ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇನು? ವಿದ್ಯಾರ್ಥಿಗಳ ಮುಂದಿದೆ ಬಹು ಆಯ್ಕೆ: ಈ ಪೈಕಿ ನಿಮ್ಮ ಆಪ್ಶನ್‌ ಯಾವುದು?

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮುಂದಿದೆ ಬಹು ಆಯ್ಕೆ

What After SSLC? ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉತ್ತಮ ಫಲಿತಾಂಶ ದಾಖಲಾಗಿದ್ದು, ಬರೋಬ್ಬರಿ ಶೇಕಡಾ 94.10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮುಂದೆ ಯಾವ ಕೋರ್ಸ್‌ ಆಯ್ಕೆ ಮಾಡುತ್ತಾರೆ ಎನ್ನುವುದರ ಮೇಲೆ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾರೆ ಅವರ ಮುಂದಿರುವ ಆಯ್ಕೆಗಳೇನು? ಇಲ್ಲಿದೆ ಸಮಗ್ರ ವಿವರ.

Karnataka SSLC Result: 623 ಅಂಕ ಗಳಿಸಿದ ಗಣೇಶ್ ಬೋಸ್ಲೆ ಕಲಬುರಗಿಗೆ ಜಿಲ್ಲೆಗೆ ಟಾಪರ್

ಎಸ್‌ಎಸ್‌ಎಲ್‌ಸಿಐಲ್ಲಿ 623 ಅಂಕ ಗಳಿಸಿ ಗಣೇಶ್ ಬೋಸ್ಲೆ ಕಲಬುರಗಿಗೆ ಟಾಪರ್

Karnataka SSLC Exam Result: ಕಲಬುರಗಿ ನಗರದ ಅಜೀಮ್ ಪ್ರೇಮ್‌ಜೀ ಶಾಲೆಯ ವಿದ್ಯಾರ್ಥಿ ಗಣೇಶ್ ಬೋಸ್ಲೆ 625ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

CET Exam: ವಿದ್ಯಾರ್ಥಿನಿಯರ ಮೂಗಿಗೆ ಗಮ್‌ ಟೇಪ್‌ ಅಂಟಿಸಿದ ಭದ್ರತಾ ಸಿಬ್ಬಂದಿ; ಚಿಕ್ಕಮಗಳೂರಲ್ಲಿ ಅಚ್ಚರಿಯ ದೃಶ್ಯ

ವಿದ್ಯಾರ್ಥಿನಿಯರ ಮೂಗಿಗೆ ಗಮ್‌ ಟೇಪ್‌ ಅಂಟಿಸಿದ ಭದ್ರತಾ ಸಿಬ್ಬಂದಿ

ರಾಜ್ಯಾದ್ಯಂತ ಎಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತಿದೆ. ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಮೂಗುತಿ ಧರಿಸಿ ಬಂದ ವಿದ್ಯಾರ್ಥಿನಿಯರ ಮೂಗಿಗೆ ಭದ್ರತಾ ಸಿಬ್ಬಂದಿ ಗಮ್ ಟೇಪ್ ಅಂಟಿಸಿದ್ದಾರೆ.

SSLC Results 2026: 625 ಅಂಕ ಪಡೆದ ದಾವಣಗೆರೆಯ ಭರತ್‌ನ ಫಸ್ಟ್ ರಿಯಾಕ್ಷನ್ ಹೇಗಿತ್ತು?

625 ಅಂಕ ಪಡೆಯಲು ಶಿಕ್ಷಕರೇ ಪ್ರಮುಖ ಕಾರಣ ಎಂದ ಟಾಪರ್ ಭರತ್

SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.

