Assault Case: ಪಾಕ್‌ನಲ್ಲಿ ಹಿಂದೂ ಯುವಕನ ಮೇಲೆ ಡೆಡ್ಲಿ ಅಟ್ಯಾಕ್! ಸಿನಿಮಾ ನಿರ್ಮಾಪಕ ಅರೆಸ್ಟ್
ಮಾರ್ವಾರಿ ಹಿಂದೂ ಸಮುದಾಯದ ಧೀರಜ್ ಕುಮಾರ್ ಎಂಬಾತ ಬಯೋನಿಕ್ ಫಿಲ್ಮ್ಸ್‌ನ (Bionic Films) ಸಿಇಒ ಸಲ್ಮಾನ್ ಫಾರೂಕಿ (Salman Farooqi) ಮತ್ತು ಅವರ ಸಶಸ್ತ್ರ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿದ್ದಾನೆ. ಕರಾಚಿಯ ಉನ್ನತ ಮಟ್ಟದ ಡಿಫೆನ್ಸ್ ಸೊಸೈಟಿ ಪ್ರದೇಶದಲ್ಲಿ ಈ ಹಲ್ಲೆ ನಡೆಸಲಾಗಿದೆ.


ಕರಾಚಿ: ಸಾರ್ವಜನಿಕ ಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಮೇಲೆ ಚಿತ್ರ ನಿರ್ಮಾಪಕ (Film maker) ಹಲ್ಲೆ (Assault) ನಡೆಸಿರುವ ಘಟನೆ ಪಾಕಿಸ್ತಾನದ (pakistan) ಕರಾಚಿಯಲ್ಲಿ (karachi) ನಡೆದಿದೆ. ಈ ಕುರಿತು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಬಳಿಕ ಚಿತ್ರ ನಿರ್ಮಾಪಕನನ್ನು ಬಂಧಿಸಲಾಗಿದೆ. ಸುಧೈರ್ ಧುನ್ ರಾಜ್ ಅಥವಾ ಧುನ್ ರಾಜ್ ಎಂದೂ ಕರೆಯಲ್ಪಡುವ ಧೀರಜ್ ಕುಮಾರ್ ಎಂಬಾತ ಬಯೋನಿಕ್ ಫಿಲ್ಮ್ಸ್‌ನ (Bionic Films) ಸಿಇಒ ಸಲ್ಮಾನ್ ಫಾರೂಕಿ (Salman Farooqi) ಮತ್ತು ಅವರ ಸಶಸ್ತ್ರ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿದ್ದಾನೆ. ಕರಾಚಿಯ ಉನ್ನತ ಮಟ್ಟದ ಡಿಫೆನ್ಸ್ ಸೊಸೈಟಿ ಪ್ರದೇಶದಲ್ಲಿ ಈ ಹಲ್ಲೆ ನಡೆಸಲಾಗಿದೆ.
ಮಾರ್ವಾರಿ ಹಿಂದೂ ಸಮುದಾಯದ ಧೀರಜ್ ಕುಮಾರ್ ಮೇಲೆ ಕ್ರೂರವಾಗಿ ಸಲ್ಮಾನ್ ಫಾರೂಕಿ ಮತ್ತು ಅವರ ಸಿಬ್ಬಂದಿ ಹಲ್ಲೆ ನಡೆಸಿದ ಬಳಿಕ ವ್ಯಾಪಕವಾಗಿ ಸಾರ್ವಜನಿಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಸ್ಥಳೀಯ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದರಿ ಕಲ್ಪನಾಳನ್ನು ಕರೆದುಕೊಂಡು ಹೋಗಲು ಧೀರಜ್ ಕುಮಾರ್ ರಕ್ಷಣಾ ಪ್ರದೇಶದ ಮೂಲಕ ನಿಧಾನವಾಗಿ ತನ್ನ ಬೈಕ್ ನಲ್ಲಿ ತೆರಳುತ್ತಿದ್ದ.ಈ ವೇಳೆ ಅವರ ಅವರ ಬೈಕ್ ಫಾರೂಕಿಯ ಐಷಾರಾಮಿ ಲ್ಯಾಂಡ್ ಕ್ರೂಸರ್‌ಗೆ ತಾಗಿ ಸಣ್ಣ ಸ್ಕ್ರ್ಯಾಚ್ ಆಗಿದೆ. ಇದರಿಂದ ಕೆರಳಿದ ಫಾರೂಕಿ ಮತ್ತು ಅವರ ಸಿಬ್ಬಂದಿ ಧೀರಜ್ ಮೇಲೆ ಹಲ್ಲೆ ನಡೆಸಿದ್ದಾರೆ.
ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಫಾರೂಕಿ ಮತ್ತು ಅವರ ಸಶಸ್ತ್ರ ಸಿಬ್ಬಂದಿ ಧೀರಜ್ ಗೆ ಬಂದೂಕು ತೋರಿಸುತ್ತಿರುವುದನ್ನು ಕಾಣಬಹುದು. ಅಲ್ಲದೇ ಫಾರೂಕಿಯ ಮುಂದೆ ಧೀರಜ್ ಸಹೋದರಿ ಕಲ್ಪನಾ ಕಣ್ಣೀರಿಡುತ್ತಾ ಅಂಗಲಾಚುತ್ತಿರುವುದನ್ನು ಕೂಡ ಕಾಣಬಹುದು. ಫಾರೂಕಿಯ ಭದ್ರತಾ ಸಿಬ್ಬಂದಿ ಧೀರಜ್ ಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸುತ್ತಿರುವುದು ಕೂಡ ಈ ವಿಡಿಯೋದಲ್ಲಿ ಸೆರೆಯಾಗಿದೆ.
Disgusting. #SalmanFarooqui, CEO of #BionicFilms, proves how heartless the elite can be. Over a minor incident, he chose violence while the victim's sister PLEADED for mercy. How cruel can you be? This isn’t power, it’s inhumanity.🔥pic.twitter.com/rFcPEDLcU5
— Mansoor Dhillon 🇵🇸 (@MansoorDhillon_) June 2, 2025
ನಾವು ಬಡವರು; ದಯವಿಟ್ಟು ಅವನನ್ನು ಹೊಡೆಯಬೇಡಿ ಎಂದು ಕಲ್ಪನಾ ಕೈಕಟ್ಟಿ ಬೇಡಿಕೊಳ್ಳುತ್ತಿದ್ದರೂ ಫಾರೂಕಿ ಮತ್ತು ಅವನ ಸಹಚರರು ಧೀರಜ್ ಮೇಲೆ ಹಲ್ಲೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Bengaluru Stampede: ʼಶಾಕ್‌ನಲ್ಲಿದ್ದೇನೆ...ʼ ಮಾಧ್ಯಮಗಳ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಡಿಕೆ ಶಿವಕುಮಾರ್
ಇದಕ್ಕೆ ವ್ಯಾಪಕ ಖಂಡನೆ, ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದ್ದು, ಸಾಮಾಜಿಕ ಮಾಧ್ಯಮದ ಒತ್ತಡದ ಬಳಿಕ ಕರಾಚಿ ಪೊಲೀಸರು ಫಾರೂಕಿಯ ಫೋನ್ ಅನ್ನು ಟ್ರ್ಯಾಕ್ ಮಾಡಿ ಫಾರೂಕಿ, ಆತನ ಕಾವಲುಗಾರರು ಮತ್ತು ಚಾಲಕ ಸೇರಿದಂತೆ ಇತರ ನಾಲ್ವರನ್ನು ಬಂಧಿಸಿದರು. ಅವರ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 506-ಬಿ (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 354 (ಮಹಿಳೆಯ ಮೇಲೆ ಹಲ್ಲೆ ಅಥವಾ ಕಿರುಕುಳ), ಸೆಕ್ಷನ್ 342 (ಅಕ್ರಮ ಬಂಧನ) ಮತ್ತು ಸೆಕ್ಷನ್ 504 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪ್ರಕರಣವನ್ನು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಅಧಿಕಾರ ದುರುಪಯೋಗದ ಪ್ರತಿಬಿಂಬ ಎನ್ನಲಾಗುತ್ತಿದೆ. ಕಠಿಣ ಕಾನೂನು ಕ್ರಮ ಮತ್ತು ಅಲ್ಪಸಂಖ್ಯಾತರಿಗೆ ವಿಶೇಷವಾಗಿ ಬಡ, ದುರ್ಬಲ ಸಮುದಾಯದವರಿಗೆ ರಕ್ಷಣೆ ನೀಡುವಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.