ಸುಸ್ತಾಗುತ್ತಿದೆಯೇ? ಇದು ಬ್ಲಡ್ ಕ್ಯಾನ್ಸರ್ ಲಕ್ಷಣವಾಗಿರಬಹುದು
ನಿರಂತರ ಸುಸ್ತು, ವಿವರಿಸಲಾಗದ ಗಾಯಗಳು ಅಥವಾ ಆಗಾಗ್ಗಿನ ಸೋಂಕುಗಳು ದಿನನಿತ್ಯದ ಜೀವನ ಅಥವಾ ಬದಲಾಗುತ್ತಿರುವ ಹವಾಮಾನದ ಭಾಗವಾಗಿದ್ದರೆ ಏನಾಗಬಹುದು? ಅವು ನಿಮಗೆ ಏನೋ ಗಂಭೀರ ಅಥವಾ ಆಳವಾದ ಸಮಸ್ಯೆಯ ಬಗ್ಗೆ ಸೂಚನೆ ನೀಡುತ್ತಿದ್ದರೆ? ಈ ಲಕ್ಷಣಗಳನ್ನು ನಾವು ನಿರ್ಲಕ್ಷಿಸುವುದು ಬಹಳ ಸುಲಭ, ಯಾರಿಗಾದರೂ ಒಂದೊಮ್ಮೆ ಆರೋಗ್ಯ ತಪ್ಪುವುದು ಸಹಜ, ಅಲ್ಲವೇ? ಆದರೆ ಕೆಲವು ಪ್ರಕರಣಗಳಲ್ಲಿ, ಅವು ಲ್ಯೂಕೇಮಿಯಾದ ಆರಂಭಿಕ ಎಚ್ಚರಿಕೆ ಸಂಕೇತಗಳಾಗಿರ ಬಹುದು.


ಡಾ. ಸಂತೋಷ್ ಕುಮಾರ್ ದೇವದಾಸ್, ಮುಖ್ಯಸ್ಥರು ಮತ್ತು ಸಲಹೆಗಾರರು - ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಆಂಕೊಸೈನ್ಸ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ವಿಭಾಗ.
ನಿರಂತರ ಸುಸ್ತು, ವಿವರಿಸಲಾಗದ ಗಾಯಗಳು ಅಥವಾ ಆಗಾಗ್ಗಿನ ಸೋಂಕುಗಳು ದಿನನಿತ್ಯದ ಜೀವನ ಅಥವಾ ಬದಲಾಗುತ್ತಿರುವ ಹವಾಮಾನದ ಭಾಗವಾಗಿದ್ದರೆ ಏನಾಗಬಹುದು? ಅವು ನಿಮಗೆ ಏನೋ ಗಂಭೀರ ಅಥವಾ ಆಳವಾದ ಸಮಸ್ಯೆಯ ಬಗ್ಗೆ ಸೂಚನೆ ನೀಡುತ್ತಿದ್ದರೆ? ಈ ಲಕ್ಷಣಗಳನ್ನು ನಾವು ನಿರ್ಲಕ್ಷಿಸುವುದು ಬಹಳ ಸುಲಭ, ಯಾರಿಗಾದರೂ ಒಂದೊಮ್ಮೆ ಆರೋಗ್ಯ ತಪ್ಪುವುದು ಸಹಜ, ಅಲ್ಲವೇ? ಆದರೆ ಕೆಲವು ಪ್ರಕರಣಗಳಲ್ಲಿ, ಅವು ಲ್ಯೂಕೇಮಿಯಾದ ಆರಂಭಿಕ ಎಚ್ಚರಿಕೆ ಸಂಕೇತಗಳಾಗಿರಬಹುದು. ಇದು ಒಂದು ರೀತಿಯ ಬ್ಲಡ್ ಕ್ಯಾನ್ಸರ್ ವಿಧವಾಗಿದ್ದು, ಇದು ಗಂಭೀರ ಸ್ವರೂಪಕ್ಕೆ ತಲುಪವವರೆಗೆ ಇದು ಇರುವುದು ತಿಳಿದುಬರುವುದಿಲ್ಲ.
