ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Paris Diamond League: 8 ವರ್ಷಗಳ ನಂತರ ಪ್ಯಾರಿಸ್ ಡೈಮಂಡ್ ಲೀಗ್‌ಗೆ ಮರಳಿದ ನೀರಜ್ ಚೋಪ್ರಾ

ನೀರಜ್‌ ಕೊನೆಯ ಬಾರಿಗೆ 2017 ರಲ್ಲಿ ಸ್ಟೇಡ್ ಚಾರ್ಲೆಟಿಯಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ, ಅವರು 84.67 ಮೀಟರ್ ಎಸೆಯುವ ಮೂಲಕ ಐದನೇ ಸ್ಥಾನ ಪಡೆದ್ದರು. ಮೇ ತಿಂಗಳಲ್ಲಿ ಸತತ ಎರಡು ಸ್ಪರ್ಧೆಗಳಲ್ಲಿ ಎರಡನೇ ಸ್ಥಾನ ಪಡೆದ ನಂತರ, 2025 ರ ಋತುವಿನ ತನ್ನ ಮೊದಲ ಪ್ರಮುಖ ಗೆಲುವನ್ನು ನೀರಜ್‌ ಗುರಿಯಾಗಿಸಿಕೊಂಡಿದ್ದಾರೆ.

8 ವರ್ಷಗಳ ನಂತರ ಪ್ಯಾರಿಸ್ ಡೈಮಂಡ್ ಲೀಗ್‌ಗೆ ಮರಳಿದ ನೀರಜ್ ಚೋಪ್ರಾ

Profile Abhilash BC Jun 17, 2025 12:10 PM

ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್‌ ಪದಕ ಗೆದ್ದಿರುವ ಭಾರತ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ(Neeraj Chopra) ಅವರು ಎಂಟು ವರ್ಷಗಳ ನಂತರ ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ(Paris Diamond League) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜೂನ್ 20 ರಂದು ಪ್ಯಾರಿಸ್‌ನಲ್ಲಿ ನಡೆಯುವ ಈ ಕೂಟದಲ್ಲಿ ವಿಶ್ವದ 7 ಖ್ಯಾತನಾಮ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.

ನೀರಜ್‌ ಕೊನೆಯ ಬಾರಿಗೆ 2017 ರಲ್ಲಿ ಸ್ಟೇಡ್ ಚಾರ್ಲೆಟಿಯಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ, ಅವರು 84.67 ಮೀಟರ್ ಎಸೆಯುವ ಮೂಲಕ ಐದನೇ ಸ್ಥಾನ ಪಡೆದ್ದರು. ಮೇ ತಿಂಗಳಲ್ಲಿ ಸತತ ಎರಡು ಸ್ಪರ್ಧೆಗಳಲ್ಲಿ ಎರಡನೇ ಸ್ಥಾನ ಪಡೆದ ನಂತರ, 2025 ರ ಋತುವಿನ ತನ್ನ ಮೊದಲ ಪ್ರಮುಖ ಗೆಲುವನ್ನು ನೀರಜ್‌ ಗುರಿಯಾಗಿಸಿಕೊಂಡಿದ್ದಾರೆ.

ಸ್ಫರ್ಧಿಗಳ ಪಟ್ಟಿ

ನೀರಜ್ ಚೋಪ್ರಾ (ಭಾರತ)

ಜೂಲಿಯನ್ ವೆಬರ್ (ಜರ್ಮನಿ)

ಆಂಡರ್ಸನ್ ಪೀಟರ್ಸ್ (ಗ್ರೆನಡಾ)

ಕೆಶಾರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ)

ಜೂಲಿಯಸ್ ಯೆಗೊ (ಕೀನ್ಯಾ)

ಆಂಡ್ರಿಯನ್ ಮಾರ್ಡೇರ್ (ಮೊಲ್ಡೊವಾ)

ಲೂಯಿಜ್ ಮೌರಿಸಿಯೊ ಡ ಸಿಲ್ವಾ (ಬ್ರೆಜಿಲ್)

ಇದನ್ನೂ ಓದಿ ಮುಂದೂಡಿಕೆಯಾಗಿದ್ದ ನೀರಜ್‌ ಚೋಪ್ರಾ ಕ್ಲಾಸಿಕ್‌ ಟೂರ್ನಿ ಜುಲೈ 5ಕ್ಕೆ ಮರುನಿಗದಿ

ಏಳು ಎಸೆತಗಾರರಲ್ಲಿ, ಜೂಲಿಯನ್ ವೆಬರ್ ಮತ್ತು ಆಂಡರ್ಸನ್ ಪೀಟರ್ಸ್ ಮಾತ್ರ ಚೋಪ್ರಾ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ಮೀರಿಸಿದ್ದಾರೆ. ವೆಬರ್ 91.44 ಮೀಟರ್ ಎಸೆದ ಜೀವಮಾನದ ಶ್ರೇಷ್ಠ ಸಾಧನೆಯನ್ನು ಹೊಂದಿದ್ದರೆ, ಪೀಟರ್ಸ್ 93.07 ಮೀಟರ್ ಎಸೆದಿದ್ದಾರೆ. ಕಳೆದ ತಿಂಗಳು ದೋಹಾದಲ್ಲಿ ನಡೆದ ಪ್ರದರ್ಶನದೊಂದಿಗೆ ಚೋಪ್ರಾ ಇತ್ತೀಚೆಗೆ ವಿಶೇಷ 90 ಮೀಟರ್ ಕ್ಲಬ್‌ಗೆ ಸೇರಿದರು.

ಚೋಪ್ರಾ ತಮ್ಮ 2025 ರ ಅಭಿಯಾನವನ್ನು ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಸಣ್ಣ ಆಹ್ವಾನಿತ ಸ್ಪರ್ಧೆಯಲ್ಲಿ ಗೆಲುವಿನೊಂದಿಗೆ ಪ್ರಾರಂಭಿಸಿದ್ದರು. 84.52 ಮೀಟರ್ ಎಸೆತವನ್ನು ದಾಖಲಿಸಿದ್ದರು. ನಂತರ ಅವರು ಮೇ 16 ರಂದು ದೋಹಾದಲ್ಲಿ(90.23 ಮೀಟರ್ ಎಸೆತ) ವೃತ್ತಿಜೀವನದ ಮೈಲಿಗಲ್ಲನ್ನು ತಲುಪಿದ್ದರು.