ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Guarantee schemes: ಗ್ಯಾರಂಟಿ ಯೋಜನೆಗಳಿಗೆ ಹೊಸ ಅರ್ಜಿ ಸಲ್ಲಿಸಬೇಕಿಲ್ಲ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ ಮಹತ್ವದ ತೀರ್ಮಾನ

ಗ್ಯಾರಂಟಿಗಳಿಗೆ ಹೊಸ ಅರ್ಜಿ ಸಲ್ಲಿಸಬೇಕಿಲ್ಲ, ಮರು ಪರಿಶೀಲನೆ ಮಾತ್ರ

Guarantee schemes Re-verification: ಗೃಹಲಕ್ಷ್ಮಿ ಯೋಜನೆ ಹಾಗೂ ಗೃಹ ಜ್ಯೋತಿ ಯೋಜನೆಗೆ ಹೊಸದಾಗಿ ಅರ್ಜಿ ಅಲ್ಲಿಸಬೇಕು ಎಂದು ಇತ್ತೀಚೆಗೆ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಘೋಷಿಸಿದ್ದರು. ಆದರೆ, ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ ಎಂದು ತಿಳಿದುಬಂದಿದೆ.

Shidlaghatta News: ಜೂ.21ರ ಪದಗ್ರಹಣ ಸಮಾರಂಭಕ್ಕೆ ಶಿಡ್ಲಘಟ್ಟದಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಭಾಗವಹಿಸುವ ನಿರೀಕ್ಷೆ: ರಾಜೀವ್ ಗೌಡ

ಪಂಚಾಯಿತಿ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು

ಮೇಕೆದಾಟು(Mekedaatu) ಪಾದಯಾತ್ರೆ ವೇಳೆ ಶಿಡ್ಲಘಟ್ಟದಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯ ಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಅವರು ಶಿಡ್ಲಘಟ್ಟದ ಕಾರ್ಯಕರ್ತರ ಸಂಘಟನಾ ಶಕ್ತಿ ಮತ್ತು ಉತ್ಸಾಹವನ್ನು ಮೆಚ್ಚಿಕೊಂಡಿದ್ದರು.

POCSO: ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿ; ಪೋಕ್ಸೋ ಅಡಿ ಪ್ರಕರಣ ದಾಖಲು

ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿ; ಪೋಕ್ಸೋ ಅಡಿ ಪ್ರಕರಣ ದಾಖಲು

ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿ ಮೂರು ತಿಂಗಳ ಗರ್ಭಿಣಿ ಯಾಗಿರುವ ಘಟನೆ ಬೆಳಕಿಗೆ ಬಂದಿದೆ.  ಬಾಲಕಿಯ ಮೇಲೆ ಕಳೆದ ಒಂದು ವರ್ಷದಿಂದ ಚಂದ್ರು ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Shidlaghatta News: ನಗರದಲ್ಲಿ ಪೇಜಾವರ ಶ್ರೀಗಳ ಸಂಚಾರ; ಮನೆ ಮನೆಗೆ ಪಾದಪೂಜೆ, ಭಕ್ತರಿಗೆ ಆಶೀರ್ವಾದ

ನಗರದಲ್ಲಿ ಪೇಜಾವರ ಶ್ರೀಗಳ ಸಂಚಾರ

ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣನ ಸಂಸ್ಥಾನ ಪೂಜೆ ನೆರವೇರಿಸಿದ ಸ್ವಾಮೀಜಿ ಗಳು, ಅನುಗ್ರಹ ಭಾಷಣ ಮಾಡಿ ಭಕ್ತರಿಗೆ ಫಲ ಮಂತ್ರಾಕ್ಷತೆ ವಿತರಿಸಿದರು. ಟಿ.ಬಿ. ರಸ್ತೆಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಆರತಿ ಸಲ್ಲಿಸಿದ ಅವರು, ನಗರದ ಶ್ರೀ ವಾಸವಿ ಶಾಲೆ, ಚಿಕ್ಕದಾಸರಹಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾನಿಕೇತನ ಹಾಗೂ ನಡಪಿನಾಯಕನಹಳ್ಳಿಯ ನವೋದಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವದಿಸಿದರು.

Rahul Gandhi's birthday: ಸಂವಿಧಾನ ರಕ್ಷಿಸುವ ನಿಮ್ಮ ನಡೆಯು ಒಂದು ಕ್ರಾಂತಿಯಾಗಲಿ: ಜನ್ಮ ದಿನದ ಹಿನ್ನೆಲೆ ರಾಹುಲ್‌ ಗಾಂಧಿಗೆ ಡಿಸಿಎಂ ಪರಮೇಶ್ವರ್‌ ಪತ್ರ

ರಾಹುಲ್‌ ಗಾಂಧಿಗೆ ಜನ್ಮ ದಿನದ ಶುಭಾಶಯ ಕೋರಿದ ಪರಮೇಶ್ವರ್‌

ಸಾರ್ವಜನಿಕರ ಸೇವೆಗೆ ಸಮರ್ಪಿತಗೊಂಡಿರುವ ನಿಮ್ಮ ಬದುಕಿನ ಮತ್ತೊಂದು ವರ್ಷದ ಸಂಭ್ರಮದಲ್ಲಿ ಅಸಂಖ್ಯ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ನಾಗರಿಕರೊಂದಿಗೆ ನಾನು ಸೇರಿದ್ದೇನೆ. ನಿಮಗೆ ಉತ್ತಮ ಆರೋಗ್ಯ, ಹೊಸ ಚೈತನ್ಯ ಸಿಗಲಿ ಎಂದು ರಾಹುಲ್‌ ಗಾಂಧಿ ಅವರಿಗೆ ಡಾ.ಪರಮೇಶ್ವರ್‌ ಅವರು ಜನ್ಮ ದಿನದ ಶುಭಾಶಯ ಕೋರಿದ್ದಾರೆ.

Township planning: ರೈತರ ವಿರೋಧದ ನಡುವೆಯೇ ಯೋಜನೆ ಜಾರಿ ಮಾಡಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ: ಮುಕ್ತ ಮುನಿಯಪ್ಪ

ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಅಧಿಸೂಚನೆ ರದ್ದುಪಡಿಸಿ

ರೈತರ ತೀವ್ರ ವಿರೋಧದ ನಡುವೆಯೂ ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾದರೆ ಸರ್ಕಾರಕ್ಕೆ ಉಳಿಗಾಲವಿರುವುದಿಲ್ಲ. ಸ್ಮಾರ್ಟ್ ಸಿಟಿ ಮತ್ತು ಇಂಟಿಗ್ರೇಟೆಡ್ ಟೌನ್‌ಶಿಪ್ ಹೆಸರಿ ನಲ್ಲಿ ಬಿಡದಿ ಭಾಗದ ಹಸಿರು ವಲಯದಲ್ಲಿರುವ ಲಕ್ಷಾಂತರ ಮರಗಳನ್ನು ಕಡಿದು ಪರಿಸರ ನಾಶಕ್ಕೆ ಕಾರಣವಾಗುವ ಪ್ರಯತ್ನ ಖಂಡನೀಯ

Chikkaballapur News: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಜಿಲ್ಲಾಡಳಿತ ಸಜ್ಜಾಗಿದ್ದು ರಸಗೊಬ್ಬರದ ಕೊರತೆಯಿಲ್ಲ ಆತಂಕಕ್ಕೆ ಒಳಗಾಗುವುದು ಬೇಡ : ಜಿಲ್ಲಾಧಿಕಾರಿ ಜಿ.ಪ್ರಭು ಸ್ಪಷ್ಟನೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಜಿಲ್ಲಾಡಳಿತ ಸಜ್ಜು

ಜಿಲ್ಲೆಯಲ್ಲಿ ಒಟ್ಟು 451 ರಸಗೊಬ್ಬರ ಅಂಗಡಿಗಳಿದ್ದು ಪ್ರಸ್ತುತ ಸಾಲಿನಲ್ಲಿ ರಸಗೊಬ್ಬರಗಳ ಸಮತೋಲನ ಕಾಪಾಡಲು ಹಾಗೂ ಅವಶ್ಯಕತೆಗಿಂತ ಹೆಚ್ಚಿನ ರಸಗೊಬ್ಬರಗಳನ್ನು ಕೆಲವರು ಬಳಸುತ್ತಿರುವುದನ್ನು ಕಡಿಮೆ ಮಾಡಲು ಯೂರಿಯಾ ರಸಗೊಬ್ಬರ ಖರೀದಿಸಲು ಎಫ್.ಐ.ಡಿ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. 1 ಎಕರೆಗೆ ಒಂದು ಚೀಲ ಮಾತ್ರ ಯೂರಿಯಾವನ್ನು ವಿತರಿಸ ಲಾಗುತ್ತಿದೆ

Chikkaballapur News: ಜೂ.27ಕ್ಕೆ ವಿಜೃಂಭಣೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ: ಜಿಲ್ಲಾಧಿಕಾರಿ ಜಿ.ಪ್ರಭು

27ಕ್ಕೆ ವಿಜೃಂಭಣೆಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಜೂ.27ರಂದು ಬಿ.ಬಿ ರಸ್ತೆಯ ರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ ಕನ್ನಡ ಭವನ ದವರೆಗೆ ಪಲ್ಲಕ್ಕಿ ಮತ್ತು ಜಾನಪದ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಮೆರ ವಣೆಗೆ ಮಧ್ಯದಲ್ಲಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಶ್ರೀ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಕಾರ್ಯಕ್ರಮ ನಡೆಯಲಿದೆ.

NEET re-examination: ನೀಟ್ ಮರು ಪರೀಕ್ಷೆ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಜಿ.ಪ್ರಭು ಕಟ್ಟುನಿಟ್ಟಿನ ಸೂಚನೆ

ನೀಟ್ ಮರು ಪರೀಕ್ಷೆ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ನೀಟ್ ಮರು ಪರೀಕ್ಷೆ ಇದೇ ತಿಂಗಳ 21ರ ಭಾನುವಾರದಂದು ನಡೆಯಲಿದ್ದು, ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳು ಮತ್ತು ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ದಲ್ಲಿ 06 ಹಾಗೂ ಚಿಂತಾಮಣಿ ತಾಲ್ಲೂಕು ಕೇಂದ್ರದಲ್ಲಿ 04 ಪರೀಕ್ಷಾ ಕೇಂದ್ರಗಳಿರುತ್ತವೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಲ್ಲ: ಬಿಜೆಪಿ ಶಾಸಕ ಚಂದ್ರು ಲಮಾಣಿ

ಅಡ್ಡ ಮತದಾನ ಮಾಡಿಲ್ಲ ಎಂದ ಶಾಸಕ ಚಂದ್ರು ಲಮಾಣಿ

MLA Chandru Lamani: ಅಡ್ಡ ಮತದಾನ ಮಾಡಿದವರು ಎಂದು ತಮ್ಮ ಹೆಸರನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದ್ದು, ಮುಜುಗರಕ್ಕೆ ಒಳಗಾಗಿದ್ದೇನೆ. ಮತದಾನ ಸಂಬಂಧ ವಿಪ್ ಜಾರಿ ಮಾಡಲಾಗಿತ್ತು. ನಮಗೆ ನಿಗದಿ ಮಾಡಿದ್ದ ಎನ್‍ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದೇನೆ. ಮಾಧ್ಯಮಗಳು ಅನಗತ್ಯವಾಗಿ ಹೆಸರನ್ನು ಪ್ರಸಾರ ಮಾಡಬಾರದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದ್ದಾರೆ.

Bidadi Township: ಬಿಡದಿ ಟೌನ್‌ಶಿಪ್‌ಗಾಗಿ 9,600 ಎಕರೆ ಸ್ವಾಧೀನಕ್ಕೆ ಸಂಚು; ಮುಖ್ಯ ಕಾರ್ಯದರ್ಶಿಗೆ ಜೆಡಿಎಸ್‌ ದೂರು

ಬಿಡದಿ ಟೌನ್‌ಶಿಪ್‌ಗೆ 9,600 ಎಕರೆ ಸ್ವಾಧೀನಕ್ಕೆ ಸಂಚು; ಜೆಡಿಎಸ್‌ ದೂರು

ಮುಂದಿನ ತಿಂಗಳು ಸುಮಾರು 7481ರಿಂದ 9,600 ಎಕರೆಯಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಸಂಚು ರೂಪಿಸಿದೆ. ರೈತರು ಭೂಮಿ ಕೊಡಲು ಇಷ್ಟಪಡುತ್ತಿಲ್ಲ. ಹೀಗಾಗಿ ಸರ್ಕಾರವೇ ಕೋರ್ಟ್‌ನಲ್ಲಿ ಪರಿಹಾರ ಹಣವನ್ನು ಜಮೆ ಮಾಡಿ ಭೂಮಿಯನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದೆ ಎಂದು ಜೆಡಿಎಸ್‌ ಆರೋಪಿಸಿದೆ.

