ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಾಗವತದಲ್ಲಿ ಬರುವ ತುಳಸಿ ಕಥೆ

ಲಕ್ಷ್ಮೀದೇವಿಯು ಸಮುದ್ರದಿಂದ ಜನಿಸಿದ ಕಾರಣ, ನೀನು ನನಗೆ ಭ್ರಾತೃವಾಗಬೇಕು ಎಂದು ಅವನಿಗೆ ತಿಳಿ ಹೇಳಿದಳು. ಲಕ್ಷ್ಮಿ ದೊರೆಯದಿದ್ದಾಗ, ಈ ಅಸುರ ಪಾರ್ವತಿ ದೇವಿಯನ್ನು ಅರಸುತ್ತಾ ಕೈಲಾಸ ಪರ್ವತಕ್ಕೆ ಬಂದನು. ತನ್ನ ಮಾಯಾವಿ ಶಕ್ತಿಯಿಂದ ಶಿವನ ರೂಪವನ್ನು ಧರಿಸಿ ತಾಯಿ ಪಾರ್ವತಿಯ ಬಳಿ ಹೋದನು. ಆದರೆ ತಾಯಿಯು ತಕ್ಷಣವೇ ತನ್ನ ಯೋಗ ಬಲದಿಂದ ಅವನನ್ನು ಗುರುತಿಸಿ ಅಲ್ಲಿಂದ ಕಣ್ಮರೆಯಾದಳು.

ಭಾಗವತದಲ್ಲಿ ಬರುವ ತುಳಸಿ ಕಥೆ

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ಶಿವನ ತೇಜಸ್ಸಿನ ಹನಿಯೊಂದು ಸಮುದ್ರಕ್ಕೆ ಬಿದ್ದಾಗ ಅದರಿಂದ ಜಲಂಧರ ಎಂಬ ಅಸುರನ ಜನನವಾಯಿತು. ಅವನು ಜಲಂಧರ ನಗರದ ರಾಜನಾದನು. ದೈತ್ಯರಾಜ ಕಾಳನೇಮಿಯ ಮಗಳು ವೃಂದಳನ್ನು ಅವನು ವರಿಸಿದನು. ತನ್ನ ರಾಕ್ಷಸ ಶಕ್ತಿಗಳಿಂದ ಕೊಬ್ಬಿದ ಜಲಂಧರ ಅಹಂಕಾರ ದಿಂದ ದೇವತೆಯಾದ ಲಕ್ಷ್ಮಿಯನ್ನು ಮೋಹಿಸಿದನು.

ಲಕ್ಷ್ಮೀದೇವಿಯು ಸಮುದ್ರದಿಂದ ಜನಿಸಿದ ಕಾರಣ, ನೀನು ನನಗೆ ಭ್ರಾತೃವಾಗಬೇಕು ಎಂದು ಅವನಿಗೆ ತಿಳಿ ಹೇಳಿದಳು. ಲಕ್ಷ್ಮಿ ದೊರೆಯದಿದ್ದಾಗ, ಈ ಅಸುರ ಪಾರ್ವತಿ ದೇವಿಯನ್ನು ಅರಸುತ್ತಾ ಕೈಲಾಸ ಪರ್ವತಕ್ಕೆ ಬಂದನು. ತನ್ನ ಮಾಯಾವಿ ಶಕ್ತಿಯಿಂದ ಶಿವನ ರೂಪವನ್ನು ಧರಿಸಿ ತಾಯಿ ಪಾರ್ವತಿಯ ಬಳಿ ಹೋದನು. ಆದರೆ ತಾಯಿಯು ತಕ್ಷಣವೇ ತನ್ನ ಯೋಗ ಬಲದಿಂದ ಅವನನ್ನು ಗುರುತಿಸಿ ಅಲ್ಲಿಂದ ಕಣ್ಮರೆಯಾದಳು.