ಭಾರತದಲ್ಲಿ, 1990 ಮತ್ತು 2019ರ ನಡುವೆ ಲ್ಯುಕೇಮಿಯಾ ಆರನೆಯ ಅತ್ಯಂತ ಸಾಮಾನ್ಯ ರೂಪದ ಕ್ಯಾನ್ಸರ್ ಆಗಿತ್ತು, ಇದು ಎಲ್ಲಾ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಖಡಾ 7% ಆಗಿತ್ತು. ಇದರ ಅನೇಕ ವಿಧಗಳಲ್ಲಿ, ಅಕ್ಯೂಟ್ ಮೈಲಾಯ್ಡ್ ಲ್ಯುಕೇಮಿಯಾ(AML) ಮುಖ್ಯವಾಗಲು ಒಂದು ಕಾರಣ - ಇದು ಬೇಗ ಹರಡುತ್ತದೆ, ತೀವ್ರ ಮತ್ತು ನಿರ್ದಯವಾಗಿದೆ. AML ಇದ್ದಕ್ಕಿಂದಂತೆ ಕಾಣಿಸಿಕೊಳ್ಳ ಬಹುದು, ಮೂಳೆಮಜ್ಜೆಯ(ದೇಹದ ರಕ್ತ ಕೋಶದ ಕಾರ್ಖಾನೆ) ಮೇಲೆ ಪರಿಣಾಮ ಬೀರುತ್ತದೆ ಮತ್ತು ತ್ವರಿತವಾಗಿ ಹರಡುತ್ತದೆ. ಆದ್ದರಿಂದ ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆ ನೀಡುವುದು ಮುಖ್ಯ.
ಇದನ್ನೂ ಓದಿ: Health Tips: ನಿಂತ ನೀರಿನಿಂದ ಆರೋಗ್ಯ ತೊಂದರೆಗಳು ಬರಬಹುದು..ಜೋಕೆ!
ಜಾಗತಿಕವಾಗಿ, AML ವಯಸ್ಕರಲ್ಲಿನ ಅಕ್ಯೂಟ್ ಲ್ಯುಕೇಮಿಯಾದ ಅತ್ಯಂತ ಸಾಮಾನ್ಯ ವಿಧವಾ ಗಿದ್ದು, ಇದು ಒಟ್ಟು ಪ್ರಕರಣಗಳಲ್ಲಿ ಶೇಖಡಾ 80% ರಷ್ಟು ಆಗಿದೆ. ಇದು ಸಾಮಾನ್ಯವಾಗಿ ಹಿರಿಯ ನಾಗರಿಕರಲ್ಲಿ ಕಂಡುಬರುತ್ತದೆ, ಇದು ಅಂದಾಜು 68 ವರ್ಷಗಳ ಆಸುಪಾಸಿನಲ್ಲಿ ಕಂಡುಬರುತ್ತದೆ. ಆದರೆ ಭಾರತದಲ್ಲಿ, ಇದರ ಚಿತ್ರ ವಿಭಿನ್ನವಾಗಿದೆ - AML ಚಿಕ್ಕವಯಸ್ಸಿನಲ್ಲಿಯೇ ಕಾಣಿಸಿಕೊಳ್ಳುತ್ತದೆ, ಕೇವಲ 40ರ ಮಧ್ಯ ವಯಸ್ಸಿನಲ್ಲಿಯೇ ಕಂಡುಬರುತ್ತದೆ ಮತ್ತು ಇದು ಒಟ್ಟು ಲ್ಯುಕೇಮಿಯಾ ಪ್ರಕರಣಗಳ ಶೇಖಡಾ 10% ರಷ್ಟಾಗಿದೆ.
ಹಾಗಾದರೆ, ದೇಹದೊಳಗೆ ಏನು ನಡೆಯುತ್ತಿದೆ?
