ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅತಿಯಾದ ಭುಜದ ನೋವಿನಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಗೆ ಯಶಸ್ವಿಯಾಗಿ “ಹಿಮ್ಮುಖ ಒಟ್ಟು ಭುಜದ ಬದಲಿ ಶಸ್ತ್ರಚಿಕಿತ್ಸೆ

ರೋಗಿಯಾದ ಶ್ರೀಮತಿ ಬಸಂತಿ, ನಿವೃತ್ತ ಶಾಲಾ ಶಿಕ್ಷಕರು ಮತ್ತು ಬೆಂಗಳೂರು ನಿವಾಸಿ ಆದ ಇವರು, ನಿರಂತರ ಭುಜದ ನೋವಿನಿಂದ ಬಳಲುತ್ತಿದ್ದರು. ಈ ನೋವು ಹೆಚ್ಚುತ್ತಲೇ ಹೋಯಿತು. ದೈನಂದಿಕ ಚಟುವಟಿಕಗಳಾದ, ಕೂದಲನ್ನು ಬಾಚಿಕೊಳ್ಳುವುದು, ಅಡುಗೆ ಮಾಡುವುದು ಮತ್ತು ಒಂದು ಕಪ್ ಚಹಾವನ್ನು ಎತ್ತಲು ಸಹ ಆಗದ ಸ್ಥಿತಿಗೆ ತಲುಪಿದರು.

ಮಹಿಳೆಗೆ ಯಶಸ್ವಿಯಾಗಿ “ಹಿಮ್ಮುಖ ಒಟ್ಟು ಭುಜದ ಬದಲಿ ಶಸ್ತ್ರಚಿಕಿತ್ಸೆ"

Profile Ashok Nayak May 31, 2025 9:35 AM

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ತೀವ್ರ ಭುಜದ ಸಂಧಿವಾತದಿಂದ ಬಳಲುತ್ತಿದ್ದ 68 ವರ್ಷದ ಮಹಿಳೆಗೆ ನಾಗರಭಾವಿಯ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಡಾ.ಮಂಜುನಾಥ್ ಕೋಡಿಹಳ್ಳಿ, ಸಲಹೆಗಾರ - ಆರ್ಥೋಪೆಡಿಕ್ಸ್, ಫೋರ್ಟಿಸ್ ಆಸ್ಪತ್ರೆ ನಾಗರಭವಿ ಮತ್ತು ಅವರ ತಂಡದ ತಜ್ಞರ ಆರೈಕೆಯಡಿಯಲ್ಲಿ ಹಿಮ್ಮುಖ ಒಟ್ಟು ಭುಜದ ಬದಲಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಭುಜದ ಚಲನೆ ಮತ್ತು ಕಾರ್ಯದಲ್ಲಿ ಗಮನಾರ್ಹ ಸುಧಾ ರಣೆಯೊಂದಿಗೆ ಶಸ್ತ್ರಚಿಕಿತ್ಸೆಯ ನಂತರದ ಒಂದು ದಿನದೊಳಗೆ ರೋಗಿಯನ್ನು ಬಿಡುಗಡೆ ಮಾಡ ಲಾಯಿತು.

ರೋಗಿಯಾದ ಶ್ರೀಮತಿ ಬಸಂತಿ, ನಿವೃತ್ತ ಶಾಲಾ ಶಿಕ್ಷಕರು ಮತ್ತು ಬೆಂಗಳೂರು ನಿವಾಸಿ ಆದ ಇವರು, ನಿರಂತರ ಭುಜದ ನೋವಿನಿಂದ ಬಳಲುತ್ತಿದ್ದರು. ಈ ನೋವು ಹೆಚ್ಚುತ್ತಲೇ ಹೋಯಿತು. ದೈನಂದಿಕ ಚಟುವಟಿಕಗಳಾದ, ಕೂದಲನ್ನು ಬಾಚಿಕೊಳ್ಳುವುದು, ಅಡುಗೆ ಮಾಡುವುದು ಮತ್ತು ಒಂದು ಕಪ್ ಚಹಾವನ್ನು ಎತ್ತಲು ಸಹ ಆಗದ ಸ್ಥಿತಿಗೆ ತಲುಪಿದರು.

ಇದನ್ನೂ ಓದಿ: Health Tips: ನಿಂತ ನೀರಿನಿಂದ ಆರೋಗ್ಯ ತೊಂದರೆಗಳು ಬರಬಹುದು..ಜೋಕೆ!

ನಗರದಾದ್ಯಂತ ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅವರ ನಿರಂತರ ನೋವು ನಿದ್ರಿಸಲಿ ಸಹ ಆಗದ ಸ್ಥಿತಿ ನಿರ್ಮಾಣವಾಯಿತು. ಫೋರ್ಟಿಸ್ ಆಸ್ಪತ್ರೆಗೆ ದಾಖಲಾದ ಬಳಿಕ ಸಂಪೂರ್ಣ ತಪಾ ಸಣೆಗೆ ಒಳಗಾದರು. ಆವರ್ತಕ ಪಟ್ಟಿಯ ಟಿಯರ್‌ ಪತ್ತೆಹಚ್ಚಿ ದರು, ಇದು ಭುಜದ ಸ್ನಾಯುಗಳನ್ನು ಮೂಳೆಗಳಿಗೆ ಸಂಪ ರ್ಕಿಸುವ ಅಂಗಾಂಶವಾಗಿದೆ, ಈ ಸಂಧಿವಾತದಿಂದ ನೋವು, ದೌರ್ಬಲ್ಯ ಕಾಣಿಸುತ್ತಿತ್ತು.

Foe

ಹೀಗಾಗಿ ಅವರಿಗೆ ಹಿಮ್ಮುಖ ಭುಜದ ಬದಲಿ ಶಸ್ತ್ರಚಿಕಿತ್ಸೆ ಶಿಫಾರಸು ಮಾಡಿತು ಎಂದು ಡಾ.ಮಂಜು ನಾಥ್ ಕೋಡಿಹಳ್ಳಿ ವಿವರಿಸಿದರು. ಸಾಕಷ್ಟು ಜನರು ಇಂತಹ ಸಮಸ್ಯೆ ದೀರ್ಘಕಾಲದಿಂದ ಬಳಲು ತ್ತಿರುತ್ತಾರೆ. ಇದಕ್ಕೆ ಹಿಮ್ಮುಖ ಭುಜದ ಬದಲಿ ಶಸ್ತ್ರಚಿಕಿತ್ಸೆ ಹೆಚ್ಚು ಸೂಕ್ತ.

ಈ ರೋಗಿಗೆ ಶಸ್ತ್ರಚಿಕಿತ್ಸೆ ವೇಳೆ ಈಗಾಗಲೇ ಹಾನಿಯಾಗಿದ್ದ ಕೀಲಿನ ಚಲನಶೀಲತೆಯನ್ನು ಸಹ ಸುಧಾರಿಸಲು ಕೃತಕ ಇಂಪ್ಲಾಂಟ್‌ ಸಹ ಮಾಡಲಾಯಿತು ಎಂದು ಹೇಳಿದರು. ತೀವ್ರವಾದ ಭುಜದ ಹಾನಿ ಹೊಂದಿರುವ ರೋಗಿಗಳಿಗೆ ಈ ರೀತಿಯ ಶಸ್ತ್ರಚಿಕಿತ್ಸೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಎಂದರು.