್ಲಿ ರಥದ ಚಕ್ರ ಮೈಮೇಲೆ ಹರಿದು ಭಕ್ತನ ದುರ್ಮರಣ

ಕಲಬುರಗಿಯಲ್ಲಿ ರಥದ ಚಕ್ರ ಮೈಮೇಲೆ ಹರಿದು ಭಕ್ತನ ದುರ್ಮರಣ

ರಥ ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕುನುಗ್ಗಲಿನಲ್ಲಿ ವಿನೋದ ರೆಡ್ಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ನೇರವಾಗಿ ವಿನೋದ ರೆಡ್ಡಿ ತೊಡೆಯ ಮೇಲಿಂದ ಹರಿದು ಹೋಗಿದೆ. ಚಕ್ರದಡಿ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ.

Gold Price Today On 8th April 2026: ಇರಾನ್‌-ಅಮೆರಿಕ ಕದನ ವಿರಾಮ ಬೆನ್ನಲ್ಲೇ ಚಿನ್ನದ ದರದಲ್ಲಿ ಭಾರಿ ಏರಿಕೆ

ಚಿನ್ನದ ದರದಲ್ಲಿ ಭಾರಿ ಏರಿಕೆ

Gold Silver Price Today: ಬುಧವಾರ (ಏಪ್ರಿಲ್‌ 8) ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 365 ರುಪಾಯಿ ಹೆಚ್ಚಾಗಿದ್ದು14,100 ರುಪಾಯಿಗೆ ಏರಿಕೆಯಾಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 398 ರುಪಾಯಿ ಅಧಿಕವಾಗಿದ್ದು, 15,382 ರುಪಾಯಿಗೆ ಬಂದು ತಲುಪಿದೆ.

Girl Missing: ಮುಳ್ಳಯ್ಯನಗಿರಿಯಲ್ಲಿ ನಾಪತ್ತೆಯಾದ ಹುಡುಗಿಗಾಗಿ ಡ್ರೋನ್‌ ಹುಡುಕಾಟ

ಮುಳ್ಳಯ್ಯನಗಿರಿಯಲ್ಲಿ ನಾಪತ್ತೆಯಾದ ಹುಡುಗಿಗಾಗಿ ಡ್ರೋನ್‌ ಹುಡುಕಾಟ

ಇಂದು ಬೆಳಗ್ಗೆ ಮತ್ತೆ 50ಕ್ಕೂ ಹೆಚ್ಚು ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅರಣ್ಯ ಇಲಾಖೆ ಡ್ರೋನ್ ಮೂಲಕ ಬಾಲಕಿಯ ಪತ್ತೆಗೆ ಮುಂದಾಗಿದ್ದಾರೆ. ಬಾಲಕಿ ನಾಪತ್ತೆಯಾದ ಸ್ಥಳದಿಂದ ಹೋಗಿರಬಹುದಾದ ಮಾರ್ಗದ ಅಂದಾಜಿನಲ್ಲಿ ಜಿಲ್ಲಾಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ತಂಡಗಳಾಗಿ ಬಾಲಕಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.

2nd PUC Results: ನಾಳೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ; ಅಂಕಪಟ್ಟಿ ಇಲ್ಲಿ ಲಭ್ಯ

ನಾಳೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ; ಅಂಕಪಟ್ಟಿ ಇಲ್ಲಿ ಲಭ್ಯ

ಏ.7ರಂದು ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ರಿಸಲ್ಟ್​ ಮುಂದೂಡಿಕೆ ಆದ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಮೂಡಿತ್ತು. ಮೌಲ್ಯಮಾಪನದ ಅಂತಿಮ ಹಂತದ ಕೆಲಸಗಳು ಬಾಕಿ ಉಳಿದ ಹಿನ್ನೆಲೆ ಫಲಿತಾಂಶ ತಡವಾಗಿದೆ. ಫಲಿತಾಂಶ ಪ್ರಕಟವಾದ ದಿನದಂದು 12 ಗಂಟೆಗೆ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.