Karnataka SSLC Result: 623 ಅಂಕ ಗಳಿಸಿ ಹಾವೇರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ನಿವೇದಿತಾ

ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕ ಗಳಿಸಿದ ಹಾವೇರಿ ಜಿಲ್ಲೆಯ ನಿವೇದಿತಾ

Haveri News: ಎಸ್‌ಎಸ್‌ಎಲ್‌ಸಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಹಾವೇರಿ ಜಿಲ್ಲೆಗೆ ವಿದ್ಯಾರ್ಥಿನಿ ನಿವೇದಿತಾ ಅಜ್ಜಮ್ಮನವರ 625ಕ್ಕೆ 623 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ. ಬ್ಯಾಡಗಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ನಿವೇದಿತಾ ಪರಶುರಾಮ ಅಜ್ಜಮ್ಮನವರ 625ರಲ್ಲಿ 623 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

Physical Abuse: ಅಮೆರಿಕದ ಮಹಿಳೆ ಮೇಲೆ ದೌರ್ಜನ್ಯ, ಕೊಡಗಿನ ಹೋಂಸ್ಟೇ ಪರವಾನಗಿ ರದ್ದು, ಇಬ್ಬರ ಬಂಧನ

ಅಮೆರಿಕದ ಮಹಿಳೆ ಮೇಲೆ ದೌರ್ಜನ್ಯ, ಕೊಡಗಿನ ಹೋಂಸ್ಟೇ ಪರವಾನಗಿ ರದ್ದು

ಲೈಂಗಿಕ ದೌರ್ಜನ್ಯ ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.

ನಗರ ಜೀವನದ ಹೊಸ ಪರಿಕಲ್ಪನೆ: ದೈನಂದಿನ ಜೀವನದ ಸುತ್ತ ವಿನ್ಯಾಸಗೊಳಿಸಲಾದ ಸಮುದಾಯವನ್ನು ಪರಿಚಯಿಸುತ್ತಿದೆ ಪುಷ್ಕಲಂ ಡೆವಲಪರ್ಸ್

ನಗರ ಜೀವನದ ಹೊಸ ಪರಿಕಲ್ಪನೆ: ಪುಷ್ಕಲಂ ಡೆವಲಪರ್ಸ್

ತನ್ನ ಚೊಚ್ಚಲ ಯೋಜನೆಯಾದ ಪುಷ್ಕಲಂ ಹೆರಿಟೇಜ್ ಮೂಲಕ, ಕಂಪನಿಯು ಬೆಂಗಳೂರಿನ ಪೂರ್ವ ಭಾಗದಲ್ಲಿ ವಾಸ್ತು ಆಧಾರಿತ ವಸತಿ ಅಭಿವೃದ್ಧಿಯನ್ನು ಪರಿಚಯಿಸುತ್ತಿದೆ. ಇದು ಬಳಕೆದಾರರ ಅನುಕೂಲತೆ, ಮುಕ್ತ ಅವಕಾಶ ಮತ್ತು ಸಮುದಾ ಯಕ್ಕೆ ಸಮಾನ ಒತ್ತು ನೀಡುತ್ತದೆ. 2.64 ಎಕರೆ ಪ್ರದೇಶದಲ್ಲಿ ಹರಡಿರುವ ಈ ಯೋಜನೆಯ ಎರಡು ಗೋಪುರಗಳಲ್ಲಿ 296 ಮನೆಗಳಿವೆ. ಇದನ್ನು ಸ್ಥಳಾವಕಾಶ, ಬೆಳಕು ಮತ್ತು ದೀರ್ಘಕಾಲೀನ ವಾಸಯೋಗ್ಯತೆಗೆ ಆದ್ಯತೆ ನೀಡುವ ಕಡಿಮೆ-ದಟ್ಟಣೆಯ ಪರಿಸರವಾಗಿ ವಿನ್ಯಾಸಗೊಳಿಸಲಾಗಿದೆ.

