ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂದೂಡಿಕೆಯಾಗಿದ್ದ ನೀರಜ್‌ ಚೋಪ್ರಾ ಕ್ಲಾಸಿಕ್‌ ಟೂರ್ನಿ ಜುಲೈ 5ಕ್ಕೆ ಮರುನಿಗದಿ

Neeraj Chopra Classic 2025: ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್‌ ಥ್ರೋ ಕೂಟ ಭಾರತದಲ್ಲಿ ನಡೆಯುತ್ತಿರುವ ಮೊತ್ತಮೊದಲ ಅಂತಾರಾಷ್ಟ್ರೀಯ ಮಟ್ಟದ ಜಾವೆಲಿನ್‌ ಸ್ಪರ್ಧೆಯಾಗಿದೆ. ಚೋಪ್ರಾ ಜೊತೆ ಜರ್ಮನಿಯ ಥಾಮಸ್‌ ರೋಹ್ಲರ್‌, ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ಸ್‌ ಮೊದಲಾದ ವಿಶ್ವದ ಖ್ಯಾತನಾಮ ಅಥ್ಲೀಟುಗಳು ಭಾಗವಹಿಸುತ್ತಿದ್ದಾರೆ.

ಮುಂದೂಡಿಕೆಯಾಗಿದ್ದ ನೀರಜ್‌ ಚೋಪ್ರಾ ಕ್ಲಾಸಿಕ್‌ ಟೂರ್ನಿ ಮರುನಿಗದಿ

Profile Abhilash BC Jun 3, 2025 11:53 AM

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ನೀರಜ್ ಚೋಪ್ರಾ ಕ್ಲಾಸಿಕ್ ಜಾವೆಲಿನ್‌ ಥ್ರೋ ಕೂಟ(Neeraj Chopra Classic 2025) ಪುನಾರಂಭಗೊಳ್ಳಲಿದೆ. ಜುಲೈ 5 ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ(Kanteerava Stadium)ದಲ್ಲಿ ನಡೆಯಲಿದೆ. ಕಾರ್ಯಕ್ರಮದ ಆಯೋಜಕರಾದ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್(JSW Sports,) ಈ ಬಗ್ಗೆ ಮಂಗಳವಾರ ಘೋಷಣೆ ಮಾಡಿದೆ. ಈ ಹಿಂದೆ ಮೇ 24 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಭಾರತ-ಪಾಕ್‌ ಯುದ್ಧ ಭೀತಿಯಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು.

ಇದು ಭಾರತದಲ್ಲಿ ನಡೆಯುತ್ತಿರುವ ಮೊತ್ತಮೊದಲ ಅಂತಾರಾಷ್ಟ್ರೀಯ ಮಟ್ಟದ ಜಾವೆಲಿನ್‌ ಸ್ಪರ್ಧೆಯಾಗಿದೆ. ಚೋಪ್ರಾ ಜೊತೆ ಜರ್ಮನಿಯ ಥಾಮಸ್‌ ರೋಹ್ಲರ್‌, ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ಸ್‌ ಮೊದಲಾದ ವಿಶ್ವದ ಖ್ಯಾತನಾಮ ಅಥ್ಲೀಟುಗಳು ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯನ್ನು ಸಮೀಪದಿಂದ ಕಣ್ತುಂಬಿಕೊಳ್ಳಲು ಐದು ಕಾರ್ಪೊರೇಟ್‌ ಬಾಕ್ಸ್‌ಗಳ ವ್ಯವಸ್ಥೆ ಕೂಡ ಮಾಡಲಾಗಿದೆ.

"ನೀರಜ್ ಚೋಪ್ರಾ ಕ್ಲಾಸಿಕ್ ಕೂಟವನ್ನು ಶೀಘ್ರವಾಗಿ ಮರಳಿ ಆರಂಭಿಸಲು ನಮಗೆ ಸಂತೋಷವಾಗಿದೆ. ನಮ್ಮ ತಂಡಗಳು ಅವಿಶ್ರಾಂತವಾಗಿ ಕೆಲಸ ಮಾಡಿವೆ ಮತ್ತು ಭಾರತ ಅಥ್ಲೆಟಿಕ್ಸ್ ಫೆಡರೇಶನ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್, ಕರ್ನಾಟಕ ಸರ್ಕಾರ ಮತ್ತು ನಮ್ಮ ಪಾಲುದಾರರ ಅಚಲ ಬೆಂಬಲದಿಂದ ಇದು ಸಾಧ್ಯವಾಯಿತು" ಎಂದು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್ ಹೇಳಿದರು.

ಇದನ್ನೂ ಓದಿ Neeraj Chopra: ಪೋಲೆಂಡ್‌ ಕೂಟದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ನೀರಜ್‌ ಚೋಪ್ರಾ

ನೀರಜ್ ಚೋಪ್ರಾ ಮೇ 16 ರಂದು ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಎಸೆಯುವ ಮೂಲಕ 90 ಮೀಟರ್ ದೂರವನ್ನು ದಾಟಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ನಡೆಯುವ ಕೂಟದಲ್ಲಿಯೂ ಅವರು ಉತ್ತಮ ಎಸೆತಗಳನ್ನು ಎಸೆಯುವ ವಿಶ್ವಾಸವಿದೆ.