ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC Final 2025: ಟೆಸ್ಟ್‌ ವಿಶ್ವಕಪ್‌ ಗೆದ್ದ ತಂಡಕ್ಕೆ ಪ್ರಶಸ್ತಿಯಾಗಿ ಗದೆ ನೀಡುವುದೇಕೆ?

ಆಸೀಸ್‌ನ ಎಲ್ಲ ಬೌಲರ್‌ಗಳೂ ನಿಖರ ದಾಳಿ ಸಂಘಟಿಸುವ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಿಸಿದರು. ಈ ನಡುವೆ ಮಾರ್ಕ್ರಮ್‌ ಮತ್ತು ನಾಯಕ ಬವುಮಾ ಅಚಲವಾಗಿ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. 207 ಎಸೆತಗಳಲ್ಲಿ 136 ರನ್‌ ಸಿಡಿಸಿ ಮಾರ್ಕ್‌ರಮ್‌ ನಿರ್ಗಮಿಸಿದಾಗ, ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸಲ್ಲಿಸಿತು. ಬವುಮಾ 66 ರನ್‌ ಗಳಿಸಿದರು.

ಟೆಸ್ಟ್‌ ವಿಶ್ವಕಪ್‌ ಗೆದ್ದ ತಂಡಕ್ಕೆ ಪ್ರಶಸ್ತಿಯಾಗಿ ಗದೆ ನೀಡುವುದೇಕೆ?

Profile Abhilash BC Jun 15, 2025 10:22 AM

ಲಂಡನ್‌: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ದಕ್ಷಿಣ ಆಫ್ರಿಕಾ ತಂಡ ಚಾರಿತ್ರಿಕ ಸಾಧನೆ ಮಾಡಿದೆ. 27 ವರ್ಷಗಳ ನಂತರ ಗೆದ್ದ ಹರಿಣ ಪಡೆದ ಗೆದ್ದ ಐಸಿಸಿ ಪ್ರಶಸ್ತಿ ಇದಾಗಿದೆ. ಐಸಿಸಿ ವಿಶ್ವಕಪ್‌ ಗೆದ್ದ ತಂಡಕ್ಕೆ ಟ್ರೋಫಿಯನ್ನು ನೀಡಲಾಗುತ್ತದೆ. ಆದರೆ ಟೆಸ್ಟ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿಯಾಗಿ ಗದೆ ನೀಡಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಈ ಹಿಂದೆ ಪ್ರತಿ ವರ್ಷ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನ ಪಡೆದ ತಂಡಕ್ಕೆ ಗದೆ ನೀಡಲಾಗುತ್ತಿತ್ತು. ಹೀಗಾಗಿ ಟೆಸ್ಟ್‌ ವಿಶ್ವಕಪ್‌ನಲ್ಲಿಯೂ ಇದೇ ಸಂಪ್ರದಾಯ ಮುಂದುವರಿಸಲಾಗಿದೆ. ಚಾಂಪಿಯನ್‌ ದಕ್ಷಿಣ ಆಫ್ರಿಕಾ ತಂಡ 31 ಕೋಟಿ ನಗದು ಬಹುಮಾನ ಪಡೆಯಿತು. ರನ್ನರ್‌-ಅಪ್‌ ಆಸ್ಟ್ರೇಲಿಯಾಕ್ಕೆ 18 ಕೋಟಿ ನಗದು ಬಹುಮಾನ ಲಭಿಸಿತು.

ಚೊಚ್ಚಲ ವಿಶ್ವಕಪ್‌ ಟ್ರೋಫಿಯೊಂದನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್‌ ಹಣೆಪಟ್ಟಿಯನ್ನು ಕಳಚಿಕೊಂಡಿತು. ಇದಕ್ಕೂ ಮುನ್ನ ತಂಡ ಐಸಿಸಿ ಟೂರ್ನಿಗಳ ಮಹತ್ವದ ಪಂದ್ಯಗಳಲ್ಲಿ, ಗೆಲುವಿನ ಸನಿಹದಲ್ಲಿದ್ದರೂ ಸೋತು ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಅದೃಷ್ಟ ತಂಡದ ಪರ ಇತ್ತು. ಈ ಹಿಂದೆ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌, ಟಿ20 ವಿಶ್ವಕಪ್‌ನಲ್ಲಿ 1 ಫೈನಲ್‌, 2 ಬಾರಿ ಸೆಮಿಫೈನಲ್‌, ಚಾಂಪಿಯನ್ಸ್‌ ಟ್ರೋಫಿಯಲ್ಲಿ 5 ಬಾರಿ ಸೆಮಿಫೈನಲ್‌ನಲ್ಲಿ ಸೋತಿತ್ತು. ಈ ಪೈಕಿ, 2024ರಲ್ಲಿ ಭಾರತ ವಿರುದ್ಧ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸುಲಭದಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿ ಸೋತಿತ್ತು. ಆದರೆ ಈ ಬಾರಿ ಎಲ್ಲ ಸವಾಲು ಮತ್ತು ವಿಶ್ವ ಚಾಂಪಿಯನ್‌ ಆಸೀಸ್‌ ಮಣಿಸಿ ಟ್ರೋಫಿ ಗೆದ್ದದ್ದು ನಿಜಕ್ಕೂ ತಂಡದ ಅಮೋಘ ಸಾಧನೆಯಾಗಿದೆ.

ಆಸೀಸ್‌ನ ಎಲ್ಲ ಬೌಲರ್‌ಗಳೂ ನಿಖರ ದಾಳಿ ಸಂಘಟಿಸುವ ಮೂಲಕ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳ ಮೇಲೆ ಒತ್ತಡ ಹೆಚ್ಚಿಸಿದರು. ಈ ನಡುವೆ ಮಾರ್ಕ್ರಮ್‌ ಮತ್ತು ನಾಯಕ ಬವುಮಾ ಅಚಲವಾಗಿ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. 207 ಎಸೆತಗಳಲ್ಲಿ 136 ರನ್‌ ಸಿಡಿಸಿ ಮಾರ್ಕ್‌ರಮ್‌ ನಿರ್ಗಮಿಸಿದಾಗ, ಇಡೀ ಕ್ರೀಡಾಂಗಣವೇ ಎದ್ದು ನಿಂತು ಗೌರವ ಸಲ್ಲಿಸಿತು. ಬವುಮಾ 66 ರನ್‌ ಗಳಿಸಿದರು.

ಸ್ಕೋರ್‌ ವಿವರ: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 212/10 ಮತ್ತು 2ನೇ ಇನ್ನಿಂಗ್ಸ್‌ 207/10, ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ 138/10 ಮತ್ತು 2ನೇ ಇನ್ನಿಂಗ್ಸ್‌ 282/5 (ಮಾರ್ಕ್‌ರಮ್‌ 136, ಬವುಮಾ 66, ಬೆಡಿಂಗ್‌ಹ್ಯಾಮ್‌ 21, ಸ್ಟಾರ್ಕ್‌ 3-66).