Shakti scheme: ಶಕ್ತಿ ಯೋಜನೆಯಡಿ ಮೇ ಅಂತ್ಯದವರೆಗೆ ಮಹಿಳೆಯರಿಂದ 763 ಕೋಟಿ ಉಚಿತ ಪ್ರಯಾಣ

ಶಕ್ತಿ ಯೋಜನೆಯಡಿ ಮಹಿಳೆಯರಿಂದ 763 ಕೋಟಿ ಉಚಿತ ಪ್ರಯಾಣ

ಬೆಂಗಳೂರಿನ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. 2026-27ನೇ ಸಾಲಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಲ್ಲರನ್ನೂ ಸೇರಿಸಿ 10 ಲಕ್ಷ ಉಚಿತ ಬಸ್ ಪಾಸ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಅಂದಾಜಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

Actor Rishab Shetty: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಯಲ್ಲಿ ನಟ ರಿಷಬ್‌ ಶೆಟ್ಟಿ ಭಾಗಿ; ಸಿಎಂ ಡಿಕೆಶಿಗೆ ಮಹತ್ವದ ಮನವಿ

ಕರಾವಳಿಯ ಜಾನಪದ ಕಲೆ, ಸಂಗೀತಕ್ಕೆ ಪ್ರೋತ್ಸಾಹ ನೀಡಿ: ರಿಷಬ್‌ ಶೆಟ್ಟಿ

Coastal Tourism Development: ಕರಾವಳಿಯಲ್ಲಿ ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Bengaluru Power Cut: ಜೂನ್‌ 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಜೂನ್‌ 20ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ‌

Bengaluru Power Cut: 66/11ಕೆ.ವಿ. ಆರ್. ಆರ್. ನಗರ, ಮತ್ತು ಬನಶಂಕರಿ ಉಪಕೇಂದ್ರ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜೂನ್‌ 20ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Karnataka MLC Election: ವಿಧಾನಪರಿಷತ್‍ ಚುನಾವಣೆ: ಅಡ್ಡ ಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ ಎಂದ ಛಲವಾದಿ ನಾರಾಯಣಸ್ವಾಮಿ

ಅಡ್ಡ ಮತದಾನ ಮಾಡಿದವರ ವಿರುದ್ಧ ಕಠಿಣ ಕ್ರಮ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಅಡ್ಡ ಮತದಾನ ಮಾಡಿದವರ ಪತ್ತೆಗಾಗಿ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ನೀಡಲಿದೆ. ಆಗ ಅಡ್ಡ ಮತದಾನ ಮಾಡಿದವರು ಪತ್ತೆಯಾದ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಕೆಲವರ ಹೆಸರು ತೇಲಿಬಿಟ್ಟು ಕಾಂಗ್ರೆಸ್ ಕುತಂತ್ರ; ಅಡ್ಡ ಮತದಾನ ಮಾಡಿದವರ ಪತ್ತೆಗೆ ಸಮಿತಿ ರಚನೆ ಎಂದ ಬಿ.ವೈ. ವಿಜಯೇಂದ್ರ

ಕೆಲವರ ಹೆಸರು ತೇಲಿಬಿಟ್ಟು ಕಾಂಗ್ರೆಸ್ ಕುತಂತ್ರ: ಬಿ.ವೈ. ವಿಜಯೇಂದ್ರ

BY Vijayendra: ಕಾಂಗ್ರೆಸ್‍ನ ಕುತಂತ್ರಕ್ಕೆ ನಾವು ತಲೆಕೆಡಿಸಿಕೊಳ್ಳಲ್ಲ. ಅಡ್ಡ ಮತದಾನ ಮಾಡಿದವರ ಪತ್ತೆಗೆ ಸಮಿತಿ ರಚಿಸಲಾಗಿದೆ. ಯಾರು ಅಡ್ಡ ಮತನದಾನ ಮಾಡಿದ್ದಾರೆ ಎಂಬುದು ಮೂರ್ನಾಲ್ಕು ದಿನದಲ್ಲಿ ತಿಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

