ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಇಂಡಿಯಾವುಡ್: ವುಡ್ವರ್ಕಿಂಗ್ ಮತ್ತು ಫರ್ನಿಚರ್ ಉತ್ಪಾದನೆಯಲ್ಲಿ ಭಾರತದ ಬೆಳವಣಿಗೆಗೆ ಹೊಸ ವೇಗ

ಫರ್ನಿಚರ್ ಉತ್ಪಾದನೆಯಲ್ಲಿ ಭಾರತದ ಬೆಳವಣಿಗೆಗೆ ಹೊಸ ವೇಗ

ಇತಿಹಾಸದಲ್ಲೇ ಅತಿದೊಡ್ಡ ಆವೃತ್ತಿಯಾಗಿರುವ INDIAWOOD 2026ರಲ್ಲಿ 50ಕ್ಕೂ ಹೆಚ್ಚು ದೇಶಗಳಿಂದ 1,000ಕ್ಕೂ ಅಧಿಕ ಬ್ರಾಂಡ್ಗಳು ಭಾಗವಹಿಸಲಿವೆ. ಸುಮಾರು 90,000ಕ್ಕೂ ಹೆಚ್ಚು ಉದ್ಯಮ ವೃತ್ತಿಪರರ ಭಾಗವಹಿಸುವಿಕೆ ನಿರೀಕ್ಷಿಸಲಾಗಿದ್ದು, 85,000 ಚದರ ಮೀಟರ್ ವಿಸ್ತೀರ್ಣದಲ್ಲಿ ಪ್ರದರ್ಶನ ನಡೆಯಲಿದೆ.

Byrati Basavaraj: ಶಾಸಕ ಬೈರತಿ ಬಸವರಾಜ್‌ ಮತ್ತೆ ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ

ಶಾಸಕ ಬೈರತಿ ಬಸವರಾಜ್‌ ಮತ್ತೆ ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ

ಸದ್ಯ ಫೆ.26ರವರೆಗೆ ಶಾಸಕ ಬೈರತಿ ಬಸವರಾಜ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಯದೇವ ಆಸ್ಪತ್ರೆಯಲ್ಲಿ ನೀಡಿರುವ ಡಯೆಟ್ ಪ್ಲಾನ್ ಅನ್ನು ಜೈಲಿನಲ್ಲಿ ಮುಂದುವರೆಸಲು ಕೋರ್ಟ್ ಸೂಚನೆ ನೀಡಿದೆ. ಜೈಲಿನಲ್ಲಿ ಕೂಡ ಡಯೆಟ್ ಪ್ಲಾನ್ ಪ್ರಕಾರವೇ ಊಟ ನೀಡಲು ನ್ಯಾಯಾಲಯ ಸೂಚಿಸಿದೆ.

kalaburagi news: ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

ಶಿವಾಜಿ ಜಯಂತಿಯಲ್ಲಿ ಸೌಂಡ್ ಬಾಕ್ಸ್ ಬಳಕೆ ಬಗ್ಗೆ ಮಾತಿನ ಚಕಮಕಿ ಉಂಟಾಗಿ, ಬಳಿಕ ಎರಡೂ ಸಮುದಾಯಗಳ ನಡುವೆ ಕಟ್ಟಿಗೆ ಹಾಗೂ ಕಲ್ಲುಗಳಿಂದ ಹೊಡೆದಾಟ ನಡೆದಿದೆ. ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

Terrorist Arrest: ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಸೆರೆ

ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ಉಗ್ರ ಬೆಂಗಳೂರಿನಲ್ಲಿ ಸೆರೆ

ಸತತವಾಗಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ, ಎನ್ಐಎ ವಿಶೇಷ ನ್ಯಾಯಾಲಯವು ಅರ್ಷಾದ್ ಖಾನ್ ವಿರುದ್ಧ ವಾರೆಂಟ್ ಮತ್ತು ಪ್ರಕ್ಲೊಮೇಷನ್ (ಘೋಷಿತ ಅಪರಾಧಿ) ಆದೇಶ ಹೊರಡಿಸಿತ್ತು. ನ್ಯಾಯಾಲಯದ ಈ ಕಠಿಣ ಆದೇಶದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಎನ್ಐಎ ತಂಡ, ಇಂದು ಆತನನ್ನು ಬಂಧಿಸಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Pocso Case: ಚಾಕಲೇಟ್‌ ಆಮಿಷವೊಡ್ಡಿ 9 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ಆರೆಸ್ಟ್‌

