IND vs ENG: ಮೊದಲ ದಿನದಾಟದಲ್ಲೇ ದಾಖಲೆ ಬರೆದ ಭಾರತ
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು. ಇದರಿಂದ ಭಾರತಕ್ಕೆ ಹಿನ್ನಡೆಯೇನೂ ಆಗಲಿಲ್ಲ. ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್‌ಮನ್ ಗಿಲ್‌ರ ಮನಮೋಹಕ ಶತಕ, ಕೆ.ಎಲ್.ರಾಹುಲ್, ರಿಷಭ್ ಪಂತ್‌ರ ಮಿಂಚಿನ ಆಟ ತಂಡವನ್ನು ಮೊದಲ ದಿನ ಪ್ರಾಬಲ್ಯ ಸಾಧಿಸುವಂತೆ ಮಾಡಿತು.


ಲೀಡ್ಸ್: ನಾಯಕ ಶುಭಮನ್ ಗಿಲ್(Shubman Gill) ಮತ್ತು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಮೋಘ ಶತಕದ ನೆರನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ(IND vs ENG) ಮೊದಲ ದಿನ ಭಾರತ 3 ವಿಕೆಟ್‌ಗೆ 359 ರನ್ ಕಲೆಹಾಕಿದೆ. ಇದೇ ವೇಳೆ ಭಾರತ ತಂಡ ದಾಖಲೆಯೊಂದನ್ನು ನಿರ್ಮಿಸಿದೆ. ಪ್ರವಾಸಿ ಟೆಸ್ಟ್ ಪಂದ್ಯದ ಮೊದಲ ದಿನವೇ ಮೂರನೇ 300+ ರನ್ ದಾಖಲಿಸಿದ ಸಾಧನೆ ಮಾಡಿದೆ. 2017ರಲ್ಲಿ ಶ್ರೀಲಂಕಾದಲ್ಲಿ 3ವಿಕೆಟ್‌ಗೆ 399ರನ್ ಗಳಿಸಿದ್ದು ದಾಖಲೆಯಾಗಿದೆ. ಒಟ್ಟು 5 ಬಾರಿ ಭಾರತ ಪ್ರವಾಸಿ ನೆಲದ ಟೆಸ್ಟ್‌ನಲ್ಲಿ ಮೊದಲ ದಿನ 300+ ರನ್ ಪೇರಿಸಿದೆ.
ಪ್ರವಾಸಿ ಟೆಸ್ಟ್‌ನ ಮೊದಲ ದಿನದಂದು ಭಾರತದ 300+ ರನ್‌ಗಳು
399/3, ಶ್ರೀಲಂಕಾ ವಿರುದ್ಧ, ಗಾಲೆ 2017
372/7 ದಕ್ಷಿಣ ಆಫ್ರಿಕಾ ವಿರುದ್ಧ, ಬ್ಲೋಮ್‌ಫಾಂಟೈನ್ 2001
359/3 ಇಂಗ್ಲೆಂಡ್ ವಿರುದ್ಧ, ಹೆಡಿಂಗ್ಲೆ 2025
356/2 ಪಾಕಿಸ್ತಾನ ವಿರುದ್ಧ, ಮುಲ್ತಾನ್ 2004
302/4 ವೆಸ್ಟ್ ಇಂಡೀಸ್ ವಿರುದ್ಧ, ನಾರ್ತ್ ಸೌಂಡ್ 2016
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು. ಇದರಿಂದ ಭಾರತಕ್ಕೆ ಹಿನ್ನಡೆಯೇನೂ ಆಗಲಿಲ್ಲ. ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಶುಭ್‌ಮನ್ ಗಿಲ್‌ರ ಮನಮೋಹಕ ಶತಕ, ಕೆ.ಎಲ್.ರಾಹುಲ್, ರಿಷಭ್ ಪಂತ್‌ರ ಮಿಂಚಿನ ಆಟ ತಂಡವನ್ನು ಮೊದಲ ದಿನ ಪ್ರಾಬಲ್ಯ ಸಾಧಿಸುವಂತೆ ಮಾಡಿತು.
ಇದನ್ನೂ ಓದಿ IND vs ENG: ಜೈಸ್ವಾಲ್-ಗಿಲ್ ಶತಕಗಳ ಬಲದಿಂದ ಮೊದಲನೇ ದಿನ ಪ್ರಾಬಲ್ಯ ಮೆರೆದ ಭಾರತ!
ಭಾರತೀಯ ಬ್ಯಾಟರ್‌ಗಳನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಮುನ್ನಡೆ ಕಾಯ್ದುಕೊಳ್ಳಬಹುದು ಎಂಬ ಆಂಗ್ಲ ಯೋಜನೆ ತಲೆಕೆಳಗಾಯಿತು. ಇಂಗ್ಲೆಂಡ್ ವೇಗಿಗಳ ಆರಂಭಿಕ ಸ್ಪೆಲ್‌ಗಳನ್ನು ಸಮರ್ಥವಾಗಿ ಎದುರಿಸಿದ ರಾಹುಲ್-ಜೈಸ್ವಾಲ್ ಜೋಡಿ 24.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 91 ರನ್ ಒಟ್ಟುಗೂಡಿಸಿದರು. ಆದರೆ ಊಟದ ವಿರಾಮಕ್ಕೆ ಅಲ್ಪ ಮೊದಲು ರಾಹುಲ್, ಸ್ಲಿಪ್‌ನಲ್ಲಿ ಜೋ ರೂಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರು 78 ಎಸೆತಕ್ಕೆ 42 ರನ್ ಸಿಡಿಸಿದರು. ಪದಾರ್ಪಣಾ ಪಂದ್ಯವಾಡಿದ ಸಾಯಿ ಸುದರ್ಶನ್ 4 ಎಸೆತ ಎದುರಿಸಿ ಸೊನ್ನೆಗೆ ಔಟಾದರು.
ಆ ಬಳಿಕ 3ನೇ ವಿಕೆಟ್‌ಗೆ ಗಿಲ್ ಜೊತೆಗೂಡಿ 129 ರನ್ ಸೇರಿಸಿದರು. ಜೈಸ್ವಾಲ್ 159 ಎಸೆತಗಳಲ್ಲಿ 101 ರನ್ ಗಳಿಸಿದ್ದಾಗ ಬೆನ್ ಸ್ಟೋಕ್ಸ್‌ರ ಮ್ಯಾಜಿಕ್ ದಾಳಿಗೆ ಬೌಲ್ಡ್ ಆಗಿ ನಿರ್ಗಮಿಸಿದರು.