MI vs PBKS: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್
ಪಂಜಾಬ್ ಮತ್ತು ಮುಂಬೈ ಇದುವರೆಗೆ ಪರಸ್ಪರ 32 ಐಪಿಎಲ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಮುಂಬೈ ತಂಡ 17 ಮತ್ತು ಪಂಜಾಬ್ 15 ಪಂದ್ಯಗಳನ್ನು ಗೆದ್ದಿದೆ. ಹಾಲಿ ಆವೃತ್ತಿಯಲ್ಲಿ ಒಂದು ಆಡಿದ ಒಂದು ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 7 ವಿಕೆಟ್ ಅಂತರದಿಂದ ಗೆದ್ದು ಬೀಗಿತ್ತು. ಈ ಸೋಲಿಗೆ ಮುಂಬೈ ಸೇಡು ತೀರಿಸಲು ಕಾದು ಕುಳಿತಿದೆ.


ಅಹಮದಾಬಾದ್: ಐಪಿಎಲ್ 2025ರ(MI vs PBKS) ಎರಡನೇ ಕ್ವಾಲಿಫೈಯರ್(MI vs PBKS Qualifier 2) ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಮುಂಬೈ ಮೊದಲು ಬ್ಯಾಟಿಂಗ್ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದ್ದು, ಜೂನ್ 3ರಂದು ಆರ್‌ಸಿಬಿ ವಿರುದ್ಧ ಅಹಮದಾಬಾದ್ ಕ್ರೀಡಾಂಗಣದಲ್ಲೇ ಟ್ರೋಫಿಗಾಗಿ ಸೆಣಸಾಡಲಿದೆ. ಸೋತ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.
ಮುಂಬೈ ತಂಡ 11ನೇ ಬಾರಿ ಪ್ಲೇ-ಆಫ್ ಆಡುತ್ತಿದ್ದು, 7ನೇ ಬಾರಿ ಫೈನಲ್‌ಗೇರುವ ತವಕದಲ್ಲಿದೆ. ಪಂಜಾಬ್ 2ನೇ ಬಾರಿ ಫೈನಲ್ ಗೇರುವ ಗುರಿ ಇಟ್ಟುಕೊಂಡಿದೆ. 2014ರಲ್ಲಿ ಫೈನಲ್‌ಗೇರಿದ್ದ ತಂಡ ಸೋಲನುಭವಿಸಿತ್ತು.
ಹೆಡ್-ಟು-ಹೆಡ್
ಪಂಜಾಬ್ ಮತ್ತು ಮುಂಬೈ ಇದುವರೆಗೆ ಪರಸ್ಪರ 32 ಐಪಿಎಲ್ ಪಂದ್ಯಗಳನ್ನು ಆಡಿವೆ. ಈ ಪೈಕಿ ಮುಂಬೈ ತಂಡ 17 ಮತ್ತು ಪಂಜಾಬ್ 15 ಪಂದ್ಯಗಳನ್ನು ಗೆದ್ದಿದೆ. ಹಾಲಿ ಆವೃತ್ತಿಯಲ್ಲಿ ಒಂದು ಆಡಿದ ಒಂದು ಪಂದ್ಯದಲ್ಲಿ ಪಂಜಾಬ್ ತಂಡ ಮುಂಬೈ ವಿರುದ್ಧ 7 ವಿಕೆಟ್ ಅಂತರದಿಂದ ಗೆದ್ದು ಬೀಗಿತ್ತು. ಈ ಸೋಲಿಗೆ ಮುಂಬೈ ಸೇಡು ತೀರಿಸಲು ಕಾದು ಕುಳಿತಿದೆ.
ಮುಂಬೈ ಇಂಡಿಯನ್ಸ್ ಪ್ಲೇ ಆಫ್/ನಾಕೌಟ್ ಸಾಧನೆ
2010 - ಫೈನಲ್ (ಚೆನ್ನೈ ವಿರುದ್ಧ 22 ರನ್‌ಗಳಿಂದ ಸೋಲು)
2011 - ಎಲಿಮಿನೇಟರ್ (ಆರ್‌ಸಿಬಿ ವಿರುದ್ಧ 43 ರನ್‌ಗಳಿಂದ ಸೋಲು)
2012 - ಕ್ವಾಲಿಫೈಯರ್ 2 (ಚೆನ್ನೈ ವಿರುದ್ಧ 38 ರನ್‌ಗಳಿಂದ ಸೋಲು)
2013 - ಫೈನಲ್ಸ್ (ಚೆನ್ನೈ ವಿರುದ್ಧ 23 ರನ್‌ಗಳಿಂದ ಜಯ)
2014 - ಕ್ವಾಲಿಫೈಯರ್ 2 (ಚೆನ್ನೈ ವಿರುದ್ಧ 7 ವಿಕೆಟ್‌ಗಳಿಂದ ಸೋಲು)
2015 - ಫೈನಲ್ಸ್ (ಚೆನ್ನೈ ವಿರುದ್ಧ 41 ರನ್‌ಗಳಿಂದ ಜಯ)
2017 - ಫೈನಲ್ಸ್ (ರೈಸಿಂಗ್ ಪುಣೆ ವಿರುದ್ಧ 1 ರನ್‌ನಿಂದ ಜಯ)
2019 - ಫೈನಲ್ (ಚೆನ್ನೈ ವಿರುದ್ಧ 1 ರನ್‌ನಿಂದ ಜಯ)
2020 - ಫೈನಲ್ (ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಜಯ)
2023 - ಎಲಿಮಿನೇಟರ್ (ಗುಜರಾತ್ ವಿರುದ್ಧ 62 ರನ್ ಸೋಲು)
2025- ಎಲಿಮಿನೇಟರ್ (ಗುಜರಾತ್ ವಿರುದ್ಧ 20 ರನ್ ಗೆಲುವು)
ಪಂಜಾಬ್ ಪ್ಲೇ ಆಫ್/ನಾಕೌಟ್ ಸಾಧನೆ
2008 - ಎಲಿಮಿನೇಟರ್ (ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 9 ವಿಕೆಟ್‌ಗಳ ಸೋಲು)
2014 - ಫೈನಲ್ಸ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್‌ಗಳ ಸೋಲು)
2025- ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ವಿರುದ್ಧ 8 ವಿಕೆಟ್‌ಗಳ ಸೋಲು