PM Narendra Modi: ಏ.15ರಂದು ಪ್ರಧಾನಿ ಮೋದಿ ಆದಿಚುಂಚನಗಿರಿ ಮಠಕ್ಕೆ ಭೇಟಿ; ಭಕ್ತರಿಗೆ ನಿರ್ಬಂಧ

ಏ.15ರಂದು ಪ್ರಧಾನಿ ಮೋದಿ ಆದಿಚುಂಚನಗಿರಿ ಮಠಕ್ಕೆ ಭೇಟಿ; ಭಕ್ತರಿಗೆ ನಿರ್ಬಂಧ

ಶ್ರೀಕ್ಷೇತ್ರದಲ್ಲಿ ನಿರ್ಮಿಸಿರುವ ಶ್ರೀ ಗುರು ಭೈರವೈಕ್ಯ ಮಂದಿರದಲ್ಲಿ ಡಾ. ಬಾಲಗಂಗಾಧರನಾಥ ಶ್ರೀಗಳ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ಏ.10ರಿಂದ 15ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಏ.15ರಂದು ಬೆಳಗ್ಗೆ ಶ್ರೀಗುರು ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

Road Accident: ಪ್ರವಾಸಕ್ಕೆ ಬಂದವರ ಮೇಲೆ ಹರಿದ ಇನ್ನೋವಾ, ಹಾರಿಹೋಯ್ತು ಯುವಕನ ಪ್ರಾಣ

ಪ್ರವಾಸಕ್ಕೆ ಬಂದವರ ಮೇಲೆ ಹರಿದ ಇನ್ನೋವಾ, ಹಾರಿಹೋಯ್ತು ಯುವಕನ ಪ್ರಾಣ

ದಾವಣೆಗೆರೆಯ ಮೂಲದ 10 ಮಂದಿ ಸ್ನೇಹಿತರು ರಾತ್ರಿ 2 ಗಂಟೆಗೆ ಟಿಟಿ ವಾಹನ ಮೂಲಕ ಕಾರವಾರದ ದಾಂಡೇಲಿಗೆ ಪ್ರವಾಸ ಹೊರಟಿದ್ದರು. ಬೆಳಗಿನ ಜಾವ 6 ಗಂಟೆಗೆ ಹಾವೇರಿಯ ತಡಸ್ ಬಳಿ ಟೀ ಶಾಪ್ ಬಳಿ ವಾಹನ ನಿಲ್ಲಿಸಿದ್ದಾರೆ. ಚಹಾ ಕುಡಿಯುತ್ತಾ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಅತೀ ವೇಗವಾಗಿ ಬಂದ ಇನ್ನೋವಾ ಕಾರು ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ.

Woman missing: ಚಂದ್ರದ್ರೋಣ ಪರ್ವತಕ್ಕೆ ಭೇಟಿ ನೀಡಿದ್ದ ಕೇರಳದ ಯುವತಿ ನಾಪತ್ತೆ

ಚಂದ್ರದ್ರೋಣ ಪರ್ವತಕ್ಕೆ ಭೇಟಿ ನೀಡಿದ್ದ ಕೇರಳದ ಯುವತಿ ನಾಪತ್ತೆ

ನಾಪತ್ತೆಯಾದ ಯುವತಿ ನಂದನ, ಕೇರಳದ ಪಾಲಕ್ಕಾಡ್ ಮೂಲದವರು. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿಗೆ ಕೇರಳದಿಂದ ಬಂದಿದ್ದ 40 ಜನ ಪ್ರವಾಸಿಗರ ತಂಡ ಹಾಗೂ ಕುಟುಂಬದೊಂದಿಗೆ ನಂದನ ಅವರು ಚಿಕ್ಕಮಗಳೂರಿಗೆ ಬಂದಿದ್ದರು. ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಇವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಜೀವನ ಶೈಲಿಗೆ ತಕ್ಕ ಆರೋಗ್ಯ ಅಗತ್ಯ

ಜೀವನ ಶೈಲಿಗೆ ತಕ್ಕ ಆರೋಗ್ಯ ಅಗತ್ಯ

ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ತಾಂತ್ರಿಕವಾಗಿ ಮುಂದುವರಿದಿದ್ದರೂ, ದೈಹಿಕವಾಗಿ ದುರ್ಬಲನಾಗುತ್ತಿದ್ದಾನೆ. ಸಂಸ್ಕರಿಸಿದ ಆಹಾರ , ದೈಹಿಕ ಶ್ರಮದ ಕೊರತೆ ಮತ್ತು ಅತಿಯಾದ ಮಾನಸಿಕ ಒತ್ತಡಗಳು ಮಧುಮೇಹ, ರಕ್ತದೊತ್ತಡ ಹಾಗೂ ಹೃದಯ ಸಂಬಂಽ ಕಾಯಿಲೆಗಳಿಗೆ ದಾರಿ ಕಲ್ಪಿಸಿ ಕೊಡುತ್ತಿವೆ.

Hubballi Love Jihad case: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣದ ಸಮಗ್ರ ತನಿಖೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣದ ಸಮಗ್ರ ತನಿಖೆಗೆ ಪ್ರಲ್ಹಾದ್‌ ಜೋಶಿ ಆಗ್ರಹ

Pralhad Joshi: ರಾಜ್ಯ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ಮತ್ತು ಸಡಿಲ ಕ್ರಮಗಳಿಂದಾಗಿ ಲವ್ ಜಿಹಾದ್‌ನಂತಹ ಪ್ರಕರಣಗಳಿಗೆ ಇಂಬು ನೀಡುವಂತಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣ ಇಡೀ ಸಮಾಜ ತಲೆ ತಗ್ಗಿಸುವಂಥದ್ದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

3 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ಮೇಲ್‌; ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ದೂರು

ಮಹಿಳೆಗೆ ಹಣ ನೀಡದ ಕಾರಣ ಸುಳ್ಳು ಆರೋಪ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್‌ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

TET Exam: ಕನ್ನಡದಲ್ಲೂ ಟಿಇಟಿ ಪರೀಕ್ಷೆ ನಡೆಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ

ಕನ್ನಡದಲ್ಲೂ ಟಿಇಟಿ ನಡೆಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಸಿಎಸ್‌ ಪತ್ರ

ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕನ್ನಡದಲ್ಲೇ ಟಿಇಟಿ ಬರೆಯಲು ಅವಕಾಶ ನೀಡಬೇಕು. ಎಲ್ಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗಳಲ್ಲಿ ಈ ಆಯ್ಕೆಯನ್ನು ಒದಗಿಸಬೇಕು. ಕನ್ನಡ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮನವಿ ಮಾಡಿದ್ದಾರೆ.

ಏ.11ರಂದು ಸಿದ್ದಸಿರಿ ಸಹಕಾರಿ ಬ್ಯಾಂಕ್ ನಾದ ಹಾಗೂ ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ: ಜಗದೀಶ ಕ್ಷತ್ರಿ

ಏ.11ರಂದು ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ರಾಜ್ಯಾದ್ಯಂತ 212 ಶಾಖೆಗಳಿವೆ. 20 ವರ್ಷದಲ್ಲಿ ಸಿದ್ದಸಿರಿ ಸಂಸ್ಥೆಯು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟು ಹಾಕಿದೆ. ಸಿದ್ದಸಿರಿ ಕೋಲ್ಡ್ ಸ್ಟೋರೇಜ್ , ಸಿದ್ದಸಿರಿ ಪವರ್ ಏತನಾಲ್ ಘಟಕ ಚಿಂಚೋಳಿ, ಸಿದ್ದಸಿರಿ ಇಂಧನ ಕೇಂದ್ರ 3 ಕಡೆ, ಸಿದ್ದಸಿರಿ ಕೃಷಿ ಕೇಂದ್ರಗಳು ಒಟ್ಟು 5, ಸಿದ್ದಸಿರಿ ಸಂಸ್ಥೆಯ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ಶ್ರೀಸಿದ್ದೇಶ್ವರ ಚಾರಿಟೇಬಲ್ ವತಿಯಿಂದ ವಿಜಯ ಪೂರದಲ್ಲಿ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಜಿಯವರ ಹೆಸರಿನಲ್ಲಿ 108 ಹಾಸಿಗೆಯ ಆಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

