ಯಾವ ಕಥೆಯೂ ಸಣ್ಣದಲ್ಲ: ಭಾನು ಮುಷ್ತಾಕ್
ಕರ್ನಾಟಕದ ಲೇಖಕಿ ಬಾನು ಮುಷ್ತಾಕ್ ತಮ್ಮ ಕೃತಿ ‘ಹಾರ್ಟ್ ಲ್ಯಾಂಪ್’ಗಾಗಿ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದ ಕನ್ನಡದ ಮೊದಲ ಲೇಖಕಿಯಾಗಿ ಇತಿಹಾಸ ನಿರ್ಮಿಸಿದ್ದಾರೆ. ಈ ಕೃತಿಯನ್ನು ಲೇಖಕಿ, ಅನುವಾದಕಿ ಮತ್ತು ಸಂಶೋಧಕಿ ದೀಪಾ ಭಾಸ್ತಿ ಇಂಗ್ಲಿಷ್‌ಗೆ ಭಾಷಾಂತರಿಸಿದ್ದಾರೆ. ಪ್ರಶಸ್ತಿಯನ್ನು ಸ್ವೀಕರಿಸಿದ ಬಾನು ಮುಷ್ತಾಕ್, ಈ ಗೌರವವನ್ನು ವೈಯಕ್ತಿಕ ಸಾಧನೆಯಾಗಿ ಒಪ್ಪಿಕೊಳ್ಳದೆ, ಇತರರೊಂದಿಗೆ ಒಗ್ಗೂಡಿದ ಧ್ವನಿಯಾಗಿ ಸ್ವೀಕರಿಸುವುದಾಗಿ ತಿಳಿಸಿದರು.