Guarantee Schemes: ಗ್ಯಾರಂಟಿ ಯೋಜನೆಗಳ ಅನರ್ಹ ಫಲಾನುಭವಿಗಳಿಗೆ ಬ್ರೇಕ್‌ ಹಾಕಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಗ್ಯಾರಂಟಿ ಯೋಜನೆಗಳ ಅನರ್ಹರಿಗೆ ಬ್ರೇಕ್‌ ಹಾಕಿ: ಸಿಎಂ

ಒಂದೇ ಖಾತೆಯಲ್ಲಿ ಹಲವು ಫಲಾನುಭವಿಗಳು ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದಾರೆ. ಮೂರು ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ಹೋಗಿದೆ ಎನ್ನುವ ಬಗ್ಗೆ ಎಜಿ ಅವರ ವರದಿ ಬಂದಿದೆ. ಈ ರೀತಿ ದುರುಪಯೋಗ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ.

Bengaluru CID Inspector: ಕೇರಳ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ವಸೂಲಿ ಮಾಡಿದ ಸಿಐಡಿ ಇನ್ಸ್‌ಪೆಕ್ಟರ್; ದೂರಿನ ಬೆನ್ನಲ್ಲೇ ಎಸ್ಕೇಪ್‌!

ಕೇರಳ ಉದ್ಯಮಿಗಳನ್ನು ಬೆದರಿಸಿ 20 ಲಕ್ಷ ಪೀಕಿದ ಸಿಐಡಿ ಇನ್ಸ್‌ಪೆಕ್ಟರ್

ವ್ಯಾಪಾರ ಉದ್ದೇಶಕ್ಕಾಗಿ ಬಂದಿದ್ದ ಕೇರಳದ ಉದ್ಯಮಿಗಳು ಹಣದೊಂದಿಗೆ ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಗ್ಯಾಂಗ್‌ನೊಂದಿಗೆ ಹೋಟೆಲ್‌ಗೆ ತೆರಳಿ ಉದ್ಯಮಿಗಳಿಂದ 20 ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Bengaluru Mobile Theft: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನಿಗೆ ಹೃದಯಾಘಾತ; ಓಡಿ ಓಡಿ ಸುಸ್ತಾಗಿ ಸ್ಥಳದಲ್ಲೇ ಸಾವು!

ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳ ಹೃದಯಾಘಾತದಿಂದ ಸಾವು!

Mobile phone theft in Bengaluru: ಬೆಂಗಳೂರಿನ ಕಬ್ಬನ್‌ಪೇಟೆಯಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಪಾದಚಾರಿಯ ಮೊಬೈಲ್‌ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಈ ವೇಳೆ ವೇಗವಾಗಿ ಅಲ್ಲಿಂದ ಓಡುತ್ತಿದ್ದ ಕಳ್ಳನಿಗೆ ಹೃದಯಾಘಾತವಾಗಿದೆ. ಇದರಿಂದ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾನೆ.

ನಾಯಿ-ಬೆಕ್ಕುಗಳಿಗೀಗ ವಿಐಪಿ ಟ್ರೀಟ್‌ಮೆಂಟ್‌, ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂಬರ್ 1!

ಸಾಕು ಪ್ರಾಣಿಗಳ ಆರೈಕೆಯಲ್ಲಿ ಬೆಂಗಳೂರಿಗರೇ ನಂಬರ್1!

Instamart: ಸಾಕುಪ್ರಾಣಿಗಳನ್ನು ಮುದ್ದಿಸುವಲ್ಲಿ ಬೆಂಗಳೂರಿಗರೇ ಮುಂದಿದ್ದಾರೆ. ನಗರದಲ್ಲಿ ಸಾಕುಪ್ರಾಣಿಗಳಿಗಾಗಿ ಆಗುವ ಒಟ್ಟು ಖರ್ಚಿನಲ್ಲಿ ಶೇ.66ರಷ್ಟು ಹಣ ಕೇವಲ ಅವುಗಳ ಖುಷಿಗಾಗಿ (ಆಟಿಕೆಗಳು, ತಿಂಡಿಗಳು, ಗ್ರೂಮಿಂಗ್ ಉತ್ಪನ್ನಗಳು) ಬಳಕೆಯಾಗುತ್ತಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಹೈದರಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ ಇವೆ.