Mobile canteen: ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಅರ್ಜಿದಾರರು ಯಾವ ಜಿಲ್ಲೆಯ ನಿವಾಸಿಯಾಗಿರುತ್ತಾರೋ ಅದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರ್‌ರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ಪ್ರತಿ. ತಹಶೀಲ್ದಾರ್‌ರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಆದಾಯದ ಪ್ರಮಾಣ ಪತ್ರದ ಪ್ರತಿ. ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಲಗತ್ತಿಸಬೇಕು.

Yettinahole drinking water project: ಜಿಲ್ಲಾಧಿಕಾರಿಗಳಿಂದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪ್ರಗತಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪ್ರಗತಿ ಪರಿಶೀಲನೆ

ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರ ಕೈಗೊಂಡಿರುವ ಎತ್ತಿನಹೊಳೆ ಮಹತ್ವಾ ಕಾಂಕ್ಷಿ ಯೋಜನೆಯ ಕಾಮಗಾರಿಗಳು ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿವೆ. ಗೌರಿ ಬಿದನೂರು ಗುರುತ್ವ ಫೀಡರ್ ಪೈಪ್ ಲೈನ್ ಕಾಮಗಾರಿಯ ಎತ್ತಿನಹೊಳೆ ಮುಖ್ಯ ಗುರುತ್ವ ಕಾಲುವೆಯ ಸರಪಳಿ 257.57 ಕಿ.ಮೀ ನಲ್ಲಿ ಕವಲೊಡೆದು ಸು. 81.6 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ

E-account movement: ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಚಾಲನೆ

ಜಿಲ್ಲೆಯ ನಗರಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತೆ ಆಂದೋಲನ

ಜಿಲ್ಲೆಯ ನಗರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ 70 ರಿಂದ 80 ಸಾವಿರ ಮನೆ/ನಿವೇಶನ ಗಳಿಗೆ ಇ-ಆಸ್ತಿಗಳನ್ನು ವಿತರಿಸುವುದು ಬಾಕಿ ಇದೆ. ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಕೆಲವು ಬಡಾವಣೆಗಳ ನಿವೇಶನಗಳಿಗೆ ಬಿ-ಖಾತೆ ಮಾಡಿಕೊಳ್ಳಲು ಹಾಗೂ ಈಗಾಗಲೇ ಬಿ-ಖಾತೆ ಹೊಂದಿರು ವವರು ಎ-ಖಾತೆಯ ಇ-ಸ್ವತ್ತುಗಳನ್ನು ಹೊಂದಲು ಸರ್ಕಾರ ಅವಕಾಶ ಮಾಡಿ ಕೊಟ್ಟಿದೆ

MLA M.T.Krishnappa: ಪ್ರಜಾಪ್ರಭುತ್ವ ಎತ್ತಿ ಹಿಡಿಯುವ ಕೆಲಸ ಪತ್ರಕರ್ತರದ್ದು: ಎಂ.ಟಿ.ಕೃಷ್ಣಪ್ಪ

ಪ್ರಜಾಪ್ರಭುತ್ವ ಎತ್ತಿಹಿಡಿಯುವ ಕೆಲಸ ಪತ್ರಕರ್ತರದ್ದು: ಎಂ.ಟಿ.ಕೃಷ್ಣಪ್ಪ

ಸಮಾಜದ ಆಗು ಹೋಗುಗಳ ಬಗ್ಗೆ ನಿಖರ ಮಾಹಿತಿ ನೀಡುವ ಜೊತೆಗೆ ಯಾವುದೇ ವಿಚಾರದ ಸತ್ಯಾ ಸತ್ಯತೆ ಬಿತ್ತರಿಸುವ ಕೆಲಸ ಮಾಧ್ಯಮದವರು ಮಾಡುತ್ತಾರೆ. ತಾಲ್ಲೂಕಿನಲ್ಲಿ ನಡೆಯುವ ಸಣ್ಣ ವಿಚಾರ ದಿಂದ ದೊಡ್ಡ ವಿಚಾರಗಳನ್ನು ಸಾರ್ವಜನಿಕರಿಗೆ ಮುಟ್ಟಿಸುವ ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಕಚೇರಿ ಅವಶ್ಯವಿದೆ. ಭ್ರಷ್ಟಾಚಾರ ವಿರೋಧಿಗಳಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಪಣ ತೊಡಬೇಕು

