ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Zameer Ahmed Khan: ಮತ್ತೆ ಜೆಡಿಎಸ್‌ಗೆ ಜಮೀರ್? ಊಹಾಪೋಹಕ್ಕೆ ಸಚಿವರ ಬ್ರೇಕ್‌

ಮತ್ತೆ ಜೆಡಿಎಸ್‌ಗೆ ಜಮೀರ್? ಊಹಾಪೋಹಕ್ಕೆ ಸಚಿವರ ಬ್ರೇಕ್‌

ದಾವಣಗೆರೆಯಲ್ಲಿ ನಡೆದ ಮುಸ್ಲಿಂ ನಾಯಕರ ಬಂಡಾಯ ಹಾಗೂ ಅದರ ಬಳಿಕ ಕಾಂಗ್ರೆಸ್​​ನಲ್ಲಿ (Congress) ಅಲ್ಪಸಂಖ್ಯಾತ ನಾಯಕರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡ ಬೆಳವಣಿಗೆಗೆ ಬೇಸತ್ತು ಸಚಿವ ಜಮೀರ್ ಅಹಮದ್‌ ಖಾನ್ ಪಕ್ಷ ತೊರೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದಕ್ಕೀಗ ಸ್ಪಷ್ಟನೆ ದೊರೆತಿದೆ.

Sirsi Doctor Murder Case: ಶಿರಸಿ ವೈದ್ಯನ ಕೊಲೆ ಪ್ರಕರಣದ ಆರೋಪಿ ಅರೆಸ್ಟ್: 15 ಲಕ್ಷ ರೂ.‌ ಮೌಲ್ಯದ ಚಿನ್ನಾಭರಣ, 50 ಸಾವಿರ ನಗದು ವಶಕ್ಕೆ

ಶಿರಸಿ ವೈದ್ಯನ ಕೊಲೆ ಆರೋಪಿ ಅರೆಸ್ಟ್: ಚಿನ್ನಾಭರಣ, ನಗದು ವಶಕ್ಕೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನ್ಯೂ ಕೆ.ಎಚ್.ಬಿ ಕಾಲೋನಿಯಲ್ಲಿ ಡಾ. ರಮೇಶ್ ಎಫ್. ಕಲ್ಗುಟ್ಕರ್ (51) ಎಂಬ ಆಯುರ್ವೇದ ವೈದ್ಯನ ಕೊಲೆಯಾಗಿತ್ತು. ಭಾನುವಾರ ಸಂಜೆ ಘಟನೆ ಬೆಳಕಿಗೆ ಬಂದಿತ್ತು‌. ಬಳಿಕ ಪ್ರಕರಣ ದಾಖಲಿಸಿಕೊಂಡ ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಶಂಕಿತ ಆರೋಪಿಯನ್ನು ಸೆರೆಹಿಡಿದಿದ್ದಾರೆ.

Road Accident: ವಧು ನೋಡಲು ಹೋಗುತ್ತಿದ್ದ ಗಂಡು, ಅಪ್ಪ- ಅಮ್ಮ ಅಪಘಾತದಲ್ಲಿ ದುರ್ಮರಣ

ವಧು ನೋಡಲು ಹೋಗುತ್ತಿದ್ದ ಗಂಡು, ಅಪ್ಪ- ಅಮ್ಮ ಅಪಘಾತದಲ್ಲಿ ದುರ್ಮರಣ

ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಕೊಟ್ರೇಶ್‌ಗೆ ಮದ್ವೆ ಮಾಡೋದಕ್ಕೆ ಮನೆಯವರು ಮುಂದಾಗಿದ್ದರು. ಕನ್ಯೆ ನೋಡುವ ಶಾಸ್ತ್ರವನ್ನೂ ಏರ್ಪಡಿಸಿದ್ದರು. ಕೊಟ್ರೇಶ್ ಬೈಕ್‌ನಲ್ಲಿ ತಂದೆ ತಾಯಿಯನ್ನು ಕೂರಿಸಿಕೊಂಡು ಹೆಣ್ಣಿನ ಮನೆಗೆ ತೆರಳುತ್ತಿದ್ದರು. ಇನ್ನೇನು ಸ್ವಲ್ಪವೇ ದೂರ ಹೋದರೆ ಹೆಣ್ಣಿನ ಮನೆ ಎಂಬಷ್ಟರಲ್ಲಿ ಜವರಾಯ ಬಂದೆರಗಿದ್ದಾನೆ.

