ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 2 ವರ್ಷದ ಮಗುವನ್ನು ಹಿಡಿದುಕೊಂಡು ಬಂಗೀ ಜಂಪ್ ಮಾಡಿದ ಅಪ್ಪ; ಎದೆ ಝಲ್ಲೆನಿಸುವ ವಿಡಿಯೊ ವೈರಲ್!

ಮಲೇಷಿಯಾದ ರಿಯಾಲಿಟಿ ಟಿವಿ ತಾರೆ ರೆಧಾ ರೋಸ್ಲಾನ್ ತನ್ನ ಎರಡು ವರ್ಷದ ಮಗಳನ್ನು ಮಡಿಲಲ್ಲಿಟ್ಟುಕೊಂಡು 200 ಅಡಿ ಎತ್ತರದಿಂದ ಬಂಗೀ ಜಂಪ್ ಮಾಡಿದ್ದನು. 2018ರ ಹಳೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವೀಕ್ಷಕರಿಂದ ಹೆಚ್ಚು ಟೀಕೆಗೆ ಗುರಿಯಾಗಿದೆ. ಅನೇಕರು ಜಿಗಿತದ ಸಮಯದಲ್ಲಿ ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಪುಟ್ಟ ಕಂದಮ್ಮನ ಜೊತೆಗೆ ಅಪ್ಪನ ಬಂಗೀ ಜಂಪ್‌; ಕೊನೆಗೆ ಆಗಿದ್ದೇನು?

Profile pavithra Jun 20, 2025 3:44 PM

ಇತ್ತೀಚೆಗೆ ಯುವತಿಯೊಬ್ಬಳು ಬಂಗೀ ಜಂಪ್ ಮಾಡಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.ಇದೀಗ ಇಲ್ಲೊಬ್ಬ ವ್ಯಕ್ತಿ ಚಿಕ್ಕ ಮಗುವನ್ನು ಹಿಡಿದುಕೊಂಡು ಬಂಗೀ ಜಂಪ್(Bungee Jumping) ಮಾಡಿದ್ದಾನೆ. ಮಲೇಷಿಯಾದ ರಿಯಾಲಿಟಿ ಟಿವಿ ತಾರೆ ರೆಧಾ ರೋಸ್ಲಾನ್ 200 ಅಡಿ ಸೇತುವೆಯಿಂದ ತನ್ನ ಎರಡು ವರ್ಷದ ಮಗಳನ್ನು ಮಡಿಲಲ್ಲಿಟ್ಟುಕೊಂಡು ಬಂಗೀ ಜಂಪ್ ಮಾಡುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾನವ ಹಕ್ಕುಗಳ ವಕೀಲ ಆಂಡ್ರ್ಯೂ ಖಾವ್ ಈ ಸಾಹಸವನ್ನು ಖಂಡಿಸಿ, ಮಗುವನ್ನು ಇಂತಹ ಅಪಾಯಕಾರಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅವರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಗಂಭೀರ ಅಪಾಯ ಉಂಟಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗೂ ಈ ಕೃತ್ಯವು ಕಾನೂನುಬಾಹಿರ ಮಾತ್ರವಲ್ಲದೆ ಮಕ್ಕಳ ರಕ್ಷಣಾ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿರುವ ಕಾರಣ ಈ ಸಾಹಸಕ್ಕಾಗಿ ಪೋಷಕರು ಮತ್ತು ಆಯೋಜಕರ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

ವಿಡಿಯೊ ನೋಡಿ...

ಈ ವಿವಾದಾತ್ಮಕ ವಿಡಿಯೊವನ್ನು ಇತ್ತೀಚೆಗೆ @viral.in.india_ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮರು ಪೋಸ್ಟ್ ಮಾಡಲಾಗಿದ್ದು, ಇದು ಪೋಸ್ಟ್ ಮಾಡಿದಾಗಿನಿಂದ 50,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಒಬ್ಬ ನೆಟ್ಟಿಗರು "ಈ ವ್ಯಕ್ತಿಯ ಮೇಲೆ ತಕ್ಷಣ ಪೊಲೀಸ್ ಕ್ರಮ ಕೈಗೊಳ್ಳಬೇಕು" ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಅಮ್ಮನನ್ನು ಮೊದಲ ಬಾರಿಗೆ ಕಣ್ತುಂಬಿಸಿಕೊಂಡ ಪುಟ್ಟ ಕಂದಮ್ಮನ ರಿಯಾಕ್ಷನ್‌ ಹೇಗಿತ್ತು? ವಿಡಿಯೊ ವೈರಲ್‌

ತಂದೆಯಾದವನು ತನ್ನ ಮಕ್ಕಳ ಬಗ್ಗೆ ತೋರಿದ ಇಂತಹ ಬೇಜವಾಬ್ದಾರಿತನದ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ತಂದೆಯೊಬ್ಬ ತನ್ನ ಮಗನನ್ನು ಸಿಂಹದ ಮೇಲೆ ಕೂರಿಸಿ ಫೋಟೊ ತೆಗೆಯುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಆ ಮಗು ಸಿಂಹವನ್ನು ಕಂಡು ಹೆದರಿ ಜೋರಾಗಿ ಕೂಗಿದೆ. ಇದು ಸಿಂಹಕ್ಕೂ ಕೂಡ ಕಿರಿಕಿರಿಯಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ಅಪ್ಪನ ಈ ಕೃತ್ಯ ಕಂಡು ನೆಟ್ಟಿಗರು ಕಿಡಿಕಾರಿದ್ದಾರೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.