ಬಿಜೆಪಿ, ಆರ್‌ಎಸ್‌ಎಸ್‌ ಕುರಿತು ಪ್ರಚೋದನಕಾರಿ ಭಾಷಣ; ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ದೂರು

ಮಲ್ಲಿಕಾರ್ಜುನ ಖರ್ಗೆ ಬಂಧನಕ್ಕೆ ಆಗ್ರಹಿಸಿ ಡಿಜಿ-ಐಜಿಪಿಗೆ ಬಿಜೆಪಿ ದೂರು

ನಮಾಜ್ ಮಾಡುವಾಗ ವಿಷಸರ್ಪ ಬಂದರೆ ನೀವು ನಮಾಜನ್ನು ನಿಲ್ಲಿಸಿ ಅದನ್ನು ಕೊಲ್ಲಿ; ನಮಾಜ್ ಮಾಡುವಾಗ ಬಿಜೆಪಿ, ಆರೆಸ್ಸೆಸ್‍ನವರು ಬಂದರೆ ನಮಾಜನ್ನು ನಿಲ್ಲಿಸಿ ಅವರನ್ನು ಕೊಲ್ಲಿ; ಇದು ಕುರಾನ್‍ನಲ್ಲಿ ಉಲ್ಲೇಖ ಆಗಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿರುವ ಅವರನ್ನು ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.

Karnataka Sanskrit University: ಸಂಸ್ಕೃತದ ಪ್ರಾಚೀನ ಜ್ಞಾನಪರಂಪರೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಬೇಕು: ರಾಜ್ಯಪಾಲ ಗೆಹೋಟ್ ಕರೆ

ಕರ್ನಾಟಕ ಸಂಸ್ಕೃತ ವಿವಿ: 12 ಮತ್ತು 13ನೆಯ ದೀಕ್ಷಾಂತ ಘಟಿಕೋತ್ಸವ

ಸಂಸ್ಕೃತ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಇದು ಭಾರತದ ಆತ್ಮವಿದ್ದಂತೆ. ಹಲವು ಭಾಷೆಗಳಿಗೆ ಸಂಸ್ಕೃತ ಜನನಿಯಾಗಿದ್ದು, ತಾಯಿ ಬೇರು ರಕ್ಷಿಸಬೇಕಾಗಿದೆ. ಪರಿಸರ ಸಮಸ್ಯೆ, ನೈತಿಕ ಮೌಲ್ಯಗಳ ಕುಸಿತ ಸೇರಿದಂತೆ ಜಗತ್ತು ಹಲವು ಸಮಸ್ಯೆಗಳ ಸುಳಿಯಲ್ಲಿದೆ. ಇದಕ್ಕೆ ಸಂಸ್ಕೃತದಲ್ಲಿರುವ ಜ್ಞಾನದ ಮೂಲಕ ಪರಿಹಾರ ದೊರೆಯಲಿದೆ. ವಿಕಸಿತ ಭಾರತದ ಗುರಿ ಸಾಧನೆಗೆ ಯುವ ಸಮೂಹ ಕಾರ್ಯ ನಿರ್ವಹಿಸುವ ಜೊತೆಗೆ ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ಕೈ ಜೋಡಿಸಬೇಕು

ಆರೋಗ್ಯದ ತೊಂದರೆಗಳು ಮೊದಲೇ ಪ್ರಾರಂಭವಾಗಿ ದೀರ್ಘಕಾಲ ಗೋಪ್ಯ: ಅಪೋಲೋ ಹಾಸ್ಪಿಟಲ್ಸ್ ನ ಹೆಲ್ತ್ ಆಫ್ ನೇಷನ್ 2026 ವರದಿ

