ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯ; ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು 58 ಗ್ರಾಂ ಚಿನ್ನಾಭರಣ ದೋಚಿದ ಯುವತಿ!

ಯುವಕನನ್ನು ಲಾಡ್ಜ್‌ಗೆ ಕರೆದೊಯ್ದು ಚಿನ್ನಾಭರಣ ದೋಚಿದ ಯುವತಿ!

Bengaluru Fraud Case: ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಮಿಳುನಾಡಿನ ಯುವಕ ವಂಚನೆಗೊಳಗಾಗಿದ್ದಾನೆ. ಯುವ ನೀಡಿದ ದೂರಿನ ಮೇರೆಗೆ ಆರೋಪಿ ಯುವತಿ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

Pratap Simha: ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾಗಿರುವುದು ಅಪಾಯಕಾರಿ: ಪ್ರತಾಪ್‌ ಸಿಂಹ

ವಿದ್ಯಾವಂತ ಮುಸ್ಲಿಮರು ಭಯೋತ್ಪಾದಕರಾಗಿರುವುದು ಅಪಾಯಕಾರಿ: ಪ್ರತಾಪ್‌ ಸಿಂಹ

ಮುಸ್ಲಿಮರ ಸಮಸ್ಯೆ ಬಡತನ ಅಲ್ಲ, ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೇ ಇಂತಹ ಘಟನೆಗಳಿಗೆ ಕಾರಣ. ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸವಾಗಿದೆ. ವಿದ್ಯಾವಂತ ಮುಸ್ಲಿಮರು ಉಗ್ರರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ನಿಮ್ಮ ನೆರೆಹೊರೆಯಲ್ಲಿರಬಹುದಾದ ಇಂಥ ವಿದ್ಯಾವಂತ ಧರ್ಮಾಂಧರ ಬಗ್ಗೆಯೂ ಹುಷಾರಾಗಿರಿ ಎಂದು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್‌ ಸಿಂಹ (BJP leader Pratap Simha) ಹೇಳಿದ್ದಾರೆ.

Srinivas BV: ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬಿ.ವಿ ಶ್ರೀನಿವಾಸ್ ನೇಮಕ

ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಬಿ.ವಿ ಶ್ರೀನಿವಾಸ್ ನೇಮಕ

AICC: ಭದ್ರಾವತಿ ಮೂಲದ ಬಿ.ವಿ ಶ್ರೀನಿವಾಸ್ ಬಿಹಾರ ಚುನಾವಣೆಯಲ್ಲಿ, ಪಶ್ಚಿಮ ಚಂಪಾರಣ್ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಉತ್ತರ ಭಾರತದಲ್ಲೇ ಹೆಚ್ಚು ರಾಜಕೀಯ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದ ಶ್ರೀನಿವಾಸ್, ಕಳೆದ ಚುನಾವಣೆಯಲ್ಲಿ ಕೂಡ ಇಲ್ಲಿ ಕೆಲಸ ಮಾಡಿದ್ದರು. ಈ ಬಾರಿ ಪ.ಚಂಪಾರಣ್ ಜಿಲ್ಲೆಯ ಬಗಾಹ, ಬೆಟಿಯಾ, ಚನ್ ಪಟಿಯಾ, ನರಕಟಿಯಾಗಂಜ್, ನೌತನ್ ಮತ್ತು ವಾಲ್ಮೀಕಿ ನಗರ ಕ್ಷೇತ್ರಗಳ ಉಸ್ತುವಾರಿಯಾಗಿ ಕೆಲಸ ಮಾಡಿದ್ದಾರೆ. ಬಿಹಾರ ಚುನಾವಣೆಗೆ ಎಐಸಿಸಿ ವೀಕ್ಷಕರಾಗಿಯೂ ಅವರು ನೇಮಕವಾಗಿದ್ದರು.