ಚಾಕಲೇಟ್‌ ಆಮಿಷವೊಡ್ಡಿ 9 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾಪಿ ಸೆರೆ

ಕೃಷ್ಣಮೂರ್ತಿ ಅಲಿಯಾಸ್ ಕಿಟ್ಟಿ ಎಂಬಾತನಿಂದ ಈ ದುಷ್ಕೃತ್ಯ ನಡೆದಿದೆ. ಶಾಲಾ ಆವರಣ ಮತ್ತು ಶೌಚಾಲಯದಲ್ಲಿ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರಂಭದಲ್ಲಿ ಒಬ್ಬ ಬಾಲಕಿ ಆರೋಪಿಯ ನೀಚತನದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ತದನಂತರ 9 ವಿದ್ಯಾರ್ಥಿಗಳ ಜೊತೆಗೆ ಈತ ಅಸಭ್ಯವಾಗಿ ವರ್ತಿಸಿರುವುದು ಗೊತ್ತಾಗಿದೆ.

ಫೆಡ್ಎಕ್ಸ್ ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಸ್ವಯಂಚಾಲಿತ ಏರ್ ಕಾರ್ಗೋ ಹಬ್‌ಗೆ ಭೂಮಿಪೂಜೆ

ಸಂಪೂರ್ಣ ಸ್ವಯಂಚಾಲಿತ ಏರ್ ಕಾರ್ಗೋ ಹಬ್‌ಗೆ ಭೂಮಿಪೂಜೆ

ಫೆಡ್‌ಎಕ್ಸ್‌ನ 2,500 ಕೋಟಿ ರೂ. ದೀರ್ಘಾವಧಿಯ ಹೂಡಿಕೆಯು, ಪ್ರಾದೇಶಿಕ ಬಲವರ್ಧನೆ ಮತ್ತು ಪುನರ್ವಿತರಣಾ ಕೇಂದ್ರವಾಗಿ ವಿನ್ಯಾಸಗೊಳಿಸಲಾದ ಮತ್ತು ಅದಾನಿ ಏರ್‌ ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (AAHL) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾದ ಪ್ರಸ್ತಾವಿತ 300,000 ಚದರ ಅಡಿ ಸೌಲಭ್ಯವನ್ನು ಒಳಗೊಂಡಿರಲಿದೆ.

Self harming: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತ ಕಾರ್ಯದರ್ಶಿಯ ಮಗ ಆತ್ಮಹತ್ಯೆ

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಪ್ತ ಕಾರ್ಯದರ್ಶಿಯ ಮಗ ಆತ್ಮಹತ್ಯೆ

ಬೆಂಗಳೂರಿನ ಸಂಜಯನಗರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಹೇಮಂತ್ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಮರಣೋತ್ತರ ಪರೀಕ್ಷೆಗೆ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಹೇಮಂತ್ ಶವ ರವಾನಿಸಲಾಗಿದೆ. ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ.

Snehamayi Krishna: ಬಂಧಿತ ಸ್ನೇಹಮಯಿ ಕೃಷ್ಣ ಮನೆ, ಕಚೇರಿಯಲ್ಲಿ ತೀವ್ರ ತಲಾಶೆ, ಮಹತ್ವದ ದಾಖಲೆ ಜಪ್ತಿ

