ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Mann Ki Baat: ದೇಶದೆಲ್ಲೆಡೆ ಕರ್ನಾಟಕದ ಹಿರಿಮೆ ಹೆಚ್ಚಿಸಿದೆ ಪ್ರಧಾನಿಗಳ ʼಮನ್ ಕೀ ಬಾತ್ʼ; ಹುಬ್ಬಳ್ಳಿಯಲ್ಲಿ 139ನೇ ಆವೃತ್ತಿ ಆಲಿಸಿದ ಕೇಂದ್ರ ಸಚಿವ ಜೋಶಿ

ದೇಶದೆಲ್ಲೆಡೆ ಕರ್ನಾಟಕದ ಹಿರಿಮೆ ಹೆಚ್ಚಿಸಿದೆ ʼಮನ್ ಕೀ ಬಾತ್ʼ: ಜೋಶಿ

ಹುಬ್ಬಳ್ಳಿ ಓಲೆ ಮಠದ ಜಗದ್ಗುರು ಗುರುಸಿದ್ದಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಪ್ರಧಾನಿ ಮೋದಿ ಅವರ 139ನೇ ಆವೃತ್ತಿಯ ʼಮನ್ ಕೀ ಬಾತ್ʼ ಕಾರ್ಯಕ್ರಮವನ್ನು ಕಾರ್ಯಕರ್ತರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಅಲಿಸಿದರು. ‎ಪ್ರಧಾನಿ ಮೋದಿ ಅವರ ಪ್ರೇರಣಾದಾಯಕ ಮಾತುಗಳು ಪ್ರತಿಯೊಬ್ಬರಲ್ಲೂ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಸಂಕಲ್ಪಕ್ಕೆ ದಾರಿದೀಪ ಎಂದು ಸಚಿವರು ಹೇಳಿದ್ದಾರೆ.

Raichur News: ರಾಯಚೂರಿನಲ್ಲಿ ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ!

ರಾಯಚೂರಿನಲ್ಲಿ ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆ!

ಗದಗ ಜಿಲ್ಲೆಯ ದಂಪತಿ ತಮ್ಮ ಎರಡು ತಿಂಗಳ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿಂಧನೂರಿನ 'ಸಹನಾ ಆಸ್ಪತ್ರೆ'ಗೆ ಕರೆತಂದಿದ್ದರು. ತಪಾಸಣೆ ನಡೆಸಿದ ವೈದ್ಯ ಡಾ. ಶಿವರಾಜ ಪಾಟೀಲ್ ಅವರು, ಅಲ್ಟ್ರಾ ಸೌಂಡ್‌ ಸ್ಕ್ಯಾ‌ನಿಂಗ್ ವೇಳೆ ಮಗುವಿನ ಹೊಟ್ಟೆಯೊಳಗೆ ಗಡ್ಡೆಯಂತಿರುವ ರಚನೆ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

Chikkaballapur News: ಹಿರಿಯ ನಾಗರಿಕರಿಗೆ ಇಳಿ ವಯಸ್ಸಿನಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ: ಡಾ. ಮೇಘಶ್ರೀ

ಇಳಿ ವಯಸ್ಸಿನಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ

ವಯಸ್ಸಾದಂತೆ ದೈಹಿಕ ಆರೋಗ್ಯದಷ್ಟೇ ಮಾನಸಿಕ ನೆಮ್ಮದಿಗೂ ಮಹತ್ವ ನೀಡಬೇಕು. ಸುಲಭವಾಗಿ ಜೀರ್ಣವಾಗುವ, ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ನಾರಿನಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಪ್ರತಿದಿನ ಲಘು ನಡಿಗೆ, ಯೋಗ ಅಥವಾ ಪ್ರಾಣಾಯಾಮ ಮಾಡುವುದರಿಂದ ದೇಹವನ್ನು ಕ್ರಿಯಾಶೀಲವಾಗಿರಿಸಿಕೊಳ್ಳಬಹುದು ಎಂದರು.

ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ ಆರೋಪ; ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ ಡಿಕೆಶಿ

ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ; ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ

Bangalore IT companies: ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಯುವತಿಯೊಬ್ಬಳು ತನ್ನ ಮಾತೃಭಾಷೆ ಕನ್ನಡ ಎಂದು ಹೇಳಿದ್ದಕ್ಕೆ ಉದ್ಯೋಗ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ರೆಸ್ಯೂಮ್‌ನಲ್ಲಿ ಕನ್ನಡ ಭಾಷೆಯನ್ನು ಉಲ್ಲೇಖಿಸಿದ ಕಾರಣಕ್ಕೆ ಉದ್ಯೋಗ ನಿರಾಕರಿಸಲಾಗಿದೆ ಎಂದು ಯುವತಿ ವಿಡಿಯೊ ಮೂಲಕ ಹೇಳಿದ್ದರು. ಇದಕ್ಕ ಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಲಬುರಗಿ ತೊಗರಿ ಬೇಳೆ ಕಂಪು; ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

ಕಲಬುರಗಿ ತೊಗರಿ ಬೇಳೆ ಕುರಿತು ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಶ್ಲಾಘನೆ

Man Ki Baat: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 'ಮನ್ ಕಿ ಬಾತ್' ಕಾರ್ಯಕ್ರಮದ 139ನೇ ಆವೃತ್ತಿಯಲ್ಲಿ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು. ಕಲಬುರಗಿ ತೊಗರಿ ಬೇಳೆಯು ಇದೀಗ ಮೊದಲ ಬಾರಿಗೆ ಮಾಲ್ಡೀವ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮೋದಿ ಈ ಕುರಿತು ಮಾತನಾಡಿದ್ದಾರೆ.

ಸಾಗರ್ ಚಂದ್ರಮ್ಮ ಆಸ್ಪತ್ರೆ ವತಿಯಿಂದ ನೈಸರ್ಗಿಕ ಹೆರಿಗೆ ಕೇಂದ್ರ ಉದ್ಘಾಟನೆ

ಸಾಗರ್ ಚಂದ್ರಮ್ಮ ಆಸ್ಪತ್ರೆ ವತಿಯಿಂದ ನೈಸರ್ಗಿಕ ಹೆರಿಗೆ ಕೇಂದ್ರ ಉದ್ಘಾಟನೆ

ಇಂದು ‘ಬರ್ತಿಂಗ್ ಎಕ್ಸ್‌ಪೀರಿಯೆನ್ಸ್ ರೀಡಿಫೈನ್ಡ್’ (Birthing Experience Redefined) ಎಂಬ ವಿಶೇಷ ಕಾರ್ಯಕ್ರಮವನ್ನು ಆಸ್ಪತ್ರೆ ವತಿಯಿಂದ ಆಯೋಜಿಸಲಾಗಿತ್ತು. ಪೋಷಕರಾಗುವ ಪ್ರಯಾಣವನ್ನು ಸಂಭ್ರಮಿಸಲು ಹಾಗೂ ಹೆರಿಗೆಯ ಪ್ರಕ್ರಿಯೆಯಲ್ಲಿ ನೈಸರ್ಗಿಕ, ಬೆಂಬಲಿತ ಮತ್ತು ಸಬಲೀಕರಣದ ವಿಧಾನದ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. 100ಕ್ಕೂ ಹೆಚ್ಚು ನಿರೀಕ್ಷಿತ ದಂಪತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಾವೇರಿ: ಪರಿಶೀಲನೆಗೆ ಒಳಗಾದ ಮತಗಟ್ಟೆ ಪ್ರಕ್ರಿಯೆ; ತನಿಖೆಗೆ ಒತ್ತಾಯ

ನಕಲಿ ಮತದಾನದ ಆರೋಪ: ಸತ್ಯಾಸತ್ಯತೆ ಬಯಲಿಗೆಳೆಯಲು ಆಗ್ರಹ

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರ ಪತ್ನಿ ಆಶಾ ಪಾಟೀಲ ಅವರ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ಶಿಲ್ಪಾ ಬಡಮ್ಮನವರ್ ಮತ ಚಲಾಯಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ಕುರಿತು ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಮತದಾರರ ಗುರುತಿನ ಪರಿಶೀಲನೆ ಹಾಗೂ ಮತದಾನ ಪ್ರಕ್ರಿಯೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಸ್ಟಿಂಗ್ ಆಪರೇಷನ್ ಪ್ರಕರಣ; ದೆಹಲಿ ಮೂಲದ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು

ಸ್ಟಿಂಗ್ ಆಪರೇಷನ್ ಪ್ರಕರಣ; ದೆಹಲಿ ಮೂಲದ ಆರೋಪಿಗೆ ಷರತ್ತುಬದ್ಧ ಜಾಮೀನು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ವಿಡಿಯೋವನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ದೆಹಲಿ ಮೂಲದ ರಿತೇಶ್ ಪಾಂಡೆಗೆ ಬೆಂಗಳೂರಿನ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಇಂದು ಭಾರಿ ಮಳೆ ಮುನ್ಸೂಚನೆ

ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ಇಂದು ಭಾರಿ ಮಳೆ ಮುನ್ಸೂಚನೆ

ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ತಮಿಳುನಾಡು ಕರಾವಳಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯ ಹಾಗೂ ಸಮುದ್ರದಲ್ಲಿನ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (IMD) ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

Savadatti news: ಮಹಿಳೆಯರು ಶಿಕ್ಷಣ ಮತ್ತು ಆರೋಗ್ಯದ ಕಡೆ ಗಮನಹರಿಸಿ : ಡಾ. ನಯನಾ ಭಸ್ಮೆ

ಮಹಿಳೆಯರು ಶಿಕ್ಷಣ ಮತ್ತು ಆರೋಗ್ಯದ ಕಡೆ ಗಮನಹರಿಸಿ

ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ಸ್ವಯಂ ಉದ್ಯೋಗಗಳಲ್ಲಿ ತೊಡಗಿಕೊಳ್ಳಬೇಕು. ಸ್ವಯಂ ಉದ್ಯೋಗದ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬೇಕು. ಇಂದಿನ ಸ್ಪರ್ದಾ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲರಾಗಬೇಕಿದೆ ಎಂದರು.

ವಿರುಪಾಕ್ಷಿ ಮಾಮನಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ ಸಾಮೂಹಿಕ ಪಾದಯಾತ್ರೆ, ವಿಶೇಷ ಪೂಜೆ ಸಲ್ಲಿಕೆ

ವಿರುಪಾಕ್ಷಿ ಮಾಮನಿ ಅವರ ಆರೋಗ್ಯಕ್ಕಾಗಿ ಪ್ರಾರ್ಥನೆ

ಕೆಂಚಲಾರಕೊಪ್ಪದ ಹನುಮಾನ ದೇವಸ್ಥಾನದಲ್ಲಿ ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿರೂಪಾಕ್ಷ ಮಾಮನಿಯವರು ಶೀಘ್ರ ಗುಣಮುಖರಾಗಿ ಸಂಪೂರ್ಣ ಆರೋಗ್ಯದೊಂದಿಗೆ ಮರಳಿ ಬರಲೆಂದು ಪ್ರಾರ್ಥಿಸಿ ಅವರ ಅಭಿಮಾನಿಗಳು, ಕಾರ್ಯಕರ್ತರಿಂದ ಸಾಮೂಹಿಕ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು.

Sting Operation: ಸ್ಟಿಂಗ್‌ʼಗೆ ದಿಲ್ಲಿ ನಂಟು

Sting Operation: ಸ್ಟಿಂಗ್‌ʼಗೆ ದಿಲ್ಲಿ ನಂಟು

ಸ್ಟಿಂಗ್ ಆಪರೇಷನ್ ಪ್ರಕರಣದ ಸಂಬಂಧ ಶನಿವಾರ ಬೆಳಗ್ಗೆ ಸಿಸಿಬಿ ಪೊಲೀಸರು ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನ ಬಂಧಿಸಿದ್ದರು. ಆರೋಪಿಯನ್ನು ದೆಹಲಿ ಯಿಂದ ಬೆಂಗಳೂರಿಗೆ ಕರೆತಂದು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ದೆಹಲಿಯ ಗಾಜಿಯಾಬಾದ್‌ನಲ್ಲಿ ಮನೆ ಮಾಡಿಕೊಂಡಿದ್ದ ಆರೋಪಿ ರಿತೇಶ್ ಪಾಂಡೆ, 15 ಸಾವಿರಕ್ಕೆ ಮೊಬೈಲ್ ಖರೀದಿ ಮಾಡಿದ್ದ. ದೆಹಲಿಯ ಕರೋಲ್ ಬಾಗ್ ಮಾರ್ಕೆಟ್ ನಲ್ಲಿ ಸಿಮ್ ಕಾರ್ಡ್ ವರ್ಕ್ ಆಗದ ಮೊಬೈಲ್ ಬೇಕು ಎಂದು ಖರೀದಿಸಿದ್ದನಂತೆ.

ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಬೆಳೆಸಲು ಗೀತ ಗಾಯನ ಸ್ಪರ್ಧೆ ಸಹಕಾರಿ: ಗಿರಿಧರ್

ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಬೆಳೆಸಲು ಗೀತ ಗಾಯನ ಸ್ಪರ್ಧೆ ಸಹಕಾರಿ

ಜಾನಪದ ಕ್ಷೇತ್ರಕ್ಕೆ ಚನ್ನಬಸಪ್ಪ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಜಾನಪದ ಗೀತೆಗಳ ಬಗ್ಗೆ ಆಸಕ್ತಿ ಮೂಡಿಸುವುದು ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ರೋವರ್ಸ್ ಮತ್ತು ರೆಂಜರ್ಸ್ ವಿದ್ಯಾರ್ಥಿಗಳಿಗೆ ಜಾನಪದ ಗೀತ ಗಾಯನ ಸ್ಪರ್ಧೆ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅ.26ಕ್ಕೆ ನೂತನ ಟ್ರಸ್ಟ್ ಕಛೇರಿ ಲೋಕಾರ್ಪಣೆ: ಸಮುದಾಯದ ಏಳಿಗೆಗೆ ಮಹರ್ಷಿ ವಾಲ್ಮೀಕಿ ನಾಯಕ ಅಭಿವೃದ್ಧಿ ಟ್ರಸ್ಟ್ ಸ್ಥಾಪನೆ

ಅ.26ಕ್ಕೆ ನೂತನ ಟ್ರಸ್ಟ್ ಕಛೇರಿ ಲೋಕಾರ್ಪಣೆ

ಸಮುದಾಯದ ಏಳಿಗೆಗಾಗಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸ ಲಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ನೆರವು ನೀಡುವುದು, ಆರೋಗ್ಯ ಸಂಬಂಧಿತ ಸಹಾಯ ಒದಗಿಸು ವುದು, ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದು ಹಾಗೂ ವಿವಿಧ ಸೌಲಭ್ಯಗಳಿಂದ ವಂಚಿತ ರಾದವರಿಗೆ ನೆರವು ನೀಡುವುದು ಟ್ರಸ್ಟ್‌ನ ಪ್ರಮುಖ ಉದ್ದೇಶಗಳಾಗಿವೆ

MLA Pradeep Eshwar: ಜನರ ಸಮಸ್ಯೆ ಆಲಿಸುವುದೇ ನನಗೆ ಆತ್ಮತೃಪ್ತಿ: ಶಾಸಕ ಪ್ರದೀಪ್ ಈಶ್ವರ್

ಜನರ ಸಮಸ್ಯೆ ಆಲಿಸುವುದೇ ನನಗೆ ಆತ್ಮತೃಪ್ತಿ: ಶಾಸಕ ಪ್ರದೀಪ್ ಈಶ್ವರ್

ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಸುಮಾರು 150 ಮನೆಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ ಅವರು, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಕುಡಿಯುವ ನೀರು, ಮನೆಗಳ ಮೇಲಿನ ವಿದ್ಯುತ್ ತಂತಿಗಳ ಸಮಸ್ಯೆ ಹಾಗೂ ವೃದ್ಧಾಪ್ಯ ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಪರಿಹಾರ ಕಲ್ಪಿಸಲು ಮುಂದಾದರು.

Tumakur News: ಟಿಪ್ಪರ್ ಲಾರಿ ವಿದ್ಯುತ್ ತಂತಿಗೆ ತಗುಲಿ ಚಾಲಕ ದುರ್ಮರಣ

ಟಿಪ್ಪರ್ ಲಾರಿ ವಿದ್ಯುತ್ ತಂತಿಗೆ ತಗುಲಿ ಚಾಲಕ ಸಾವು

​ತುಮಕೂರು ನಗರದ ದಾನಪ್ಯಾಲೇಸ್ ಮುಖ್ಯ ರಸ್ತೆ ಬಳಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಟಿಪ್ಪರ್ ಲಾರಿಯ ಬಾಕ್ಸ್ ಹೈ-ವೋಲ್ಟೇಜ್ ತ್ರಿಫೇಸ್ ವಿದ್ಯುತ್ ತಂತಿಗಳಿಗೆ ನೇರವಾಗಿ ಸ್ಪರ್ಶಿಸಿ ಚಾಲಕ ಮೃತಪಟ್ಟಿದ್ದಾರೆ. ಮೃತ ಚಾಲಕನನ್ನು ರಾಮಗೊಂಡನಹಳ್ಳಿಯ ನಿವಾಸಿ ಹನುಮಂತರಾಯಪ್ಪ (33) ಎಂದು ಗುರುತಿಸಲಾಗಿದೆ. ​

ತೆನೆ ಹೊತ್ತ ಮಹಿಳೆಯ ಕೈಹಿಡಿದ ಕಾಂಗ್ರೆಸ್ ಕಾರ್ಯಕರ್ತರು

ತೆನೆ ಹೊತ್ತ ಮಹಿಳೆಯ ಕೈಹಿಡಿದ ಕಾಂಗ್ರೆಸ್ ಕಾರ್ಯಕರ್ತರು

ನಗರದ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಗೃಹ ಕಚೇರಿಯಲ್ಲಿ ತಾಲೂಕಿನ ವಿವಿಧ ಭಾಗದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬುರುಡೆಘಟ್ಟ ಗ್ರಾಮದ ಕಾಂಗ್ರೆಸ್ ಪಕ್ಷದ ಕಟ್ಟಾಳು ಬಿ.ಎಸ್. ಉಮಾಶಂಕರ್ ಜೆಡಿಎಸ್ ಪಕ್ಷ ಸೇರುವುದರ ಜೊತೆಗೆ ತಮ್ಮ ನೂರಾರು ಜನ ಅನುಯಾಯಿಗಳನ್ನು ಜೆಡಿಎಸ್ ಪಕ್ಷಕ್ಕೆ ಕರೆ ತಂದರು.

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕು; ನಾಳೆ 3 ಜಿಲ್ಲೆಗಳಿಗೆ ಯೆಲ್ಲೋ ಅರ್ಲಟ್‌: ಬೆಂಗಳೂರಿನಲ್ಲಿ ಗುಡುಗು ಸಹಿತ ಸುರಿಯಲಿದೆ ವರ್ಷಧಾರೆ

ನಾಳೆ ರಾಜ್ಯದ 3 ಜಿಲ್ಲೆಗಳಿಗೆ ಯೆಲ್ಲೂ ಅರ್ಲಟ್‌; ಬಿರುಗಾಳಿ ಸಾಧ್ಯತೆ

Karnataka Weather: ರಾಜ್ಯದಲ್ಲಿ ನಿಧಾನವಾಗಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದೆ. ರಾಜ್ಯಾದ್ಯಂತ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇಂದೂ (ಶನಿವಾರ) ಬೆಂಗಳೂರು ಸಹಿತ ವಿವಿಧ ಕಡೆಗಳಲ್ಲಿ ವರ್ಷಧಾರೆಯಾಗಿದೆ. ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಹಾಸನ, ಮೈಸೂರು ಮತ್ತು ಚಾಮರಾಜನಗರದ ಹಲವೆಡೆ ಧಾರಾಕಾರ ಮಳೆ ಸುರಿಯಿತು.

1,000 ಕೋಟಿ ರೂಪಾಯಿ ಹೂಡಿಕೆಯ ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಸಚಿವ ಎಂ.ಬಿ. ಪಾಟೀಲ್‌ ಚಾಲನೆ

ಪೊದ್ದಾರ್ ಪ್ಲಂಬಿಂಗ್ ಪೈಪ್ಸ್ ಉತ್ಪಾದನಾ ಸ್ಥಾವರಕ್ಕೆ ಚಾಲನೆ

MB Patil: ಕೋಲಾರ ಜಿಲ್ಲೆಯ ವೇಮಗಲ್‌ನ ಕೈಗಾರಿಕಾ ಪ್ರದೇಶದ ಹಂತ-2ರಲ್ಲಿ ಪೊದ್ದಾರ್ ಪ್ಲಂಬಿಂಗ್ ಸಿಸ್ಟಮ್ಸ್ ಉದ್ಯಮ‌ ಸಮೂಹವು ₹1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ನೂತನ ಪರಿಸರ ಸ್ನೇಹಿ ಕಾರ್ಖಾನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಶನಿವಾರ ಉದ್ಘಾಟಿಸಿದರು.