KSCA elections: ಚಿನ್ನಸ್ವಾಮಿ ಕ್ರೀಡಾಂಗಣದ ಗತವೈಭವ ಮರಳಬೇಕೆಂದರೆ ಪ್ರಸಾದ್‌ ಅಧಿಕಾರಕ್ಕೆ ಬರಬೇಕು; ಅನಿಲ್ ಕುಂಬ್ಳೆ

ವೆಂಕಟೇಶ್ ಪ್ರಸಾದ್‌ಗೆ ಬೆಂಬಲ ಸೂಚಿಸಿದ ಕುಂಬ್ಳೆ, ಶ್ರೀನಾಥ್

ಕರ್ನಾಟಕ ಕ್ರಿಕೆಟ್ ಅನ್ನು ಮತ್ತೆ ಸಹಜ ಸ್ಥಿತಿಗೆ ತರಲು, ಪ್ರಸಾದ್ ಅವರು "ಟೀಮ್ ಗೇಮ್ ಚಾರ್ಜರ್ಸ್" ಎಂಬ ಹೆಸರಿನ ಸಮಿತಿಯನ್ನು ರಚಿಸಿದ್ದಾರೆ. ಇದರಲ್ಲಿ ಸುಜಿತ್ ಸೋಮಸುಂದರ್ (ಉಪಾಧ್ಯಕ್ಷ), ವಿನಯ್ ಮೃತ್ಯುಂಜಯ (ಕಾರ್ಯದರ್ಶಿ), ಎ.ವಿ. ಶಶಿಧರ್ (ಜಂಟಿ ಕಾರ್ಯದರ್ಶಿ) ಮತ್ತು ಬಿ.ಎನ್. ಮಧುಕರ್ (ಖಜಾಂಚಿ) ಇದ್ದಾರೆ.

Nandini snack kits: ಇಂದಿನಿಂದ ಕೆಎಸ್‌ಆರ್‌ಟಿಸಿ ಫ್ಲೈಬಸ್‌ ಪ್ರಯಾಣಿಕರಿಗೆ ನಂದಿನಿ ಉಚಿತ ಲಘು ತಿಂಡಿ ಕಿಟ್‌

ಕೆಎಸ್‌ಆರ್‌ಟಿಸಿ ಫ್ಲೈಬಸ್‌ ಪ್ರಯಾಣಿಕರಿಗೆ ನಂದಿನಿ ಉಚಿತ ಲಘು ತಿಂಡಿ ಕಿಟ್‌

Nandini snack kits in KSRTC Flybus: ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಪ್ರಕಾರ, ಈ ಉಪಕ್ರಮವು ಪ್ರಯಾಣಿಕರ ಸೌಕರ್ಯವನ್ನು ಸುಧಾರಿಸಲು ಮತ್ತು ಅದರ ಪ್ರೀಮಿಯಂ ಇಂಟರ್‌ಸಿಟಿ ವಿಮಾನ ನಿಲ್ದಾಣ ಶಟಲ್ ಸೇವೆಯಲ್ಲಿ "ವಿಮಾನದಂತಹ ಪ್ರಯಾಣದ ಅನುಭವ"ವನ್ನು ಒದಗಿಸಲು ನಿಗಮ ಮಾಡುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿದೆ. ಇದು ಕೆಎಂಎಫ್‌ನ ಡೈರಿ ತಿಂಡಿಗಳು ಮತ್ತು ಪಾನೀಯಗಳನ್ನು ಒದಗಿಸುವ ಮೂಲಕ ರಾಜ್ಯದ ಪ್ರಸಿದ್ಧ ನಂದಿನಿ ಬ್ರ್ಯಾಂಡ್ ಅನ್ನು ಉತ್ತೇಜಿಸಲು ಸಹ ಸಹಾಯ ಮಾಡುತ್ತದೆ.