Hindi in SSLC: ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಭಾಷೆಗೆ ಗ್ರೇಡ್‌ ಬೇಡ, ಅಂಕವನ್ನೇ ಕೊಡಿ: ಸರ್ಕಾರಕ್ಕೆ ಹೈಕೋರ್ಟ್‌ ಅಂತಿಮ ನಿರ್ದೇಶನ

ಹಿಂದಿಗೆ ಗ್ರೇಡ್‌ ಬೇಡ, ಅಂಕವನ್ನೇ ಕೊಡಿ: ಹೈಕೋರ್ಟ್‌ ಅಂತಿಮ ನಿರ್ದೇಶನ

ಎಸ್ಎಸ್ಎಲ್‌ಸಿಯಲ್ಲಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡುವಂತೆ ಈ ಹಿಂದೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮರುಪರಿಶೀಲನ ಅರ್ಜಿ ಸಲ್ಲಿಸಿತ್ತು. ಇದೀಗ ಹೈಕೋರ್ಟ್ ಮರುಪರಿಶೀಲನೆ ಅರ್ಜಿಯನ್ನು ವಜಾಗೊಳಿಸಿ ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕಗಳನ್ನು ನೀಡಿ ಎಂದು ಮಹತ್ವದ ಆದೇಶ ಹೊರಡಿಸಿದೆ.

Zombie Drug: ಜೋಂಬಿ ಡ್ರಗ್ಸ್ ವಿಡಿಯೋ: ದುನಿಯಾ ವಿಜಿ, ಭಾಸ್ಕರ ರಾವ್‌ಗೆ ಎದುರಾಯ್ತು ಸಂಕಷ್ಟ

ಜೋಂಬಿ ಡ್ರಗ್ಸ್ ವಿಡಿಯೋ: ದುನಿಯಾ ವಿಜಿ, ಭಾಸ್ಕರ ರಾವ್‌ಗೆ ಬಂತು ಸಂಕಷ್ಟ

ವಿಡಿಯೋ ಕುರಿತಂತೆ ಸಮಾಜದ ಜಾಲತಾಣದಲ್ಲಿ ನಟ ವಿಜಯ್ ಮತ್ತು ಭಾಸ್ಕರ್ ರಾವ್ ವಿಡಿಯೋ ಅಪ್ಲೋಡ್ ಮಾಡಿದ್ದರು. ಪ್ರಕರಣ ಸಂಬಂಧ ಬಾಗಲೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈಗಾಗಲೇ ಈ ವಿಡಿಯೋ ಹಂಚಿಕೊಂಡಿದ್ದ 15 ಜನರಿಗೆ ನೋಟಿಸ್ ನೀಡಿದ್ದಾರೆ. ಮಾಹಿತಿಯ ಬಗ್ಗೆ ದಾಖಲೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.

ಬಸವ ಜಯಂತಿ: ಗೇಟ್‌ಗಳನ್ನು  ಮುಚ್ಚಿ ಜನಸಾಮಾನ್ಯರನ್ನು  ನಿರ್ಬಂಧಿಸಿದ್ದು ಖಂಡನೀಯ: ಎಸ್. ಸಂಗಮೇಶ್

ಬಸವ ಜಯಂತಿ: ಜನಸಾಮಾನ್ಯರನ್ನು ನಿರ್ಬಂಧಿಸಿದ್ದು ಖಂಡನೀಯ

ಬಸವ ಜಯಂತಿ ಎಂದರೆ ಕೇವಲ ಒಂದು ಆಚರಣೆ ಅಲ್ಲ. ಅದು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ನೆನಪಿಸುವ ಪವಿತ್ರ ದಿನ. 12ನೇ ಶತಮಾನದಲ್ಲೇ ಮಹಾನ್ ಸಮಾಜ ಪರಿವರ್ತಕರಾದ ಬಸವಣ್ಣ ಅವರು ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ವಿರೋಧಿಸಿ, ಸಮಾನತೆ ಯ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ. ಸರ್ಕಾರ ಬಸವೇಶ್ವರರ ಚಿಂತನೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ

ಹೃದಯಾಘಾತ: ಕೇವಲ 16 ನಿಮಿಷಗಳಲ್ಲಿ ತುರ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ: ಬದುಕುಳಿದ ರೋಗಿ

16 ನಿಮಿಷಗಳಲ್ಲಿ ತುರ್ತು ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆ: ಬದುಕುಳಿದ ರೋಗಿ

ರೋಗಿ ರಾಜೇಂದ್ರ ಕುಮಾರ್ ಅವರು ಹಠಾತ್ ತೀವ್ರ ಎದೆ ನೋವು ಅನುಭವಿಸಿದ ನಂತರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ವಿಶೇಷ ಹೃದಯ ಆರೈಕೆಗಾಗಿ ಫೋರ್ಟಿಸ್‌ಗೆ ದಾಖಲಿಸ ಲಾಯಿತು. ಕನ್ನಿಂಗ್ ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ತಜ್ಞವೈದ್ಯರು ಹೃದಯ ಸ್ನಾಯುವಿನಲ್ಲಿ ಉಂಟಾಗಿರುವ ಗಮನಾರ್ಹ ಗಾಯವನ್ನು ದೃಢಪಡಿಸಿದರು.

KCET exam: ಏ.23ರಿಂದ KCET ಪರೀಕ್ಷೆ, ಈ ನಿಯಮಗಳ ಪಾಲನೆ ಕಟ್ಟುನಿಟ್ಟು

ಏ.23ರಿಂದ KCET ಪರೀಕ್ಷೆ, ಈ ನಿಯಮಗಳ ಪಾಲನೆ ಕಟ್ಟುನಿಟ್ಟು

ಪರೀಕ್ಷೆಯಲ್ಲಿ ಪಾರದರ್ಶಕತೆ ಕಾಪಾಡಲು ಸರಳವಾದ ಡ್ರೆಸ್ ಕೋಡ್ ಅನುಸರಿಸಬೇಕು. ಅಭ್ಯರ್ಥಿಗಳು ಡ್ರೆಸ್ ಕೋಡ್ ಬಗ್ಗೆ ಅನಗತ್ಯ ಟೆನ್ಶನ್ ಮಾಡಿಕೊಳ್ಳದೆ ಸರಳವಾಗಿ ಪರೀಕ್ಷೆಗೆ ಹಾಜರಾಗಲು ಕೋರಲಾಗಿದೆ. ಫುಲ್ ಸ್ಲೀವ್ ಶರ್ಟ್, ಕಿವಿ ಮುಚ್ಚುವಂತಹ ಬಟ್ಟೆಗಳು, ದೊಡ್ಡದಾದ ಲೆದರ್ ಶೂಗಳು ಮತ್ತು ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಅವಕಾಶವಿಲ್ಲ.

Murder case: ಹೊಸ ಕಾರಿನೊಂದಿಗೆ ಪೂಜೆಗೆ ಬಂದವನ ಬರ್ಬರ ಕೊಲೆ, ಕಾರಿಗೂ ಬೆಂಕಿ

ಹೊಸ ಕಾರಿನೊಂದಿಗೆ ಪೂಜೆಗೆ ಬಂದವನ ಬರ್ಬರ ಕೊಲೆ, ಕಾರಿಗೂ ಬೆಂಕಿ

ಸೋಮು ಅಲಿಯಾಸ್ ಸೋಮಲಿಂಗಪ್ಪ ಪಡಸಲಗಿ (36) ಮೃತ ದುರ್ದೈವಿ. ಈ ಘಟನೆಯ ಕ್ರೌರ್ಯ ಕಂಡು ಕನ್ನೋಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಮೃತನ ದೊಡ್ಡಪ್ಪನ ಮಗ ಸದಾಶಿವ ಪಡಸಲಗಿಯೇ ಕೊಲೆಗೈದ ಆರೋಪಿ ಎನ್ನಲಾಗುತ್ತಿದೆ. ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ಗೋಯಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Road accident: ಮರಗಳ ಮಧ್ಯೆ ಸಿಲುಕಿ ನಜ್ಜುಗುಜ್ಜಾದ ಕಾರ್, ಇಬ್ಬರ ಸಾವು, ಒಬ್ಬ ಗಂಭೀರ

ಮರಗಳ ಮಧ್ಯೆ ಸಿಲುಕಿ ನಜ್ಜುಗುಜ್ಜಾದ ಕಾರ್, ಇಬ್ಬರ ಸಾವು, ಒಬ್ಬ ಗಂಭೀರ

ಡಿಕ್ಕಿಯ ರಭಸಕ್ಕೆ ಕಾರ್ ಎರಡು ಮರಗಳ ಮಧ್ಯೆ ಸಿಲುಕಿದೆ. ಅಪಘಾತದ ತೀವ್ರತೆಗೆ ಕಾರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಚಾಲಕನ ಗುರುತು ಪತ್ತೆಯಾಗಿಲ್ಲ. ಕಾರ್‌ನಲ್ಲಿ ಚಾಲಕ ಸೇರಿದಂತೆ ಒಟ್ಟು ಮೂರು ಜನರು ಪ್ರಯಾಣಿಸುತ್ತಿದ್ದರು.

