Smriti Mandhana: 6 ವರ್ಷಗಳ ಬಳಿಕ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಅಲಂಕರಿಸಿದ ಮಂಧಾನ
women's odi batting rankings: 28 ವರ್ಷದ ಮಂಧಾನ ಪ್ರಸ್ತುತ 727 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್ ಮತ್ತು ಲಾರಾ ವೊಲ್ವಾರ್ಡ್ಟ್ ತಲಾ 719 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಜಂಟಿಯಾಗಿ ಎರಡನೇ ಸ್ಥಾನವನ್ನು ಹೊಂದಿದ್ದಾರೆ.


ದುಬೈ: ಜೂನ್ 17, ಮಂಗಳವಾರ ಬಿಡುಗಡೆಯಾದ ನೂತನ ಐಸಿಸಿ ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ(women's odi batting rankings) ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ(Smriti Mandhana) ಅಗ್ರಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಅವರನ್ನು ಹಿಂದಿಕ್ಕಿ ಮಂಧಾನ ಈ ಸಾಧನೆ ಮಾಡಿದರು. ಮಂಧನಾ 6 ವರ್ಷಗಳ ಬಳಿಕ ಅಂದರೆ, 2019 ರ ನಂತರ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೆ ಏರಿದರು. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿಯ ಗೆಲುವಿನಲ್ಲಿ ಮಂಧಾನ ಅದ್ಭುತ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದರು. ಐದು ಇನ್ನಿಂಗ್ಸ್‌ಗಳಿಂದ 52.80 ಸರಾಸರಿಯಲ್ಲಿ 264 ರನ್ ಗಳಿಸಿ ಸರಣಿಯ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿದ್ದರು. ಇದರಲ್ಲಿ ತಲಾ ಒಂದು ಶತಕ ಅರ್ಧಶತಕಗಳು ಸೇರಿತ್ತು.
28 ವರ್ಷದ ಮಂಧಾನ ಪ್ರಸ್ತುತ 727 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ನ್ಯಾಟ್ ಸಿವರ್-ಬ್ರಂಟ್ ಮತ್ತು ಲಾರಾ ವೊಲ್ವಾರ್ಡ್ಟ್ ತಲಾ 719 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಜಂಟಿಯಾಗಿ ಎರಡನೇ ಸ್ಥಾನವನ್ನು ಹೊಂದಿದ್ದಾರೆ.
No.1 ranked ODI batter in the world
— RCBIANS OFFICIAL (@RcbianOfficial) June 17, 2025
Smriti Mandhana 👑 pic.twitter.com/skkxlF2ug5
ಭಾರತದ ಆರಂಭಿಕ ಆಟಗಾರ್ತಿ ಮಂಧಾನ 2024 ರಿಂದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. 21 ಇನ್ನಿಂಗ್ಸ್‌ಗಳಿಂದ 60 ಸರಾಸರಿಯಲ್ಲಿ 1260 ರನ್ ಗಳಿಸಿದ್ದಾರೆ. ಆರು ಶತಕಗಳು ಮತ್ತು ಐದು ಅರ್ಧಶತಕಗಳು ದಾಖಲಾಗಿದೆ. ಸದ್ಯ ಮಂಧಾನ ಜೂನ್ 28 ರಿಂದ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ತಲಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯನ್ನಾಡಲು ಸಜ್ಜಾಗಿದ್ದಾರೆ.
ಇದನ್ನೂ ಓದಿ INDW vs SLW: ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 11ನೇ ಶತಕ ಸಿಡಿಸಿದ ಸ್ಮೃತಿ ಮಂಧಾನಾ!
ಟಾಪ್-5 ಬ್ಯಾಟರ್‌ಗಳು
ಮಂಧಾನ(ಭಾರತ)- 727 ರೇಟಿಂಗ್ ಅಂಕ
ನ್ಯಾಟ್ ಸಿವರ್-ಬ್ರಂಟ್(ಇಂಗ್ಲೆಂಡ್)-719 ರೇಟಿಂಗ್ ಅಂಕ
ಲಾರಾ ವೊಲ್ವಾರ್ಡ್ಟ್(ದಕ್ಷಿಣ ಆಫ್ರಿಕಾ)-719 ರೇಟಿಂಗ್ ಅಂಕ
ಆಮಿ ಜೋನ್ಸ್(ಇಂಗ್ಲೆಂಡ್)-689 ರೇಟಿಂಗ್ ಅಂಕ
ಎಲ್ಲಿಸ್ ಪೆರ್ರಿ(ಆಸ್ಟ್ರೇಲಿಯಾ)-684 ರೇಟಿಂಗ್ ಅಂಕ