ಮೊದಲ ಸ್ಟುಡಿಯೋದೊಂದಿಗೆ ಧಾರವಾಡಕ್ಕೆ ಪ್ರವೇಶಿಸಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವ ವಿಸ್ತರಿಸುತ್ತಿರುವ ಹೋಮ್‌ಲೇನ್

ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವ ವಿಸ್ತರಿಸುತ್ತಿರುವ ಹೋಮ್‌ಲೇನ್

1,300 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಸ್ಟುಡಿಯೋವನ್ನು ಒಂದು 'ತನ್ಮಯಗೊಳಿಸುವ ಅನುಭವ ಕೇಂದ್ರ'ವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಗ್ರಾಹಕರು ಮಾಡ್ಯುಲರ್ ಕಿಚನ್‌ಗಳು, ವಾರ್ಡ್‌ ರೋಬ್‌ಗಳು ಮತ್ತು ಸಂಪೂರ್ಣ ಮನೆಯ ವಿನ್ಯಾಸಗಳನ್ನು ವೀಕ್ಷಿಸಿ ಆರಿಸಿಕೊಳ್ಳಬಹುದು. ವಿನ್ಯಾಸ ಮತ್ತು ಅನುಷ್ಠಾನಕ್ಕೆ ಒಂದೇ ಸೂರಿನಡಿ ಪರಿಹಾರ ನೀಡುವ ಹೋಮ್‌ಲೇನ್, ಮನೆಮಾಲೀಕರಿಗೆ ಯೋಜನೆಯಿಂದ ವಿತರಣೆಯವರೆಗೆ ಸುಗಮವಾಗಿ ಸಾಗಲು ಸಹಾಯ ಮಾಡುತ್ತದೆ.

Karnataka SSLC Results: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರೂ ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಉತ್ತಮ ಅಂಕ

ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಉತ್ತಮ ಅಂಕ

Injured Student Success story: ಶೈಕ್ಷಣಿಕ ಜೀವನದ ಭವಿಷ್ಯ ನಿರ್ಧರಿಸುವ ಮಹತ್ವದ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಆಂಬ್ಯುಲೆನ್ಸ್‌ನಲ್ಲಿ ಬಂದು, ಸ್ಟ್ರೆಚರ್‌ನಲ್ಲಿ ಮಲಗಿಯೇ ಪರೀಕ್ಷೆ ಬರೆದ ಕೋಲಾರದ ವಿದ್ಯಾರ್ಥಿನಿ ಕುಸುಮಾ ಉತ್ತಮ ಅಂಕ ಪಡೆದಿದ್ದು, ರಾಜ್ಯಕ್ಕೆ ಮಾದರಿಯಾಗಿದ್ದಾಳೆ.

Karnataka SSLC Result: ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕೋದು ಹೇಗೆ? ಲಾಸ್ಟ್ ಡೇಟ್, ಫೀಸ್-‌ ಡೀಟೆಲ್ಸ್

ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕೋದು ಹೇಗೆ? ಲಾಸ್ಟ್ ಡೇಟ್, ಫೀಸ್-‌ ಡೀಟೆಲ್ಸ್

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಾವು ಬರೆದ ಉತ್ತರಗಳಿಗೆ ಮೌಲ್ಯಮಾಪಕರು ಎಷ್ಟು ಅಂಕ ನೀಡಿದ್ದಾರೆ ಮತ್ತು ಯಾವುದೇ ಉತ್ತರ ಮೌಲ್ಯ ಮಾಪನವಾಗದೆ ಉಳಿದಿದೆಯೇ ಎಂದು ತಿಳಿಯಲು ಸ್ಕ್ಯಾನ್ ಪ್ರತಿ ಪಡೆಯಬಹುದು. ಸ್ಕ್ಯಾನ್ ಪ್ರತಿಯನ್ನು ಪಡೆದು ಪರಿಶೀಲಿಸಿದ ನಂತರ, ವಿದ್ಯಾರ್ಥಿಗೆ ತನ್ನ ಅಂಕಗಳು ಹೆಚ್ಚಾಗುವ ಭರವಸೆ ಇದ್ದರೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.

