Sunita Ahuja: ಡಿವೋರ್ಸ್ ರೂಮರ್ಸ್ ಬಗ್ಗೆ ನಟ ಗೋವಿಂದ ಪತ್ನಿ ಸುನೀತಾ ಅಹುಜಾ ಫಸ್ಟ್ ರಿಯಾಕ್ಷನ್
ನಟ ಗೋವಿಂದ ಅವರ ಪತ್ನಿ ಸುನೀತಾ ಈ ಹಿಂದೆ ಸಂದರ್ಶನವೊಂದರಲ್ಲಿ ತಾನು ಪ್ರತ್ಯೇಕವಾಗಿ ವಾಸಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಹರಿದಾಡಿತ್ತು. ಇದೀಗ ಸುನೀತಾ ಈ ವದಂತಿಯನ್ನು ನಿರಾಕರಿಸಿದ್ದು, ತಾವು ಪ್ರತ್ಯೇಕವಾಗಿ ಇರಲು ನಿರ್ಧರಿಸಿದ ಕಾರಣವನ್ನು ವಿವರಿಸಿದ್ದಾರೆ.

ಗೋವಿಂದ-ಸುನೀತಾ ಅಹುಜಾ.

ಮುಂಬೈ: ಬಾಲಿವುಡ್ ನಟ ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ (Govinda's Wife Sunita Ahuja) ಸಂಬಂಧದಲ್ಲಿ ಬಿರುಕು ಉಂಟಾಗಿದ್ದು, ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಗಾಸಿಪ್ ಎಲ್ಲೆಡೆ ಸುದ್ದಿಯಾಗಿದೆ. ಈ ನಡುವೆ ನಟ ಗೋವಿಂದ ಪತ್ನಿ ಸುನೀತಾ ಅಹುಜಾ ವಿಡಿಯೊ ಮಾಡಿ ವಿಚ್ಚೇದನ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ನಟಿ ಸುನೀತಾ ಈ ಹಿಂದೆ ಸಂದರ್ಶನವೊಂದರಲ್ಲಿ ತಾನು ಪ್ರತ್ಯೇಕವಾಗಿ ವಾಸಿಸುತ್ತಿರುವ ಬಗ್ಗೆ ಹೇಳಿಕೊಂಡಿದ್ದರು. ಇದರಿಂದ ಇವರಿಬ್ಬರ ಸಂಬಂಧದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್ ಪಡೆಯುತ್ತಾರೆ ಎಂಬ ವದಂತಿ ಹರಿದಾಡಿತ್ತು. ಇದೀಗ ನಟಿ ತಾನು ಪ್ರತ್ಯೇಕವಾಗಿ ಇರಲು ನಿರ್ಧರಿಸಿದ ಕಾರಣವನ್ನು ವಿಡಿಯೊ ಮೂಲಕ ವಿವರಿಸಿ ಡಿವೋರ್ಸ್ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.
ಸುನೀತಾ ಅಹುಜಾ ಕಳೆದ ಕೆಲ ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದರು. ʼʼನಾನು ಹಾಗೂ ಗೋವಿಂದ ಪ್ರತ್ಯೇಕವಾಗಿ ಇದ್ದೇವೆ. ಗೋವಿಂದ ತಮ್ಮ ಅಪಾರ್ಟ್‌ಮೆಂಟ್‌ನ ಎದುರಿನ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ನಾನು ನನ್ನ ಮಕ್ಕಳು ಬೇರೆ ಫ್ಲಾಟ್‌ನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಕಳೆದ 12 ವರ್ಷಗಳಿಂದ ಹುಟ್ಟುಹಬ್ಬವನ್ನು ಒಂಟಿಯಾಗಿ ಆಚರಿಸಿಕೊಳ್ಳುತ್ತಿದ್ದೇನೆʼʼ ಎಂದು ತಿಳಿಸಿದ್ದರು. ಹೀಗಾಗಿ ನಟ ಗೋವಿಂದ ಅವರ 37 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ, ಗೋವಿಂದ ಅವರು ಪತ್ನಿ ಸುನೀತಾ ಅಹುಜಾ ಅವರಿಂದ ದೂರವಾಗಲು ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಹರಿದಾಡಿತ್ತು.
ಅದಾದ ಬಳಿಕ ಗೋವಿಂದ್ ಪರ ವಕೀಲರು ಡಿವೊರ್ಸ್ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದರು. ಸುನೀತಾ ಅವರು ಕೆಲವು ತಪ್ಪುಗ್ರಹಿಕೆಯಿಂದಾಗಿ 6 ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜ. ಆದರೆ ಈಗ ದಂಪತಿ ತಮ್ಮ ನಡುವೆ ಇದ್ದ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಸಂತೋಷವಾಗಿದ್ದಾರೆ ಎಂದು ಹೇಳಿದ್ದರು. ಆದರೆ ಗೋವಿಂದ ಅವರಾಗಲೀ, ಸುನೀತಾ ಅವರಾಗಲೀ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ.
ಇದನ್ನು ಓದಿ: Divya Uruduga-Aravind KP: ಹಸೆಮಣೆ ಏರಲು ಸಜ್ಜಾದ ಅರವಿಂದ್-ದಿವ್ಯಾ ಉರುಡುಗ: ಮದುವೆ ಯಾವಾಗ?
ಇದೀಗ ನಟಿ ಸುನೀತಾ ಪ್ರತ್ಯೇಕವಾಗಿ ವಾಸಿಸಲು ಕಾರಣವೇನು ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ʼʼಗೋವಿಂದ್ ಅವರ ಜತೆಯಲ್ಲಿಯೇ ನಾನು ಮತ್ತು ನಮ್ಮ ಮಕ್ಕಳು ಒಟ್ಟಿಗೆ ವಾಸ್ತವ್ಯ ಹೊಂದಿದ್ದೆವು. ಆದರೆ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟ ಬಳಿಕ ಮನೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಪಕ್ಷದ ಸಂಬಂಧಿತ ವ್ಯಕ್ತಿಗಳು ಮನೆಗೆ ಭೇಟಿ ನೀಡುತ್ತಿದ್ದ ಕಾರಣ ಮಗಳು ಶಾರ್ಟ್ಸ್ ಧರಿಸಿ ಮನೆಯಲ್ಲಿ ಮುಕ್ತವಾಗಿ ಸುತ್ತಾಡಲು ಸಾಧ್ಯವಾಗುತ್ತಿರಲಿಲ್ಲ. ಇದು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಉದ್ದೇಶಕ್ಕಾಗಿ ಪ್ರತ್ಯೇಕ ವಾಸಿಸಲು ಇಬ್ಬರು ಸಮ್ಮತಿಯಿಂದಲೇ ನಿರ್ಧಾರ ಮಾಡಿದ್ದೇವೆʼʼ ಎಂದು ವಿಡಿಯೊ ಮೂಲಕ ತಿಳಿಸಿದ್ದಾರೆ. ನಟ ಗೋವಿಂದ ಅವರು ಸುನೀತಾ ಅಹುಜಾ ಅವರನ್ನು 1987ರಲ್ಲಿ ವಿವಾಹವಾಗಿದ್ದು, ದಂಪತಿಗೆ ಟೀನಾ ಮತ್ತು ಯಶ ವರ್ಧನ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಉಂಟಾದ ಎಲ್ಲ ಗೊಂದಲಕ್ಕು ಗೋವಿಂದನ ಪತ್ನಿ ಸುನೀತಾ ತೆರೆ ಎಳೆದಿದ್ದಾರೆ .