ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wimbledon: ಮೂರನೇ ಸುತ್ತು ಪ್ರವೇಶಿಸಿದ ಜೊಕೊ, ಅಲ್ಕರಾಜ್‌

ಮತ್ತೊಂದೆಡೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ರನ್ನರ್‌ ಅಪ್‌, ನಾಲ್ಕನೇ ಶ್ರೇಯಾಂಕದ ಜಾಸ್ಮಿನ್ ಪಯೋಲಿನಿ ಆಘಾತಕಾರಿ ಸೋಲು ಕಂಡರು. ಮೊದಲ ಐದು ಶ್ರೇಯಾಂಕಿತ ಆಟಗಾರ್ತಿಯರ ಪೈಕಿ ಅರಿನಾ ಸಬಲೆಂಕಾ ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಮೂರು ಗ್ರ್ಯಾನ್‌ಸ್ಲಾಮ್‌ ಕಿರೀಟ ಗೆದ್ದಿರುವ ಅಗ್ರ ಶ್ರೇಯಾಂಕದ ಸಬಲೆಂಕಾ ಇಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿದ್ದಾರೆ.

3ನೇ ಸುತ್ತು ಪ್ರವೇಶಿಸಿದ ಜೊಕೊ, ಅಲ್ಕರಾಜ್‌; ಜಾಸ್ಮಿನ್‌ಗೆ ಆಘಾತಕಾರಿ ಸೋಲು

Profile Abhilash BC Jul 3, 2025 10:35 PM

ಲಂಡನ್‌: ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಕಿರೀಟದ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ನೊವಾಕ್ ಜೊಕೊವಿಕ್(Novak Djokovic) ಅವರು ಗುರುವಾರ ನಡೆದ ವಿಂಬಲ್ಡನ್ 2025(Wimbledon) ಪುರುಷರ ಸಿಂಗಲ್ಸ್‌ನಲ್ಲಿ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಡ್ಯಾನ್ ಇವಾನ್ಸ್ ವಿರುದ್ಧ 6-3, 6-2, 6-0 ಅಂತರದ ಭರ್ಜರಿ ಜಯ ಸಾಧಿಸಿದರು. ಈ ಮೂಲಕ ವಿಂಬಲ್ಡನ್‌ನಲ್ಲಿ ತಮ್ಮ ವೃತ್ತಿಜೀವನದ 99 ನೇ ಗೆಲುವು ಸಾಧಿಸಿದರು. ಪಂದ್ಯವು ಕೇವಲ ಒಂದು ಗಂಟೆ 14 ನಿಮಿಷಗಳಲ್ಲಿ ಮುಕ್ತಾಯ ಕಂಡಿತು.

ಫ್ರೆಂಚ್ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಎರಡರಲ್ಲೂ ಈಗಾಗಲೇ ಮೈಲಿಗಲ್ಲನ್ನು ದಾಟಿರುವ ಅವರು, ಮೂರನೇ ಪ್ರಮುಖ ಪಂದ್ಯಾವಳಿಯಲ್ಲಿ 100 ವಿಜಯಗಳನ್ನು ತಲುಪುವ ಹತ್ತಿರವಾಗಿದ್ದಾರೆ. ಜೊಕೊವಿಚ್‌ ಅವರು 2023ರ ಅಮೆರಿಕ ಓಪನ್‌ ಚಾಂಪಿಯನ್‌ ಆದ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿದ್ದಾರೆ. ವಿಂಬಲ್ಡನ್‌ನ ಕಳೆದ ಎರಡು ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿರುವ ಅವರು, ಅಲ್ಕರಾಜ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದರು.

ಹಾಲಿ ಚಾಂಪಿಯನ್‌, ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್‌ ಗೆಲುವಿನ ಓಟ ಮುಂದುವರಿಸಿದಾರೆ. ಎರಡನೇ ಶ್ರೇಯಾಂಕದ ಅಲ್ಕರಾಜ್‌ 6-1, 6-4, 6-4ಅಂತರದಿಂದ ಬ್ರಿಟನ್‌ನ ಆಲಿವರ್ ಟಾರ್ವೆಟ್ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದರು.

ಇದನ್ನೂ ಓದಿ India-Pakistan: ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ

ಮತ್ತೊಂದೆಡೆ ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ರನ್ನರ್‌ ಅಪ್‌, ನಾಲ್ಕನೇ ಶ್ರೇಯಾಂಕದ ಜಾಸ್ಮಿನ್ ಪಯೋಲಿನಿ ಆಘಾತಕಾರಿ ಸೋಲು ಕಂಡರು. ಮೊದಲ ಐದು ಶ್ರೇಯಾಂಕಿತ ಆಟಗಾರ್ತಿಯರ ಪೈಕಿ ಅರಿನಾ ಸಬಲೆಂಕಾ ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ಮೂರು ಗ್ರ್ಯಾನ್‌ಸ್ಲಾಮ್‌ ಕಿರೀಟ ಗೆದ್ದಿರುವ ಅಗ್ರ ಶ್ರೇಯಾಂಕದ ಸಬಲೆಂಕಾ ಇಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿದ್ದಾರೆ. ರೇಸ್‌ನಲ್ಲಿರುವ ಪೋಲೆಂಡ್‌ನ‌ ಐಗಾ ಸ್ವಿಯಾಟೆಕ್‌ ಅವರು ಕೂಡ ನೆಚ್ಚಿನ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡನೇ ಶ್ರೇಯಾಂಕದ ಕೊಕೊ ಗಾಫ್‌, ಮೂರನೇ ಶ್ರೇಯಾಂಕದ ಜೆಸಿಕಾ ಪೆಗುಲಾ ಮತ್ತು ಐದನೇ ಶ್ರೇಯಾಂಕದ ಝೆಂಗ್‌ ಕ್ವಿನ್ವೆನ್‌ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದರು.