NED vs NEP: ಮೂರು ಸೂಪರ್ ಓವರ್ ನೆದರ್ಲೆಂಡ್ಸ್ ವಿನ್ನರ್
thrilling triple Super Over: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ ತಂಡವು ತೇಜ ನಿಡಮನುರು (37 ಎಸೆತಗಳಲ್ಲಿ 35) ಮತ್ತು ವಿಕ್ರಮ್‌ಜಿ ಸಿಂಗ್ (29 ಎಸೆತಗಳಲ್ಲಿ 30) ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 152/7 ರನ್ ಗಳಿಸಿತು. ಜವಾಬಿತ್ತ ನೇಪಾಳ ಕೂಡ 8 ವಿಕೆಟ್‌ಗೆ 152 ರನ್ ಗಳಿಸಿತು. ಪಂದ್ಯ ಟೈ ಗೊಂಡಿತು.


ಗ್ಲ್ಯಾಸ್ಗೋ: ಸೋಮವಾರ ರಾತ್ರಿ ಟಿಟ್‌ವುಡ್ ಕ್ರಿಕೆಟ್ ಮೈದಾನದಲ್ಲಿ ರೋಚಕತೆ ಮುಗಿಲುಮುಟ್ಟಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ‘ಟ್ರಿಪಲ್ ಸೂಪರ್ ಓವರ್’ ನಲ್ಲಿ(thrilling triple Super Over) ಪಂದ್ಯ ಫಲಿತಾಂಶ ನಿರ್ಧಾರವಾಗಿದ್ದೇ ಇದಕ್ಕೆ ಕಾರಣ. ನೆದರ್ಲೆಂಡ್ಸ್ ಮತ್ತು ನೇಪಾಳ(NED vs NEP) ವಿರುದ್ಧದ ಜಿದ್ದಾಜಿದ್ದಿಯಲ್ಲಿ ನೆದರ್ಲೆಂಡ್ಸ್(Netherlands ) ಜಯಿಸಿತು. ದಿಟ್ಟ ಹೋರಾಟ ಮಾಡಿದ ನೇಪಾಳ ಮನಗೆದ್ದಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ ತಂಡವು ತೇಜ ನಿಡಮನುರು (37 ಎಸೆತಗಳಲ್ಲಿ 35) ಮತ್ತು ವಿಕ್ರಮ್‌ಜಿ ಸಿಂಗ್ (29 ಎಸೆತಗಳಲ್ಲಿ 30) ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 152/7 ರನ್ ಗಳಿಸಿತು. ಜವಾಬಿತ್ತ ನೇಪಾಳ ಕೂಡ 8 ವಿಕೆಟ್‌ಗೆ 152 ರನ್ ಗಳಿಸಿತು. ಪಂದ್ಯ ಟೈ ಗೊಂಡಿತು.
ಪಂದ್ಯವು ಸೂಪರ್ ಓವರ್‌ಗೆ ಹೋಯಿತು. ಅಲ್ಲಿ ನೇಪಾಳ ಮೊದಲು ಬ್ಯಾಟಿಂಗ್ ಮಾಡಿ 1 ವಿಕೆಟ್‌ಗೆ 19ರನ್ ಗಳಿಸಿತು. ಇದಕ್ಕುತ್ತವಾಗಿ ಬ್ಯಾಟ್ ಮಾಡಿದ, ನೆದರ್ಲೆಂಡ್ಸ್ 19 ರನ್ ಗಳಿಸಿತು. ಪಂದ್ಯ ಸೂಪರ್ ಓವರ್‌ನಲ್ಲಿಯೂ ಟೈ ಗೊಂಡಿತು. ಹೀಗಾಗಿ ಫಲಿತಾಂಶಕ್ಕಾಗಿ 2ನೇ ಸೂಒರ್ ಓವರ್‌ಗೆ ಪಂದ್ಯ ವಿಸ್ತರಿಸಲ್ಪಟ್ಟಿತು.
A historic 𝙩𝙝𝙧𝙚𝙚 super overs between the Netherlands and Nepal at @DaleCricket today 😲 pic.twitter.com/a9AMq6z4oX
— Cricket Scotland (@CricketScotland) June 16, 2025
ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಬೀಸಿದ ನೆದರ್ಲೆಂಡ್ಸ್ 17 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೇಪಾಳ, ದೀಪೇಂದ್ರ ಸಿಂಗ್ ಐರೀ ಮತ್ತು ರೋಹಿತ್ ಪೌಡೆಲ್ ಅವರ ಸಂಯೋಜಿತ ಬ್ಯಾಟಿಂಗ್‌ನಿಂದ 17 ರನ್ ಬಾರಿಸಿತು. ಪಂದ್ಯ ಮತ್ತೆ ಟೈಗೊಂಡಿತು.
ಇದನ್ನೂ ಓದಿ IPL 2025: ಸೂಪರ್ ಓವರ್ ಗೆಲುವಿನೊಂದಿಗೆ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್
ಎರಡು ಸೂಪರ್ ಓವರ್ ಕಂಡ ಕಾರಣ ಮೂರನೇ ಸೂಪರ್ ಓವರ್ ಇನ್ನಷ್ಟು ರೋಚಕತೆಯಿಂದ ಕೂಡಿರಬಹುದು ಎಂದು ನಿರೀಕ್ಷೆ ಮಾಡಲಾಯಿತು. ಆದರೆ ಇದು ಹುಸಿಯಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ನೇಪಾಳ ಶೂನ್ಯಕ್ಕೆ ಆಲೌಟ್ ಆಯಿತು. ಒಂದು ರನ್ ಗುರಿ ಪಡೆದ ನೆದರ್ಲೆಂಡ್ಸ್ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಗೆಲುವು ಸಾಧಿಸಿತು.