4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ; ಸಮಯ ನೋಡಿಕೊಂಡು ಕ್ರಮ ಎಂದ ಎಚ್.ಡಿ.ಕುಮಾರಸ್ವಾಮಿ

ಕ್ರಾಸ್ ವೋಟಿಂಗ್ ಮಾಡಿದವರ ವಿರುದ್ಧ ಕ್ರಮ: ಎಚ್‌ಡಿಕೆ

HD Kumaraswamy: ನನಗೆ ಎಲ್ಲವೂ ಗೊತ್ತಿದ್ದೇ ನಾನು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಯಾರ ಯಾರ ಆತ್ಮಸಾಕ್ಷಿ ಹೇಗೆಲ್ಲ ವರ್ತನೆ ಮಾಡುತ್ತದೆ ಎಂಬುದನ್ನು ಪರೀಕ್ಷೆ ಮಾಡಲು ಪಕ್ಷದ ಅಭ್ಯರ್ಥಿಯನ್ನು ನಾನು ಕಣಕ್ಕೆ ಇಳಿಸಬೇಕಾಯಿತು. ಎಲ್ಲವೂ ನಾನು ಅಂದುಕೊಂಡಂತೆ ಆಗಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನಮಗೆ ತಿಳಿದಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Indira Canteen: ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.

International Yoga Day 2026: ಒತ್ತಡದ ಯುಗದಲ್ಲಿ ಯುವ ಪೀಳಿಗೆಗೆ 'ಯೋಗ' ಪರಿಹಾರ

ಒತ್ತಡದ ಯುಗದಲ್ಲಿ ಯುವ ಪೀಳಿಗೆಗೆ 'ಯೋಗ' ಪರಿಹಾರ

ಭಾರತೀಯ ಯೋಗಕ್ಕೆ ಸುಮಾರು ಐದು ಸಾವಿರ ವರ್ಷಗಳಿಗೂ ಹಿಂದಿನ ಸುದೀರ್ಘ ಇತಿಹಾಸವಿದೆ. 'ಯೋಗ' ಭಾರತೀಯರಿಗೆ ನಮ್ಮ ಪ್ರಾಚೀನ ಋಷಿಮುನಿಗಳು ನೀಡಿದಂತಹ ಒಂದು ಅತ್ಯದ್ಭುತವಾದ ವಿಜ್ಞಾನವಾಗಿದೆ. ಯೋಗದಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಕುರಿತು ಮಂಗಳೂರಿನ ಯೋಗಪಟು ರಶ್ಮಿ ಬರಾಳು ಅವರ ಲೇಖನ ಇಲ್ಲಿದೆ.

Piriyapattana News: ಅನಿಕೇತನ ಪದವಿ ಪೂರ್ವ ಕಾಲೇಜಿನಲ್ಲಿ ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ

ಆದಿ ಕವಿ ಪಂಪ ಕನ್ನಡ ಸಾಹಿತ್ಯ ಸಂಘ ಉದ್ಘಾಟನೆ

ಜಾನಪದಗಳು ಉಳಿಯ ಬೇಕು. ವಿದ್ಯಾರ್ಥಿಗಳುಜ ಕೂಡ ಜಾನಪದ ಕಲೆಯನ್ನು ಉಳಿಸಿಬೆಳೆಸಬೇಕು. ಸ್ಥಳೀಯವಾಗಿ ನಡೆಯವ ಹಬ್ಬ, ಜಾತ್ರೆಗಳಲ್ಲಿ ಪಾಲ್ಗೊಂಡು ಅಲ್ಲಿನ ಜಾನಪದ ಸೊಗಡನ್ನು ನೋಡ ಬೇಕು. ಮನೆ ಮನೆಗೆ ತೆರಳಿ ಜಾನಪದ ಹಾಡುಗಳನ್ನು ಹಾಡುವ ಕಲಾವಿದರನ್ನು ಗೌರವಿಸಬೇಕು. ಅವರ ಹಾಡುಗಳನ್ನು ನಾವು ಹಾಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು

Loading...