Mamatheya Thottilu: ಪರಿತ್ಯಕ್ತ ಮಗುವಿಗಾಗಿ ಬೆಂಗಳೂರಿನಲ್ಲಿ ಮಮತೆಯ ತೊಟ್ಟಿಲು

ಮಮತೆಯ ತೊಟ್ಟಿಲು ಮಗುವಿನ ಸುರಕ್ಷತೆಯ ತೊಟ್ಟಿಲು

ಹೆತ್ತವರಿಗೆ ಬೇಡದ ಕೂಸು ಕಸದ ಬುಟ್ಟಿ, ಚರಂಡಿ, ರಸ್ತೆ ಬದಿ, ಗುಡ್ಡಗಾಡು ಪ್ರದೇಶಗಳಲ್ಲಿ ಕಂಡು ಬರುತ್ತಿದೆ. ಇದರಿಂದ ಅವುಗಳ ಜೀವಕ್ಕೆ ಅಪಾಯ ಬಂದೊದಗುತ್ತವೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎನ್ನುವಂತೆ ಇಂತಹ ಘಟನೆಗಳು ಕೆಲವೊಮ್ಮೆ ಮನ ಕಲಕುವಂತೆ ಮಾಡುತ್ತದೆ. ಇಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ಬೆಂಗಳೂರಿನಲ್ಲಿ ಇದೀಗ ಮಮತೆಯ ತೊಟ್ಟಿಲನ್ನು ಪ್ರಾರಂಭಿಸಲಾಗಿದ್ದು, ಇದು ನವಜಾತ ಶಿಶುಗಳಿಗೆ ಸುರಕ್ಷತೆಯ ತೊಟ್ಟಿಲಾಗಲಿದೆ.

ಸಾಲ ನೀಡಿಕೆಯಲ್ಲಿ ಸಬಲೀಕರಣ: ಎಕ್ಸ್‌ಪೀರಿಯನ್ʼನಿಂದ ಗ್ರಾಮೀಣ ಸ್ಕೋರ್ ಪ್ರಾರಂಭ

ಎಕ್ಸ್‌ಪೀರಿಯನ್ʼನಿಂದ ಗ್ರಾಮೀಣ ಸ್ಕೋರ್ ಪ್ರಾರಂಭ

ಈ ಹೊಸ ವ್ಯವಸ್ಥೆಯು ಆರ್ಥಿಕ ಸೇರ್ಪಡೆ ವಿಸ್ತರಿಸುವ ಭಾರತ ಸರ್ಕಾರದ ದೃಷ್ಟಿಕೋನ ಮತ್ತು ಬಡ ಸಮುದಾಯಗಳಿಗೆ ಸಾಲ ನೀಡುವ ಸಾಧ್ಯತೆ ಹೆಚ್ಚಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ನ ನಿರ್ದೇಶನಕ್ಕೆ ಅನುಗುಣವಾಗಿದೆ. ಇದು ಸಾಲ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ವಿಶ್ವಾಸದಿಂದ ಮತ್ತು ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ

Girish Mattannavar: ಧರ್ಮಸ್ಥಳದಲ್ಲಿ ವಿವಾಹವಾಗುವ ಯುವತಿಯರ ಕುರಿತು ಅಶ್ಲೀಲ ಹೇಳಿಕೆ, ಮಟ್ಟಣ್ಣವರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

ಅಶ್ಲೀಲ ಹೇಳಿಕೆ, ಮಟ್ಟಣ್ಣವರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

Dharmasthala case: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ವಿವಾಹಗಳ ಮತ್ತು ಮದುವೆಯಾಗುವ ಹೆಣ್ಣು ಮಕ್ಕಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇರೆಗೆ ಗಿರೀಶ್ ಮಟ್ಟಣ್ಣನವರ್ ವಿರುದ್ಧ ದೂರು ಸಲ್ಲಿಸಲಾಗಿತ್ತು. ಬೆಂಗಳೂರಿನ ರಾಜಾಜಿನಗರದ ಸಾಮಾಜಿಕ ಕಾರ್ಯಕರ್ತೆ ಕಾವೇರಿ ಕೇದಾರನಾಥ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.

