ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

Bharat Seva Ratna Award: ಭಾರತ ಸೇವಾ ರತ್ನ ಪ್ರಶಸ್ತಿಗೆ ಸಾಹಿತಿ ಓಂಕಾರಪ್ರಿಯ ಭಾಜನ

ಭಾರತ ಸೇವಾ ರತ್ನ ಪ್ರಶಸ್ತಿಗೆ ಸಾಹಿತಿ ಓಂಕಾರಪ್ರಿಯ ಭಾಜನ

ಸಾಮಾಜಿಕ, ಶೈಕ್ಷಣಿಕ, ಕಲೆ, ಸಾಹಿತ್ಯ, ಸಾಂಸ್ಕೃ ತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ನೀಡಲಾಗುವ ಭಾರತ ಸೇವಾ ರತ್ನ ಪ್ರಶಸ್ತಿಗೆ ಬಾಗೇಪಲ್ಲಿ ತಾಲ್ಲೂಕಿನ  ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಕೃಷ್ಣಮಾಚಾರಿ ಅವರ ಸುಪುತ್ರ, ಸಾಹಿತಿ, ಕವಿ, ಸಂಶೋಧಕ, ವಿಮರ್ಶಕ ಓಂಕಾರಪ್ರಿಯ ಭಾಜನರಾಗಿದ್ದಾರೆ

Chikkaballapur News: ಆರ್.ಬಿ.ತಿಮ್ಮಾಪುರ ಸೇರಿ ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

ದಲಿತ ಸಚಿವರ ಮೇಲಿನ ಅಪಪ್ರಚಾರ ನಿಲ್ಲಿಸಿ: ಇಲ್ಲವೇ ಹೋರಾಟ ಎದುರಿಸಿ

ದಲಿತರು ಸಚಿವರೇ ಆಗಬಾರದು, ಅವರು ಉನ್ನತ ಸ್ಥಾನಗಳಿಗೆ ಹೋದರೆ ಆಗಬಾರದ್ದು ಆಗಿ ಬಿಡುತ್ತದೆ ಎಂದು ಸುಖಾಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ಬೊಬ್ಬೆ ಹಾಕುವುದು ನಿಲ್ಲಿಸಬೇಕು. ಅಬಕಾರಿಯಂತಹ ಸರಕಾರಕ್ಕೆ ಆದಾಯ ತಂದುಕೊಡುವ ಖಾತೆಯನ್ನು ನಿಭಾಯಿಸುವುದು ಹಾದಿ ಬೀದಿ ಪುಂಡರು ಮಾತನಾಡಿದಷ್ಟು ಸುಲಭವಲ್ಲ

77th Republic Day: 77ನೇ ಗಣರಾಜ್ಯೋತ್ಸವಕ್ಕೆ ಜಿಲ್ಲಾಕ್ರೀಡಾಂಗಣ ಸರ್ವರೀತಿಯಲ್ಲೂ ಸಜ್ಜು: ಗಮನ ಸೆಳೆಯಲಿದೆ ಫಲಪುಷ್ಪಪ್ರದರ್ಶನ

77ನೇ ಗಣರಾಜ್ಯೋತ್ಸವಕ್ಕೆ ಜಿಲ್ಲಾಕ್ರೀಡಾಂಗಣ ಸರ್ವರೀತಿಯಲ್ಲೂ ಸಜ್ಜು

ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣ 77ನೇ ಗಣರಾಜ್ಯೋತ್ಸವ ಆಚರಣೆಗೆ ಮಧುವಣ ಗಿತ್ತಿಯಂತೆ ಸಿದ್ಧವಾಗಿದೆ. ಈ ಸಿದ್ಧತೆಗಳ ಹಿಂದೆ ರಾತ್ರಿ 10 ಗಂಟೆಯಾದರೂ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಯುವಜನಸೇವೆ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿ ಶ್ರಮಿಸಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು

Physical Abuse: ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್‌ ಕಾನ್ಸ್​​ಟೇಬಲ್ ಅರೆಸ್ಟ್‌

ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಕಾನ್ಸ್​​ಟೇಬಲ್ ಅಂದರ್‌

Bengaluru News: ಪಿಯುಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್‌ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್​​​ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆರ್‌.ಟಿ. ನಗರ ಠಾಣೆಯ ಕಾನ್ಸ್​​ಟೇಬಲ್ ಯಮುನಾ ನಾಯಕ್ ಎನ್ನುವಾತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.

Padma Awards 2026: ಪ್ರಭಾಕರ್‌ ಕೋರೆ, ಶುಭಾ ವೆಂಕಟೇಶ್‌...ರಾಜ್ಯದ ಸಪ್ತ ಸಾಧಕರಿಗೆ ಪದ್ಮಶ್ರೀ ಗೌರವ

ರಾಜ್ಯದ 7 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ

ಭಾರತದ 2, 3 ಮತ್ತು 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಜನವರಿ 25ರಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕರ್ನಾಟಕಕ್ಕೆ ಒಟ್ಟು 8 ಅವಾರ್ಡ್‌ ಲಭಿಸಿದ್ದು, ಅದರಲ್ಲಿ 1 ಪದ್ಮ ಭೂಷಣ, 7 ಪದ್ಮಶ್ರೀ ಸೇರಿದೆ. ಶತಾವಧಾನಿ ಆರ್​​. ಗಣೇಶ್​​ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ಅಂಕೇಗೌಡ ಎಂ., ಎಸ್​​.ಜಿ. ಸುಶೀಲಮ್ಮ, ಶಶಿಶೇಖರ್​​ ವೆಂಪತಿ, ಶುಭಾ ವೇಂಕಟೇಶ್​​ ಐಯ್ಯಂಗಾರ್​, ಡಾ. ಸುರೇಶ್ ಹನಗವಾಡಿ, ಟಿ.ಟಿ. ಜಗನ್ನಾಥನ್, ಪ್ರಭಾಕರ್​​ ಕೋರೆ ಪದ್ಮಶ್ರೀ ಪ್ರಶಸ್ತಿ ಪಡೆದ ಗಣ್ಯರು.

ಸಿನಿಮೀಯ ರೀತಿಯ 400 ಕೋಟಿ ರುಪಾಯಿ ದರೋಡೆ ಬಗ್ಗೆ ಸ್ಫೋಟಕ ಮಾಹಿತಿ ಲಭ್ಯ: ರಕ್ಷಕರೇ ಭಕ್ಷಕರಾದ್ರಾ?

400 ಕೋಟಿ ರುಪಾಯಿ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್‌

Robbery Case: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ 2 ಕಂಟೇನರ್‌ ಹೈಜಾಕ್‌ಗೆ ಸಂಬಂಧಿಸಿ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಕರ್ನಾಟಕ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆಡಿಯೊ ವೈರಲ್‌ ಆಗಿದೆ.

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಚರ್ಚೆಗೆ ಬರಲಿ: ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿ ಸವಾಲು

ಕುಮಾರಸ್ವಾಮಿಯನ್ನು ಚರ್ಚೆಗೆ ಕರೆದ ಡಿಸಿಎಂ

ಬಿಡದಿ ಟೌನ್ ಶಿಪ್ ಯೋಜನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಬೇಕಾದರೆ ಚರ್ಚೆಗೆ ಬರಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸವಾಲು ಹಾಕಿದ್ದಾರೆ. ಇದಕ್ಕಾಗಿ ಮಾಧ್ಯಮಗಳೇ ಚರ್ಚೆಗೆ ದಿನಾಂಕ ನಿಗದಿ ಮಾಡಿ 3 ದಿನ ಮುಂಚಿತವಾಗಿ ನನಗೆ ಮಾಹಿತಿ ನೀಡಲಿ. ಚರ್ಚೆಗೆ ಬರುತ್ತೇನೆ ಎನ್ನುವವರನ್ನು ಬೇಡ ಎನ್ನಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಕನ್ನಡಿಗ ಶತಾವಧಾನಿ ಡಾ. ಆರ್. ಗಣೇಶ್‌ಗೆ ಪದ್ಮ ಭೂಷಣ; ಧರ್ಮೇಂದ್ರಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ

ಕನ್ನಡಿಗ ಶತಾವಧಾನಿ ಡಾ. ಆರ್. ಗಣೇಶ್‌ಗೆ ಪದ್ಮ ಭೂಷಣ

ಶತಾವಧಾನಿ ಆರ್‌. ಗಣೇಶ್‌ ಅವರಿಗೆ ಕಲೆ ವಿಭಾಗದಲ್ಲಿ ಪದ್ಮ ಭೂಷಣ ಪ್ರಶಸ್ತಿ ಲಭಿಸಿದೆ. ಇನ್ನು ಇತ್ತೀಚೆಗೆ ನಿಧನರಾದ ಬಾಲಿವುಡ್‌ನ ನಟ ಧರ್ಮೇಂದ್ರ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕಲೆ ಕ್ಷೇತ್ರದಲ್ಲಿ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಲಭಿಸಿದೆ. ಈ ಬಾರಿ ಒಟ್ಟು 5 ಪದ್ಮ ವಿಭೂಷಣ, 13 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.

Chimul Election: ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ ಚುನಾವಣೆಗೆ ಅಖಾಡ ಸಜ್ಜು

ಹಾಲು ಒಕ್ಕೂಟದ ನೂತನ ಆಡಳಿತ ಮಂಡಳಿಯ ಚುನಾವಣೆಗೆ ಅಖಾಡ ಸಜ್ಜು

ಜ.23ರಂದು ನಾಮಪತ್ರಗಳ ಪರಿಶೀಲನೆ ನಡೆದು ಒಂದು ಅರ್ಜಿ ಅಸಿಂಧುವಾಗಿತ್ತು. ಅದರಂತೆ 43 ಅರ್ಜಿಗಳಲ್ಲಿ ಶನಿವಾರ 3 ಗಂಟೆಯ ತನಕ ಉಮೇದುವಾರಿಕೆ ವಾಪಸ್ಸು ಪಡೆಯಲು ಅವಕಾಶವಿತ್ತು. ಇವೆಲ್ಲಾ ಹಂತಗಳ ನಡುವೆ ಕಣದಲ್ಲಿ 28 ಮಂದಿ ಉಳಿದಿದ್ದು ಚುನಾವಣೆ ಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಚಿನ್ಹೆಯನ್ನು ಕೂಡ ಶನಿವಾರ ನೀಡಲಾ ಗಿದ್ದು ಎಂ.ಎಲ್‌ಎ, ಎಂ.ಪಿ ಚುನಾವಣೆಯನ್ನು ನಾಚಿಸುವ ರೀತಿಯಲ್ಲಿ ಅಖಾಡ ಸಿದ್ಧವಾಗಿದೆ.

ಮೂವರು ಕನ್ನಡಿಗರು ಸೇರಿ 46 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ

ತೆರೆ ಮರೆಯ 46 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರಕಟ

Padma Awards 2026: ಜನವರಿ 25ರಂದು ಕೇಂದ್ರ ಸರ್ಕಾರ 2026ನೇ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಘೋಷಿಸಿದೆ. ತೆರೆಮರೆಯ ಸಾಧಕರನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕದ ʼಪುಸ್ತಕ ಮನೆʼ ಗ್ರಂಥಾಲಯ ಖ್ಯಾತಿಯ ಅಂಕೇ ಗೌಡ, ದಾವಣಗೆರೆಯ ವೈದ್ಯ ಡಾ. ಸುರೇಶ್‌ ಹನಗವಾಡಿ ಮತ್ತು ಬೆಂಗಳೂರಿನ ಸಮಾಜ ಸೇವಕಿ ಎಸ್‌.ಜಿ. ಸುಶೀಲಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

ರಾಜ್ಯದ ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ: ಡಿಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದ ಎಲ್ಲಾ ನಗರಗಳಲ್ಲಿ ಸಂಚಾರಿ ಗ್ರಿಡ್ ರೂಪಿಸಲು ಚಿಂತನೆ: ಡಿಸಿಎಂ

ದಾವೋಸ್ ಕಾರ್ಯಕ್ರಮದಲ್ಲಿ ಕೆಲವು ಕಂಪನಿಗಳು ಕರ್ನಾಟಕದ 2-3ನೇ ಹಂತದ ನಗರಗಳ ಬಗ್ಗೆಯೂ ಆಸಕ್ತಿ ಹೊಂದಿದ್ದು, ಈ ನಗರಗಳು ಪ್ರಕಾಶಮಾನವಾಗಿ, ಯುವ ಪ್ರತಿಭೆಗಳನ್ನು ಹೊಂದಿರಬೇಕು ಎಂದು ಚರ್ಚೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲಾ ನಗರ ಪ್ರದೇಶಗಳಿಗೆ ಸಂಚಾರ ಯೋಜನೆ ರೂಪಿಸಬೇಕು ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

Chimul Election: ಚಿಮುಲ್ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಒಳಪೈಪೋಟಿ : ಪುಟ್ಟು ಆಂಜಿನಪ್ಪಗೆ ವಿರೋಧ ಬಲ

ಚಿಮುಲ್ ಚುನಾವಣೆಗೂ ಮುನ್ನ ಕಾಂಗ್ರೆಸ್‌ನಲ್ಲಿ ಒಳಪೈಪೋಟಿ

ಚಿಮುಲ್ ನಿರ್ದೇಶಕ ಮಂಡಳಿ ಚುನಾವಣೆಯನ್ನು ಎದುರಿಸುವ ಸಂದರ್ಭದಲ್ಲಿ ಸಹ, ಸಮೂಹ ನಾಯಕತ್ವ ಮತ್ತು ಸಂಘಟಿತ ಪ್ರಯತ್ನಗಳ ಅಗತ್ಯವಿದ್ದರೂ, ಆಂಜಿನಪ್ಪ ಪುಟ್ಟು ಅವರನ್ನು ಮುಂದಿಟ್ಟು ತೋರಿಸುವ ಪ್ರಯತ್ನ ಪಕ್ಷದ ಒಗ್ಗಟ್ಟಿಗೆ ಧಕ್ಕೆ ತರುತ್ತಿದೆ ಎಂದು ಒಂದು ವರ್ಗ ಆಕ್ಷೇಪ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ನಲ್ಲಿ ಸಚಿವರ ಬಣ ಶಾಸಕರ ಬಣ ಎಂಬುದಿಲ್ಲ, ಡೆಲಿಗೇಟ್ಸ್ ಆಶೀರ್ವಾದ ಇದ್ದವರು ಗೆಲುವು ಸಾಧಿಸುವರು: ಭರಣಿ ವೆಂಕಟೇಶ್ ಅಭಿಮತ

ಕಾಂಗ್ರೆಸ್‌ನಲ್ಲಿ ಸಚಿವರ ಬಣ ಶಾಸಕರ ಬಣ ಎಂಬುದಿಲ್ಲ

ನಾನು ಕಳೆದ 6 ವರ್ಷಗಳಿಂದ ಹಾಲು ಒಕ್ಕೂಟದಲ್ಲಿ ಮತ್ತು ತಾಲೂಕಿನ 205 ಹಾಲು ಉತ್ಪಾ ದಕ ಸಹಕಾರ ಸಂಘಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೇನೆ. ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ಎಲ್ಲಾ ಹಾಲು ಉತ್ಪಾದಕ ರೈತ ಬಾಂದವರಿಗೆ ಗೊತ್ತಿದೆ.ನಾನು ಕೆಲಸ ಮಾಡಿರುವು ದರಿಂದ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ

Chimul Election: ಸಚಿವರ ಬೆಂಬಲದಿಂದ ಚಿಮುಲ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಗೆಲ್ಲುವ ವಿಶ್ವಾಸವಿದೆ: ಕೆ.ಆರ್.ರಾಜಣ್ಣ

ಚಿಮುಲ್ ಚುನಾವಣೆಗೆ ಸ್ಪರ್ಧೆ ಮಾಡಿದ್ದು ಗೆಲ್ಲುವ ವಿಶ್ವಾಸವಿದೆ

ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಚುನಾವಣೆ ಸಂಬಂಧ ಉಮೇದುವಾರಿಕೆ ವಾಪಸ್ಸು ಪಡೆ ಯಲು ಶನಿವಾರ ಅಂತಿಮ ದಿನವಾಗಿತ್ತು. ಈ ದಿನವೇ ಕಣದಲ್ಲಿರುವ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ಮತ್ತು ಚಿನ್ಹೆ ನೀಡಲಾಗಿದೆ. ಅದರಂತೆ ನನ್ನ ಕ್ರಮಸಂಖ್ಯೆ 02 ಮತ್ತು ಚಿನ್ಹೆ ಫ್ರೆಷರ್ ಕುಕ್ಕರ್ ಆಗಿದೆ.

ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶ; ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶ; ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶವಿದೆ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ತಿಳಿಸಿದರು. ಅವರು‌ ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತದಿಂದ ಗೌರವ ವಂದನೆ ಸ್ವೀಕರಿಸಿ, ಮಾಧ್ಯಮದವರ ಜೊತೆ ಮಾತನಾಡಿದರು.‌ ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ವಾತಾವರಣವಿದೆ. ಕೌಶಲ್ಯವಿರುವ ಮಾನವ ಸಂಪನ್ಮೂಲ ಲಭ್ಯತೆಯಿದೆ. ಇದಕ್ಕೆ ತರಬೇತಿಯೂ ನೀಡಲಾಗುತ್ತಿದೆ ಎಂದು ಹೇಳಿದರು.

Kalaburagi Fort: ಇಚ್ಛಾಶಕ್ತಿ ಕೊರತೆ: ಅವನತಿಯತ್ತ ಕಲಬುರಗಿ ಕೋಟೆ

ಇಚ್ಛಾಶಕ್ತಿ ಕೊರತೆ: ಅವನತಿಯತ್ತ ಕಲಬುರಗಿ ಕೋಟೆ

ಸ್ಮಾರಕದ ಒಳಭಾಗದಲ್ಲೇ ಅಕ್ರಮ ವಾಸಿಗಳಿಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ. ಇದು ಅತಿಕ್ರಮಣ ಕ್ಕೆ ನೇರ ಬೆಂಬಲ ನೀಡಿದಂತೆ ಎನ್ನುವ ಟೀಕೆಗಳು ಕೇಳಿಬರುತ್ತಿವೆ. ಕೆಲವರ ಇಚ್ಛಾಶಕ್ತಿಯ ಕೊರತೆಯಿಂದ, ವಿಶ್ವವಿಖ್ಯಾತವಾಗಬೇಕಿದ್ದ ಐತಿಹಾಸಿಕ ಪರಂಪರೆಗೆ ಅನ್ಯಾಯ ವಾಗುತ್ತಿರುವುದು ನಿರಾಕರಣೀಯ ಸತ್ಯ.

ʼಪುಸ್ತಕ ಮನೆʼ ಖ್ಯಾತಿಯ ಕನ್ನಡಿಗ ಅಂಕೇ ಗೌಡಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ

ಕನ್ನಡಿಗ ಅಂಕೇ ಗೌಡಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟ

ಭಾರತ ಸರ್ಕಾರದ ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಈ ಪೈಕಿ ಕನ್ನಡಿಗೆ ಅಂಕೇಗೌಡ ಅವರಿಗೆ ಪದ್ಮಶ್ರೀ ಘೋಷಿಸಲಾಗಿದೆ. ಮೈಸೂರು ಮೂಲದ ಇವರು 20 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಇವರು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Mahakutumba: ಗೋಳಿಕೈ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ

ಗೋಳಿಕೈ ಗಣಪತಿ ಹೆಗಡೆಯವರಿಗೆ ಕನಕಾಭಿಷೇಕ

ಒಬ್ಬ ವ್ಯಕ್ತಿಗೆ ಮರಿ ಮಗ ಹುಟ್ಟಿ, ಆ ಮಗುವಿಗೆ ನಾಮಕರಣವಾದ ನಂತರ ಈ ಆಚರಣೆ ನಡೆಯುತ್ತದೆ. ಅಂದರೆ, ಒಬ್ಬ ವ್ಯಕ್ತಿ ತನ್ನ ಮಗನ ಮಗನನ್ನು ನೋಡಿದಾಗ ಇದು ನಡೆಯುತ್ತದೆ. ಸಾಮಾನ್ಯವಾಗಿ 90 ರಿಂದ 100 ವರ್ಷಗಳ ಸುದೀರ್ಘ ಆಯುಷ್ಯವನ್ನು ಹೊಂದಿದವರಿಗೆ ಈ ಗೌರವ ಸಲ್ಲಿಕೆಯಾಗುತ್ತದೆ.

ಬೆಳಗಾವಿಯಲ್ಲಿ ನಡೀತು ದೇಶದಲ್ಲಿಯೇ ಅತ್ಯಂತ ದೊಡ್ಡ ದರೋಡೆ; 400 ಕೋಟಿ  ರಾಬರಿ!

ಬೆಳಗಾವಿಯಲ್ಲಿ ನಡೀತು ದೇಶದಲ್ಲಿಯೇ ಅತ್ಯಂತ ದೊಡ್ಡ ದರೋಡೆ!

Maharashtra Robbery Case: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Honorary Award: ಸಾಧಕ ಮಹನೀಯರಿಗೆ ಪುರಸ್ಕಾರದ ಗೌರವ

Honorary Award: ಸಾಧಕ ಮಹನೀಯರಿಗೆ ಪುರಸ್ಕಾರದ ಗೌರವ

ಉತ್ತರ ಕನ್ನಡ ಜಿಲ್ಲೆಯ ಪ್ರಪ್ರಥಮ ದೈನಿಕ ಲೋಕಧ್ವನಿಯು ಜಿಲ್ಲೆಯ ಪತ್ರಿಕೋದ್ಯಮ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್‌ ನಲ್ಲಿ ನಮ್ಮ ಹೆಮ್ಮೆಯ ಸಾಧಕರು ಪ್ರಶಸ್ತಿ ಪ್ರದಾನ ಎಂಬ ಕಾರ್ಯಕ್ರಮವನ್ನು ಆಯೋಜಿ ಸಿತ್ತು. ಉತ್ತರ ಕನ್ನಡ, ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಪ್ರಶಸ್ತಿ ನೀಡಿ ಗೌರವಿಸಿದರು.

ಕೆಎಂಎಫ್‌ನಿಂದ ಗುಡ್‌ ನ್ಯೂಸ್‌; 10ರೂ. ಸಿಗುತ್ತೆ, ನಂದಿನಿ ಹಾಲು, ಮೊಸರು

ಕೆಎಂಎಫ್‌ನಿಂದ ಗುಡ್‌ ನ್ಯೂಸ್‌; 10ರೂ. ಸಿಗುತ್ತೆ, ನಂದಿನಿ ಹಾಲು, ಮೊಸರು

ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದು, ಬೆಲೆ ಏರಿಕೆಯ ನಡುವೆ ಕಂಗಾಲಾಗಿದ್ದ ಸಾಮಾನ್ಯ ಜನರಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮತ್ತು ಮೊಸರು ಇನ್ಮುಂದೆ ಕೇವಲ 10 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

ಮಾದಪ್ಪನ ದರ್ಶನಕ್ಕೆ ತೆರಳುವವರೇ ಗಮನಿಸಿ; ಮಲೆ ಮಹದೇಶ್ವರದಲ್ಲಿ ಹೊಸ ರೂಲ್ಸ್‌ ಜಾರಿ

ಭಕ್ತರಿಗೆ ಮಲೆ ಮಹದೇಶ್ವರದಲ್ಲಿ ಹೊಸ ರೂಲ್ಸ್‌ ಜಾರಿ

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಭಕ್ತನೊಬ್ಬ ಬಲಿಯಾದ ಘಟನೆ ಹಿನ್ನೆಲೆ, ಚಾಮರಾಜನಗರ ಜಿಲ್ಲಾಡಳಿತ ಪಾದಯಾತ್ರಿಕರು ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಸಂಬಂಧಿಸಿದಂತೆ ಹೊಸ ಆದೇಶವನ್ನು ಹೊರಡಿಸಿದೆ. ಮಾದಪ್ಪನ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.

ʼವಿಶ್ವವಾಣಿʼಯಂತೆ ʼಲೋಕಧ್ವನಿʼಯೂ ಬೆಳಗಲಿ

ʼವಿಶ್ವವಾಣಿʼಯಂತೆ ʼಲೋಕಧ್ವನಿʼಯೂ ಬೆಳಗಲಿ

ವಿಶ್ವೇಶ್ವರ ಭಟ್ಟರು ಉತ್ತರ ಕನ್ನಡದ ಪ್ರಮುಖ ಪತ್ರಿಕೆಯಾಗಿರುವ ಲೋಕಧ್ವನಿಯ ಸಾರಥ್ಯ ವಹಿಸಿಕೊಂಡ ಬಳಿಕ ಈ ಪತ್ರಿಕೆಯನ್ನು ಕೊಪ್ಪಳಕ್ಕೂ ವಿಸ್ತರಿಸಿದ್ದಾರೆ. ಶೀಘ್ರದಲ್ಲಿಯೇ ಮೈಸೂರಿನಲ್ಲಿಯೂ ಆರಂಭಿಸುವುದಾಗಿ ಹೇಳಿದ್ದಾರೆ. ಆದ್ದರಿಂದ ಲೋಕಧ್ವನಿ ಜಿಲ್ಲಾಮಟ್ಟದ ಪತ್ರಿಕೆಯಾಗಿ ಉಳಿದಿಲ್ಲ. ಬದಲಿಗೆ ಅದೂ ಸಹ ರಾಜ್ಯಮಟ್ಟದ ಪತ್ರಿಕೆ ಯಾಗುವತ್ತ ಸಾಗುತ್ತದೆ.

Achievers: ನಾಡಿನ ಸಾಧಕರಿಗೆ ʼಲೋಕಧ್ವನಿʼಯ ಗೌರವ

Achievers: ನಾಡಿನ ಸಾಧಕರಿಗೆ ʼಲೋಕಧ್ವನಿʼಯ ಗೌರವ

ವಿಭಿನ್ನ ಸುದ್ದಿಯ ಮೂಲಕವೇ ಜನಜನಿತವಾಗಿರುವ ಲೋಕಧ್ವನಿ, ತೆರೆಮರೆಯ ಸಾಧಕ ರನ್ನು ಗುರುತಿಸುವ ನಿಟ್ಟಿನಲ್ಲಿ ‘ಲೋಕಧ್ವನಿ ಹೆಮ್ಮೆಯ ಸಾಧಕ -2026’ ನೀಡಲಾಯಿತು. ಎಲೆಮರೆಯ ಕಾಯಿಗಳಂತೆ ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಿರುವ ಕರುನಾಡಿನ ಸಾಧಕರನ್ನು ಪರಿಚಯಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿತ್ತು.

Loading...