ಹೈಕೋರ್ಟ್ ಹೇಳಿದೆ ಜಾಹೀರಾತಲ್ಲಿದೆ: ಎಚ್.ಡಿ.ಕುಮಾರಸ್ವಾಮಿ ನೈಸ್ ಉವಾಚ
ಮಂಡ್ಯದ ಮೇಲುಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಾಹೀರಾತನ್ನು ಯಾರು ಕೂಡ ಕಲ್ಪನೆ ಮಾಡಿ ಕೊಟ್ಟಿಲ್ಲ. ಇತ್ತೀಚೆಗೆ ಹೈಕೋರ್ಟ್ʼನ ದ್ವಿಸದಸ್ಯ ಪೀಠ ನೈಸ್ ಯೋಜನೆ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ದಾಖಲಿಸಿದೆ. ಅದೇ ಇವತ್ತು ಜಾಹೀರಾತು ರೂಪದಲ್ಲಿ ಪ್ರಕಟವಾಗಿದೆ. ಈ ಸರಕಾರ ನೈಸ್ ಯೋಜನೆಯ ಹೆಸರಿನಲ್ಲಿ ಆ ಕಂಪನಿ ಜತೆ ಶಾಮೀಲಾಗಿದೆ ಎಂದಿದ್ದಾರೆ.