Bangalore Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ

Namma Metro Yellow Line: ಹಳದಿ ಮಾರ್ಗವು ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಆದ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಕಾರಣ, ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿರುತ್ತದೆ. ಅದರಲ್ಲೂ ಬೆಳಗ್ಗಿನ 8 ರಿಂದ 10 ಗಂಟೆಯ ಅವಧಿಯು ಪೀಕ್ ಅವರ್ ಆಗಿದ್ದು, ಈ ಸಮಯದಲ್ಲಿಯೇ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಪ್ರಯಾಣಿಕರ ಸಂಕಷ್ಟವನ್ನು ಇಮ್ಮಡಿಗೊಳಿಸಿದೆ. ಪ್ರಸ್ತುತ ಈ ಮಾರ್ಗದಲ್ಲಿ ಕೇವಲ ಐದು ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

RRB Recruitment: 8,860 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ ನೇಮಕಾತಿ ಮಂಡಳಿ; ಹೆಚ್ಚಿನ ವಿವರ ಇಲ್ಲಿದೆ

ರೈಲ್ವೆ ನೇಮಕಾತಿ; ಕಂಪ್ಲೀಟ್ ಡಿಟೇಲ್ಸ್‌ ಈ ಕೆಳಗಿನಂತಿದೆ

Job News: ರೈಲ್ವೆ ನೇಮಕಾತಿ ಮಂಡಳಿಯು ಎನ್‌ಟಿಪಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಪದವಿ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ನವೆಂಬರ್ ಕೊನೆ ದಿನವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹುದ್ದೆಗೆ ಬೇಕಾದ ಅರ್ಹತೆಗಳ ಕುರಿತು ಮಾಹಿತಿ ಇಲ್ಲಿದೆ.

Vijayapura news: ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲು

ಎಡದಂಡೆ ಕಾಲುವೆಯಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲು

vijayapura news: ಸುಡುಗಾಡು ಸಿದ್ದ ಸಮುದಾಯಕ್ಕೆ ಸೇರಿದ ಬಸಮ್ಮ ಕೊಣ್ಣೂರು, ಸಂತೋಷ, ರವಿ ನಿನ್ನೆ (ನವೆಂಬರ್ 11) ಕೆಬಿಜೆಎನ್ಎಲ್ ಎಡ ದಂಡೆ ಕಾಲುವೆಗೆ ಹೋಗಿದ್ದ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗ ದೌಡಾಯಿಸಿ ನಾಪತ್ತೆಯಾದವರ ಪತ್ತೆಗೆ ಶೋಧ ನಡೆಸಿದ್ದಾರೆ. ನೀರುಪಾಲಾಗಿರುವ ಮೂವರು ಮೇಲೆ ಬಂದಿಲ್ಲ. ನಾಪತ್ತೆಯಾದ ಸ್ಥಳದಲ್ಲೂ ಕೆಳದಂಡೆಯ ಉದ್ದಕ್ಕೂ ಶೋಧ ನಡೆಸಲಾಗುತ್ತಿದೆ.

Caste Census: ಜಾತಿ ಗಣತಿ ಆನ್‌ಲೈನ್‌ ಭಾಗವಹಿಸುವಿಕೆ ಅವಧಿ ನ.30ರವರೆಗೆ ವಿಸ್ತರಣೆ

ಜಾತಿ ಗಣತಿ ಆನ್‌ಲೈನ್‌ ಭಾಗವಹಿಸುವಿಕೆ ಅವಧಿ ನ.30ರವರೆಗೆ ವಿಸ್ತರಣೆ

Social and Economic survey: 2025ರ ಅಂದಾಜಿನ ಪ್ರಕಾರ, ರಾಜ್ಯದ 6.85 ಕೋಟಿ ಜನಸಂಖ್ಯೆಯಲ್ಲಿ ಸುಮಾರು 6.13 ಕೋಟಿ ಜನರು ಅಕ್ಟೋಬರ್ 31 ರವರೆಗೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು ಮತ್ತು ಆಯೋಗದ ಪ್ರಕಾರ 34.49 ಲಕ್ಷ ಮನೆಗಳು ಬೀಗ ಹಾಕಲ್ಪಟ್ಟಿದ್ದವು ಅಥವಾ ಖಾಲಿಯಾಗಿದ್ದವು. ಸೆಪ್ಟೆಂಬರ್ 22 ರಂದು ಪ್ರಾರಂಭವಾದ ಸಮೀಕ್ಷೆಯು ವಾಸ್ತವವಾಗಿ ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿತ್ತು, ಆದರೆ ಅದನ್ನು ಹಲವು ಬಾರಿ ವಿಸ್ತರಿಸಲಾಯಿತು.

