ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ; ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ; ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

Narendra Modi: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾಳೆ (ನವೆಂಬರ್ 13, ಶುಕ್ರವಾರ) ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಮ್ಮ ಮೆಟ್ರೋದ ಬಹುನಿರೀಕ್ಷಿತ 'ಗುಲಾಬಿ ಮಾರ್ಗ' ಉದ್ಘಾಟನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

ರಾಜ್ಯಾದ್ಯಂತ ಚಳಿ ವಾತಾವರಣ; ಕರಾವಳಿಯಲ್ಲಿ ಒಣ ಹವೆ

ರಾಜ್ಯಾದ್ಯಂತ ಚಳಿ ವಾತಾವರಣ; ಕರಾವಳಿಯಲ್ಲಿ ಒಣ ಹವೆ

ಕರ್ನಾಟಕದಾದ್ಯಂತ ಸದ್ಯ ಒಣ ಹವಾಮಾನ ಮುಂದುವರಿದಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ಗಮನಾರ್ಹವಾಗಿ ಹೆಚ್ಚಾಗಿದೆ. ಇನ್ನು ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲೂ ಒಣ ಹವೆ ಇರಲಿದೆ.

Kannada Sahitya Sammelana: ಗಡಿನಾಡಿನಲ್ಲಿ ಕನ್ನಡ ಸಾಹಿತ್ಯದ ಕಂಪು; 5 ಸಾವಿರ ಜನರ ನಿರೀಕ್ಷೆ: ಗೊಲ್ಲಹಳ್ಳಿ ಶಿವಪ್ರಸಾದ್ ಸಮ್ಮೇಳನಾಧ್ಯಕ್ಷ

ನ.19ರಿಂದ ಚಿಂತಾಮಣಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಸಮ್ಮೇಳನದ ಯಶಸ್ಸಿಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾ ಗಿದೆ. ವೇದಿಕೆ ನಿರ್ಮಾಣ, ಕವಿಗೋಷ್ಠಿ, ಪುಸ್ತಕ ಪ್ರದರ್ಶನ, ಮೆರವಣಿಗೆ, ಅಲಂಕಾರ, ಆಸನ ವ್ಯವಸ್ಥೆ, ಪೊಲೀಸ್ ಭದ್ರತೆ, ಆಹ್ವಾನ ಪತ್ರಿಕೆಗಳ ಮುದ್ರಣ ಮತ್ತು ವಿತರಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಶಿಷ್ಟಾಚಾರ ಪಾಲನೆಯೊಂದಿಗೆ ಕಾರ್ಯಕ್ರಮ ಗಳು ಸುಗಮವಾಗಿ ನಡೆಯುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು

Bengaluru Metro Pink Line: ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ನ.14ಕ್ಕೆ ವಾಣಿಜ್ಯ ಸಂಚಾರ ಆರಂಭ; ರೈಲು ವೇಳಾಪಟ್ಟಿ ಇಲ್ಲಿದೆ

ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ನ.14ಕ್ಕೆ ವಾಣಿಜ್ಯ ಸಂಚಾರ ಆರಂಭ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 13 ರಂದು ನಮ್ಮ ಮೆಟ್ರೋದ ಪಿಂಕ್ ಲೈನ್ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಅವರು ತಾವರೆಕೆರೆಯಿಂದ ಐಐಎಂಬಿ-ಬಿಳೇಕಹಳ್ಳಿ ನಿಲ್ದಾಣದವರೆಗೆ ಪ್ರಯಾಣಿಸಿ ಈ ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಮಾರ್ಗ ಕಾರ್ಯಾರಂಭಗೊಂಡರೆ ಬನ್ನೇರುಘಟ್ಟ ರಸ್ತೆ, ಐಐಎಂಬಿ, ಜೆಪಿ ನಗರ ಹಾಗೂ ಜಯದೇವ ಆಸ್ಪತ್ರೆ ಭಾಗದ ಪ್ರಯಾಣಿಕರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗಲಿದೆ.

Onake Obavva Jayanti: ಒನಕೆ ಓಬವ್ವರ ಸಾಹಸ, ಸ್ವಾಮಿಭಕ್ತಿ, ಕಾರ್ಯತತ್ಪರತೆ ಇಂದಿನ ಮಹಿಳೆಯರಿಗೆ ಮಾದರಿ: ಜಿಲ್ಲಾಧಿಕಾರಿ ಜಿ. ಪ್ರಭು

ಒನಕೆ ಓಬವ್ವರ ಕಾರ್ಯತತ್ಪರತೆ ಇಂದಿನ ಮಹಿಳೆಯರಿಗೆ ಮಾದರಿ

ಮದಕರಿ ನಾಯಕನ ಆಳ್ವಿಕೆಯ ಸಂದರ್ಭದಲ್ಲಿ ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಕೋಟೆಯ ಕಿಂಡಿಯ ಮೂಲಕ ನುಸುಳುತ್ತಿದ್ದ ಶತ್ರು ಸೈನಿಕರನ್ನು ಗಮನಿಸಿದ ಓಬವ್ವ ಯಾವುದೇ ಭಯವಿಲ್ಲದೆ ಒನಕೆಯನ್ನೇ ಆಯುಧ ವನ್ನಾಗಿಸಿಕೊಂಡು ಎದುರಿಸಿ ದಳು. ಕೋಟೆಯ ರಕ್ಷಣೆಗೆ ಆಕೆ ತೋರಿದ ಧೈರ್ಯ ಮತ್ತು ಸಮಯ ಪ್ರಜ್ಞೆಯೇ ಓಬವ್ವ ಜಯಂತಿ ಆಚರಣೆಯ ಹಿಂದಿನ ಪ್ರೇರಣೆಯಾಗಿದೆ ಎಂದರು.

ಹಾಸನ ಡಿಸಿ ಕಚೇರಿಯಲ್ಲಿ ಭ್ರಷ್ಟಾಚಾರ; ಸಿಎಂ ತನಿಖೆ ಮಾಡಿಸದೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಎಂದು ಎಚ್‌ಡಿಕೆ ಕಿಡಿ

ಸಿಎಂ ತನಿಖೆ ಮಾಡಿಸದೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ: ಎಚ್‌ಡಿಕೆ ಕಿಡಿ

HD Kumaraswamy: ಸಾರ್ವಜನಿಕರು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಮೊಬೈಲ್ ಕರೆ ಮಾಡಿ ದೂರು ಕೊಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ ಆರೋಪ ಕೇಳಿ ಬಂದಾಕ್ಷಣ ತನಿಖೆಗೆ ಆದೇಶ ನೀಡಿದೆ ಆರೋಪಿತರಿಗೆ ಕ್ಲೀನ್ ಚಿಟ್ ಕೊಟ್ಟು ಉಪಕರಿಸಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಉಡುಪಿ ಯುವ ಮುಖಂಡ ಅಜಯ್‌ ಪುರುಷೋತ್ತಮ್‌ ಶೆಟ್ಟಿ; ಕೃಷ್ಣನ ವಿಗ್ರಹ ಉಡುಗೊರೆ

ಪ್ರಧಾನಿ ಮೋದಿ ಭೇಟಿಯಾದ ಯುವ ಮುಖಂಡ ಅಜಯ್‌ ಶೆಟ್ಟಿ

PM Narendra Modi: ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಡುಪಿಯ ಯುವ ಮುಖಂಡ ಅಜಯ್‌ ಪುರುಷೋತ್ತಮ್‌ ಶೆಟ್ಟಿ ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಮೋದಿ ಅವರಿಗೆ ಅಜಯ್‌ ಶೆಟ್ಟಿ ಉಡುಪಿ ಕೃಷ್ಣನ ವಿಗ್ರಹ ನೀಡಿದರು.

Bengaluru Accident: ಬೆಂಗಳೂರಿನಲ್ಲಿ ಘೋರ ಘಟನೆ; 4 ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿಯನ್ನು ಬಲಿ ಪಡೆದ ಲಾರಿ!

4 ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿಯನ್ನು ಬಲಿ ಪಡೆದ ಲಾರಿ!

