ಟೆಸ್ಟ್ಗೆ ಪದಾರ್ಪಣೆ ಮಾಡಿ ಕೊಹ್ಲಿ, ದ್ರಾವಿಡ್ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ಸಾಯಿ ಸುದರ್ಶನ್!
Sai Sudharsan makes his test debut: ಲೀಡ್ಸ್ನ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾದ ಮೊದಲನೇ ಟೆಸ್ಟ್ ಪಂದ್ಯದ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಸಾಯಿ ಸುದರ್ಶನ್ ಸ್ಥಾನವನ್ನು ಪಡೆದಿದ್ದಾರೆ. ಆ ಮೂಲಕ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್ಗೆ ಸುದರ್ಶನ್ ಸೇರ್ಪಡೆಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್.

ಲೀಡ್ಸ್: ತಮಿಳುನಾಡಿನ ಯುವ ಎಡಗೈ ಬ್ಯಾಟ್ಸ್ಮನ್ ಸಾಯಿ ಸುದರ್ಶನ್ (Sai Sudarshan) ಅವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಲೀಡ್ಸ್ನ ಹೆಡಿಂಗ್ಲೆಯಲ್ಲಿ ಜೂನ್ 20 ರಂದು ಆರಂಭವಾ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs ENG) ಸ್ಥಾನ ಪಡೆದ ಸಾಯಿ ಸುದರ್ಶನ್, ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್ಗೆ ಸೇರ್ಪಡೆಗೊಂಡಿದ್ದಾರೆ. ಈ ದಿಗ್ಗಜರು ಕೂಡ ಇಂಗ್ಲೆಂಡ್ (ENG) ವಿರುದ್ಧ ಜೂನ್ 20 ರಂದೇ ತಮ್ಮ ಟೆಸ್ಟ್ ವೃತ್ತಿ ಜೀವನವನ್ನು ಆರಂಭಿಸಿದ್ದರು.
ಎಡಗೈ ಆಟಗಾರ ಸಾಯಿ ಸುದರ್ಶನ್ ಭಾರತ ಟೆಸ್ಟ್ ತಂಡದ ಪರ ಟೆಸ್ಟ್ ಕ್ಯಾಪ್ ಸ್ವೀಕರಿಸಿದ 317ನೇ ಆಟಗಾರರಾಗಿದ್ದಾರೆ. ಭಾರತ ತಂಡದ ಪರ ಸುದೀರ್ಘ ಕಾಲದವರೆಗೆ 3ನೇ ಕ್ರಮಾಂಕದಲ್ಲಿ ತಮ್ಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಚೇತೇಶ್ವರ್ ಪೂಜಾರರಿಂದ ಸಾಯಿ ಸುದರ್ಶನ್ ಟೆಸ್ಟ್ ಕ್ಯಾಪ್ ಸ್ವೀಕರಿಸಿದ್ದು ವಿಶೇಷ. ತಮ್ಮ ಆರಂಭಿಕ ಪಂದ್ಯದಲ್ಲಿ ಸಾಯಿ ಸುದರ್ಶನ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ನಾಯಕ ಶುಭಮನ್ ಗಿಲ್ ಹಾಗೂ ರಿಷಭ್ ಪಂತ್ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ.
IND vs ENG 1st Test Day 1: ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್!
ಆರೆಂಜ್ ಕ್ಯಾಪ್ ವಿಜೇತ
ಭಾರತ ತಂಡದ ಪರ ಈಗಾಗಲೇ ಮೂರು ಏಕದಿನ ಹಾಗೂ ಏಕೈಕ ಟಿ20 ಪಂದ್ಯ ಆಡಿರುವ ಸಾಯಿ ಸುದರ್ಶನ್, ಶುಕ್ರವಾರ ಟೆಸ್ಟ್ ಕ್ಯಾಪ್ ಪಡೆದು ಮೂರು ಸ್ವರೂಪದ ಆಟಗಾರರಾಗಿದ್ದಾರೆ. ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 759 ರನ್ ಗಳಿಸಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದ ಅವರು ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಆದರೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 40ಕ್ಕಿಂತಲೂ ಕಡಿಮೆ ಸರಾಸರಿ ಹೊಂದಿದ್ದಾರೆ.
Test Cap number 3⃣1⃣7⃣
— BCCI (@BCCI) June 20, 2025
Congratulations to Sai Sudharsan, who is all set to make his Test Debut 🙌
Updates ▶️ https://t.co/CuzAEnBkyu#TeamIndia | #ENGvIND pic.twitter.com/wn8kaXdln6
ದೇಶಿ ಕ್ರಿಕೆಟ್ನಲ್ಲಿ ಮಿಂಚು
2021ರ ತಮಿಳು ಪ್ರೀಮಿಯರ್ ಲೀಗ್ ಮೂಲಕ ಗಮನ ಸೆಳೆದಿದ್ದ ಸಾಯಿ ಸುದರ್ಶನ್ ಎರಡನೇ ಗರಿಷ್ಠ ಸ್ಕೋರರ್ ಆಗಿದ್ದರು. ಅದೇ ವರ್ಷ ನಡೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಗಮನ ಸೆಳೆದರು. ಇದುವರೆಗೂ ಆಡಿರುವ 29 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 7 ಶತಕಗಳ ನೆರವಿನಿಂದ 39.93 ಸರಾಸರಿಯಲ್ಲಿ 1957 ರನ್ ಗಳನ್ನು ಸಾಯಿ ಸುದರ್ಶನ್ ಬಾರಿಸಿದ್ದಾರೆ.
ಅಂಡರ್ 19 ತಂಡದಲ್ಲಿ ಸ್ಥಾನ ಕಳೆದುಕೊಂಡ ಸುದರ್ಶನ್
2019ರ ಡಿಸೆಂಬರ್ನಲ್ಲಿ ತಮಿಳುನಾಡು ಅಂಡರ್ -19 ತಂಡದಿಂದ ತಮ್ಮ ಫಿಟ್ನೆಸ್ ಸಮಸ್ಯೆಯಿಂದ ಸ್ಥಾನ ಕಳೆದುಕೊಂಡಿದ್ದರು. ಆದರೆ ತಮ್ಮ ತಾಯಿ ಹಾಗೂ ತಮಿಳುನಾಡಿನ ವಾಲಿಬಾಲ್ ತಂಡದ ಕೋಚ್ ನೆರವಿನಿಂದ ಸತತ ಪರಿಶ್ರಮದಿಂದಾಗಿ ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಂಡ ಸಾಯಿ ಸುದರ್ಶನ್ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದರು.
IND vs ENG: 3006 ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ಗೆ ಮರಳಿದ ಕನ್ನಡಿಗ ಕರುಣ್ ನಾಯರ್!
759 ರನ್ ಗಳಿಸಿದ್ದ ಸಾಯಿ ಸುದರ್ಶನ್
2025ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ಪರ ಆರಂಭಿಕ ಆಟಗಾರನಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸಾಯಿ ಸುದರ್ಶನ್, 156.17ರ ಸರಾಸರಿಯಲ್ಲಿ 759 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. 2023 ಮತ್ತು 2024ರಲ್ಲಿ ಸರ್ರೆ ಪರ ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ ಆಡಿದ ಅನುಭವ ಹೊಂದಿರುವ ಸುದರ್ಶನ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉಪಯುಕ್ತ ಬ್ಯಾಟಿಂಗ್ ಪ್ರದರ್ಶನ ತೋರುವ ಭರವಸೆ ಮೂಡಿಸಿದ್ದಾರೆ.