Karnataka Weather: ಇಂದಿನ ಹವಾಮಾನ; ಮೈಸೂರು, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಹಗುರ ಮಳೆ ನಿರೀಕ್ಷೆ

ಇಂದು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಹಗುರ ಮಳೆ ನಿರೀಕ್ಷೆ

ಕರ್ನಾಟಕ ಹವಾಮಾನ ವರದಿ: ಬೀದರ್, ವಿಜಯಪುರ, ಹಾವೇರಿ, ಬೆಳಗಾವಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 5-6°C ಗಿಂತ ಕಡಿಮೆಯಾಗುವ ಸಾಧ್ಯತೆ ಇದೆ. ಮುಂದಿನ 2-3 ದಿನಗಳವರೆಗೆ ಕರ್ನಾಟಕದ ಒಳನಾಡಿನಲ್ಲಿ ಪ್ರಸ್ತುತ ಇರುವ ಕನಿಷ್ಠ ತಾಪಮಾನಕ್ಕಿಂತ ಕನಿಷ್ಠ ತಾಪಮಾನವು 1-2°C ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ

MLA Pradeep Eshwar: 35.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಗ್ರಾಮ ಸಂಜೀವಿನಿ ಕಟ್ಟಡ ಉದ್ಘಾಟಿಸಿದ ಶಾಸಕ ಪ್ರದೀಪ್ ಈಶ್ವರ್

ಗ್ರಾಮ ಸಂಜೀವಿನಿ ಕಟ್ಟಡ ಉದ್ಘಾಟಿಸಿದ ಶಾಸಕ ಪ್ರದೀಪ್ ಈಶ್ವರ್

ಮೂರು ದಿನದ ಹಿಂದೆ ಇದೇ ಆವಲಗುರ್ಕಿ ಪಂಚಾಯತಿಯ ವಡ್ಡರೆ ಪಾಳ್ಯ ಮತ್ತು ಕುರ್ಲಹಳ್ಲಿ ಗ್ರಾಮಗಳಿಗೆ ಭೇಟಿ ನೀಡಿದ್ದ ವೇಳೆ ಅರ್ಹರಿಗೆ ವೃದ್ದಾಪ್ಯವೇತನ, ವಿಧವಾ ವೇತನವನ್ನು ಮಂಜೂರು ಮಾಡಿಸಲು ನಾಡಕಛೇರಿಯನ್ನೇ ಗ್ರಾಮದ ನಡುವೆ ಪ್ರತಿಷ್ಠಾಪಿಸಿ ಜನರ ಕಷ್ಟ ಗಳನ್ನು ಪರಿಹರಿಸಿ ಅವರ ಮೊಗದಲ್ಲಿ ಸಂತೋಷ ಕಂಡಿದ್ದೇನೆ

ಭಾರತದಲ್ಲಿ ಹೊಚ್ಚ ಹೊಸ XSR155 ಮತ್ತು ಮೊದಲ ಇವಿಗಳಾದ AEROX-E ಮತ್ತು EC-06 ಹಾಗೂ ಯುವಜನತೆ ಕೇಂದ್ರಿತ FZ-RAVE ಬಿಡುಗಡೆ ಮಾಡಿದ ಯಮಹಾ

ಯುವಜನತೆ ಕೇಂದ್ರಿತ FZ-RAVE ಬಿಡುಗಡೆ ಮಾಡಿದ ಯಮಹಾ

ಹೊಸ ಯಮಹಾ XSR155 ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ಯಮಹಾ ಹೊಂದಿ ರುವ ಆಧಿಪತ್ಯವನ್ನು ಪ್ರತಿಬಿಂಬಿಸುತ್ತದೆ. ಸ್ಟೈಲ್ ಮತ್ತು ಸೊಗಸನ್ನು ಹುಡುಕುವ ಇಂದಿನ ಕಾಲದ ರೈಡರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಇದು ಮಾಡರ್ನ್ ರೆಟ್ರೋ ಸ್ಪೋರ್ಟ್ ಕಾನ್ಸೆಪ್ಟ್ ನ ಪ್ರತಿಬಿಂಬವಾಗಿದೆ.