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸ್ಕೂಟರ್​ಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಬುಧವಾರ ಮಧ್ಯಾಹ್ನ ದೀಪಾಂಜಲಿ ಮೆಟ್ರೋ ನಿಲ್ದಾಣ ಬಳಿ ಈ ದುರಂತ ನಡೆದಿದ್ದು, ಅಪಘಾತದ ಬಳಿಕ ಲಾರಿ ಬಿಟ್ಟು ಪರಾರಿಯಾಗಿದ್ದ ಚಾಲಕನನ್ನು ಬ್ಯಾಟರಾಯನಪುರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Winter Session in Belagavi: ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ 7 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ಚಳಿಗಾಲ ಅಧಿವೇಶನ: 7 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಬಾರಿ ಚಳಿಗಾಲ ಅಧಿವೇಶನ ಡಿಸೆಂಬರ್ 02 ರಿಂದ 11 ರ ವರೆಗೆ ಒಂಬತ್ತು ದಿನಗಳ ಕಾಲ ನಡೆಸಲು ನಿರ್ಧರಿಸ ಲಾಗಿದೆ. ಭದ್ರತೆ ದೃಷ್ಟಿಯಿಂದ ನಾಲ್ವರು ಐಪಿಎಸ್ ಅಧಿಕಾರಿಗಳು 11 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 35 ಡಿಎಸ್ ಪಿ / ಎಸಿಪಿ, 90 ಸಿಪಿಐ, 200 ಪಿಎಸ್ಐ, 35 ಕೆಎಸ್ಆರ್ ಪಿ ತುಕಡಿ ಸೇರಿದಂತೆ ಒಟ್ಟು 7 ಸಾವಿರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸ ಲಾಗುತ್ತಿದೆ.

ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ನನ್ನ ಮುಖ್ಯ ಗುರಿ: ಶಾಸಕ ಕೆ.ಎನ್. ರಾಜಣ್ಣ

ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದೇ ನನ್ನ ಮುಖ್ಯ ಗುರಿ: ಕೆ.ಎನ್. ರಾಜಣ್ಣ

Madhugiri News: ಈ ಹಿಂದೆ ಎಸ್.ಎಂ.ಕೃಷ್ಣ ಬಡಾವಣೆ ಹಾಗೂ ಕರಡಿಪುರದಲ್ಲಿ ಸಂಚಾರ ಮಾಡುವುದಕ್ಕೂ ಕಷ್ಟಕರವಾಗಿತ್ತು. ನಾನು ಶಾಸಕನಾದ ಮೇಲೆ ಆಧ್ಯತೆ ಮೇರೆಗೆ ರಸ್ತೆ , ಚರಂಡಿ ನಿರ್ಮಾಣವಾಗಿದೆ. ಈ ವಾರ್ಡ್ ಬಹಳ ದೊಡ್ಡದಾಗಿದೆ. ಮತ್ತಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಶಾಸಕ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

BJP Protest: ಕಾಂಗ್ರೆಸ್ ಸರ್ಕಾರ ಯಾವುದಕ್ಕೆ ಬೆಲೆ ಏರಿಸಿಲ್ಲವೆಂದು ಹುಡುಕೋದೆ ಕಷ್ಟ: ಛಲವಾದಿ ನಾರಾಯಣಸ್ವಾಮಿ ಲೇವಡಿ

ಯಾವುದಕ್ಕೆ ಬೆಲೆ ಏರಿಸಿಲ್ಲವೆಂದು ಹುಡುಕೋದೆ ಕಷ್ಟ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಚೂರಿ ಕಳಿಸುತ್ತಾರೆ. ಕಾಂಗ್ರೆಸ್ಸಿನ ಸಂಸ್ಕೃತಿಯೇ ಚಾಕು, ಚೂರಿ ಸಂಸ್ಕೃತಿ ಎಂದು ಟೀಕಿಸಿರುವ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, 2028ರಲ್ಲಿ ರಾಜ್ಯದ ಜನರು ಮನಸ್ಸು ಮಾಡಿದರೆ ಇವರನ್ನು ಅರಬ್ಬಿ ಸಮುದ್ರದಲ್ಲಿ ಹುಡುಕಿದರೂ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.

Green SM EV cab service: ಬೆಂಗಳೂರಿನಲ್ಲಿ ವಿಯೆಟ್ನಾಂನ ಗ್ರೀನ್ ಎಸ್‌ಎಂ ಇವಿ ಕ್ಯಾಬ್‌ ಸೇವೆಗೆ ಸಿಕ್ತು ಲೈಸೆನ್ಸ್‌; ಚಾಲಕರ ಸಂಘಟನೆಗಳಿಂದ ಭಾರಿ ವಿರೋಧ