Karnataka SSLC Result: ಎಸ್ಸೆಸ್ಸೆಲ್ಸಿ ಎರಡನೇ ಪರೀಕ್ಷೆ ಮೇ 18ರಿಂದ, ಈ ಸಲ ಮೂರನೇ ಪರೀಕ್ಷೆ ಇಲ್ಲ

ಎಸ್ಸೆಸ್ಸೆಲ್ಸಿ ಎರಡನೇ ಪರೀಕ್ಷೆ ಮೇ 18ರಿಂದ, ಈ ಸಲ ಮೂರನೇ ಪರೀಕ್ಷೆ ಇಲ್ಲ

ಈ ಬಾರಿ ಫೇಲಾದ ಮಕ್ಕಳಿಗೆ ಮೂರನೇ ಬಾರಿ ಪರೀಕ್ಷೆ ಇರುವುದಿಲ್ಲ. ಎರಡನೇ ಬಾರಿ ಪರೀಕ್ಷೆ ಬರೆಯಲು ಅವಕಾಶವಿದ್ದು, ಮೇ 18ರಿಂದ ಪರೀಕ್ಷೆ ಆರಂಭ ಆಗಲಿದೆ. ಯಾರೆಲ್ಲಾ ಫೇಲ್ ಆಗಿದ್ದಾರೋ ಅವರಿಗೆ ತರಬೇತಿ ಕೊಡುವ ಕೆಲಸ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Karnataka SSLC Result: ಹಲವು ದಾಖಲೆ ಬರೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ, 7 ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್

ಹಲವು ದಾಖಲೆ ಬರೆದ ಎಸ್‌ಎಸ್‌ಎಲ್‌ಸಿ ಫಲಿತಾಂಶ, 7 ಮಕ್ಕಳು ಔಟ್‌ ಆಫ್‌ ಔಟ್

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಾಲಕರು ಉತ್ತಮ ಸಾಧನೆ ಮಾಡಿದ್ದಾರೆ. ಈ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇಕಡ 91ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಪ್ರಗತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಸಹ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ.92ರಷ್ಟು ಫಲಿತಾಂಶ ಬಂದಿದೆ.

ಸ್ಥಿರ ಠೇವಣಿ ಬಡ್ಡಿ ದರ ಪರಿಷ್ಕರಿಸಿದ ಶ್ರೀರಾಮ್‌ ಫೈನಾನ್ಸ್‌ ಲಿಮಿಟೆಡ್‌: ಮೇ. 6 ರಿಂದ ಜಾರಿ

ಸ್ಥಿರ ಠೇವಣಿ ಬಡ್ಡಿ ದರ ಪರಿಷ್ಕರಿಸಿದ ಶ್ರೀರಾಮ್‌ ಫೈನಾನ್ಸ್‌ ಲಿಮಿಟೆಡ್‌

ಬ್ಯಾಂಕ್ ಸಾಲ ಸೌಲಭ್ಯಗಳು, ಪರಿವರ್ತಿಸಲಾಗದ ಡಿಬೆಂಚರ್‌ಗಳು, ಅಧೀನ ಸಾಲ ಮತ್ತು ಸ್ಥಿರ ಠೇವಣಿ ಕಾರ್ಯಕ್ರಮಗಳಿಗಾಗಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೀರ್ಘಕಾಲಿಕ ಕ್ರೆಡಿಟ್ ರೇಟಿಂಗ್‌ ಗಳನ್ನು AAA (ಸ್ಥಿರ) ಮಟ್ಟಕ್ಕೆ ಇತ್ತೀಚೆಗೆ ಉನ್ನತೀಕರಿಸಲಾಗಿದೆ. ಈ ರೇಟಿಂಗ್ ಪ್ರತಿ ಏಜೆನ್ಸಿಯ ಮಾನದಂಡಗಳಲ್ಲಿ ಅತ್ಯುನ್ನತವಾಗಿದೆ.

Karnataka SSLC Result: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ, ಶೇ. 94.10 ಉತ್ತೀರ್ಣ, ದಕ ಜಿಲ್ಲೆ ಪ್ರಥಮ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ, ಶೇ. 94.10 ಉತ್ತೀರ್ಣ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ಜಿಲ್ಲೆ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನ ಪಡೆದಿವೆ.