ಪಾರ್ವತಿ ದೇವಿಯು ಕೋಪಗೊಂಡು ಇಡೀ ಕಥೆಯನ್ನು ವಿಷ್ಣುವಿಗೆ ವಿವರಿಸಿದಳು. ಜಲಂಧರನ ಪತ್ನಿ ವೃಂದಾ ಅತ್ಯಂತ ಶ್ರದ್ಧೆಯುಳ್ಳ ಮಹಿಳೆ. ಅವಳ ಪತಿವ್ರತಾ ಧರ್ಮದ ಬಲದಿಂದಾಗಿ, ವಿಷ್ಣು ವಿಗೆ ಜಲಂಧರನನ್ನು ಕೊಲ್ಲಲಾಗಲಿಲ್ಲ. ಆದ್ದರಿಂದ ರಾಕ್ಷಸ ಜಲಂಧರನಿಗೆ ಶಕ್ತಿ ತುಂಬುತ್ತಿದ್ದ ವೃಂದಳ ಪಾತಿವ್ರತ್ಯವನ್ನು ಹೇಗಾದರೂ ಹಾಳು ಮಾಡಬೇಕಾಗಿತ್ತು.

ಇದನ್ನೂ ಓದಿ: Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?

ಈ ಕಾರಣಕ್ಕಾಗಿ ವಿಷ್ಣುವು ಋಷಿಯ ವೇಷವನ್ನು ಧರಿಸಿ ವೃಂದಾ ಒಬ್ಬಂಟಿಯಾಗಿ ವಿಹರಿಸುತ್ತಿದ್ದ ಅಡವಿಗೆ ಋಷಿಯ ರೂಪದಲ್ಲಿ ಬಂದನು. ವಿಷ್ಣುವಿನ ಜೊತೆಗೆ ಇಬ್ಬರು ರಾಕ್ಷಸರೂ ಇದ್ದರು, ಅವರನ್ನು ನೋಡಿ ವೃಂದಾ ಭಯಗೊಂಡಳು. ಋಷಿಯು ವೃಂದಾಳ ಮುಂದೆ ಕ್ಷಣ ಮಾತ್ರದಲ್ಲಿ ಇಬ್ಬರನ್ನೂ ಭಸ್ಮಗೊಳಿಸಿದನು. ಅವನ ಶಕ್ತಿಯನ್ನು ನೋಡಿದ ವೃಂದಾ ಕೈಲಾಸ ಪರ್ವತದಲ್ಲಿ ಮಹಾದೇವನೊಂದಿಗೆ ಯುದ್ಧ ಮಾಡುತ್ತಿದ್ದ ತನ್ನ ಪತಿ ಜಲಂಧರನ ಬಗ್ಗೆ ಕೇಳಿದಳು. ಋಷಿಯು ತನ್ನ ಮಾಯಾ ಶಕ್ತಿಯಿಂದ ಎರಡು ಕೋತಿಗಳನ್ನು ಸೃಷ್ಟಿಸಿದನು.

ಒಂದು ಕೋತಿಯ ಕೈಯಲ್ಲಿ ಜಲಂಧರನ ತಲೆ ಮತ್ತು ಇನ್ನೊಂದು ಕೈ ಅವನ ಮುಂಡವನ್ನು ಹೊಂದಿತ್ತು. ಪತಿಯ ಈ ಸ್ಥಿತಿಯನ್ನು ಕಂಡು ವೃಂದಾ ಪ್ರe ತಪ್ಪಿ ಕೆಳಗೆ ಬಿದ್ದಳು. ಪ್ರಜ್ಞೆ ಬಂದ ನಂತರ ತನ್ನ ಪತಿಯನ್ನು ಬದುಕಿ ಸುವಂತೆ ಋಷಿಯ ರೂಪದಲ್ಲಿರುವ ವಿಷ್ಣುವನ್ನು ಬೇಡಿ ಕೊಂಡಳು. ವಿಷ್ಣುವು ಮತ್ತೆ ತನ್ನ ಮಾಯೆ ಯಿಂದ ಜಲಂಧರನ ತಲೆಯನ್ನು ಅವನ ದೇಹಕ್ಕೆ ಜೋಡಿಸಿದನು, ಆದರೆ ಅವನೂ ಕೂಡ ಅದೇ ದೇಹವನ್ನು ಪ್ರವೇಶಿಸಿದನು.