ಬೆಂಗಳೂರಲ್ಲಿ ವಿಯೆಟ್ನಾಂನ ಗ್ರೀನ್ ಎಸ್‌ಎಂ EV ಕ್ಯಾಬ್‌ ಸೇವೆಗೆ ಲೈಸೆನ್ಸ್‌

ಕಡಿಮೆ ದರದಲ್ಲಿ ಕ್ಯಾಬ್‌ ಸೇವೆ ನೀಡಲು ಸಾವಿರಾರು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುತ್ತಿರುವುದು ಸ್ಥಳೀಯ ಆಟೋ ಹಾಗೂ ಸ್ವಂತ ಕಾರು ಇಟ್ಟುಕೊಂಡು ಕ್ಯಾಬ್ ಓಡಿಸುವ ಚಾಲಕರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಗ್ರೀನ್‌ ಎಸ್‌ಎಂ ಇವಿ ಕ್ಯಾಬ್‌ ಸೇವೆಗೆ ಬೆಂಗಳೂರನಲ್ಲಿ ಚಾಲಕರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಪಟಾಕಿ ಸಿಡಿಸುವಿಕೆಯಿಂದ ಕಣ್ಣಿನ ಗಾಯ: 12 ಪ್ರಕರಣಗಳಿಗೆ ಚಿಕಿತ್ಸೆ, ಆರು ರೋಗಿಗಳು ಅಪ್ರಾಪ್ತರು

ಪಟಾಕಿ ಸಿಡಿಸುವಿಕೆಯಿಂದ ಕಣ್ಣಿನ ಗಾಯ: ಆರು ರೋಗಿಗಳು ಅಪ್ರಾಪ್ತರು

ನೇತ್ರಧಾಮ ಆಸ್ಪತ್ರೆಯಲ್ಲಿ ಪಟಾಕಿ ಸಿಡಿಸುವಿಕೆಯಿಂದ ಉಂಟಾದ ಕಣ್ಣಿನ ಗಾಯ ಗಳಿಗೆ ಸಂಬಂಧಿಸಿ ಒಟ್ಟು 12 ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಪೈಕಿ 8 ಪ್ರಕರಣಗಳು ಮಂಗಳವಾರ ವರದಿಯಾಗಿವೆ. 12 ಪ್ರಕರಣಗಳಲ್ಲಿ ಆರು ರೋಗಿಗಳು ಅಪ್ರಾಪ್ತ ವಯಸ್ಕರಾಗಿದ್ದು, ಅವರಲ್ಲಿ ಐದು ವರ್ಷದ ಬಾಲಕಿ ಅತ್ಯಂತ ಕಡಿಮೆ ವಯಸ್ಸಿನವರಾಗಿದ್ದಾರೆ.

BJP Protest: ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ; ಕಾಂಗ್ರೆಸ್‌ ಸರ್ಕಾರ ದಿವಾಳಿಯಾಗಿದೆ ಎಂದು ಬಿಎಸ್‌ವೈ ವಾಗ್ದಾಳಿ

ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್‌ ಸರ್ಕಾರವು ಒಂದು ಕಡೆ ಉಚಿತ ಭಾಗ್ಯ ಎನ್ನುತ್ತಾ, ಇನ್ನೊಂದು ಕಡೆ ಖಚಿತ ಬೆಲೆ ಏರಿಕೆಯ ರಾಜ್ಯದ ಜನರಿಗೆ ನರಕ ತೋರಿಸುತ್ತಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಅರೆನಾ ಆನಿಮೇಷನ್‌ನ ನೂತನ ಕೇಂದ್ರ ಆರಂಭ: ಆಧುನಿಕ ಸೌಲಭ್ಯಗಳೊಂದಿಗೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯ

ಯಲಹಂಕದಲ್ಲಿ ಅರೆನಾ ಆನಿಮೇಷನ್‌ನ ನೂತನ ಕೇಂದ್ರ ಆರಂಭ

ಭಾರತದ ಪ್ರಮುಖ ಆನಿಮೇಷನ್ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಅರೆನಾ ಆನಿಮೇಷನ್, ಯಲಹಂಕ ನ್ಯೂ ಟೌನ್‌ನಲ್ಲಿ ತನ್ನ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಿದೆ. ಅರೆನಾ ಆನಿಮೇಷನ್‌ನ ಹಿರಿಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಮಾರಾಟ ವಿಭಾಗದ ಮುಖ್ಯಸ್ಥ ಶಾಜನ್ ಸ್ಯಾಮ್ಯುಯೆಲ್ ಅವರು ಕೇಂದ್ರವನ್ನು ಉದ್ಘಾಟಿಸಿದರು.