ಸ್ನೇಹಮಯಿ ಕೃಷ್ಣ ಮನೆ, ಕಚೇರಿಯಲ್ಲಿ ತೀವ್ರ ತಲಾಶೆ, ಮಹತ್ವದ ದಾಖಲೆ ಜಪ್ತಿ

ದಾಳಿಯ ವೇಳೆ ಸಿಕ್ಕ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ದಾಖಲೆಗಳನ್ನು ಸಿಸಿಬಿ ಪೊಲೀಸರು ಸ್ಥಳದಲ್ಲೇ ಸೀಲ್ ಮಾಡಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದೆ. ನಕಲಿ ಆಡಿಯೋ ತುಣುಕು ಸೃಷ್ಟಿಸಿದವರ ಹಿಂದೆ ಯಾರಿದ್ದಾರೆ ಮತ್ತು ಇದರ ಉದ್ದೇಶವೇನಿತ್ತು ಎಂಬುದು ಸಿಸಿಬಿ ವಿಚಾರಣೆಯಿಂದ ಹೊರಬರಬೇಕಿದೆ.

Karnataka schools: ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ: ಶಿಕ್ಷಣ ಇಲಾಖೆ ಆದೇಶ

ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಮೊಬೈಲ್ ಬಿಡಿ – ಪುಸ್ತಕ ಹಿಡಿ’ ಅಭಿಯಾನ

ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್‌ಗಳು ಹಾಗೂ ಇತರೆ ಡಿಜಿಟಲ್ ಸಾಧನಗಳ ಅತಿಯಾದ ಹಾಗೂ ಅನಿಯಂತ್ರಿತ ಬಳಕೆಯಿಂದಾಗಿ ಓದುವಿಕೆಯಲ್ಲಿ ಗಣನೀಯ ಕುಸಿತ, ಕಲಿಕಾ ಆಸಕ್ತಿ ಗಂಭೀರವಾಗಿ ಕುಂಠಿತವಾಗುತ್ತಿರುವುದು, ಏಕಾಗ್ರತೆಯಲ್ಲಿ ಹಿನ್ನಡೆ, ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ, ಶೈಕ್ಷಣಿಕ ಸಾಧನೆಗೆ ಸ್ಪಷ್ಟ ಅಡ್ಡಿಯುಂಟಾಗುತ್ತಿದೆ. ಅದನ್ನು ತಡೆಯಲು ಈ ಅಭಿಯಾನ.

bomb blast: ಬಾಲ್‌ ಎಂದು ಭಾವಿಸಿ ಕ್ರಿಕೆಟ್‌ ಆಡಿದ ಬಾಲಕನಿಗೆ ನಾಡಬಾಂಬ್‌ ಸ್ಫೋಟಿಸಿ ಗಾಯ

ಬಾಲ್‌ ಎಂದು ಭಾವಿಸಿ ಕ್ರಿಕೆಟ್‌ ಆಡಿದ ಬಾಲಕನಿಗೆ ನಾಡಬಾಂಬ್‌ ಸ್ಫೋಟಿಸಿ ಗಾಯ

ಕಾಡುಹಂದಿ ಬೇಟೆಗೆ ಎಂದು ಇಟ್ಟಿದ್ದ ನಾಡಬಾಂಬ್‌ ಅನ್ನು ಬಾಲ್‌ ಎಂದು ತಿಳಿದು ಬಾಲಕರಿಬ್ಬರು ಅದರಲ್ಲಿ ಕ್ರಿಕೆಟ್‌ ಆಡಿದ್ದು, ಈ ವೇಳೆ ಬಾಂಬ್‌ ಸ್ಫೋಟಗೊಂಡಿದೆ. ಸ್ಪೋಟದಲ್ಲಿ (bomb blast) ಓರ್ವ ಬಾಲಕ ಗಾಯಗೊಂಡಿದ್ದಾನೆ. ಗಾಯಗೊಂಡ ಬಾಲಕನನ್ನು ಅಭೀಶ್ ಎಂದು ಗುರುತಿಸಲಾಗಿದೆ. ಬಾಲಕನಿಗೆ ಸರ್ಕಾರಿ ಆಸ್ಪ್ರತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Road Accident: ಭೀಕರ ರಸ್ತೆ ಅಪಘಾತ, ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು

ಭೀಕರ ರಸ್ತೆ ಅಪಘಾತ, ಟ್ರ್ಯಾಕ್ಟರ್ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸಾವು

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Body found: ರುಂಡವಿಲ್ಲದ ಮಹಿಳೆಯ ನಗ್ನ ಮೃತದೇಹ ಅರಣ್ಯದಲ್ಲಿ ಪತ್ತೆ