ಆರೋಗ್ಯದ ತೊಂದರೆಗಳು ದೀರ್ಘಕಾಲ ಗೋಪ್ಯವಾಗಿರುತ್ತದೆ

ಭಾರತದ ಆರೋಗ್ಯಕ್ಷೇತ್ರವು ವಿಕಾಸಗೊಳ್ಳುತ್ತಿದ್ದು ಅದರಲ್ಲಿ ಮೂವರು ಯುವ ವಯಸ್ಕರಲ್ಲಿ ಇಬ್ಬರಿಗೆ ಈಗಾಗಲೇ ಎನ್.ಸಿ.ಡಿ.ಗಳ ರಿಸ್ಕ್ ಇದೆ. ದುಡಿಯುವ ಜನಸಂಖ್ಯೆಯಲ್ಲಿ ಸುಮಾರು ಅರ್ಧರಷ್ಟು ಮಂದಿ ಮಧುಮೇಹಪೂರ್ವ ಸ್ಥಿತಿ ಅಥವಾ ಮಧುಮೇಹ ಹೊಂದಿದ್ದಾರೆ ಮತ್ತು 10 ಮಂದಿಯಲ್ಲಿ 8 ಮಂದಿ ಅತಿಯಾದ ತೂಕ ಹೊಂದಿರುವುದು ಜೀವನಶೈಲಿ-ಪ್ರೇರಿತ ಸುಧಾರಣೆಗೆ ಸ್ಪಷ್ಟ ಅವಕಾಶಗಳನ್ನು ಪ್ರಸ್ತುತಪಡಿಸಿದೆ.

Karnataka bypolls: ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆ; ಏಪ್ರಿಲ್‌ 9ಕ್ಕೆ ಸರ್ಕಾರಿ ನೌಕರರಿಗೆ ರಜೆ ಘೋಷಣೆ

ಏಪ್ರಿಲ್‌ 9ಕ್ಕೆ ಉಪಚುನಾವಣೆ; ಸರ್ಕಾರಿ ನೌಕರರಿಗೆ ರಜೆ ಘೋಷಣೆ

ಏಪ್ರಿಲ್‌ 9ರ ಗುರುವಾರದಂದು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಈ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ ನೌಕರರಿಗೆ ಒಂದು ದಿನದ ವೇತನ ಸಹಿತ ರಜೆ ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸುಸ್ಥಿರ ನಗರ ಜೀವನವನ್ನು ಮರು ವ್ಯಾಖ್ಯಾನಿಸುತ್ತಿದೆ ಬೆಂಗಳೂರಿನ ನೀರಿನ ಬಿಕ್ಕಟ್ಟು

ಸುಸ್ಥಿರ ನಗರ ಜೀವನವನ್ನು ಮರು ವ್ಯಾಖ್ಯಾನಿಸುತ್ತಿದೆ ನೀರಿನ ಬಿಕ್ಕಟ್ಟು

ಬೆಂಗಳೂರಿನ ಸಾಂಪ್ರದಾಯಿಕ ಜಲಮೂಲಗಳು. ಐತಿಹಾಸಿಕ ದಾಖಲೆಗಳ ಪ್ರಕಾರ ನಗರದಲ್ಲಿ 260 ಕೆರೆಗಳಿದ್ದವು, ಇಂದು 80ಕ್ಕಿಂತ ಕಡಿಮೆ ಉಳಿದಿದ್ದರೂ ಅವು ಗಳಲ್ಲಿ ಬಹಳಷ್ಟು ಮಾಲಿನ್ಯಗೊಂಡಿವೆ ಅಥವಾ ಒತ್ತುವರಿಗೆ ಒಳಗಾಗಿವೆ. ಇದರಿಂದ ಸಹಜವಾಗಿ ಅಂತರ್ಜಲ ಮರುಪೂರಣದ ಮೇಲೆ ಪರಿಣಾ ಮ ಬೀರಿದೆ.

Loading...