ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Power Cut: ಜೂ.26, 27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.26 ಮತ್ತು 27ರಂದು ನಗರದ ವಿವಿಧೆಡೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ವಿದ್ಯುತ್‌ ಕಡಿತವಾಗಲಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಜೂ.26, 27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಸಾಂದರ್ಭಿಕ ಚಿತ್ರ.

Profile Siddalinga Swamy Jun 25, 2025 6:06 PM

ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಕೋರಮಂಗಲ ವಿಭಾಗದ 66/11 ಕೆವಿ ಗ್ಲೋಬಲ್ ಟೆಕ್ ಪಾರ್ಕ್, 66/11 ಕೆವಿ ಪ್ರೈಮಲ್, 66/11 ಕೆವಿ ಗಾಲ್ಫ್ಂಕ್ ಉಪಕೇಂದ್ರಗಳು, ಜಯನಗರ ವಿಭಾಗದ 66/11 ಕೆವಿ ಖೋಡೆಸ್ ಗ್ಲಾಸ್ ಫ್ಯಾಕ್ಟರಿ, 66/11 ಕೆವಿ ಇಸ್ಕಾನ್, 66/11 ಕೆವಿ ಬಿ.ಎಂ.ಟಿ.ಸಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜೂ.26ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ (Bengaluru Power Cut) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಅದೇ ರೀತಿ ಬೆಂಗಳೂರು ಉತ್ತರ ವೃತ್ತದ 66/11 ಕೆವಿ ಅಬ್ಬಿಗೆರೆ MUSS, 66/11ಕೆವಿ ಕೆ.ಎಚ್.ಬಿ.ಎಂ.ಯು.ಎಸ್.ಎಸ್ ವ್ಯಾಪ್ತಿಯ ಹಲವೆಡೆ ಜೂ.27ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಗುರುವಾರ ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು:

ಕೋರಮಂಗಲ ವಿಭಾಗದ ಆರ್.ಎಂ.ಝಡ್ ಎಕೋವರ್ಲ್ಡ್, ಮ್ಯಾರಿಯಟ್ ಹೋಟೆಲ್, ದೇವರಬೀಸನಹಳ್ಳಿ, ವಜ್ರಮ್ ಅಪಾರ್ಟ್‌ಮೆಂಟ್, ದೊಡ್ಡಕನ್ನೆಹಳ್ಳಿ ರಸ್ತೆ, ಗೇರ್ ಸ್ಕೂಲ್ ರಸ್ತೆ, ಆದರ್ಶ್, ಸಾಯಿ ಶೃತಿ, ಸ್ಟರ್ಲಿಂಗ್ ಅಸೆಂಟಿಯಾ, ಜೆ.ವಿ. ಹೋಟೆಲ್, 2ನೇ ಬ್ಲಾಕ್, 7ನೇ ಬ್ಲಾಕ್, 11ನೇ ಬ್ಲಾಕ್, ಆರ್‌ಜಿಐ ಮೂಲಸೌಕರ್ಯ 1&2, 9ನೇ ಎ&ಬಿ ಬ್ಲಾಕ್, ಇಂಟೆಲ್, ಸ್ಟೇಷನ್ ರಸ್ತೆ, ಬಿ.ನಾಗಸಂದ್ರ, ಎನ್‌ಎಎಲ್ ರಸ್ತೆ, ಎಸ್.ಆರ್. ಲೇಔಟ್, ಪಿ ಆರ್ ಲೇಔಟ್, ಗಾಲ್ಫಲಿಂಕ್ ಸಾಫ್ಟ್‌ವೇರ್ ಪ್ರೈ.ಲಿ. ಅಮರ ಜ್ಯೋತಿ ಲೇಔಟ್, ವೆಸ್ಟ್‌ವಿಂಗ್, ಕೋರಮಂಗಲ ವರ್ತುಲ್ ರಸ್ತೆಯ ಡೆಲ್, ವಿವೇಕಾನಂದನಗರ, ಶ್ರೀರಾಮ ಪ್ರಾಪರ್ಟೀಸ್, ವಿಂಡ್ ಟನಲ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜಯನಗರ ವಿಭಾಗದ ಜಯನಗರ ವಿಭಾಗ ಕೋಣನಕುಂಟೆ, ತಲಘಟ್ಟಪುರ, ದೊಡ್ಡಕಲ್ಲಸಂದ್ರ, ಶ್ರೀನಿಧಿ ಲೇಔಟ್, ಆವಲಹಳ್ಳಿ, ಮಂತ್ರಿ ಅಪಾರ್ಟ್‌ಮೆಂಟ್, ರಘುವನಗಾನಹಳ್ಳಿ ಗುಬ್ಲಾಳ, ಕುವೆಂಪು ನಗರ, ವಿವಿ ನಗರ, ವಿವಿ ಬಡಾವಣೆ, ಬಾಳಗಿ ಲೇಔಟ್, ರಾಯಲ್ ರೂಪ, ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರ, ಸಂಪಿಗೆ ನಗರ, ಜೆಸಿ ರಸ್ತೆ, ಶಾಂತಿ ಅಂಗಾರ, ಬಿಟಿಎಸ್ ರಸ್ತೆ, ರಿಚ್‌ಮಂಡ್ ವೃತ್ತ, ರೆಸಿಡೆನ್ಸಿ ರಸ್ತೆ, ಸುಧಾಮನಗರ, ಕೆಎಚ್ ರಸ್ತೆ, ಶಾಂತಿನಗರ, ಡಬಲ್ ರಸ್ತೆ, ಸುಬ್ಬಯ್ಯ ವೃತ್ತ, ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು.