AML ಮೂಳೆಮಜ್ಜೆಯಲ್ಲಿ ಕಂಡುಬರುವ ಒಂದು ವಿಧದ ಸ್ಟೆಮ್ ಕೋಶವಾದ ಮೈಲಾಯ್ಡ್ ಕೋಶಗಳಲ್ಲಿ ಆರಂಭವಾಗುತ್ತದೆ. ಈ ಕೋಶಗಳು ಈ ರೀತಿಯಾಗಿ ಬೆಳೆತ್ತವೆ:
● ಕೆಂಪು ರಕ್ತ ಕಣಗಳು (ಆಮ್ಲಜನಕ ಒಯ್ಯುತ್ತವೆ),
● ಪ್ಲಾಟೇಲ್ಟ್ ಗಳು (ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ), ಮತ್ತು
● ಬಿಳಿ ರಕ್ತ ಕೋಶಗಳು (ಸೋಂಕು ವಿರುದ್ಧ ಹೋರಾಡುತ್ತದೆ)
AML ಇರುವ ಜನರಲ್ಲಿ, ವಂಶವಾಹಿಗಳ ಮಟ್ಟದಲ್ಲಿಯೇ ಏನೋ ತೊಂದರೆಯಾಗಿರುತ್ತದೆ. ಈ ಮೈಲಾಯ್ಡ್ ಕೋಶಗಳು ಬಹಳ ಬೇಗ ದ್ವಿಗುಣಗೊಳ್ಳುತ್ತವೆ ಮತ್ತು ಅವು ಸರಿಯಾದ ರೂಪದಲ್ಲಿ ಬೆಳೆಯುವುದಿಲ್ಲ. ಬದಲಿಗೆ, ಇವು ಬ್ಲಾಸ್ಟ್ ಗಳು ಎಂದು ಕರೆಯಲಾಗುವ ಅಪಕ್ವ ಕೋಶಗಳಲ್ಲಿ ಮಾರ್ಪಾಡಾಗುತ್ತವೆ ಮತ್ತು ಅದರ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ. ಸಮಯ ಕಳೆದಂತೆ, ಈ ದೋಷಪೂರಕ ಕೋಶಗಳು ಆರೋಗ್ಯಕರ ಕೋಶಗಳನ್ನು ಸುತ್ತುವರಿದು, ಆಮ್ಲಜನಕ ವಿತರಣೆ ಮತ್ತು ರೋಗ ನಿರೋಧಕ ಶಕ್ತಿ ರೀತಿಯ ಮೂಲ ಕಾರ್ಯಾಚರಣೆಗಳಿಗೂ ಸಹ ಅಡಚಣೆ ಯನ್ನುಂಟುಮಾಡುತ್ತದೆ.
ಯಾವುದನ್ನು ಗಮನಿಯಬೇಕು
ಆರಂಭದಲ್ಲಿ ಸಾಮಾನ್ಯ ಲಕ್ಷಣಗಳು ಎಂಬಂತೆ ತೋರಿಬರುವ ಕಾರಣ AML ಅನ್ನು ಆರಂಭ ದಲ್ಲಿಯೇ ಪತ್ತೆ ಮಾಡುವುದು ಬಹಳ ಕಷ್ಟ. ಕೆಲವು ಸಾಮಾನ್ಯ ಲಕ್ಷಣಗಳೆಂದರೆ:
● ಸುಲಭ ಗಾಯಗಳು ಅಥವಾ ರಕ್ತಸ್ರಾವ
● ನಿರಂತರ ಸುಸ್ತು ಅಥವಾ ಆಯಾಸ
● ಮೂಳೆಗಳಲ್ಲಿ ನೋವು
● ಆಗಾಗ್ಗೆ ಸೋಂಕು
● ಎದೆಯುಸಿರು
● ರಕ್ತಹೀನತೆಯ ಲಕ್ಷಣಗಳು (ಮೈಬಣ್ಣ ಬಿಳುಚುವುದು ಅಥವಾ ತಲೆಸುತ್ತು ಬರುವುದು)
AML ಯಾವುದೇ ಎಚ್ಚರಿಕೆ ಅಥವಾ ಸರಿಯಾದ ಕಾರಣ ಇಲ್ಲದೆ ಬರಬಹುದಾದರೂ, ಅದು ಈ ಕೆಳಗಿನ ಕಾರಣಗಳಿಂದ ಬರುವ ಹೆಚ್ಚಿನ ಸಾಧ್ಯತೆಯನ್ನೂ ಸಹ ಹೊಂದಿದೆ:
● ಹಿಂದಿನ ಕೀಮೋಥೆರಪಿ ಅಥವಾ ರೇಡಿಯೇಷನ್ ಚಿಕಿತ್ಸೆಗಳು
● ಬೆನ್ಜೀನ್ ರೀತಿಯ ರಾಸಾಯನಿಗಳಿಗೆ ದೀರ್ಘಾವಧಿ ಸಮಯದವರೆಗೆ ಒಡ್ಡಿಕೊಳ್ಳುವುದು
● ಧೂಮಪಾನ ಅಥವಾ ನಿಯಮಿತ ತಂಬಾಕು ಬಳಕೆ
AML ಕುರಿತು ಹೆಚ್ಚಿನ ಮಾಹಿತಿ
- AML ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು: ವಯಸ್ಕರಲ್ಲಿ ಕಂಡು ಬರುವ ಅತಿ ಸಾಮಾನ್ಯ ಲ್ಯುಕೇಮಿಯಾ ಎಂದರೆ AML ಮತ್ತು ಇದು 66 ಮತ್ತು 71ನೆಯ ವಯಸ್ಸಿನಲ್ಲಿ ಕಂಡುಬರುತ್ತದೆ . ಆದಾಗಿಯೂ, ಭಾರತದಲ್ಲಿ ವಯಸ್ಕರಿಗೆ AML ಬಹಳ ಮೊದಲೇ ಪತ್ತೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ . ಮಕ್ಕಳಲ್ಲಿ, AML ಎಲ್ಲಾ ಲ್ಯುಕೇಮಿಯಾ ಪ್ರಕರಣಗಳಲ್ಲಿ ಸುಮಾರು 15–20% ರಷ್ಟಿದೆ.