ಬರ ಪರಿಹಾರ ಎರಡು ಕಂತಿನಲ್ಲಿ 5000 ರೂ. ಖಚಿತ; ಈಗಾಗಲೇ ಮೊದಲ ಕಂತು 2500 ರೂ. ಬಿಡುಗಡೆ ಆಗಿದೆ ಎಂದ ಸಿಎಂ

ಬರ ಪರಿಹಾರ ಎರಡು ಕಂತಿನಲ್ಲಿ 5000 ರೂ. ಖಚಿತ: ಸಿಎಂ ಡಿಕೆಶಿ

CM DK Shivakumar: ಒಂದೇ ಬಟನ್ ಮೂಲಕ ಎಲ್ಲಾ ರೈತರ ಖಾತೆಗೂ ಹಣ ವರ್ಗಾವಣೆಯಾಗುತ್ತಿದೆ. ಆದರೆ ಕೆಲವು ಬ್ಯಾಂಕ್ ಖಾತೆಗಳು ಸರಿಯಾಗಿಲ್ಲ ಹಾಗೂ ಸಾಲದ ಬಾಬತ್ತಿಗೆ ಲಿಂಕ್ ಆಗಿದೆ. ಎಲ್ಲದರ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ಮೊತ್ತ ಶೀಘ್ರ ಪಾವತಿಸಲಾಗುವುದು ಎಂದು ಸಿಎಂ‌ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

SC ST Reservation: ಎಸ್‌ಸಿ, ಎಸ್‌ಟಿ ಮೀಸಲಾತಿ ರಕ್ಷಣೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ; ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ

SC-ST ಮೀಸಲಾತಿ ರಕ್ಷಣೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ

SC, ST reservation: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಕರ್ನಾಟಕದ ಹಿಂದುಳಿದ ಸಮುದಾಯಗಳ ಹಕ್ಕುಗಳು, ಭವಿಷ್ಯದ ಯಾವುದೇ ಕಾನೂನು ಸವಾಲುಗಳಿಂದ ಅಲುಗಾಡದಂತೆ ಬಲವಾದ ಅಡಿಪಾಯದ ಮೇಲೆ ನಿಲ್ಲಲು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಮತ್ತು ಕೇಂದ್ರ ಸರ್ಕಾರದೊಂದಿಗೆ ಸಂವಿಧಾನ ತಿದ್ದುಪಡಿ ಸೇರಿಸುವ ಪ್ರಯತ್ನಗಳನ್ನು ಒಟ್ಟಿಗೆ ಮುಂದುವರಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Praja Seve: ಕಳೆದ ವರ್ಷ 5 ಸಾವಿರಕ್ಕೂ ಅಧಿಕ ಪ್ರಕರಣಗಳ ಇತ್ಯರ್ಥ; ನಿವೇಶನ ರಹಿತರಿಗೆ 1,800 ಎಕರೆ ಪ್ರದೇಶದಲ್ಲಿ ನಿವೇಶನ ಸಿದ್ಧತೆ; ಜಿಲ್ಲೆಯ ಏಳು ಕಡೆ ಆಂದೋಲನ

ಪ್ರಜಾಸೇವೆ ಆಂದೋಲನದಲ್ಲಿ 656 ಅರ್ಜಿ ಸ್ವೀಕಾರ

ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಸುಮಾರು 5,000ಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಈ ಹಿಂದೆ ಸಾರ್ವಜನಿಕರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಿದರೂ, ಅವುಗಳ ವಿಲೇವಾರಿ ಪ್ರಕ್ರಿಯೆ ಹಾಗೂ ಪ್ರಸ್ತುತ ಸ್ಥಿತಿಗತಿ ತಿಳಿದುಕೊಳ್ಳುವುದು ಕಷ್ಟ ವಾಗುತ್ತಿತ್ತು.

ನಾಡಿನ ಸಾರಸ್ವತ ಲೋಕಕ್ಕೆ ಬಳ್ಳಾರಿ ಜಿಲ್ಲೆ ತನ್ನದೇ ಅದ ಕೊಡುಗೆ ನೀಡಿದೆ: ಸಂಸದ ಈ. ತುಕಾರಾಂ

ಸಂಡೂರಿನಲ್ಲಿ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಭವನ ಉದ್ಘಾಟನೆ

ಸಂಡೂರು ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ಸಭಾಭವನದ ಶಂಕುಸ್ಥಾಪನೆಯನ್ನು ಸಂಸದ ಈ. ತುಕಾರಾಂ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ನಾಡು ನುಡಿ ಸಂಸ್ಕೃತಿಯು ಅತ್ಯಂತ ಶ್ರೀಮಂತವಾಗಿದ್ದು ಇದನ್ನು ಮುಂದಿನ ಪೀಳಿಗೆ ಉಳಿಸಿ, ಬಳಸಿ ಹಾಗೂ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದ್ದಾರೆ.