ಜೂ.27 ರಂದು ವಿದ್ಯುತ್‌ ವ್ಯತ್ಯಯವಾಗುವ ಪ್ರದೇಶಗಳು

ಬೆಂಗಳೂರು ಉತ್ತರ ವೃತ್ತ, ಕಮ್ಮಗೊಂಡನಹಳ್ಳಿ, ರಾಘವೇಂದ್ರ ಲೇಔಟ್, ಲಕ್ಷ್ಮೀಪುರ, ವಡೇರಹಳ್ಳಿ, ಅಬ್ಬಿಗೆರೆ ಕೈಗಾರಿಕಾ ಪ್ರದೇಶ, ಏರ್ ಫೋರ್ಸ್ (ಜಾಲಹಳ್ಳಿ ಪೂರ್ವ) ಸಿಂಗಾಪುರ, ಪೈಪ್‌ಲೈನ್ ರಸ್ತೆ, ನಿಸರ್ಗ ಲೇಔಟ್, ಕೆಂಪೇಗೌಡ ಲೇಔಟ್, ಕಲಾನಗರ ಮುಖ್ಯರಸ್ತೆ, ಕಮ್ಮಗೊಂಡನಹಳ್ಳಿ, ವಿಶ್ವೇಶ್ವರಯ್ಯ ಲೇಔಟ್, ಎಚ್‌ವಿವಿ ಲೇಔಟ್, ವೈ-ಮ್ಯಾಕ್ ಸರ್ಕಲ್, ಕುವೆಂಪುನಗರ, ಕಾಶಿರಾಮ್ ನಗರ, ವಡೇರಹಳ್ಳಿ, ಸಿಂಹಾದ್ರಿ ಲೇಔಟ್, ಪ್ರಕೃತಿ ಲೇಔಟ್, ಮುನೀಶ್ವರಪ್ಪ ಲೇಔಟ್, ಲಕ್ಕಪ್ಪ ಲೇಔಟ್, ಬಾಲಾಜಿ ಲೇಔಟ್, ವರದರಾಜಸ್ವಾಮಿ ಲೇಔಟ್, ಬ್ರಿಗೇಡ್ ಪಾರ್ಕ್‌ಸೈಡ್ ನಾರ್ತ್ ಅಪಾರ್ಟ್‌ಮೆಂಟ್, ಶಿವನಹಳ್ಳಿ, ಶ್ರೀನಿಧಿ ಲೇಔಟ್, ಬಿಡಬ್ಲ್ಯೂಎಸ್‌ಎಸ್‌ಬಿ, ಪಾವನಿ, ಹೆರಿಟೇಜ್, ಸಿಆರ್‌ಪಿಎಫ್, ರಾಮಗೊಂಡನಹಳ್ಳಿ, ಐವಿಆರ್‌ಐ, ಶ್ರೀಕ್ ಅಪಾರ್ಟ್‌ಮೆಂಟ್, ಬಿಎಂಎಸ್ ಹಾಸ್ಟೆಲ್, 5 ನೇ ಹಂತ ಯಲಹಂಕ ಹೊಸ ಪಟ್ಟಣ, ಪುಟ್ಟೇನಹಳ್ಳಿ, ಪಾವನಿ, ಹೆರಿಟೇಜ್, ಸಿಆರ್‌ಪಿಎಫ್, ಕೆಂಚೇನಹಳ್ಳಿ, ಗಟಿಗ್ನಹಳ್ಳಿ, ಹರಿಹಳ್ಳಿ, ಸುರದೇನಪುರ, ಸದನಹಳ್ಳಿ, ಇಸ್ರೋ ಲೇಔಟ್, ಆಕಾಶಿನಾರ್, ಬೆಸ್ಕಾಂ, ಎಲ್‌ಬಿಎಸ್ ನಗರ, ಯಲಹಂಕೆ ಎಬಿ ಸೆಕ್ಟರ್, ಆವಲಹಳ್ಳಿ, ಎಸ್.ಎನ್.ಹಳ್ಳಿ, ರಾಜನಕುಂಟೆ, ಹೊನ್ನೇನಹಳ್ಳಿ, ಎವಿ ನಾನಹಳ್ಳಿ. ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲಕುಂಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Draping Saree: ಪ್ರಿ ಡ್ರೇಪಿಂಗ್ ಸೀರೆಯ ಕಮಾಲ್!