ಹೊಸಪೇಟೆಯಲ್ಲಿ ಏ.30 ರಿಂದ ಶ್ರೀ ಕಾಳಿಕಾದೇವಿ ದೇವಸ್ಥಾನ ಪ್ರತಿಷ್ಠಾಪನೆ
Vijayanagara News: ಹೊಸಪೇಟೆ ತಾಲೂಕು ವಿಶ್ವಕರ್ಮ ಸಮಾಜದಿಂದ ಏ.30 ರಿಂದ ಮೇ 5 ರವರೆಗೆ ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಕಂಚುಗಾರಪೇಟೆಯಲ್ಲಿರುವ ನೂತನ ಗರ್ಭಗುಡಿ ಆಲಯ ಸಮರ್ಪಣೆ ಹಾಗೂ ಶ್ರೀ ಕಾಳಿಕಾದೇವಿ ಕಮಟೇಶ್ವರ ದೇವರ ಹಾಗೂ ಪರಿವಾರ ದೇವರ ಅಷ್ಟಬಂಧ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಹಾಗೂ ನವಚಂಡಿಕಾ ಯಾಗ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಜಿಲ್ಲಾಧ್ಯಕ್ಷ ಕೆ.ವಿ. ಪತ್ತಾರ್ ಹಾಗೂ ವಿ. ಶಂಕರಾಚಾರ್ಯ ತಿಳಿಸಿದ್ದಾರೆ.