Body Found: ದೇವನಹಳ್ಳಿಯ ಐಫೋನ್‌ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶುವಿನ ಶವ ಪತ್ತೆ

ದೇವನಹಳ್ಳಿ ಐಫೋನ್‌ ಫ್ಯಾಕ್ಟರಿ ಟಾಯ್ಲೆಟ್‌ನಲ್ಲಿ ನವಜಾತ ಶಿಶು ಶವ ಪತ್ತೆ

ಶೌಚಾಲಯಕ್ಕೆ ಹೋದಾಗ ಆಕಸ್ಮಿಕವಾಗಿ ಹೊಟ್ಟೆಯಿಂದ ಹೊರಬಂದಿದ್ದ ನವಜಾತ ಶಿಶುವನ್ನು ಗಾಬರಿಯಲ್ಲಿ ತಾಯಿಯೇ ಕೊಂದು ಕಸದ ಬುಟ್ಟಿಗೆ ಎಸೆದಿದ್ದಾಳೆ ಎನ್ನಲಾಗುತ್ತಿದೆ. ಮದುವೆಯಾಗದೇ ಗರ್ಭಿಣಿಯಾಗಿದ್ದರಿಂದ ಮಹಿಳೆ ಭಯಗೊಂಡು ಮಗುವಿನ ಜೀವ ತೆಗೆದಿದ್ದಾಳೆ ಎಂದು ತಿಳಿದುಬಂದಿದ್ದು, ಪೊಲೀಸರು ಈಕೆಯನ್ನು ಪತ್ತೆ ಹಚ್ಚಿದ್ದಾರೆ.

SSLC result: ಇನ್ನು ಡಿಜಿಲಾಕರ್ ಮೂಲಕವೇ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನೀಡುವುದು ಕಡ್ಡಾಯ

ಇನ್ನು ಡಿಜಿಲಾಕರ್ ಮೂಲಕವೇ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನೀಡುವುದು ಕಡ್ಡಾಯ

2026-27ನೇ ಶೈಕ್ಷಣಿಕ ಸಾಲಿನಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಈಗ ನೀಡಲಾಗುತ್ತಿರುವ ಕಾಗದದ (Hard Copy) ಅಂಕಪಟ್ಟಿ ವಿತರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಬದಲಾಗಿ, National Academic Depository (NAD)/ Digilocker ನಲ್ಲಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಅಳವಡಿಸಲಾಗುತ್ತದೆ.

ಆಂಟಿಗಳ ಎಸ್ಕೇಪ್‌, ಅಂಕಲ್‌ʼಗಳ ಪರದಾಟ

ಆಂಟಿಗಳ ಎಸ್ಕೇಪ್‌, ಅಂಕಲ್‌ʼಗಳ ಪರದಾಟ

ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ ಜಿಮ್ ಟ್ರೈನರ್‌ನ ಪತ್ನಿ, ಪತಿಯ ಸ್ನೇಹಿತ ನೊಂದಿಗೆ ಓಡಿ ಹೋಗಿದ್ದಾಳೆ. ಪ್ರೀತಿಸಿ ಮದುವೆಯಾದ ಪತ್ನಿ ಈಗ ಗೆಳೆಯನ ಪಾಲಾಗಿದ್ದಾಳೆ. ಅಣ್ಣ ಅಣ್ಣ ಅಂತ ಕರೆಯುತ್ತಿದ್ದವಳು ಈಗ ಪ್ರೀತಿಸಿ ಮದುವೆಯಾಗಿದ್ದ ಗಂಡನಿಗೆ ಕೊಟ್ಟು ಕೈಕೊಟ್ಟು ಪರಾರಿ ಯಾಗಿದ್ದಾಳೆ. ಈ ಬಗ್ಗೆ ದೂರು ದಾಖಲಾಗಿದ್ದರೂ ಮಹಿಳೆ ಓಡಿಹೋಗಿರುವುದು ಕುತೂಹಲಕ್ಕೆ ಕಾರಣ ವಾಗಿದೆ.

