ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ನಟಿ ತನ್ವಿಯ ರಾಯಲ್‌ ಲುಕ್‌ಗೆ ಸಾಥ್‌ ನೀಡಿದ ಟ್ರೆಡಿಷನಲ್‌ ವಿನ್ಯಾಸದ ಸೆಪ್ಟಂ ರಿಂಗ್‌

Star Fashion: ಸೆಪ್ಟಂ ಟ್ರೆಡಿಷನಲ್‌ ನೋಸ್‌ ರಿಂಗ್‌ ಧರಿಸಿರುವ ಕಿರುತೆರೆ ನಟಿ ತನ್ವಿ ಬಾಲರಾಜ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರು ಧರಿಸಿರುವ ಈ ಸಾಂಪ್ರದಾಯಿಕ ಲುಕ್‌ ನೀಡುವ ಮೂಗುತಿ ಅವರ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ಜ್ಯುವೆಲ್‌ ಫ್ಯಾಷನ್‌? ಇಲ್ಲಿದೆ ವಿವರ.

ಟ್ರೆಡಿಷನಲ್‌ ವಿನ್ಯಾಸದ ಸೆಪ್ಟಂ ರಿಂಗ್‌ನಲ್ಲಿ ಕಾಣಿಸಿಕೊಂಡ ನಟಿ ತನ್ವಿ

ಚಿತ್ರಗಳು: ತನ್ವಿ ಬಾಲರಾಜ್‌, ಕಿರುತೆರೆ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಾಂಪ್ರದಾಯಿಕ ಲುಕ್‌ ನೀಡುವ ಟ್ರೆಡಿಷನಲ್‌ ಸೆಪ್ಟಂ ರಿಂಗ್‌ನಲ್ಲಿ ಕಿರುತೆರೆ ನಟಿ ತನ್ವಿ ಬಾಲರಾಜ್‌ (Star Fashion) ಕಾಣಿಸಿಕೊಂಡಿದ್ದು, ಇವರ ಈ ಲುಕ್‌ ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸಿದೆ. ಹೌದು, ನಟಿ ತನ್ವಿ, ಟ್ರೆಡಿಷನಲ್‌ ಮೂಗುತಿ ಧರಿಸಿರುವುದು ಅವರ ಇಡೀ ಲುಕ್ಕನ್ನು ಪಕ್ಕಾ ಸಾಂಪ್ರದಾಯಿಕ ಹುಡುಗಿಯಂತೆ ಬಿಂಬಿಸಿದೆ. ಅವರು ಧರಿಸಿರುವ ಈ ಮೂಗುತಿ ಇತ್ತೀಚೆಗೆ ಸಾಕಷ್ಟು ಚಾಲ್ತಿಯಲ್ಲಿದೆ. ಅಲ್ಲದೇ ತಾರೆಯರು ತಮ್ಮ ಟ್ರೆಡಿಷನಲ್‌ ಲುಕ್‌ಗಾಗಿ ಇದನ್ನು ಧರಿಸುವುದು ಇಂದು ಹೆಚ್ಚಾಗಿದೆ. ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Star Fashion 1

ಸಾಂಪ್ರದಾಯಿಕ ಲುಕ್‌ ಹೆಚ್ಚಿಸಿದ ಸೆಪ್ಟಂ ರಿಂಗ್‌

ಅಂದಹಾಗೆ, ತನ್ವಿ ಧರಿಸಿರುವ ಈ ಮೂಗುತಿಯನ್ನು ಇಂದು ಸೆಪ್ಟಂ ರಿಂಗ್‌ ಎನ್ನಲಾಗುತ್ತದೆ. ಟ್ರೆಡಿಷನಲ್‌ ಆಗಿ ಕಾಣಿಸುವ ಈ ಮೂಗುತಿಯ ಮೂಲ ನಮ್ಮ ಭಾರತೀಯ ಸಂಸ್ಕೃತಿಯಲ್ಲಿದೆ. ರಾಜ-ಮಹಾರಾಜರ ಕಾಲದಿಂದಲೂ ಇದೆ. ರಾಣಿ-ಮಹಾರಾಣಿಯರು ತಮ್ಮ ಪ್ರತಿಷ್ಠೆಯ ಸಂಕೇತವಾಗಿ ಧರಿಸುತ್ತಿದ್ದರು. ಇನ್ನು, ರಾಯಲ್‌ ಫ್ಯಾಮಿಲಿಯವರು ಕೂಡ ಇದನ್ನು ಧರಿಸುತ್ತಿದ್ದರು. ಕಾಲ ಬದಲಾದಂತೆ ಮೂಗುತಿ ಧರಿಸುವ ರಿವಾಜು ಮಾತ್ರ ಬದಲಾಯಿತು, ಜತೆಗೆ ಮೂಗುತಿಯ ರೂಪ ಕೂಡ ಬದಲಾಯಿತು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್.

Star Fashion 2

ತನ್ವಿಯ ಆಕರ್ಷಕ ಮೂಗುತಿ

ತನ್ವಿ ಧರಿಸಿರುವ ಮೂಗುತಿ ಪ್ರೆಸ್‌ ಆನ್‌ ಮೂಗುತಿ, ಪಿಯರ್ಸಿಂಗ್‌ ಇಲ್ಲದೇ ಧರಿಸಬಹುದಾಗಿದೆ. ಅವರ ರೆಡ್‌ ಬಾರ್ಡರ್‌ ಡಿಸೈನರ್‌ವೇರ್‌ ಜತೆಗೆ ಮ್ಯಾಚ್‌ ಆಗಿದೆ. ಇದು ಅವರಿಗೆ ರಾಯಲ್‌ ಲುಕ್‌ ಕಲ್ಪಿಸಿದೆ ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

Star Fashion 3

ಮರಳಿದ ಸೆಪ್ಟಂ ರಿಂಗ್‌ ಫ್ಯಾಷನ್‌

ಇಂದು ಬ್ಲ್ಯಾಕ್‌ ಮೆಟಲ್‌ ಹಾಗೂ ವೈಟ್‌ ಮೆಟಲ್‌ನಲ್ಲೂ ಸೆಪ್ಟಂ ರಿಂಗ್‌ ಫ್ಯಾಷನ್‌ ಬಂದಿದೆ. ಇನ್ನು, ನಮ್ಮ ಸಾಂಪ್ರದಾಯಿಕ ಲುಕ್‌ಗೆ ಮ್ಯಾಚ್‌ ಆಗುವಂತಹ ಗೋಲ್ಡ್‌ ಶೇಡ್‌ ಅಥವಾ ಬಂಗಾರದ ಸೆಪ್ಟಂ ರಿಂಗ್‌ಗಳು ಮರಳಿವೆ. ಸಿನಿಮಾ ತಾರೆಯರ ಫೋಟೋ ಶೂಟ್‌ ಮೂಲಕ ಮತ್ತೊಮ್ಮೆ ಇವು ಕಾಣಿಸಿಕೊಂಡಿವೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ.

ಈ ಸುದ್ದಿಯನ್ನೂ ಓದಿ | Fashion Show: ಡಿಸೈನರ್ಸ್ ಕ್ರಿಯೇಟಿವಿಟಿಗೆ ಸಾಕ್ಷಿಯಾದ ಸಿಇಎಸ್ ಕಾಲೇಜಿನ ಫ್ಯಾಷನ್ ಶೋ!

ತನ್ವಿಯಂತೆ ಮೂಗುತಿ ಧರಿಸುವವರಿಗೆ ಇಲ್ಲಿದೆ 5 ಸಿಂಪಲ್‌ ಟಿಪ್ಸ್

  • ನಿಮ್ಮ ಮುಖಕ್ಕೆ ಮ್ಯಾಚ್‌ ಆಗುವಂತಹ ಆಕಾರದ್ದನ್ನು ಆಯ್ಕೆ ಮಾಡಿ.
  • ಟ್ರೆಡಿಷನಲ್‌ ಲುಕ್‌ಗಾಗಿ ಆದಷ್ಟೂ ಬಂಗಾರದ್ದನ್ನು ಚೂಸ್‌ ಮಾಡಿ.
  • ಸೆಪ್ಟಂ ರಿಂಗ್‌ ಮೇಕಪ್‌ ಮುಗಿದ ನಂತರ ಧರಿಸಿ.
  • ಟ್ರೆಡಿಷನಲ್‌ ಲುಕ್‌ಗೆ ಮಾತ್ರ ಧರಿಸಿ.
  • ಧರಿಸುವ ಡಿಸೈನರ್‌ವೇರ್‌ ಧರಿಸುವ ಮೂಗುತಿಗೆ ಮ್ಯಾಚ್‌ ಆಗಬೇಕು.

(ಲೇಖಕಿ: ಫ್ಯಾಷನ್‌ ಲೇಖಕಿ)