Star Saree Fashion 2025: ಕಲಾಂಕಾರಿ ಸೀರೆಯಲ್ಲಿ ನಟಿ ಮೌನ ಗುಡ್ಡೆಮನೆಯ ರೆಟ್ರೊ ಲುಕ್
Star Saree Fashion 2025: ರಾಮಾಚಾರಿ ಸೀರಿಯಲ್ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಉಟ್ಟಿರುವ ಕಲಾಂಕಾರಿ ಪ್ರಿಂಟೆಡ್ ಸೀರೆಯಲ್ಲಿನ ರೆಟ್ರೊ ಲುಕ್ ಎಲ್ಲರ ಮನ ಗೆದ್ದಿದೆ. ಅವರ ಈ ಲುಕ್ ಬಗ್ಗೆ ಫ್ಯಾಷನ್ ವಿಮರ್ಶಕರು ಏನು ಹೇಳಿದ್ದಾರೆ? ಈ ಲುಕ್ ಪಡೆಯುವವರು ಯಾವ ರೀತಿ ಸ್ಟೈಲಿಂಗ್ ಮಾಡಬಹುದು ಇಲ್ಲಿದೆ ವಿವರ.

ಚಿತ್ರಗಳು: ಮೌನ ಗುಡ್ಡೆಮನೆ, ಸೀರಿಯಲ್ ನಟಿ., ಫೋಟೋಗ್ರಾಫಿ: ಪಿಕೆ ಸ್ಟುಡಿಯೋ ಫೋಟೋಗ್ರಫಿ


ಸೀರಿಯಲ್ ನಟಿ ಮೌನ ಗುಡ್ಡೆಮನೆ ಉಟ್ಟಿರುವ ಕಲಾಂಕಾರಿ ಸೀರೆಯ ರೆಟ್ರೊ ಲುಕ್ ಸೀರೆ ಪ್ರಿಯರ ಮನ ಗೆದ್ದಿದೆ. ಹೌದು, ರಾಮಾಚಾರಿ ಸೀರಿಯಲ್ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಮೊದಲಿನಿಂದಲೂ ಸೀರೆ ಲವ್ವರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ! ಸೀರಿಯಲ್ನಲ್ಲಿ ನಾನಾ ಬಗೆಯ ಸೀರೆಗಳನ್ನು ಉಡುವ ಅವರನ್ನು ಮಾನಿನಿಯರು ಕೂಡ ಇಷ್ಟಪಡುತ್ತಾರೆ. ಅಷ್ಟೇಕೆ? ಅವರ ಈ ಸೀರೆಯ ಅಭಿಮಾನಿಗಳು ಹುಡುಗರು ಇದ್ದಾರೆಂದರೇ ನಂಬಲೇಬೇಕು! ಆ ಮಟ್ಟಿಗೆ ಮೌನ ಅವರ ಸೀರೆ ಪ್ರೇಮಿಗಳಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಮೌನ ಗುಡ್ಡೆಮನೆ ಫ್ಯಾಷನ್ ಲವ್
ಅಂದಹಾಗೆ, ಮೌನ ನಟಿಸುತ್ತಿರುವ ಸೀರಿಯಲ್ ರಾಮಾಚಾರಿಯಲ್ಲಿ ಅವರ ಡ್ರೆಸ್ಕೋಡ್ ಆರಂಭದಲ್ಲಿ ವೆಸ್ಟರ್ನ್ ಔಟ್ಫಿಟ್ಗಳಾಗಿತ್ತಾದರೂ ಇದೀಗ ಅವರದ್ದು ಕಂಪ್ಲೀಟ್ ಸೀರೆಯದ್ದಾಗಿದೆ. ವಿಶೇಷವೆಂದರೆ, ಮೌನ ಅವರು ಈ ಸೀರಿಯಲ್ನಲ್ಲಿ ಉಡುವ ಒಂದೊಂದು ಸೀರೆಗಳು ನೋಡುಗರ ಮನಸೆಳೆಯುತ್ತಿವೆ. ಇದಕ್ಕೆ ಕಾರಣ ಅವರ ಯೂನಿಕ್ ಸೆಲೆಕ್ಷನ್ ಹಾಗೂ ಡಿಸೈನರ್ ಬ್ಲೌಸ್ಗಳು. ಇವು ಆ ಮಟ್ಟಿಗೆ ನೋಡುಗರನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಸೀರೆ ಪ್ರೇಮಿ. ಇನ್ನು ಮೌನ ಉಟ್ಟ ಸೀರೆಗಳಿಗೂ ಇತ್ತೀಚೆಗೆ ಭಾರಿ ಡಿಮ್ಯಾಂಡ್ ಆರಂಭವಾಗಿದೆಯಂತೆ.

ಸೀರೆ ಅಂಗಡಿಗಳಲ್ಲಿ ರಾಮಾಚಾರಿ ಸೀರಿಯಲ್ ನಟಿ ಉಟ್ಟಿರುವ ಸೀರೆ ತೋರಿಸಿ ಎಂದು ಮೊಬೈಲ್ನಲ್ಲಿ ಫೋಟೋ ತೋರಿಸಿ ಸೀರೆ ತೆಗೆದುಕೊಳ್ಳುವವರು ಹೆಚ್ಚಾಗಿದ್ದಾರಂತೆ. ಅಷ್ಟೇಕೆ? ಕೆಲವು ಹುಡುಗಿಯರಂತೂ ಅವರ ಬ್ಲೌಸ್ ಡಿಸೈನ್ ಮೊಬೈಲ್ನಲ್ಲಿ ತೋರಿಸಿ ಡಿಸೈನ್ ಮಾಡುತ್ತಿದ್ದಾರಂತೆ. ಹಾಗೆನ್ನುತ್ತಾರೆ ಬೋಟಿಕ್ವೊಂದರ ಲೇಡಿಸ್ ಟೈಲರ್ ಚಂದನಾ. ಅವರ ಪ್ರಕಾರ, ಮೌನ ಸೀರೆ ಫ್ಯಾಷನ್ ಇತ್ತೀಚೆಗೆ ಪಾಪುಲರ್ ಆಗುತ್ತಿದೆಯಂತೆ.

ಮೌನ ಗುಡ್ಡೆಮನೆ ಉಟ್ಟ ಕಲಾಂಕಾರಿ ಸೀರೆಯ ವಿಶೇಷತೆ
ನಟಿ ಮೌನ ಉಟ್ಟಿರುವ ಕಲಾಂಕಾರಿ ಪ್ರಿಂಟೆಡ್ ಸೀರೆಯು ಬ್ಲೌಸ್ನ ಡಿಸೈನ್ನಿಂದಾಗಿಯೇ ರೆಟ್ರೊ ಲುಕ್ ಪಡೆದಿದೆ ಎನ್ನಬಹುದು. ಅವರ ಫುಲ್ ಸ್ಲೀವ್ ಬ್ಲೌಸ್ ಅಂದ ಹೆಚ್ಚಿಸಿದೆ. ಇನ್ನು ಅವರ, ಮೇಕಪ್ ಕೂಡ ಅವರ ಲುಕ್ ಅನ್ನು ಮತ್ತಷ್ಟು ಚೆಂದವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಸೀರೆಯಲ್ಲಿ ಮೌನರಂತೆ ರೆಟ್ರೊ ಸ್ಟೈಲ್ ಪಡೆಯಲು 3 ಟಿಪ್ಸ್
- ಆಯ್ಕೆ ಮಾಡುವ ಸೀರೆ ರೆಟ್ರೊ ಸ್ಟೈಲ್ಗೆ ಹೊಂದಬೇಕು.
- ಬ್ಲೌಸ್ ಡಿಸೈನ್ ರೆಟ್ರೊ ಲುಕ್ಗೆ ಸಾಥ್ ನೀಡಬೇಕು.
- ಮೇಕಪ್ ರೆಟ್ರೊ ಲುಕ್ಗೆ ಮ್ಯಾಚ್ ಆಗುವಂತಿರಬೇಕು.