ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯ ಹೆಜ್ಜೆ ಗುರುತು
Pravasi Prapancha: ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗದೆ, ಮನುಕುಲದ ಉದ್ಧಾರಕ್ಕಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಭಕ್ತರ ಪಾಲಿಗೆ ಅವರು ಮಂಜುನಾಥ ಸ್ವಾಮಿಯ ಪ್ರತಿನಿಧಿಯಾದರೆ, ಬಡವರ, ದೀನ-ದಲಿತರ ಪಾಲಿಗೆ ಅವರೊಬ್ಬ ಆಪದ್ಭಾಂಧವ. ಧರ್ಮಸ್ಥಳ ಎಂಬುದು ಕೇವಲ ಪುಣ್ಯಕ್ಷೇತ್ರವಾಗಿ ಉಳಿಯದೆ, ಅದೊಂದು ಅಭಿವೃದ್ದಿಯ ಪ್ರಯೋಗಶಾಲೆಯಾಗಿ, ಸಾಮಾಜಿಕ ಸಾಮರಸ್ಯದ ಸಂಕೇತವಾಗಿ ಬೆಳೆದು ನಿಂತಿದೆ ಎಂದರೆ ಅದಕ್ಕೆ ಡಾ. ಹೆಗ್ಗಡೆಯವರ ದಾರ್ಶನಿಕ ನೋಟವೇ ಕಾರಣ. ಅವರ 59ನೆಯ ಪಟ್ಟಾಭಿಷೇಕದ ವರ್ಧಂತ್ಯುತ್ಸವ ಇಂದು.