- AML ಪರಿಣಾಮಕಾರಿ ಚಿಕಿತ್ಸೆ: ಸೂಕ್ತ ಚಿಕಿತ್ಸೆಯೊಂದಿಗೆ, ಶೇಖಡಾ 60-70% ವಯಸ್ಕರು ಸಂಪೂರ್ಣ ಗುಣಮುಖರಾಗುವುದು. AMLನ ಐದು ವರ್ಷದ ಚೇತರಿಕೆ ದರವು 31.7% ಆಗಿದೆ. AMLಗಾಗಿ ಕೆಲವು ಚಿಕಿತ್ಸಾ ಆಯ್ಕೆಗಳಲ್ಲಿ ಗುರಿ ಆಧಾರಿತ ಚಿಕಿತ್ಸೆ, ಕೀಮೋಥೆರಪಿ, ಹೊಸ ಔಷಧೋಪಚಾರಗಳು ಸಹ ಇತರ ಚಿಕಿತ್ಸೆಗಳೊಂದಿಗೆ ಬಹಳ ಪರಿಣಾಮಕಾರಿಯಾಗಿದೆ , ,
- ಪೂರ್ಣ ಕೀಮೋಥೆರಪಿ, ಎಲ್ಲರಿಗೂ ಸೂಕ್ತವಲ್ಲ: ಪೂರ್ಣ ಕೀಮೋಥೆರಪಿ AMLನ ಪ್ರಮುಖ ಚಿಕಿತ್ಸೆಯಾಗಿದೆ. ಆದಾಗಿಯೂ, ಅರ್ಧದಷ್ಟು ಹೊಸದಾಗಿ ಪತ್ತೆಯಾದ ರೋಗಿಗಳಲ್ಲಿ ಅವರ ನಿರ್ದಿಷ್ಟ AML ಉಪವಿಧ, ಅನಾರೋಗ್ಯ ಅಥವಾ ಇಳಿವಯಸ್ಸಿನ ಕಾರಣದಿಂದ ಈ ಚಿಕಿತ್ಸೆ ಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ರೋಗಿಗಳಿಗಾಗಿ ಹೊಸ ಔಷಧಿಗಳು ಸೇರಿದಂತೆ ಇತರ ಚಿಕಿತ್ಸೆಗಳು ಸುಧಾರಿತ ಫಲಿತಾಂಶಗಳನ್ನು ಒದಗಿಸುತ್ತದೆ .
AML ಇರುವಿಕೆಯು ಒತ್ತಡದಾಯಕವಾಗಿದ್ದರೂ ಸಹ, ಇದರಲ್ಲಿ ಭರವಸೆ ಇದೆ. ಈ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಹೊಸ ಮತ್ತು ಉತ್ತಮ ಚಿಕಿತ್ಸೆಗಳೊಂದಿಗೆ, ಮಾಹಿತಿ ಹೊಂದುವುದು ಬಹಳ ನಿರ್ಣಾಯಕವಾಗಿದೆ. ರೋಗಿಗಳು ಮತ್ತು ವೈದ್ಯಕೀಯ ವರ್ಗದವರು ತಮ್ಮ ಆಯ್ಕೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ ಉತ್ತಮ ಫಲಿತಾಂಶಗಳಿಗಾಗಿ ಬುದ್ಧಿವಂತ ನಿರ್ಣಯಗಳನ್ನು ತೆಗೆದು ಕೊಳ್ಳಬಹುದು. ಪ್ರಯಾಣದ ಹಾದಿ ದುರ್ಗಮವಾಗಿರಬಹುದು, ಆದರೆ ಸರಿಯಾದ ಮಾಹಿತಿಯಿಂದ ರೋಗಿಗಳು ಆತ್ಮವಿಶ್ವಾಸದಿಂದ ರೋಗವನ್ನು ನಿಯಂತ್ರಿಸಬಹುದು ಮತ್ತು ಎದುರಿಸಬಹುದು.