ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gudibande News: ಗುಡಿಬಂಡೆ ಸೊಪ್ಪಿನಪೇಟೆಯಲ್ಲಿ 4ನೇ ವರ್ಷದ ದಸರಾ ಗಣೇಶ ಮಹೋತ್ಸವ: ಗಣೇಶ ಮೂರ್ತಿ, ದುರ್ಗಾದೇವಿ ಪ್ರತಿಷ್ಠಾಪನೆ; ನೂರಾರು ಭಕ್ತರು ಭಾಗಿ

ಗಣೇಶ ಮೂರ್ತಿ, ದುರ್ಗಾದೇವಿ ಪ್ರತಿಷ್ಠಾಪನೆ; ನೂರಾರು ಭಕ್ತರು ಭಾಗಿ

ಪಟ್ಟಣದ ಸೊಪ್ಪಿನಪೇಟೆಯ ಸಪ್ಪಲಮ್ಮ ದೇವಾಲಯದ ಸಮೀಪ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣೇಶ ಮೂರ್ತಿ ಹಾಗೂ ದುರ್ಗಾದೇವಿಯ ಪ್ರತಿಷ್ಠಾಪನೆ ಮತ್ತು ಪ್ರಾಣ ಪ್ರತಿಷ್ಠಾಪನಾ ಕಾರ್ಯಗಳು ಸಂಪ್ರದಾಯಬದ್ಧವಾಗಿ ನೆರವೇರಿದವು. ನೂರಾರು ಭಕ್ತಾದಿಗಳ ಸಮ್ಮುಖ ದಲ್ಲಿ ನಡೆದ ಪೂಜಾ ಕೈಂಕರ್ಯಗಳು ಭಕ್ತಿಭಾವದ ವಾತಾವರಣ ನಿರ್ಮಿಸಿದವು.

ಕಬ್ಬು ಬೆಳೆಗಾರರ‌ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ನಾಳೆಯಿಂದ ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಕಬ್ಬು ಬೆಳೆಗಾರರ‌ ಬೇಡಿಕೆಗಳ ಈಡೇರಿಕೆಗೆ ಆಗ್ರಹ; ನಾಳೆಯಿಂದ ಪ್ರತಿಭಟನೆ

Sugarcane Farmers Protest: ಕಬ್ಬಿನ ಎಂಎಸ್‌ಪಿ ಏರಿಕೆ, ಸಕ್ಕರೆ ಕಾರ್ಖಾನೆಗಳ ಆರಂಭ ಹಾಗೂ ರೈತರ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಮಹತ್ತರ ಹೆಜ್ಜೆ: ವಾರದೊಳಗೆ ಉನ್ನತ ಮಟ್ಟದ ಸಮಿತಿ ರಚನೆ

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ವಾರದೊಳಗೆ ಉನ್ನತ ಮಟ್ಟದ ಸಮಿತಿ ರಚನೆ

ಕರ್ನಾಟಕ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಸ್ಪಂದಿಸಲಿದ್ದು, ರೈತರಿಗೆ ಪರಿಣಾಮಕಾರಿ ಪರಿಹಾರ ಒದಗಿಸುವ ಉದ್ದೇಶದಿಂದ ಒಂದು ವಾರದೊಳಗೆ ವಿಶೇಷ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಲಾಗುವುದು ಎಂದು ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಘೋಷಿಸಿದ್ದಾರೆ.

Dr. Sudha Yadav: ಯಾರು ಈ ಡಾ. ಸುಧಾ ಯಾದವ್?; ಕರ್ನಾಟಕದ ನೂತನ ರಾಜ್ಯಪಾಲರ ಪರಿಚಯ ಇಲ್ಲಿದೆ

ಯಾರು ಈ ಡಾ. ಸುಧಾ ಯಾದವ್?; ನೂತನ ರಾಜ್ಯಪಾಲರ ಪರಿಚಯ ಇಲ್ಲಿದೆ

Karnataka's new governor Dr. Sudha Yadav: ಹರಿಯಾಣ ಮೂಲದ ಬಿಜೆಪಿಯ ಪ್ರಭಾವಿ ಮಹಿಳಾ ನಾಯಕಿ ಡಾ. ಸುಧಾ ಯಾದವ್ ಅವರಿಗೆ ಕರ್ನಾಟಕದ ಲೋಕಭವನದ ಅತ್ಯುನ್ನತ ಸಾಂವಿಧಾನಿಕ ಜವಾಬ್ದಾರಿಯನ್ನು ವಹಿಸಲಾಗಿದೆ. ಇವರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka's New Governor: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ

Dr. Sudha Yadav: ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಜಾಗಕ್ಕೆ ಇದೀಗ ಸುಧಾ ಯಾದವ್ ಅವರನ್ನು ನಿಯೋಜಿಸಲಾಗಿದೆ. ಕರ್ನಾಟಕ ಸೇರಿ ಒಟ್ಟು ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಇವರು ಶೀಘ್ರದಲ್ಲೇ ಅಧಿಕಾರ ಸ್ವೀಕರಿಸಲಿದ್ದಾರೆ.

ಭಾರತೀಯ ಯೋಧರಿಗೆ ಗುಣಮಟ್ಟದ ʼಭಾರತ್‌ ರೈಸ್‌ʼ; ಸೇನೆಗೆ 1.25 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ಮೀಸಲು

ಭಾರತೀಯ ಯೋಧರಿಗೆ ಗುಣಮಟ್ಟದ 1.25 ಲಕ್ಷ ಮೆಟ್ರಿಕ್ ಟನ್ ʼಭಾರತ್‌ ರೈಸ್‌ʼ

Pralhad Joshi: ನಮ್ಮ ಯೋಧರಿಗಾಗಿಯೇ ಆಹಾರ ಇಲಾಖೆಯಿಂದ 1.25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಪ್ರತ್ಯೇಕವಾಗಿ ಮೀಸಲಿಟ್ಟಿದೆ. ಮುಖ್ಯವಾಗಿ ಗುಣಮಟ್ಟದ ಅಕ್ಕಿ ಪೂರೈಕೆಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ವೇದಾಂತದ ತತ್ವಗಳನ್ನು ಸುಲಭವಾಗಿ ತಿಳಿಯಲು ಪುರಾಣಗಳೇ ಮಾಧ್ಯಮ: ರಾಘವೇಶ್ವರ ಭಾರತೀ ಶ್ರೀ

ವೇದಾಂತದ ತತ್ವ ತಿಳಿಯಲು ಪುರಾಣಗಳೇ ಮಾಧ್ಯಮ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಪುರಾಣಗಳು ಹಳತಾದರೂ ಅದು ಇಂದಿಗೂ ಹೊಸತಾದ ವಿಷಯಗಳನ್ನು ಹೊಂದಿದೆ. ಎಲ್ಲಾ ಕಾಲಕ್ಕೂ ಪ್ರಸ್ತುತವಾದ ವಿಚಾರಗಳನ್ನು ಹೊತ್ತಿರುವುದು ಪುರಾಣಗಳ ಹೆಚ್ಚುಗಾರಿಕೆಯಾಗಿದೆ. ವೇದಾಂತದಲ್ಲಿನ ವಿಚಾರಗಳನ್ನು ಇನ್ನೊಂದು ರೀತಿಯಲ್ಲಿ ಪ್ರಸ್ತುತ ಪಡಿಸಿ, ಎಲ್ಲಾ ವರ್ಗದ ಜನರನ್ನೂ ಸುಲಭವಾಗಿ ತಲುಪುವ ಮಾಧ್ಯಮ ಪುರಾಣಗಳಾಗಿವೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ತುಮಕೂರು ವಿವಿ ಆವರಣದಲ್ಲಿ ಹೆಲಿರೈಡ್‌ ವಿರೋಧಿಸಿ ಪ್ರತಿಭಟನೆ: ಹೆಲಿಕಾಪ್ಟರ್‌ಗೆ ಮುತ್ತಿಗೆ ಯತ್ನ

