Sharvari Wagh: ಬಿಕಿನಿ ಲುಕ್ನಲ್ಲಿ ನಟಿ ಶಾರ್ವರಿ ವಾಘ್; ಸಖತ್ ಹಾಟ್ ಅಂತಿದ್ದಾರೆ ಫ್ಯಾನ್ಸ್
ಬಾಲಿವುಡ್ ನಟಿ ಶಾರ್ವರಿ ವಾಘ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಆಗಾಗ ಬೋಲ್ಡ್ ಫೋಟೊ ಶೂಟ್ ಮಾಡಿಸಿ ಪಡ್ಡೆ ಹುಡುಗರ ದಿಲ್ ಕದಿಯುವ ನಟಿ ಈ ಬಾರಿ ಬಿಕಿನಿ ಧರಿಸಿ ಸೆಕ್ಸಿ ಪೋಸ್ ನೀಡಿದ್ದಾರೆ.

Sharvari Wagh


2021ರಲ್ಲಿ 'ಬಂಟಿ ಔರ್ ಬಬ್ಲಿ 2' ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆಹಂಚಿಕೊಂಡ ಶಾರ್ವರಿ ವಾಘ್ ಇತ್ತೀಚೆಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.

ನಟನೆ ಅಲ್ಲದೆ ಸಹ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿರುವ ಶಾರ್ವರಿ ವಾಘ್ ಬಿಳಿ ಬಣ್ಣದ ಬಿಕಿನಿ ಧರಿಸಿ ಬಿಂದಾಸ್ ಆಗಿ ಪೋಸ್ ನೀಡಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆ ಹೈಕಳು ಫಿದಾ ಆಗಿದ್ದಾರೆ.

ಅಭಿಮಾನಿಗಳ ಜತೆ ಸದಾ ಸಂಪರ್ಕದಲ್ಲಿರುವ ಅವರ ಬೋಲ್ಡ್ ಫೋಟೊಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಸ್ವಿಮಿಂಗ್ ಪೂಲ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಶಾರ್ವರಿ ವಾಘ್ ಹಳದಿ ಬಣ್ಣದ ಬಿಕಿನಿ ಧರಿಸಿಯೂ ಮಸ್ತ್ ಪೋಸ್ ನೀಡಿದ್ದಾರೆ.

ಶಾರ್ವರಿ ಫೋಟೋ ಹಂಚಿಕೊಂಡ ಬೆನ್ನಲ್ಲೇ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. ಬಿಕಿನಿ ಲುಕ್ನಲ್ಲಿ ಮತ್ತಷ್ಟು ಹಾಟ್ ಆಗಿ ಕಾಣಿಸುತ್ತಿದ್ದೀರಿ ಎಂದು ಹಲವರು ಕಮೆಂಟ್ ಮಾಡಿದ್ದಾರೆ.

ʼಬಂಟಿ ಔರ್ ಬಬ್ಲಿ 2ʼ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದ ಶಾರ್ವರಿ 'ಬಾಜೀರಾವ್ ಮಸ್ತಾನಿ', 'ಪ್ಯಾರ್ ಕಾ ಪಂಚ್ನಾಮಾ 2' ಮತ್ತು 'ಸೋನು ಕೆ ಟಿಟು ಕಿ ಸ್ವೀಟಿ' ಚಿತ್ರಗಳಿಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು.

ಶಾರ್ವರಿ ಮೂಲತಃ ರಾಜಕೀಯ ಕುಟುಂಬದವರು. ಇವರ ತಾತ ಮನೋಹರ್ ಜೋಶಿ ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. 2021ರಲ್ಲಿ ನಟಿಸಿದ್ದ 'ಬಂಟಿ ಔರ್ ಬಬ್ಲಿ 2' ಸಿನಿಮಾ ಅಷ್ಟರ ಮಟ್ಟಿಗೆ ಹಿಟ್ ಆಗಿರಲಿಲ್ಲ. ಆದರೆ ಈ ವರ್ಷ ಅವರ ಸಾಲು ಸಾಲು ಸಿನಿಮಾಗಳು ತೆರೆಕಂಡಿವೆ.

ಇವರ ಮುಂದಿನ ಚಿತ್ರ 'ಆಲ್ಫಾ' ಡಿಸೆಂಬರ್ 2025ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶಾರ್ವರಿ ಆಲಿಯಾ ಭಟ್ ಅವರ ಜತೆಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಅವರ ವೈಆರ್ಎಫ್ ಸ್ಪೈ ಯೂನಿವರ್ಸ್ನಲ್ಲಿ ತಯಾರಾಗುತ್ತಿರುವ ಮೊದಲ ಮಹಿಳಾ ಪ್ರಧಾನ ಸಿನಿಮಾ 'ಆಲ್ಫಾ' ಆಗಿದೆ.