Bangalore News: ಕನ್ನಡದಲ್ಲಿ ವಿಜ್ಞಾನದ ರಸದೌತಣ: ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಿಂದ ವಿಶೇಷ ಅಭಿಯಾನ!

ಪ್ರತಿ ವಾರಾಂತ್ಯದಲ್ಲಿ ಮಕ್ಕಳಿಗಾಗಿ ವಿಶೇಷ ವಿಜ್ಞಾನ ಕಾರ್ಯಾಗಾರ

ಬೆಂಗಳೂರಿನ ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ(ParSEC) ಈ ತಿಂಗಳು ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ. ಕೇಂದ್ರಕ್ಕೆ ಭೇಟಿ ನೀಡುವ ಎಲ್ಲ ಸಂದರ್ಶ ಕರಿಗೆ ಗ್ಯಾಲರಿಯಲ್ಲಿನ ವಿಜ್ಞಾನದ ಕೌತುಕಗಳನ್ನು ಕನ್ನಡ ಭಾಷೆಯಲ್ಲಿಯೇ ಮನಮುಟ್ಟು ವಂತೆ ವಿವರಿಸಲಾಗುತ್ತದೆ.

Veeraloka Pustaka Santhe-3: ನ.14ರಿಂದ 16ರವರೆಗೆ ಜಯನಗರದಲ್ಲಿ ವೀರಲೋಕ ಪುಸ್ತಕ ಸಂತೆ-3; 200ಕ್ಕೂ ಹೆಚ್ಚು ಮಳಿಗೆ, 1000ಕ್ಕೂ ಹೆಚ್ಚು ಲೇಖಕರ ಸಂಗಮ

ನ.14ರಿಂದ 16ರವರೆಗೆ ಜಯನಗರದಲ್ಲಿ ವೀರಲೋಕ ಪುಸ್ತಕ ಸಂತೆ-3

Veeraloka Books: ಬೆಂಗಳೂರಿನ ಜಯನಗರದ ಶಾಲಿನಿ ಗ್ರೌಂಡ್‌ನಲ್ಲಿ ನ.14ರಿಂದ ಮೂರು ದಿನಗಳ ಕಾಲ ವೀರಲೋಕ ಪುಸ್ತಕ ಸಂತೆ-3 ನಡೆಯಲಿದೆ. ಈ ಸಂತೆಯಲ್ಲಿ ನೂರಾರು ಹೊಸ ಪುಸ್ತಕಗಳ ಬಿಡುಗಡೆ ಆಗಲಿದ್ದು, ಖ್ಯಾತ ಲೇಖಕರು ಮತ್ತು ಕವಿಗಳ ಭೇಟಿಗಳು, ಮಕ್ಕಳಿಗಾಗಿ ಕಥೆ–ಕಾವ್ಯ–ಚಿತ್ರಕಲೆ ಕಾರ್ಯಾಗಾರಗಳು, ಸಾಹಿತ್ಯ ಸಂವಾದ, ಚಿಂತನೆ ಮತ್ತು ಕಾವ್ಯಪಠಣ, ಓದುಗರು–ಲೇಖಕರ ನೇರ ಸಂಭಾಷಣೆ ಮತ್ತಿತರ ಹಲವು ವಿಶೇಷತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

GST Movie: ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ʼGSTʼ ಚಿತ್ರದ ಟ್ರೇಲರ್‌ ಔಟ್‌; ನ.28ಕ್ಕೆ ಸಿನಿಮಾ ರಿಲೀಸ್‌