ತುಮಕೂರು ವಿವಿ ಆವರಣದಲ್ಲಿ ಹೆಲಿರೈಡ್‌ ವಿರೋಧಿಸಿ ಪ್ರತಿಭಟನೆ

ದಸರಾ ಮಹೋತ್ಸವದ ಅಂಗವಾಗಿ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಹೆಲಿರೈಡ್‌ ಆಯೋಜಿಸಲಾಗಿದೆ. ಆದರೆ, ಹೆಲಿಕಾಪ್ಟರ್ ಹಾರಾಟದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಇದನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ತುಮಕೂರು ವಿವಿಧ ವಿದ್ಯಾರ್ಥಿಗಳು ಹೆಲಿಕಾಪ್ಟರ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಗ್ರಾಮೀಣ ಜನತೆಗೆ ಅತ್ಯಾಧುನಿಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧ: ಯು.ಟಿ. ಖಾದರ್

ಗ್ರಾಮೀಣ ಜನತೆಗೆ ಅತ್ಯಾಧುನಿಕ ಆರೋಗ್ಯ ಸೇವೆ ಒದಗಿಸಲು ಸರ್ಕಾರ ಬದ್ಧ

Tumkur News: ತುಮಕೂರು ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಅಂಗಸಂಸ್ಥೆ) ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಭಾರತೀಯ ಪ್ರಿವೆಂಟಿವ್ ಮತ್ತು ಸಾಮಾಜಿಕ ವೈದ್ಯಕೀಯ ಸಂಘದ 6ನೇ ಕರ್ನಾಟಕ ರಾಜ್ಯ ಸಮ್ಮೇಳನ ‘ಐಎಪಿಎಸ್‌ಎಂ ಕಾರ್ಕಾನ್-2026ʼ ಜರುಗಿತು.

ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ: ಬೆಂಗಳೂರು ವಿಮಾನ ನಿಲ್ದಾಣದ ಸಂಸ್ಥೆಯ ಎಚ್ಆರ್ ಮ್ಯಾನೇಜರ್ ವಿರುದ್ಧ ಎಫ್ಐಆರ್

ಮಹಿಳಾ ಉದ್ಯೋಗಿಗೆ ಕಿರುಕುಳ ಆರೋಪ: ಎಚ್ಆರ್ ವಿರುದ್ಧ ಎಫ್ಐಆರ್

female employee assaulted: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಮತ್ತು ಪಾನೀಯ ಸೇವಾ ಸಂಸ್ಥೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕರ ವಿರುದ್ಧ ಮಹಿಳಾ ಉದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

SC-ST Reservation: ರಾಜ್ಯದ ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದು ಮಾಡಿದ ಹೈಕೋರ್ಟ್

ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದು ಮಾಡಿದ ಹೈಕೋರ್ಟ್

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಹೈಕೋರ್ಟ್‌ನ ಈ ದಿಢೀರ್ ತೀರ್ಪಿನಿಂದಾಗಿ ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಹಲವು ನೇಮಕಾತಿ ಪರೀಕ್ಷೆಗಳು ಹಾಗೂ ಉನ್ನತ ಶಿಕ್ಷಣದ ಸೀಟು ಹಂಚಿಕೆ ಪ್ರಕ್ರಿಯೆಗಳ ಮೇಲೆ ನೇರ ಪರಿಣಾಮ ಬೀರಲಿದೆ.

BJP Mahila Morcha: ಲೈಂಗಿಕ ‌ಕಿರುಕುಳ ಆರೋಪಿ ಕಾಂಗ್ರೆಸ್ ಸಂಸದನ ವಿರುದ್ಧ ಸಿಡಿದೆದ್ದ ಬಿಜೆಪಿ ಮಹಿಳಾ‌ ಮೋರ್ಚಾ

ಲೈಂಗಿಕ ‌ಕಿರುಕುಳ ಆರೋಪಿ ವಿರುದ್ಧ ಸಿಡಿದೆದ್ದ ಬಿಜೆಪಿ ಮಹಿಳಾ‌ ಮೋರ್ಚಾ

ಸೋಮವಾರ ನಗರದ ಕಾಂಗ್ರೆಸ್ ಭವನದ ಎದುರಿಗೆ ಸೇರಿದ್ದ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ಯರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಕಾಂಗ್ರೆಸ್ ಸಂಸದನ ವಿರುದ್ಧ ಆಕ್ರೋಶ ಹೊರ ಹಾಕಿದರು. ಪ್ರಕರಣದ ಕುರಿತು ಕಾಂಗ್ರೆಸ್ ಪಕ್ಷ ಮೌನವಹಿಸಿರುವ ಕ್ರಮ ಖಂಡನೀಯ, ಮಹಿಳೆಯರ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು‌.

