ಇಂದಿರಾ ಕ್ಯಾಂಟೀನ್ ಹಸಿವು ನೀಗಿಸುವ ಅಕ್ಷಯಪಾತ್ರೆ
ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.