ವೃಂದೆಗೆ ಈ ಮೋಸದ ಅರಿವೇ ಇರಲಿಲ್ಲ. ಅವಳು ಆ ಮೋಸದ ಜಲಂಧರನೊಂದಿಗೆ ಪತ್ನಿ ಧರ್ಮ ನಿಭಾಯಿಸಿದಳು. ಇದರಿಂದಾಗಿ ಅವಳ ಪರಿ ಶುದ್ಧ ಪತಿವ್ರತಾ ಧರ್ಮ ಮುರಿದು ಹೋಯಿತು. ಇದು ಸಂಭವಿಸಿದ ಕೂಡಲೇ ಅಲ್ಲಿ ರಾಕ್ಷಸ ಜಲಂಧರ ಯುದ್ಧದಲ್ಲಿ ಸೋತನು. ಆನಂತರ ಈ ಎಲ್ಲಾ ಲೀಲೆಯನ್ನು ತಿಳಿದ ವೃಂದಾ ಕೋಪಗೊಂಡು ವಿಷ್ಣುವನ್ನು ಶಿಲೆ ಯಾಗುವಂತೆ ಶಪಿಸಿ ಸತಿ ಯಾದಳು.

ಪತಿವ್ರತೆ ವೃಂದಾ ಸುಟ್ಟು ಬೂದಿಯಾದ ಕಡೆ ತುಳಸಿ ಗಿಡ ಬೆಳೆಯಿತು. ವಿಷ್ಣುವು ವೃಂದಾಗೆ - ‘ಓ ವೃಂದಾ..! ನಿನ್ನ ಪರಿಶುದ್ಧತೆಯಿಂದ ನೀನು ನನಗೆ ಲಕ್ಷ್ಮಿಗಿಂತ ಹೆಚ್ಚು ಪ್ರಿಯಳಾದೆ. ಸಾಲಿ ಗ್ರಾಮ ರೂಪದಲ್ಲಿ ನಾ ಸದಾ ನಿನ್ನೊಂದಿಗೆ ಇರುತ್ತೇನೆ! ಅದೇ ರೀತಿ ಯಾವ ಮನುಷ್ಯನು ನನ್ನನು ಸಾಲಿಗ್ರಾಮ ರೂಪದಲ್ಲಿ ತುಳಸಿಯೊಂದಿಗೆ ಮದುವೆ ಮಾಡುವನೋ ಅವನು ಇಹಲೋಕ ಮತ್ತು ಪರಲೋಕದಲ್ಲಿ ಅಪಾರ ಕೀರ್ತಿಯನ್ನು ಪಡೆಯುತ್ತಾನೆ “ ಎಂದು ಆಶೀರ್ವದಿಸಿದನು.

ಗಂಗಾ ಮತ್ತು ನರ್ಮದೆಯ ನೀರಿನಲ್ಲಿ ಸ್ನಾನ ಮಾಡುವದು, ತುಳಸಿ ಪೂಜೆಗೆ ಸಮಾನವೆಂದು ಪರಿಗಣಿಸಲಾಗಿದೆ. ಮರಣದ ಸಮಯದಲ್ಲಿ ತುಳಸಿ ಮತ್ತು ಗಂಗಾಜಲವನ್ನು ಬಾಯಿಯಲ್ಲಿ ಹಾಕುವುದರಿಂದ ಸಾವಿನ ಹೊಸಿಲಲಿರು ವವರು ಪಾಪಕರ್ಮಗಳಿಂದ ಮುಕ್ತರಾಗಿ ವೈಕುಂಠ ಧಾಮವನ್ನ ಪಡೆಯುತ್ತಾರೆ ಎನ್ನುವ ನಂಬಿಕೆ ಇದೆ. ಹೀಗೆ ಅಸುರನ ಪತ್ನಿಯಾದರೂ ಸತಿ ವೃಂದೆಗೆ ಅವಳ ನಿಷ್ಠೆಯಿಂದಾಗಿ ಪೂಜ್ಯ ಸ್ಥಾನ ಲಭಿಸಿತು.

ನಾವು ಯಾರ ಜೊತೆ ಇರುತ್ತೇವೆ ಎನ್ನುವುದಕ್ಕಿಂತ, ನಾವು ಏನಾಗಿರುತ್ತೇವೆ ಎನ್ನುವುದು ಜೀವನ ದಲ್ಲಿ ಬಹಳ ಮುಖ್ಯ. ಕೊನೆಗೆ ನಮ್ಮೊಡನೆ ಬರುವುದು ನಾವು ಮಾಡಿದ ಧರ್ಮ, ಕರ್ಮಗಳು ಮಾತ್ರ.