ದಸರಾ ಹಬ್ಬಕ್ಕೆ ರಜೆ ನೀಡದೆ ಪರೀಕ್ಷೆ ನಿಗದಿ: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜ್‌ ಮುಂಭಾಗ ಎಬಿವಿಪಿ ಪ್ರತಿಭಟನೆ

ದಸರಾ ಹಬ್ಬಕ್ಕೆ ರಜೆ ನೀಡದೆ ಪರೀಕ್ಷೆ ನಿಗದಿ: ವಿದ್ಯಾರ್ಥಿಗಳಿಂದ ಆಕ್ರೋಶ

ABVP Protest: ದಸರಾ ಹಬ್ಬದ ರಜೆ ನೀಡದೆ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದಸರಾ ಸಮಯದಲ್ಲೇ ಪರೀಕ್ಷಾ ನಿಗದಿಪಡಿಸಿರುವ ಆಡಳಿತ ಮಂಡಳಿ ಕ್ರಮ ಸರಿಯಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು ದಸರಾದಲ್ಲಿ ಮನಸೂರೆಗೊಂಡ ಕಾಡುಗೊಲ್ಲರ ವಿಶಿಷ್ಟ ‘ಅಲಗು ಕುಣಿತʼ ಪ್ರದರ್ಶನ

ತುಮಕೂರು ದಸರಾದಲ್ಲಿ ಕಾಡುಗೊಲ್ಲರ ವಿಶಿಷ್ಟ ‘ಅಲಗು ಕುಣಿತʼ ಪ್ರದರ್ಶನ

Tumkur News: ತುಮಕೂರು ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯ ಅನನ್ಯ ಕಲೆಯಾದ ‘ಅಲಗು ಕುಣಿತʼ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಂಡಿತು. ಮಧುಗಿರಿ ತಾಲೂಕಿನ ಬಸವನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಪಿಡಿಓ ಬೋರಣ್ಣನವರ ತಂಡದ ಜಾನಪದ ಕಲಾವಿದರು ಈ ಪ್ರದರ್ಶನ ನೀಡಿದ್ದಾರೆ.

ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್ ರಾಜೀನಾಮೆಗೆ ಆಗ್ರಹ; ಹೊಸಪೇಟೆಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಜ್ಞಾನೇಶ್‌ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

Congress Protest: ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಹೊಸಪೇಟೆ ಮತ್ತು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಹೊಸಪೇಟೆ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ರವಿಕುಮಾರ್‌ ಅವರ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

KPSC recruitment scam: ಕೆಪಿಎಸ್‌ಸಿ ಅಕ್ರಮದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನ ಜಾಮೀನು ಮಂಜೂರು

ಕೆಪಿಎಸ್‌ಸಿ ಅಕ್ರಮದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ 5 ದಿನ ಜಾಮೀನು

ಹೈಕೋರ್ಟ್‌ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಅ.15ರಿಂದ 20ರ ವರೆಗೆ ಜಾಮೀನು ನೀಡಲಾಗಿದೆ. ಹಲವು ಷರತ್ತು ವಿಧಿಸಿ ಬಸವರಾಜ್‌ ಕನ್ನಾಳೆಗೆ ಜಾಮೀನು ನೀಡಲಾಗಿದೆ.

