ರಾಜ್ಯದಲ್ಲಿ ಮುಂದುವರಿದ ತೀವ್ರ ಚಳಿ, 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
Karnataka Weather: ಕಳೆದ ಕೆಲ ದಿನಗಳಿಂದ ರಾಜಧಾನಿಯ ವಾತಾವರಣ ಜನರನ್ನು ಗಡ ಗಡ ನಡುಗಿಸುತ್ತಿದೆ. ಹಗಲು ಸಾಕಷ್ಟು ಬಿಸಿಲು ಮೈ ಚುರುಕ್ ಎನ್ನುವಂತೆ ಇರಲಿದೆ. ಆದರೆ ಸಂಜೆಯಾದ ಕೂಡಲೆ ಶೀತ ಗಾಳಿ ಬೀಸುತ್ತಿದ್ದು, ರಾತ್ರಿ ತಾಪಮಾನ 14 ಡಿಗ್ರಿ ಸೆಲ್ಷಿಯಸ್ವರೆಗೂ ಇಳಿಯುತ್ತಿದೆ. ಹನ್ನೆರಡು ಡಿಗ್ರಿಯವರೆಗೂ ಇಳಿದು ಹತ್ತು ವರ್ಷಗಳ ದಾಖಲೆ ಬರೆದಿತ್ತು. ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ನೀಡಲಾಗಿದೆ.