ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pramoda Devi Wadiyar: ಮೈಸೂರು ರಾಜರಿಗೆ ಸೇರಿದ 4,500 ಎಕರೆ ಭೂಮಿ ಖಾತೆ ಮಾಡಿಕೊಡಲು ಪ್ರಮೋದಾದೇವಿ ಪತ್ರ

Pramoda Devi Wadiyar: 4500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಸ್ವತ್ತು ಎಂದು ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದಾರೆ. ಈ ಭೂಮಿಯಲ್ಲಿ ದುರಸ್ತಿ, ಕಂದಾಯ ಗ್ರಾಮವಾಗಿ ಪರಿವರ್ತನೆ ಹಾಗೂ ಇನ್ನಿತರೆ ವಹಿವಾಟು ಮಾಡದಂತೆ ರಾಜಮಾತೆ ಪ್ರಮೋದಾದೇವಿ ತರಕಾರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರು ರಾಜರ ಆಸ್ತಿ ಖಾತೆ ಮಾಡಿಕೊಡಲು ಪ್ರಮೋದಾದೇವಿ ಪತ್ರ

Profile Prabhakara R Apr 7, 2025 8:59 PM

ಚಾಮರಾಜನಗರ: ಮೈಸೂರು ಮಹಾರಾಜರಿಗೆ ಸೇರಿರುವ ಖಾಸಗಿ ಆಸ್ತಿಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar) ಅವರು ಚಾಮರಾಜನಗರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಮಾರ್ಚ್ 20 ರಂದೇ ಪತ್ರ ಬರೆದಿದ್ದು, ಚಾಮರಾಜನಗರ ತಾಲೂಕಿನ ವಿವಿಧೆಡೆ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಇದೆ. ಖಾತೆ ಆಗುವ ತನಕ ದುರಸ್ತಿ, ಬೇರೆಯವರಿಗೆ ಖಾತೆ ಹಾಗೂ ಯಾವುದೇ ರೀತಿಯ ವಹಿವಾಟು ನಡೆಸದಂತೆ ತಕರಾರು ಅರ್ಜಿ ಜತೆಗೆ ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಪ್ರಮೋದಾದೇವಿ ಮನವಿ ಮಾಡಿದ್ದಾರೆ.

ಚಾಮರಾಜನಗರ ತಾಲೂಕಿನ ಅಟ್ಟುಗುಳಿಪುರ, ಹರದನಹಳ್ಳಿ, ಉಮ್ಮತ್ತೂರು ಬೂದಿತಿಟ್ಟು, ಕರಡಿ ಹಳ್ಳ, ಚಾಮರಾಜನಗರ, ಕನ್ನಿಕೆರೆ ಬಸವಾಪುರದ ಸರ್ವೆ ನಂಬರ್ ಗಳಲ್ಲಿರುವ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರು ಹಾಗು ಭಾರತ ಸರ್ಕಾರದ ನಡುವೆ 1,950 ರಲ್ಲಿ ಆಗಿರುವ ಒಪ್ಪಂದದ ಪ್ರಕಾರ ಇದೆಲ್ಲಾ ಮೈಸೂರು ಮಹಾರಾಜರ ಖಾಸಗಿ ಸ್ವತ್ತಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರತಿಕ್ರಿಯಿಸಿದ್ದು, ಪ್ರಮೋದಾದೇವಿ ಒಡೆಯರ್ ಅವರು ಯಾವುದೇ ಅಧಿಕೃತ ದಾಖಲೆ ಸಲ್ಲಿಸಿಲ್ಲ. ಪರಿಶೀಲಿಸಿ ವರದಿ ನೀಡುವಂತೆ ಚಾಮರಾಜನಗರ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. 4500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಸ್ವತ್ತು ಎಂದು ಪ್ರಮೋದಾದೇವಿ ಒಡೆಯರ್ ಪತ್ರ ಬರೆದಿದ್ದಾರೆ. ಈ ಭೂಮಿಯಲ್ಲಿ ದುರಸ್ತಿ, ಕಂದಾಯ ಗ್ರಾಮವಾಗಿ ಪರಿವರ್ತನೆ ಹಾಗೂ ಇನ್ನಿತರೆ ವಹಿವಾಟು ಮಾಡದಂತೆ ರಾಜಮಾತೆ ಪ್ರಮೋದಾದೇವಿ ತರಕಾರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ: ಸಿಎಂ ಸಿದ್ದರಾಮಯ್ಯ

ಸಿದ್ದಯ್ಯನಪುರ ಅರಣ್ಯ ಗ್ರಾಮವಾಗಿದೆ, ಇದರಿಂದ ಅನೇಕ ತೊಂದರೆಗಳಾಗಿವೆ. ಹೀಗಾಗಿ ಕಂದಾಯ ಗ್ರಾಮವಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿರುವ ಭೂಮಿ ತಮ್ಮದೆಂದು ಯಾವುದೇ ಅಧಿಕೃತ ದಾಖಲೆ ಅಥವಾ ನ್ಯಾಯಾಲಯದ ಆದೇಶವನ್ನು ರಾಜಮಾತೆ ಪ್ರಮೋದಾದೇವಿಯವರು ಸಲ್ಲಿಸಿಲ್ಲ. ಅಧಿಕೃತ ದಾಖಲೆ ಸಲ್ಲಿಸಿದಲ್ಲಿ ಪರಿಶೀಲಿಸಲಾಗುವುದು. ಚಾಮರಾಜನಗರ ತಹಸೀಲ್ದಾರ್ ವರದಿ ನೀಡಿದ ನಂತರ ಮುಂದಿನ‌ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.