ಸೃಜನ್ ಲೋಕೇಶ್ ನಟಿಸಿ, ನಿರ್ದೇಶಿಸಿರುವ ʼGSTʼ ಚಿತ್ರದ ಟ್ರೇಲರ್‌ ಔಟ್‌

Sandalwood News: ಸೃಜನ್ ಲೋಕೇಶ್ ನಟನೆ ಮತ್ತು ನಿರ್ದೇಶನದ, ಸಂದೇಶ್ ಎನ್. ನಿರ್ಮಾಣದ ʼGSTʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಿಯಲ್ ಸ್ಟಾರ್ ಉಪೇಂದ್ರ, ತಮ್ಮದೇ ಆದ ರೀತಿಯಲ್ಲಿ ಆಕ್ಷನ್ ಹೇಳುವ ಮೂಲಕ ಟ್ರೇಲರ್ ಅನಾವರಣ ಮಾಡಿದರು. ಪ್ರಿಯಾಂಕಾ ಉಪೇಂದ್ರ ನವೆಂಬರ್ 14 ರಂದು ಬಿಡುಗಡೆಯಾಗಲಿರುವ ಚಿತ್ರದ ಹಾಡಿನ ಪ್ರೊಮೊ ರಿಲೀಸ್ ಮಾಡಿದರು. ಚಿತ್ರದಲ್ಲಿ ಸೃಜನ್ ಲೋಕೇಶ್ ಅವರೊಂದಿಗೆ ರಜನಿ ಭಾರದ್ವಾಜ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರ ಇದೇ ತಿಂಗಳ 28ರಂದು ತೆರೆಗೆ ಬರುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

40 ನೇ ರಾಜ್ಯಮಟ್ಟದ ಟೈಕೊಂಡೋ ಟೂರ್ನಿ: ವಿವಿಧ ವಿಭಾಗಗಳಲ್ಲಿ ಪಾರಮ್ಯ ಸಾಧಿಸಿದ ತುಮಕೂರು, ಬೆಂಗಳೂರು, ಚಿತ್ರದುರ್ಗ ತಂಡಗಳು

40 ನೇ ರಾಜ್ಯಮಟ್ಟದ ಟೈಕೊಂಡೋ ಟೂರ್ನಿ

40ನೇ ರಾಜ್ಯ ಮಟ್ಟದ ಸಬ್ ಜೂನಿಯರ್, ಕೆಡಿಟ್, ಜೂನಿಯರ್ ಮತ್ತು ಸೀನಿಯರ್ ಟೈಕೊಂಡೋ ಪಂದ್ಯಾವಳಿ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆ ಬೆನ್ನೂರಿನಲ್ಲಿ ನ. 6 ,7 ಮತ್ತು 8 ರಂದು ನಡೆದಿದ್ದು, ವಿವಿಧ ವಿಭಾಗಗಳಲ್ಲಿ ತುಮಕೂರು, ಬೆಂಗಳೂರು, ಚಿತ್ರದುರ್ಗ ತಂಡಗಳು ಪಾರಮ್ಯ ಸಾಧಿಸಿವೆ.

Chintamani News: ಮುಸ್ಲಿಂ ಸಮುದಾಯ ಒಡೆಯುವ ಹೇಳಿಕೆ ನೀಡುವುದು ಸರಿಯಲ್ಲ: ಸಚಿವರ ಬೆಂಬಲಿಗರಿಂದ ಮಾಜಿ ನಗರಸಭಾ ಸದಸ್ಯ ಪತ್ರಿಕಾಗೋಷ್ಠಿಟ

ಮುಸ್ಲಿಂ ಸಮುದಾಯ ಒಡೆಯುವ ಹೇಳಿಕೆಗಳ ನೀಡುವುದು ಸರಿಯಲ್ಲ

ನಗರ ಭಾಗ ದಲ್ಲಿರುವ ಮುಸ್ಲಿಂ ವೆಲ್ಫೇರ್ ಶಾಲೆಯನ್ನು ನಗರ ಸಭೆಗೆ ಸೇರಿಸಿ ಅನುಕೂಲ ಮಾಡಿ ಕೊಟ್ಟಿದ್ದಕ್ಕೆ, ಅಪಾರ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಮಕ್ಕಳು ಆ ಶಾಲೆಯಲ್ಲಿ ಇಂದು ವಿದ್ಯಾ ಭ್ಯಾಸ ಕಲಿಯುತ್ತಿದ್ದಾರೆ. ಇಂತಹ ಹಲವಾರು ಕೊಡುಗೆಗಳು ಮುಸ್ಲಿಂ ಸಮುದಾಯದ ಮೇಲೆ ದಿವಗಂತ ಆಂಜನೇಯ ರೆಡ್ಡಿ ಅವರ ಕುಟುಂಬದವರದು ಇದೆ

ಯಶು ಸೇವಾ ಟ್ರಸ್ಟ್ ನಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ

ಸಮಾಜ ಸೇವೆ ಟ್ರಸ್ಟ್ ನ ಮೊದಲ ಗುರಿ: ಮಂಜುನಾಥ್

ಮಕ್ಕಳ ಶಿಕ್ಷ ಣಕ್ಕೆ ಪೂರಕ ವಾತಾವರಣ ನಿರ್ಮಿಸುವ ಸಾಮಾಜಿಕ ಜವಾಬ್ದಾರಿ ಎಲ್ಲರ ಮೇಲಿದೆ. ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಗುಣಮಟ್ಟದ ಶಿಕ್ಷ ಣ ದೊರೆತರೆ ಅವರು ಉತ್ತಮ ಸಾಧನೆ ಮಾಡಬಲ್ಲರು. ಸಾಧನೆಗೆ ಬಡತನ ತೊಡಕಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಮನೋಧರ್ಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.

K.H. Puttaswamy Gowda: ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ

ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ

ಕಟ್ಟಡದ ಕಾರ್ಮಿಕರು ಹಾಗು ಇತರೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಈ ಸಂಚಾರಿ ಆರೋಗ್ಯ ತಪಾಸಣಾ ವಾಹನಕ್ಕೆ ತಾಲೂಕು ಕೇಂದ್ರದಲ್ಲಿ ಚಾಲನೆ ನೀಡಲಾಗಿದೆ. ಈ ವಾಹನ ಕಾರ್ಮಿಕರಿದ್ದಲಿಯೇ ಬಂದು ಆರೋಗ್ಯ ತಪಾಸಣೆ ಮಾಡುವ ಬಗ್ಗೆ ಮಾಹಿತಿ ನೀಡಲಿದೆ. ಇದರ ಸದುಯೋಗ ಮಾಡಿಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

Bagepally News: ಸಾಯಿ ಲೀಲಾ ಎಜುಕೇಷನ್ ಫೌಂಡೇಷನ್ ಎನ್.ಜಿ.ಓ ಸಂಸ್ಥೆ ವತಿಯಿಂದ ಲೇಖನ ಸಾಮಗ್ರಿ ವಿತರಣೆ

ಎನ್.ಜಿ.ಓ ಸಂಸ್ಥೆ ವತಿಯಿಂದ ಲೇಖನ ಸಾಮಗ್ರಿ ವಿತರಣೆ

ಸರಕಾರ ನೀಡುವ ಸೌಲಭ್ಯಗಳ ಜತೆಗೆ ದಾನಿಗಳು ನೀಡುವ ಎಲ್ಲಾ ಸೌಲಭ್ಯ ಗಳನ್ನು ಪಡೆದು ಶೈಕ್ಷಣಿಕ ಪ್ರಗತಿ ಹೊಂದಬೇಕು, ಸಮಾಜದಲ್ಲಿ ಉನ್ನತ ಹುದ್ದೆ ಅಲಂಕರಿಸಿ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಬಿಇಓ ವೆಂಕಟೇಶಪ್ಪ ಕರೆ ನೀಡಿದರು.

Bengaluru Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರ; ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ಬಿಐಎಎಲ್‌

ದೆಹಲಿ ಸ್ಫೋಟದ ಹಿನ್ನೆಲೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರ

Kempegowda International Airport Bengaluru: ದೆಹಲಿಯಲ್ಲಿ ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಸೋಮವಾರ ತಡರಾತ್ರಿಯಿಂದಲೇ ಭದ್ರತೆ ಹೆಚ್ಚಿಸಿದ್ದು, ಏರ್‌ಪೋರ್ಟ್‌ಗೆ ಬರುವ ಮತ್ತು ಹೋಗುವ ವಾಹನಗಳ ಮೇಲೆ‌‌ ಹದ್ದಿನಕಣ್ಣು ಇಡಲಾಗಿದೆ.

Loading...