Bengaluru Crime news: ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಬೆಂಗಳೂರಿನ ಮನೆಯಲ್ಲಿ ದಂಪತಿ ಶವಗಳು ಪತ್ತೆ; ಕೊಲೆ ಮಾಡಿ ಆತ್ಮಹತ್ಯೆ ಶಂಕೆ

ಪತ್ನಿಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ. ಪತಿ ಸೀರೆಯಿಂದ ನೇಣು ಹಾಕಿಕೊಂಡಿದ್ದಾನೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಸಂಭವಿಸಿದ ಕೊಲೆ- ಆತ್ಮಹತ್ಯೆ ಎನ್ನಲಾಗುತ್ತಿದೆಯಾದರೂ ಮರಣೋತ್ತರ ಪರೀಕ್ಷೆ ವರದಿ ಹಾಗೂ ಪೊಲೀಸರ ತನಿಖೆ ಬಳಿಕ ಸಾವಿನ ರಹಸ್ಯ ಬಯಲಿಗೆ ಬರಲಿದೆ.

CET exam: ಇಂದು, ನಾಳೆ ಕರ್ನಾಟಕ ಸಿಇಟಿ ಪರೀಕ್ಷೆ, ಎಚ್ಚರಿಕೆಯ ಕಣ್ಗಾವಲು

ಇಂದು, ನಾಳೆ ಕರ್ನಾಟಕ ಸಿಇಟಿ ಪರೀಕ್ಷೆ, ಎಚ್ಚರಿಕೆಯ ಕಣ್ಗಾವಲು

ಒಟ್ಟು 3,30,479 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ರಾಜ್ಯಾದ್ಯಂತ 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಅಕ್ರಮ ತಡೆಯಲು ಒಟ್ಟು 15,265 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಡಿಸಿಗಳು ಮತ್ತು ಬೆಂಗಳೂರಿನ ಕಮಾಂಡ್ ಸೆಂಟರ್‌ನಿಂದ ನೇರ ನಿಗಾ ವಹಿಸಲಾಗುತ್ತದೆ.

Karnataka SSLC Result 2026: ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್‌ ಚೆಕ್‌ ಮಾಡಲು ಇಲ್ಲಿದೆ ಲಿಂಕ್‌

ಇಂದು ಮಧ್ಯಾಹ್ನ 12 ಗಂಟೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ 2026​: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಬಿಡುಗಡೆ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಮಾಹಿತಿ ನೀಡಿದೆ. ಇಂದು ಮಧ್ಯಾಹ್ನ ಫಲಿತಾಂಶ ಪ್ರಕಟವಾಗಲಿದ್ದು, ರಿಸಲ್ಟ್‌ ಚೆಕ್‌ ಮಾಡುವ ವಿಧಾನ ಹಾಗೂ ವೆಬ್‌ಸೈಟ್‌ ಮಾಹಿತಿ ಇಲ್ಲಿ ನೀಡಲಾಗಿದೆ.

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ : ಸಂಘದ ಅಧ್ಯಕ್ಷೆ ಪದ್ಮ ಅಭಿಮತ

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ : ಸಂಘದ ಅಧ್ಯಕ್ಷೆ ಪದ್ಮ ಅಭಿಮತ

ಕಾರ್ಯಕ್ರಮದಲ್ಲಿ 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.4 ಅಂಕ  ಪಡೆದಿರುವ ನಗರಸಭೆ ಸದಸ್ಯೆ ಸುಬ್ಬಮ್ಮ ಮೊಮ್ಮಗ ಹಾಗೂ ಶ್ರೀನಿವಾಸ ಹಾಗೂ ಭಾರತಿ ದಂಪತಿ ಪುತ್ರ ಪುನೀತ್ ಅವರನ್ನು ಸನ್ಮಾನಿಸಲಾಯಿತು.  ಜೀವನದ ಸವಾಲನ್ನು ಎದುರಿಸುವ ಶಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಬೇಕು

ನಿಮ್ಮನ್ನು ಗೆಲ್ಲಿಸಿ ತಪ್ಪು ಮಾಡಿದೆವು : ಜನರನ್ನು ಮರುಳು ಮಾಡಿದ ನೀವು ಷ್ಟಾಚಾರದ ಪಿತಾಮಹ: ಮಿಲ್ಟನ್ ವೆಂಕಟೇಶ್ ಆಕ್ರೋಶ

