ಕಬಡ್ಡಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಅಪ್ಪು ಸ್ಪೋರ್ಟ್ಸ್ ಕ್ಲಬ್
ಸ್ಥಳೀಯ ಅಪ್ಪು ಸ್ಪೋರ್ಟ್ಸ್ ಕ್ಲಬ್ ಚಿಕ್ಕಬಳ್ಳಾಪುರ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಅಪ್ಪು ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ತಂಡದ ತರಬೇತುದಾರ ರಾಘವೇಂದ್ರ ಅವರು ಮಾತನಾಡುತ್ತಾ ಹತ್ತು ವರ್ಷಗಳ ನಂತರ ನಮ್ಮ ತಾಲೂಕಿನ ಕಬಡ್ಡಿ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಯಲ್ಲಿ ವಿಜೇತರಾಗುವ ಮೂಲಕ ತಾಲೂಕಿನ ಕ್ರೀಡಾ ಪ್ರೇಮಿಗಳಲ್ಲಿ ಹರ್ಷವನ್ನು ಉಂಟು ಮಾಡಿದ್ದಾರೆ.