ತಿಪಟೂರಿನಲ್ಲಿ ಬೃಹತ್ ಮರದ ಕೊಂಬೆ ಬಿದ್ದು ನಿವೃತ್ತ ಶಿಕ್ಷಕ ಸಾವು

ತಿಪಟೂರಿನಲ್ಲಿ ಬೃಹತ್ ಮರದ ಕೊಂಬೆ ಬಿದ್ದು ನಿವೃತ್ತ ಶಿಕ್ಷಕ ಸಾವು

ತಿಪಟೂರು ನಗರದ ಬಿ.ಎಚ್.ರಸ್ತೆಯ ಕಲ್ಪತರು ಕಾಲೇಜಿನ ಮುಂಭಾಗ ಘಟನೆ ನಡೆದಿದೆ. ಬೃಹತ್ ಮರ ಕೊಂಬೆ ಬೈಕ್‌ ಮೇಲೆ ಉರುಳಿಬಿದ್ದ ಪರಿಣಾಮ ನಿವೃತ್ತ ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಗೂ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Gold Price Today On October 12, 2026: ನವರಾತ್ರಿಯ ಎರಡನೇ ದಿನ ಆಭರಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

ಆಭರಣಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold Price Today: ಸೋಮವಾರ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 40 ರೂಪಾಯಿ ಇಳಿಕೆಯಾಗಿ 13,840 ರೂಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 44 ರುಪಾಯಿ ಕಡಿಮೆಯಾಗಿ 15,098 ರೂಪಾಯಿ ಕಂಡು ಬಂದಿದೆ.

ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌; ದಿಢೀರ್‌ ಬೆಳವಣಿಗೆಗೆ ಕಾರಣವೇನು?

ಹಿಂಡಲಗಾ ಜೈಲಿಗೆ ತೆರಳುತ್ತಿದ್ದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್‌

Prajwal Revanna: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಬೆಂಗಳೂರು ಸೆಂಟ್ರಲ್ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ವರ್ಗಾಯಿಸುವ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿದೆ. ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರು, ತುಮಕೂರು ತಲುಪಿದ ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

ಕಾಣದಂತೆ ಮಾಯವಾದ ಮಳೆ; ರಾಜ್ಯಾದ್ಯಂತ ಒಣಹವೆ, ಇನ್ನು ವರ್ಷಧಾರೆಯಾಗೋದು ಯಾವಾಗ?

ರಾಜ್ಯಾದ್ಯಂತ ಮುಂದುವರಿಯಲಿದೆ ಒಣಹವೆ

Karnataka Weather: ಎಲ್‌ ನೀನೊ ಪರಿಣಾಮದಿಂದ ದೇಶಾದ್ಯಂತ ಬರದ ಛಾಯೆ ಎದುರಾಗಿದ್ದು, ಇನ್ನು ರಾಜ್ಯದಲ್ಲಿಯೂ ಮುಂಗಾರು ದುರ್ಬಲವಾಗಿದೆ. ಸೋಮವಾರವೂ (ಅಕ್ಟೋಬರ್‌ 12) ರಾಜ್ಯಾದ್ಯಂತ ಒಣಹವೆಯೇ ಮುಂದುವರಿಯಲಿದೆ. ಬೆಂಗಳೂರು ಸೇರಿ ಎಲ್ಲೂ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಹೋಟೆಲ್‌ನಲ್ಲಿ ಸಿಎಂ ರಹಸ್ಯ ಸಭೆ ನಡೆಸಿದ್ದು ಯಾರೊಂದಿಗೆ? ಕುಮಾರಸ್ವಾಮಿ ಪ್ರಶ್ನೆ