ಜನರನ್ನು ಮರುಳು ಮಾಡಿದ ನೀವು ಭ್ರಷ್ಟಾಚಾರದ ಪಿತಾಮಹ

ಕೈಯಲ್ಲಿ ಬಿಡಿಗಾಸು ಇಲ್ಲದೆ ಕ್ಷೇತ್ರಕ್ಕೆ ಬಂದ ನಿಮಗೆ ನಾವೆಲ್ಲಾ ಹಣ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದೇವೆ. ಕೈಯಲ್ಲಿ ಅಂಬೇಡ್ಕರ್ ಪೋಟೋ ಹಿಡಿದು ಕಾಲೋನಿಗಳಿಗೆ ಹೋಗಿ ಅಮ್ಮಾ ನಾನು ಅನಾಥ, ನನ್ನ ಕೈಹಿಡಿದು ನಡೆಸಿ ಎಂದು ಗೋಗರೆದೆ. ಅವರೊಟ್ಟಿಗೆ ಕುಳಿತು ಅನ್ನ ತಿಂದು ಪ್ರಾಮಾ ಣಿಕವಾಗಿ ಕೆಲಸ ಮಾಡುವ ಮಾತಾಡಿದೆ.

Chikkaballapur News: ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ : ಕಾಕಲ ಚಿಂತೆ ರಾಜಣ್ಣ ಸವಾಲು

ನನ್ನ ವಿರುದ್ಧ ನಿಂತು ಜಿಲ್ಲಾ ಪಂಚಾಯಿತಿ ಸ್ಥಾನ ಗೆಲ್ಲಲಿ ನೋಡೋಣ

ನೀವೊಬ್ಬ ಎಂಎಲ್‌ಎ ಆಗಿ ಚಿಮುಲ್ ಚುಕ್ಕಾಣಿ ಹಿಡಿಯಬೇಕಾದರೆ ಅಭ್ಯರ್ಥಿ ಹಾಕಿಸಬೇಕಿತ್ತು. ಯಾಕೆ ನಿಮಗೆ ಅರ್ಹ ಅಭ್ಯರ್ಥಿಗಳು ಯಾರೂ ಸಿಗಲಿಲ್ಲವಾ? ಯಾಕೆ ಹಾಕಿಸಲಿಲ್ಲ? ಎಂದ ಅವರು ನಿಮಗೆ ಯೋಗ್ಯತೆಯಿಲ್ಲ ಎಂಬುದನ್ನು ಅರಿತು, ಇಡೀ ಜಿಲ್ಲೆಯಲ್ಲಿ ಪೆರೇಸಂದ್ರದಲ್ಲಿ ಮಾತ್ರ ಯುನಾನಿಮಸ್ ಆಯ್ಕೆಯಾದರೆ ಪಕ್ಷಕ್ಕೆ ಮರ್ಯಾದೆ ಇರಲ್ಲ ಎಂದು ಭಾವಿಸಿ ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಅಭ್ಯರ್ಥಿ ಮಾಡಿದರು.ನೀವು ಶಾಸಕರಾಗಿ ನನ್ನ ಪರವಾಗಿ ಕೆಲಸ ಮಾಡಬೇಕಿತ್ತು ಮಾಡಿದಿರಾ?

ಏ.23ರಿಂದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ

ಏ.23ರಿಂದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ

23 ರಂದು ಸಾಯಂಕಾಲ 7 ಗಂಟೆಗೆ ಪುರಾಣ ಮಹಾಮಂಗಲ, ಶ್ರೀ ವಿಶ್ವಕರ್ಮ ಜಗದ್ಗುರು ಮೂರಝಾವಧೀಶ್ವರ ಅಫಝಲಪೂರದ ಶ್ರೀ ಪ್ರಣವ ನಿರಂ ಜನ ಶ್ರೀಗಳು, ಸಿಂದಗಿಯ ರಾಮ ಚಂದ್ರ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಉಪಸ್ಥಿತರಿರುವರು

Loading...