Science world: ಜ್ಞಾನಭಾರತಿಯಲ್ಲಿ 'ವಿಜ್ಞಾನಲೋಕ' ಅನಾವರಣ
Science for Exploring, Inspiring and Connecting the Society ಎಂಬ ಘೋಷವಾಕ್ಯ ದೊಂದಿಗೆ ನಡೆಯುವ ಈ ವಿಜ್ಞಾನ ಹಬ್ಬವನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೈ ಫೋರಮ್ (ಬಿಯುಎಸ್‌ಎಫ್) ಆಯೋಜಿಸಿದ್ದು, ಇದಕ್ಕೆ ಪಿಎಂ ಉಷಾ ಯೋಜನೆಯ ಬೆಂಬಲ ದೊರಕಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ವಿಜ್ಞಾನ ಹಬ್ಬವು ವಿಶ್ವವಿದ್ಯಾಲಯದ ಆವರಣವನ್ನು ವಿಜ್ಞಾನ, ನವೀನತೆ ಮತ್ತು ಅನ್ವೇಷಣೆಯ ಉತ್ಸವವಾಗಿ ಪರಿವರ್ತಿಸಲಿದೆ.