ಬರದ ನಡುವೆಯೂ ಲಕ್ಷ್ಮೀ ಕೃಪೆಯ ನಿರೀಕ್ಷೆ
ಮಳೆ ಕೊರತೆಯಿಂದ ಹೂವಿನ ಇಳುವರಿ ಕುಸಿದಿರುವುದು ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿರುವುದರಿಂದ ದರ ಗಗನಮುಖಿಯಾಗಿದೆ. ವಾರದ ಹಿಂದೆ ಕೆ.ಜಿ.ಗೆ ರೂಪಾಯಿ 150ರಿಂದ 200 ರಷ್ಟಿದ್ದ ಮಲ್ಲಿಗೆ ಇದೀಗ ರೂಪಾಯಿ 1000ಕ್ಕೂ ಹೆಚ್ಚು ಮಾರಾಟವಾಗುತ್ತಿದೆ. ರೂಪಾಯಿ 400ರಿಂದ 500ರಷ್ಟಿದ್ದ ಕನಕಾಂಬರ ರೂಪಾಯಿ 2500ರಿಂದ 3000ಕ್ಕೆ ತಲುಪಿದೆ.