ಓವರ್‌ಟೇಕ್ ಮಾಡಲು ಹೋಗಿ ಕಾರ್‌ಗಳ ಮುಖಾಮುಖಿ ಡಿಕ್ಕಿ: ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಓವರ್‌ಟೇಕ್ ಮಾಡಲು ಹೋಗಿ 2 ಕಾರ್‌ಗಳ ಮುಖಾಮುಖಿ ಡಿಕ್ಕಿ

Road Accident: ಓವರ್‌ಟೇಕ್ ಮಾಡಲು ಹೋಗಿ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಶನಿವಾರ ಪಾವಗಡ ಪಟ್ಟಣದ ಹೊರವಲಯದ ತುಮಕೂರು ರಸ್ತೆಯ ನಯಾರ ಪೆಟ್ರೋಲ್ ಬಂಕ್ ಬಳಿ ಸಂಭವಿಸಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೇನಾಮಿ ಕಂಪನಿಗೆ ರಾಜ್ಯ ಸರ್ಕಾರದಿಂದ 133 ಕೋಟಿ ರೂಪಾಯಿ ಟೆಂಡರ್: ಬಿಜೆಪಿ ನಾಯಕ ಆರ್‌. ಅಶೋಕ್‌ ಗಂಭೀರ ಆರೋಪ

ಕಸ ಟೆಂಡರ್ ನಿಯಮ ಉಲ್ಲಂಘನೆ: ಲೋಕಾಯುಕ್ತ ತನಿಖೆಗೆ ಅಶೋಕ್ ಆಗ್ರಹ

R Ashok: ಕಾಂಗ್ರೆಸ್‌ ಸರ್ಕಾರ ಕಸದಿಂದ ಕಾಸು ಮಾಡಿಕೊಳ್ಳುತ್ತಿದೆ. ಖಾಲಿ ನಿವೇಶನಗಳನ್ನೂ ಬಿಡದೆ ಅಲ್ಲಿನ ಕಸಕ್ಕೂ ದಂಡ ವಿಧಿಸಲಾಗುತ್ತಿದೆ. ಕೃಷ್ಣ ಬೈರೇಗೌಡರು ಹೊಸದಾಗಿ ಸಚಿವರಾದಾಗ ಫ್ರೀಡಂ ಫ್ರಂ ವೇಸ್ಟ್‌ ಅಭಿಯಾನ ಮಾಡಿದ್ದರು. ಆದರೆ ಅದರ ಬದಲು ಮನಿ ಫ್ರಂ ವೇಸ್ಟ್‌ ಸ್ಕೀಮ್‌ ಮಾಡಲಾಗಿದೆ. 133 ಕೋಟಿ ರೂ. ಮೊತ್ತದ ಟೆಂಡರ್‌ ಅನ್ನು ಮುನಿಯಪ್ಪ ಎಂಟರ್‌ಪ್ರೈಸಸ್‌ಗೆ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.

ಅಂಡಾಣುಗಳ ಕೊರತೆಯ ನಡುವೆಯೂ ತಾಯ್ತನದ ಕನಸು ಸಾಕಾರ: ವೈಯಕ್ತೀಕರಿಸಿದ ಐವಿಎಫ್, ಫಲವತ್ತತೆ ಸಂರಕ್ಷಣೆ  ಚಿಕಿತ್ಸೆಯ ಮೂಲಕ ಮಿಲನ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

ಮಿಲನ್ ಆಸ್ಪತ್ರೆ: ಅಂಡಾಣುಗಳ ಕೊರತೆ ಇದ್ದರೂ ತಾಯ್ತನದ ಕನಸು ನನಸು

Milann IVF Hospital: ಅಂಡಾಶಯದ ಗೆಡ್ಡೆಯಿಂದ ಬಳಲುತ್ತಿದ್ದ 32 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ಮಿಲನ್ ಫರ್ಟಿಲಿಟಿ ಮತ್ತು ಬರ್ತಿಂಗ್ ಆಸ್ಪತ್ರೆಯ ತಜ್ಞರ ತಂಡದ ನೆರವಿನೊಂದಿಗೆ ಯಶಸ್ವಿಯಾಗಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಅತ್ಯಂತ ಯೋಜಿತ ಫಲವತ್ತತೆ ಸಂರಕ್ಷಣೆ ಹಾಗೂ ಐವಿಎಫ್ ಚಿಕಿತ್ಸಾ ವಿಧಾನವು ಆಕೆಯ ತಾಯ್ತನದ ಕನಸನ್ನು ನನಸುಗೊಂಡಿದೆ.

ಕೆಪಿಎಸ್‌ಸಿ ಹಗರಣ ಮುಚ್ಚಿ ಹಾಕಲು ಸ್ಟಿಂಗ್ ವಿಷಯ ಜೆಡಿಎಸ್ ಕಡೆಗೆ ತಿರುಗಿಸಲು ಯತ್ನ: ಎಚ್‌.ಡಿ. ಕುಮಾರಸ್ವಾಮಿ ಆರೋಪ

ಸ್ಟಿಂಗ್ ವಿಷಯ ಜೆಡಿಎಸ್ ಕಡೆಗೆ ತಿರುಗಿಸಲು ಯತ್ನ: ಎಚ್‌.ಡಿ. ಕುಮಾರಸ್ವಾಮಿ

HD Kumaraswamy: ರಾಜ್ಯದಲ್ಲಿ ಸ್ಟಿಂಗ್ ವಿಷಯವನ್ನು ಮೊದಲು ಪ್ರಸ್ತಾಪ ಮಾಡಿದವರೇ ಹಾಲಿ ಮುಖ್ಯಮಂತ್ರಿ. ಅದಾದ ಮೇಲೆ ಮಾಜಿ ಸಿಎಂ ವಿರುಧ್ದ ಸ್ಟಿಂಗ್ ನಡೆದಿದೆ ಎನ್ನುವ ಮಾಹಿತಿ ಹೊರಗೆ ಬಂತು. ಅಂದಿನಿಂದಲೇ ಈ ಗೃಹ ಸಚಿವ, ಮುಖ್ಯಮಂತ್ರಿ ಇಬ್ಬರೂ ಸೇರಿ ಜೆಡಿಎಸ್ ತಲೆಗೆ ಕಟ್ಟಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಎಲ್ಲ ಟೀಕೆಗಳು ಬೆದರಿಕೆಯಲ್ಲ: ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳಿಗೆ ಗೈಡ್‌ಲೈನ್‌ ಸಿದ್ಧಪಡಿಸಿದ ಕರ್ನಾಟಕ ಹೈಕೋರ್ಟ್‌

ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಯಾಂತ್ರಿಕ ಎಫ್‌ಐಆರ್ ಬೇಡ: ಹೈಕೋರ್ಟ್

Karnataka High Court: ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಮತ್ತು ಅಭಿಪ್ರಾಯಗಳ ಆಧಾರದಲ್ಲಿ ಪೊಲೀಸರು ಯಾಂತ್ರಿಕವಾಗಿ ಎಫ್‌ಐಆರ್ ದಾಖಲಿಸಬಾರದು ಹಾಗೂ ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಬಂಧನ ಸ್ವಯಂಚಾಲಿತವಾಗಬಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಮಾರ್ಗಸೂಚಿಗಳನ್ನು ನೀಡಿದೆ. ಒಂದೇ ಘಟನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳನ್ನು ದಾಖಲಿಸುವುದನ್ನು ತಡೆಯಬೇಕು ಮತ್ತು ದೂರುಗಳಲ್ಲಿ ಅಪರಾಧದ ಅಗತ್ಯ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಟೀಕೆ ಮತ್ತು ಪ್ರತಿಭಟನೆಗಳು ಸಂವಿಧಾನದ ಅನುಚ್ಛೇದ 19(1)(a) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗೆ ಒಳಪಡುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Loading...