ಡಿಕೆಯೇ ಸ್ಟಿಂಗ್ ಆಪರೇಶನ್ ಸೂತ್ರದಾರ: ಎಚ್‌ಡಿಕೆ

ಡಿ.ಕೆ.ಶಿವಕುಮಾರ್ ಅವರು ಐವರು ಸಚಿವರನ್ನು ‘ನಿಮ್ಮ ವಿರುದ್ಧ ಸ್ಟಿಂಗ್ ಆಗಿದೆ ಎಂದು ಬ್ಲ್ಯಾಕ್ ಮೇಲ್ ಮಾಡುವ ಮುನ್ನ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ಪಕ್ಕದ ಪಂಚತಾರಾ ಹೋಟೆಲ್‌ನಲ್ಲಿ ಸ್ಟಿಂಗ್ ಮಾಡುವ ವ್ಯಕ್ತಿಯೊಂದಿಗೆ ಗಂಟೆಗಟ್ಟಲೆ ಚರ್ಚೆ ನಡೆಸಿದ್ದರು. ಆ ಹೋಟೆಲ್‌ ನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಕೂತಿದ್ದ ಆ ವ್ಯಕ್ತಿ ಯಾರು? ಆ ವ್ಯಕ್ತಿಯ ಜತೆ ಈ ಮುಖ್ಯಮಂತ್ರಿಗೆ ಏನು ಸಂಬಂಧ? ಆ ವ್ಯಕ್ತಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿ ಯಾರ ಯಾರ ವಿರುದ್ಧ ಸ್ಟಿಂಗ್ ಮಾಡಿಸಿದ್ದರು ಎಂಬುದನ್ನು ಡಿಕೆಶಿ ಅವರು ರಾಜ್ಯದ ಜನರಿಗೆ ಹೇಳಬೇಕಾಗುತ್ತದೆ’ ಎಂದು ಅಗ್ರಹಿಸಿದರು.

ಪೊಲೀಸರ ಮಾನವೀಯತೆ: 112 ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು

112 ವಾಹನದಲ್ಲಿ ಗಾಯಾಳು ಆಸ್ಪತ್ರೆಗೆ ದಾಖಲು

ಸ್ಥಳೀಯರು ವಿಷಯ ಮುಟ್ಟಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು,112 ಜನಸ್ನೇಹಿ ಪೊಲೀಸ್ ವಾಹನದಲ್ಲಿ ಗಾಯಾಳುವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬಾಲರಾಜು ಚಿಕ್ಕಬಳ್ಳಾಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಾಯಾಳು ಬಾಲರಾಜು ಅವರನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುವ ಮೂಲಕ ಪೊಲೀಸರು ತಮ್ಮ ಮಾನವೀಯತೆ ಮೆರೆದಿದ್ದಾರೆ.

ಸಾಗರದಲ್ಲಿ ಘೋರ ಘಟನೆ; ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

ಕೆರೆಗೆ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು

Shivamogga News: ಶಿವಮೊಗ್ಗ ಜಿಲ್ಲೆಯ ಸಾಗರದ ಆಲಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಭಾನುವಾರ ಇಬ್ಬರು ಬಾಲಕರು ಕೆರೆಗೆ ಈಜಲು ತೆರಳಿದ್ದಾಗ, ಆಳ ಅರಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sumangali Seva Ashrama: ಡಾ.ಸುಶೀಲಮ್ಮ ಇಡೀ ಹೆಬ್ಬಾಳ ಕ್ಷೇತ್ರಕ್ಕೆ ಮಹಾತಾಯಿ ಇದ್ದಂತೆ: ಸುಮಂಗಲಿ ಸೇವಾಶ್ರಮ ನಾಡಿನ ಹೆಮ್ಮೆ: ಬೈರತಿ ಸುರೇಶ್

ಸುಮಂಗಲಿ ಸೇವಾಶ್ರಮ ನಾಡಿನ ಹೆಮ್ಮೆ: ಬೈರತಿ ಸುರೇಶ್

ಸುಶೀಲಮ್ಮ ಮತ್ತು ಅವರ ತಂಡ ನಡೆಸುತ್ತಿರುವ ಈ ಕಾರ್ಯದಿಂದಾಗಿ ಸಾವಿರಾರು ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ತಲೆ ಎತ್ತಿ ನಡೆದಾಡಿ ಸ್ವಾವಲಂಬಿ ಜೀವನ ಸಾಗಿಸುವಂತಾಗಿದೆ. ಈ ಕಾರಣ ದಿಂದಲೇ ಸುಶೀಲಮ್ಮ ಅವರು ಕೇವಲ ಆಶ್ರಮ ವಾಸಿಗಳಿಗೆ ತಾಯಿಯಲ್ಲ, ಇಡೀ ಹೆಬ್ಬಾಳ ಕ್ಷೇತ್ರದ ಮಹಾತಾಯಿಯಾಗಿದ್ದಾರೆ ಎಂದು ಬಣ್ಣಿಸಿದರು.

Loading...