ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೊದಲ ಐಷಾರಾಮಿ ಹೋಮ್ ಎಲಿವೇಟರ್ ಎಲೈಟ್ ಎಲಿವೇಟರ್ಸ್ ಬೀಸ್ಪೋಕ್ ಬಿಡುಗಡೆ

ಜಾಗತಿಕ ಮಟ್ಟದ ಆವಿಷ್ಕಾರಗಳ ಮೂಲಕ ಮನೆ ಹೋಮ್ ಎಲಿವೇಟರ್ ವಿಭಾಗ ದಲ್ಲಿ ಕ್ರಾಂತಿ ಮಾಡುವುದು ನಮ್ಮ ಗುರಿಯಾಗಿದೆ. ಕಸ್ಟಮೈಸ್ ಮಾಡಬಹುದಾದ ಆಯ್ಕೆಗಳ ಮೂಲಕ ಬೀಸ್ಪೋಕ್ ಎಲಿವೇಟರ್‌ಗಳು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿವೆ. ಕಟ್ಟಡ ಗಳಿಗೆ ಸೌಂದರ್ಯ ಒದಗಿಸು ವುದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುತ್ತದೆ ಮತ್ತು ಈ ಮೂಲಕ ಐಷಾರಾಮಿ ಅನುಭವ ನೀಡುತ್ತದೆ

ಸಂಪೂರ್ಣ ಕಸ್ಟಮೈಸ್ ಮಾಡಬಹುದಾದ ಭಾರತದ ಮೊದಲ ಹೋಮ್ ಎಲಿವೇಟರ್‌ಗಳು

Profile Ashok Nayak Apr 15, 2025 10:56 PM

ಬೆಂಗಳೂರು: ಪ್ರೀಮಿಯಂ ಹೋಮ್ ಲಿಫ್ಟ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ರುವ ಎಲೈಟ್ ಎಲಿವೇಟರ್ಸ್ ಸಂಸ್ಥೆಯು ಬಹುಮಹಡಿ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಹೋಮ್ ಎಲಿವೇಟರ್‌ಗಳ ಅಗತ್ಯತೆ ಹೆಚ್ಚುತ್ತಿರುವುದನ್ನು ಗಮನಿಸಿ ಸಂಪೂರ್ಣ ಕಸ್ಟಮೈಸ್ ಮಾಡಬಹುದಾದ ಭಾರತದ ಮೊದಲ ಐಷಾರಾಮಿ ಹೋಮ್ ಎಲಿವೇಟರ್ ಎಲೈಟ್ ಎಲಿವೇಟರ್ಸ್ ಬೀಸ್ಪೋಕ್ ಅನ್ನು ಬಿಡುಗಡೆ ಮಾಡಿದೆ. ಚೆನ್ನೈನಲ್ಲಿರುವ ಕಂಪನಿಯ ಪ್ರಧಾನ ಕಚೇರಿಯಲ್ಲಿ ಎಲೈಟ್ ಎಲಿವೇಟರ್ಸ್‌ನ ಸಂಸ್ಥಾಪಕರು ಮತ್ತು ಸಿಇಓ ಆದ ಶ್ರೀ ವಿಮಲ್ ಬಾಬು ಅವರು ಈ ಎಲಿವೇಟರ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ನಿರ್ವಹಣಾ ಸಿಬ್ಬಂದಿಗಳು ಮತ್ತು ಉದ್ಯೋಗಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಎಲೈಟ್ ಎಲಿವೇಟರ್ಸ್‌ನ ಸಂಸ್ಥಾಪಕ ಮತ್ತು ಸಿಇಓ ವಿಮಲ್ ಬಾಬು ಅವರು, “ಜಾಗತಿಕ ಮಟ್ಟದ ಆವಿಷ್ಕಾರಗಳ ಮೂಲಕ ಮನೆ ಹೋಮ್ ಎಲಿವೇಟರ್ ವಿಭಾಗ ದಲ್ಲಿ ಕ್ರಾಂತಿ ಮಾಡುವುದು ನಮ್ಮ ಗುರಿಯಾಗಿದೆ. ಕಸ್ಟಮೈಸ್ ಮಾಡಬಹುದಾದ ಆಯ್ಕೆಗಳ ಮೂಲಕ ಬೀಸ್ಪೋಕ್ ಎಲಿವೇಟರ್‌ಗಳು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆ ಒದಗಿಸಲಿವೆ. ಕಟ್ಟಡ ಗಳಿಗೆ ಸೌಂದರ್ಯ ಒದಗಿಸುವುದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುತ್ತದೆ ಮತ್ತು ಈ ಮೂಲಕ ಐಷಾರಾಮಿ ಅನುಭವ ನೀಡುತ್ತದೆ,” ಎಂದು ಹೇಳಿದರು.

ಇದನ್ನೂ ಓದಿ: Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!