2027ರಲ್ಲಿ ಮೂರು ದಿನಗಳ 'ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ' ಆಯೋಜನೆ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

2027ರಲ್ಲಿ ಮೂರು ದಿನಗಳ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ: ಸಿಎಂ

Vishwa kannada sahitya sammelana: ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿದೇಶಗಳಲ್ಲಿಯೂ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ.

‘ಕರುನಾಡ ವೈಭವ 2026’ ಕಾರ್ಯಕ್ರಮ; ಕರ್ನಾಟಕ ಸಂಘ ಕತಾರ್‌ನಿಂದ ಸಂಸದ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಸನ್ಮಾನ

ಕತಾರ್‌ನಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ದಂಪತಿಗೆ ಸನ್ಮಾನ

ʼಕರ್ನಾಟಕ ಸಂಘ ಕತಾರ್’ ಆಯೋಜಿಸಿದ್ದ ‘ಕರುನಾಡ ವೈಭವ 2026’ ಸಾಂಸ್ಕೃತಿಕ ಸಮ್ಮೇಳನದ ವೇದಿಕೆಯಲ್ಲಿ, ಖ್ಯಾತ ಹೃದ್ರೋಗ ತಜ್ಞರು ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ ಮತ್ತು ಅನಸೂಯಾ ಮಂಜುನಾಥ್ ದಂಪತಿಯನ್ನು ಕತಾರ್ ಕನ್ನಡಿಗರ ವತಿಯಿಂದ ಗೌರವಿಸಿ, ಸನ್ಮಾನಿಸಲಾಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ: ನಾಡಿನ ಏಳಿಗೆಗೆ  ಶ್ರಮಿಸಿದ ಕರ್ಮಯೋಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ

ನಾಡಿನ ಏಳಿಗೆಗೆ ಶ್ರಮಿಸಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ

Balagangadharanatha Swamiji: ಕರ್ನಾಟಕದ ಧಾರ್ಮಿಕ ಪ್ರವಾಸೋದ್ಯಮದ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಆದಿಚುಂಚನಗಿರಿ, ಭಕ್ತಿ, ಪುರಾಣ, ಇತಿಹಾಸ, ಶಿಲ್ಪಕಲೆ ಮತ್ತು ಪ್ರಕೃತಿಯ ಸೊಬಗನ್ನು ಒಂದೇ ನೆಲೆಯಲ್ಲಿ ಪರಿಚಯಿಸುವ ಪವಿತ್ರ ಕ್ಷೇತ್ರ. ಈ ಕ್ಷೇತ್ರದ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ಸಿಂಗಾಪುರದಲ್ಲಿ ಕನ್ನಡ ಸಾಹಿತ್ಯ ಬೆಳೆಸಿದ ಉಮ್ಮತ್ತೂರು ರೇವಣ್ಣರ ಎರಡು ಹೊಸ ಕೃತಿ ನ.14ಕ್ಕೆ ಲೋಕಾರ್ಪಣೆ

ನ.14ಕ್ಕೆ ಉಮ್ಮತ್ತೂರು ರೇವಣ್ಣರ ಎರಡು ಹೊಸ ಕೃತಿ ಲೋಕಾರ್ಪಣೆ

Ummathur Revanna's Books: ಉಮ್ಮತ್ತೂರು ರೇವಣ್ಣ ಅವರ 'ಕಾಯಕವೇ ಕೈಲಾಸ' ನಾಟಕ ಹಾಗೂ ಕಲ್ಯಾಣದ ಕಹಳೆಗಳು ವಚನಕಾರರ ಜೀವನಾಧಾರಿತ ವ್ಯಕ್ತಿಚಿತ್ರಣ ಸಂಕಲನ ಬಿಡುಗಡೆ ಕಾರ್ಯಕ್ರಮ ನವೆಂಬರ್‌ 14ರಂದು ಮೈಸೂರಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕಳವಾಗಿದ್ದ ಸೋಮಯ್ಯರ ಒಲಿಂಪಿಕ್ಸ್‌ ಚಿನ್ನದ ಪದಕ ಸೇರಿ ಕ್ರೀಡಾ ಗೌರವ ಪತ್ತೆ; ಇಬ್ಬರ ಬಂಧನ

ಕಳವಾಗಿದ್ದ ಸೋಮಯ್ಯರ ಒಲಿಂಪಿಕ್ಸ್‌ ಚಿನ್ನದ ಪದಕ ಪತ್ತೆ

M. M. Somaya: ಸೋಮಯ್ಯ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಸೋಮಯಾ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರವನ್ನೂ ಬರೆದಿದ್ದರು.

Loading...