ರುಂಡವಿಲ್ಲದ ಮಹಿಳೆಯ ನಗ್ನ ಮೃತದೇಹ ಅರಣ್ಯದಲ್ಲಿ ಪತ್ತೆ

ರುಂಡವಿಲ್ಲದ ಕಾರಣ ಮಹಿಳೆಯ ಗುರುತು ಪತ್ತೆಯಾಗಿಲ್ಲ. ರುಂಡವನ್ನು ಮೃತದೇಹದ ಸುತ್ತಮುತ್ತ ಬಿಸಾಡಿರಬಹುದುದೆಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸುತ್ತಮುತ್ತಲಿನ ಪೊಲೀಸ್‌ ಠಾಣೆಗಳಲ್ಲಿ ನಾಪತ್ತೆಯಾಗಿರುವ ಮಹಿಳೆಯರ ಕಡತಗಳನ್ನು ಪರಿಶೀಲಿಸಲಾಗುತ್ತಿದೆ. ಈ ಅರಣ್ಯ ಪ್ರದೇಶಕ್ಕೆ ಬರುವ ದಾರಿಗಳಲ್ಲಿರುವ ಮನೆಗಳ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ.

NREGA Bachao Sangram Movement: ಪ್ರತಿದಿನ ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳ ಪರಿಶೀಲನೆ ನಡೆಸುತ್ತಿರುವ ಶಾಸಕ ಸಚಿವ

ಪ್ರತಿದಿನ ಸಮಾವೇಶದ ಸ್ಥಳಕ್ಕೆ ಶಾಸಕ, ಸಚಿವ ಭೇಟಿ: ಪರಿಶೀಲನೆ

ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜನಪರ ಯೋಜನೆಗಳಿಗೆ ನಮ್ಮ ಸರಕಾರ ಇಟ್ಟಿದ್ದ ಹೆಸರು ಗಳನ್ನು ಮೋದಿ ಸರಕಾರ ಬದಲಾವಣೆ ಮಾಡಿದೆ. ಯುಪಿಎ ಸರಕಾರದ ಮೊದಲ ಅವಧಿ 2005ರಲ್ಲಿ ರಾಷ್ಟ್ರದಲ್ಲಿದ್ದ  ನಿರುದ್ಯೋಗ ಸಮಸ್ಯೆ ನಿವಾರಿಸಲು ದೂರ ದೃಷ್ಟಿ ಯಿಂದ ನರೇಗಾ ಯೋಜನೆ ಜಾರಿಗೆ ತಂದಿತ್ತು.ಈ ಕಾನೂನಿನಡಿ ವರ್ಷಕ್ಕೆ 100 ದಿನಗಳ ಉದ್ಯೋಗಕ್ಕೆ ಅವಕಾಶ ವಿದ್ದು ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆಯಿತ್ತು.

Chikkaballapur news: 25ನೇ ವರ್ಷದ ಸಂಸ್ಥಾಪನಾ ದಿನಾಚರಣೆ: ರೈತರಿಗೆ ಕೀಟನಾಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ರೈತರಿಗೆ ಕೀಟನಾಶಗಳ ಬಗ್ಗೆ ಜಾಗೃತಿ ಕಾರ್ಯಕ್ರಮ

ಕೀಟನಾಶಕಗಳನ್ನು ಸಾಗಿಸುವಾಗ ಅವುಗಳನ್ನು ಆಹಾರ ಪದಾರ್ಥಗಳು, ಜನರು ಮತ್ತು ಪ್ರಾಣಿ ಗಳಿಂದ ದೂರವಿಡಬೇಕು. ಸಿಂಪಡಿಸುವ ಮೊದಲು ಕೀಟನಾಶಕ ಲೇಬಲ್ ಮತ್ತು ಲಗತ್ತಿಸಲಾದ ಕರಪತ್ರವನ್ನು ಎಚ್ಚರಿಕೆಯಿಂದ ಓದಿ ನೀಡಿರುವ ಸೂಚನೆಗಳನ್ನು ಅನುಸರಿಸಬೇಕು. ಯಾವಾ ಗಲೂ ಸೂಕ್ತ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಿ ಮತ್ತು ಸುರಕ್ಷಿತಾ ಸಾಧನಗಳನ್ನು ಧರಿಸಿ ಸಿಂಪಡಣೆಯನ್ನು ಯಾವಾಗಲೂ ಗಾಳಿ ಬೀಸುವ ದಿಕ್ಕಿನಲ್ಲಿಯೇ ಮಾಡಬೇಕು.

