ಮಾಜಿ ಸಚಿವ ರಾಜು ಗೌಡ ಕಾರು ಅಪಘಾತ; ಅಪಾಯದಿಂದ ಪಾರು
ಆಂಧ್ರದ ವಿಶಾಖಪಟ್ಟಣದಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯ ಮುಗಿಸಿ, ಹೈದರಾಬಾದ್ ಮಾರ್ಗದ ಮೂಲಕ ಹಿಂತಿರುವಾಗ ಯಾದಗಿರಿಯಲ್ಲಿ ಅಪಘಾತ ಸಂಭವಿಸಿದೆ. ಯಾದಗಿರಿಯ ಗಂಜ್ ಪ್ರದೇಶದ ಹೆದ್ದಾರಿಯಲ್ಲಿ ಟ್ರಕ್ ಒಂದು ಮಾಜಿ ಸಚಿವರ ಕಾರಿಗೆ ಹಿಂದಿನಿಂದ ಗುದ್ದಿದೆ. ಕಾರಿನ ಹಿಂಭಾಗ ಸಂಪೂರ್ಣ ನುಜ್ಜು, ಗುಜ್ಜಾಗಿದೆ.