ಎಲೈಟ್ ಬೀಸ್ಪೋಕ್ ಎಲಿವೇಟರ್ ಪ್ರತಿಯೊಂದು ಅಂಶವನ್ನು ಗ್ರಾಹಕರು ತಮ್ಮ ಅಗತ್ಯಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದಾಗಿದೆ. ಲ್ಯಾಂಡಿಂಗ್ ಡೋರ್ ಗಳು ಕಸ್ಟಮೈಸ್ ಮಾಡಬಹುದಾದ ಗಾತ್ರಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ಇಷ್ಟಕ್ಕೆ ತಕ್ಕಂತೆ ಮಧ್ಯದಲ್ಲಿ ತೆರೆಯುವ ಬಾಗಿಲು ಅಥವಾ ಪಕ್ಕದಲ್ಲಿ ತೆರೆಯುವ ಬಾಗಿಲನ್ನು ಆಯ್ಕೆ ಮಾಡಿಕೊಳ್ಳಬಹುದು. ಫುಲ್ ಗ್ಲಾಸ್, ಬ್ಲೈಂಡ್ ಮತ್ತು ಫೈರ್ -ರೇಟೆಡ್ ವೇರಿಯೆಂಟ್ ಗಳು ಸೇರಿದಂತೆ ವಿವಿಧ ರೀತಿಯ ಫಿನಿಶಿಂಗ್/ ಬಣ್ಣದ ಆಯ್ಕೆಗಳು ಲಭ್ಯವಿವೆ. ಲ್ಯಾಂಡಿಂಗ್ ಆಪರೇಟಿಂಗ್ ಪ್ಯಾನಲ್ (ಎಲ್ಓಪಿ) ಅನ್ನು ಟಚ್ ಅಥವಾ ಬಟನ್ ಆಧರಿತ ನಿಯಂತ್ರಣಗಳೊಂದಿಗೆ ಪಡೆಯಬಹುದು.

House

ಇದರಲ್ಲಿ ಕಸ್ಟಮೈಸ್ ಮಾಡಬಹುದಾದ ಕಾರ್ನರ್ ಮತ್ತು ಸೀಲಿಂಗ್ ಫ್ರೇಮ್ ಬಣ್ಣಗಳು ಮತ್ತು ಆಕಾರ, ಫ್ಲೋರಿಂಗ್ ಮೆಟರಿಯಲ್ ಗಳು, ವಿಶಿಷ್ಟ ಸೀಲಿಂಗ್ ವಿನ್ಯಾಸಗಳು ಮತ್ತು ವಾಲ್ ಫಿನಿಶ್‌ಗಳು ದೊರೆಯುತ್ತವೆ. ಇದರಲ್ಲಿ ಕಾರ್ ಆಪರೇಟಿಂಗ್ ಪ್ಯಾನಲ್ (ಸಿಓಪಿ) ನ ಬಟನ್‌ ಗಳನ್ನು ಸಹ ವೈಯಕ್ತೀಕರಿಸಬಹುದಾಗಿದೆ. ಪರಿಣತ ಯುರೋಪಿಯನ್ ತಂತ್ರಜ್ಞರ ಸಹಯೋಗದೊಂದಿಗೆ ಸಿದ್ಧಗೊಳಿಸಲಾಗಿರುವ ಎಲೈಟ್ ಎಲಿವೇಟರ್ಸ್ ಬೀಸ್ಪೋಕ್ ಯುರೋಪಿಯನ್ ಸಿಇ ಪ್ರಮಾಣೀಕೃತ ತಂತ್ರಜ್ಞಾನವನ್ನು ಹೊಂದಿದ್ದು, ಅತ್ಯುತ್ತಮ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಒದಗಿಸು ತ್ತದೆ. ಈ ಎಲಿವೇಟರ್ ಗೇರ್‌ ಲೆಸ್ ಆಗಿದೆ, ಶಬ್ದರಹಿತವಾಗಿದೆ ಮತ್ತು ಪಿಟ್‌ ಲೆಸ್ ತಂತ್ರಜ್ಞಾನ ಹೊಂದಿದೆ. ಹಾಗಾಗಿ ಇದು ಆಧುನಿಕ ಮತ್ತು ಪಾರಂಪರಿಕ ಎರಡೂ ಥರದ ಕಟ್ಟಡಗಳಿಗೂ ಸೂಕ್ತ ವಾಗಿದೆ.

ಎಲೈಟ್ ಎಲಿವೇಟರ್ಸ್‌ ನ ಈ ಹೊಸ ಉತ್ಪನ್ನ ಈಗ ಭಾರತದಾದ್ಯಂತ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 7845039222 ಅಥವಾ ಎಲೈಟ್ ಎಲಿವೇಟರ್ಸ್‌ ನ ಅಧಿಕೃತ ವೆಬ್‌ಸೈಟ್ www.eliteelevators.com/bespoke ಗೆ ಭೇಟಿ ನೀಡಿ.