Pralhad Joshi: ಅಮೆರಿಕ ಒಪ್ಪಂದದ ಬಗ್ಗೆ ಸುಳ್ಳಿನ ಕಂತೆ ಹರಿಬಿಡುತ್ತಿರುವ ವಿಪಕ್ಷಗಳು: ಪ್ರಲ್ಹಾದ್‌ ಜೋಶಿ ಕಿಡಿ

ಅಮೆರಿಕ ಒಪ್ಪಂದದ ಬಗ್ಗೆ ಸುಳ್ಳಿನ ಕಂತೆ ಹರಿಬಿಡುತ್ತಿರುವ ವಿಪಕ್ಷಗಳು: ಜೋಶಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಹಿತರಕ್ಷಣೆಗೆ ಬದ್ಧವಾಗಿಯೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಅಮೆರಿಕ ಸೇರಿ ವಿದೇಶಗಳೊಂದಿಗೆ ವಾಣಿಜ್ಯ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಆದರೆ, ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿವೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಹರಿಹಾಯ್ದಿದ್ದಾರೆ.

ಶಾಸಕತ್ವದ ಸ್ಥಾನಮಾನ ಅರಿತು ಮಾತನಾಡುವುದನ್ನು ಕಲಿಯಿರಿ : ಸಂದೀಪ್ ಬಿ ರೆಡ್ಡಿ ಮನವಿ

ಶಾಸಕತ್ವದ ಸ್ಥಾನಮಾನ ಅರಿತು ಮಾತನಾಡುವುದನ್ನು ಕಲಿಯಿರಿ

ಬಿಜೆಪಿ ಪಕ್ಷದ ಬಗ್ಗೆ ಯಾರೋ ಏನೋ ಮಾತನಾಡುತ್ತಾರೆ ಎಂದರೆ ಕೈಕಟ್ಟಿ ಕೂರುವವರು ನಾವಲ್ಲ.ನಮ್ಮ ಊರಿನವರೇ ಆದ ಶಾಸಕ ಪ್ರದೀಪ್ ಈಶ್ವರ್ ಅವರಲ್ಲಿ ಮನವಿ ಮಾಡುತ್ತೇನೆ. ನಮ್ಮ ಊರಿನ ನನ್ನ ಕಿರಿಯ ಸಹೋದರ ನೀವು.ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಬಂದು ಶಾಸಕರಾಗಿದ್ದೀರಿ

ಗಂಡ ಮೃತಪಟ್ಟ ಒಂದೇ ವಾರಕ್ಕೆ ಪೊಲೀಸಪ್ಪನಿಂದ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ

ಪೊಲೀಸ್‌ ಪೇದೆ ಕಿರುಕುಳ; ಗಂಡ ಮೃತಪಟ್ಟ ಒಂದೇ ವಾರಕ್ಕೆ ಪತ್ನಿಯೂ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಅವರು ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.

Dr.M.C.Sudhakar: ವೈರಲ್ ಆದ ಡಾ.ಎಂ.ಸಿ.ಸುಧಾಕರ್ ಅವರದೆನ್ನಲಾದ ಆಡಿಯೋ???

ವೈರಲ್ ಆದ ಡಾ.ಎಂ.ಸಿ.ಸುಧಾಕರ್ ಅವರದೆನ್ನಲಾದ ಆಡಿಯೋ???

ಡಾ.ಎಂ.ಸಿ.ಸುಧಾಕರ್(Dr.M.C.Sudhakar) ಅವರು ಸಚಿವರಾಗುವುದುಕ್ಕೂ ಮುನ್ನ ತಮ್ಮದೇ ಪಕ್ಷದ ರೇಖಾ ಅವರು ಚಿಂತಾಮಣಿ ನಗರಸಭೆ ಅಧ್ಯಕ್ಷರಾಗಿದ್ದಾಗ ಅವರ ಪತಿ ಉಮೇಶ್ ಜತೆ ಮೊಬೈಲ್‌ ನಲ್ಲಿ ಮಾತನಾಡಿರುವ ’ಕಮೀಷನರ್ ವಿರುದ್ದ ಧರಣಿ ಮಾಡಿ, ಶಾಸಕರಿಗೂ ಸಚಿವರಿಗೂ ಧಿಕ್ಕಾರ ಕೂಗಿ’ ಎಂದು ಪ್ರಚೋದನೆ ನೀಡಿ ಮಾತನಾಡಿರುವುದು ಆಡಿಯೋ ದಲ್ಲಿದ್ದು ರಾಜೀವ್‌ಗೌಡ ಗುಂಪಿನಲ್ಲಿ ವೈರಲ್ ಆಗಿದೆ

ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದೆಲ್ಲೆಡೆ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ: ಪ್ರಲ್ಹಾದ್‌ ಜೋಶಿ

ಪ್ರಧಾನಿ ಮೋದಿ ನೇತೃತ್ವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಪುನರುತ್ಥಾನ: ಜೋಶಿ

Pralhad Joshi: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದೆಲ್ಲೆಡೆ ಇಂದು ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಪುನರುತ್ಥಾನದ ಕೈಂಕರ್ಯ ನಡೆದಿದೆ. ಮಕ್ಕಳಲ್ಲಿ ಸಾಂಸ್ಕೃತಿಕ, ಆಧ್ಯಾತ್ಮಿಕ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ಭದ್ರಾವತಿ ಉಕ್ಕು ಕಾರ್ಖಾನೆ, ಎಚ್‌ಎಂಟಿ ಪುನಶ್ಚೇತನ ಖಚಿತ: ಎಚ್‌.ಡಿ.ಕುಮಾರಸ್ವಾಮಿ ಭರವಸೆ

ಭದ್ರಾವತಿ ಉಕ್ಕು ಕಾರ್ಖಾನೆ, ಎಚ್‌ಎಂಟಿ ಪುನಶ್ಚೇತನ ಖಚಿತ: ಎಚ್‌ಡಿಕೆ

ಭ್ರದಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಆರಂಭಿಕ ಹಂತದಲ್ಲಿ ಕನಿಷ್ಠ ₹5000 ಕೋಟಿಗಳನ್ನಾದರೂ ಈ ಕಾರ್ಖಾನೆಗೆ ಹೂಡಿಕೆ ಮಾಡಲಾಗುವುದು. ಹಾಗೆಯೇ ಎಚ್‌ಎಂಟಿಗೂ ಕಾಯಕಲ್ಪ ನೀಡುವ ಉದ್ದೇಶವಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಾಪತ್ತೆ ಕೇಸ್‌ ಸುಖಾಂತ್ಯ; ಪ್ರಿಯಕರನನ್ನು ಬಿಟ್ಟು ಗಂಡನ ಮನೆಗೆ ಹೋಗಲು ಒಪ್ಪಿದ ಪ್ರಿಯಾಂಕ

ಪ್ರಿಯಕರನನ್ನು ಬಿಟ್ಟು ಗಂಡನ ಜತೆ ಹೋಗಲು ಒಪ್ಪಿದ ಪ್ರಿಯಾಂಕ

ನಾಪತ್ತೆ ನಾಟಕವಾಡಿ ಪ್ರಿಯಕರ ಡೇವಿಡ್‌ ಜತೆ ಪರಾರಿಯಾಗಿದ್ದ ವಿವಾಹಿತ ಮಹಿಳೆ ಪ್ರಿಯಾಂಕ ಕೊನೆಗೂ ಗಂಡನ ಮನೆ ಸೇರಲು ಒಪ್ಪಿದ್ದಾಳೆ. ಹಾಸನದ ಸಾಂತ್ವನ ಕೇಂದ್ರದಿಂದ ತವರು ಮನೆಗೆ ಹೋಗಿ, ಅಲ್ಲಿಂದ ಗಂಡ ರುದ್ರೇಶ್‌ ಮನೆಗೆ ಹೋಗಲು ಒಪ್ಪಿದ್ದಾಳೆ ಎಂದು ತಿಳಿದುಬಂದಿದೆ.

GridDB ಕ್ಲೌಡ್ ಐಓಟಿ ಹ್ಯಾಕಥಾನ್ ಯಶಸ್ವಿಯಾಗಿ ಮುಕ್ತಾಯ

GridDB ಕ್ಲೌಡ್ ಐಓಟಿ ಹ್ಯಾಕಥಾನ್ ಯಶಸ್ವಿಯಾಗಿ ಮುಕ್ತಾಯ

ಅಕ್ಟೋಬರ್ 29 ರಿಂದ ಡಿಸೆಂಬರ್ 14, 2025 ರವರೆಗೆ ನಡೆದ ಹ್ಯಾಕಥಾನ್‌ನಲ್ಲಿ ಭಾರತ ದಾದ್ಯಂತ 250 ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು, ಇವು ಆರೋಗ್ಯ ರಕ್ಷಣೆ, ಹಣಕಾಸು, ಐಓಟಿ ಮತ್ತು ಜ್ಞಾನ ನಿರ್ವಹಣೆ ಸೇರಿದಂತೆ ಬಳಕೆಯ ಪ್ರಕರಣಗಳನ್ನು ಪರಿಹರಿಸಿ, GridDB® ಡೇಟಾಬೇಸ್ ಸೇವೆಯ ಬಹುಮುಖವನ್ನು ಪ್ರದರ್ಶಿಸಿದವು

Aequs Limited: ಬೆಳಗಾವಿಯ ಏಕಸ್‌ ಕಂಪನಿಯಿಂದ ತಮಿಳುನಾಡಲ್ಲಿ ಏರೋಸ್ಪೇಸ್‌ ಎಂಜಿನ್ ತಯಾರಿಕಾ ಘಟಕ; 4000 ಕೋಟಿ ಹೂಡಿಕೆ

ಬೆಳಗಾವಿಯ ಏಕಸ್‌ ಕಂಪನಿಯಿಂದ ತಮಿಳುನಾಡಲ್ಲಿ 4000 ಕೋಟಿ ಹೂಡಿಕೆ

ತಮಿಳೂನಾಡಿನ ಹೊಸೂರಿನ ಶೂಲಗಿರಿಯ ಸಿಪ್ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಏರೋಸ್ಪೇಸ್ ಮತ್ತು ಡಿಫೆನ್ಸ್ ಕ್ಲಸ್ಟರ್‌ಗೆ 4,000 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದೆ. ಆದರೆ, ಬೆಳಗಾವಿ ಮೂಲದ ಕಂಪನಿಯು ಕರ್ನಾಟಕಕ್ಕೆ ಬದಲಾಗಿ ತಮಿಳುನಾಡಿನಲ್ಲಿ ಹೂಡಿಕೆ ಮಾಡುತ್ತಿರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ತುಮಕೂರಿನ ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಹೊಸ ತಾಳಿ ಸಮರ್ಪಿಸಿದ ಮಾಜಿ ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಹೊಸ ತಾಳಿ ಸಮರ್ಪಣೆ

Tumkur News: ತುಮಕೂರು ತಾಲೂಕಿನ ಹೆತ್ತೇನಹಳ್ಳಿ ಶ್ರೀ ಮಾರಮ್ಮ ದೇವಿಗೆ ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಹಾಗೂ ಇವರ ಆಪ್ತರಾದ ಕಾಂಗ್ರೆಸ್ ಮುಖಂಡ, ಉದ್ಯಮಿ ಊರುಕೆರೆ ಜಗದೀಶ್ ಅವರು ಹೊಸದಾಗಿ ತಾಳಿ ಮಾಡಿಸಿ ಶುಕ್ರವಾರ ದೇವಿಗೆ ಸಮರ್ಪಣೆ ಮಾಡಿದರು.

Loading...