Karnataka Weather: ಇನ್ನೂ ಐದು ದಿನ ಬಿಸಿಲಿನ ಝಳ, ಹಲವೆಡೆ ಹೀಟ್‌ ವೇವ್‌ ಅಲರ್ಟ್

ಇನ್ನೂ ಐದು ದಿನ ಬಿಸಿಲಿನ ಝಳ, ಹಲವೆಡೆ ಹೀಟ್‌ ವೇವ್‌ ಅಲರ್ಟ್

ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್​ ನೀಡಲಾಗಿದೆ. ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ ಮತ್ತು ಧಾರವಾಡ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ.

ED Raid: ಹ್ಯಾರಿಸ್‌- ನಲಪಾಡ್‌ ಮೇಲಿನ ಇಡಿ ದಾಳಿಗೆ ಮೃತ ಸಿಜೆ ರಾಯ್‌ ಜೊತೆಗಿನ ನಂಟು ಕಾರಣ?

ಹ್ಯಾರಿಸ್‌- ನಲಪಾಡ್‌ ಮೇಲಿನ ಇಡಿ ದಾಳಿಗೆ ಮೃತ ಸಿಜೆ ರಾಯ್‌ ಜೊತೆಗಿನ ನಂಟು?

ಸಿ.ಜೆ ಯ್‌ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವ್ಯವಹಾರಿಕ ನಷ್ಟ, ತೆರಿಗೆ ವಂಚನೆ ಸೇರಿ ಹಲವು ವಿಷಯಗಳು ಚರ್ಚೆಗೆ ಬಂದಿದ್ದವು. ಈ ರಾಯ್‌ ಜೊತೆಗೆ ಹ್ಯಾರಿಸ್‌ ನಲಪಾಡ್‌ ಕುಟುಂಬ ವ್ಯವಹಾರಿಕ ಸಂಬಂಧ ಇರಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Shidlaghatta News: ಮಹನೀಯರ ಮಾರ್ಗದಲ್ಲಿ ಸಾಗಿದರೆ ಸಮಾಜ ಅಭಿವೃದ್ಧಿ: ಶಾಸಕ ಬಿ.ಎನ್.ರವಿಕುಮಾರ್

ಮಹನೀಯರ ಮಾರ್ಗದಲ್ಲಿ ಸಾಗಿದರೆ ಸಮಾಜ ಅಭಿವೃದ್ಧಿ

ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಮಹನೀಯರ ಆದರ್ಶಗಳನ್ನು ಅಳವಡಿಸಿ ಕೊಂಡರೆ ಸಮಾಜದ ಅಭಿವೃದ್ಧಿಗೆ ದಾರಿಯಾಗುತ್ತದೆ. ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ಮತದಾರರು ನೀಡಿದ ಅಧಿಕಾರವನ್ನು ಗೌರವದಿಂದ ಸ್ವೀಕರಿಸಿ, ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ತತ್ವಗಳನ್ನು ಅನುಸರಿಸಿ ಎಲ್ಲಾ ಸಮುದಾಯಗಳ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡು ತ್ತಿರುವುದಾಗಿ ತಿಳಿಸಿದರು

ಮಹಿಳಾ ಮೀಸಲಾತಿ ಹೆಸರಲ್ಲಿ ಚುನಾವಣಾ ಗಿಮಿಕ್ : ಶಾಸಕ ಎಸ್.ಆರ್.ಶ್ರೀನಿವಾಸ್

ಮಹಿಳಾ ಮೀಸಲಾತಿ ಹೆಸರಲ್ಲಿ ಚುನಾವಣಾ ಗಿಮಿಕ್

ಜನಗಣತಿ ಆಧಾರದ ಮೇಲೆ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸೀಟು ಗಳಿಸುವ ಲೆಕ್ಕಾಚಾರ ಬುಡ ಮೇಲಾಗಿದೆ. ಕುಟುಂಬ ಕಲ್ಯಾಣ ಯೋಜನೆಯನ್ನು ಯಶಸ್ವಿಯಾಗಿ ನಡೆಸಿದ್ದ ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯೆ ಆಧಾರದ ಮೇಲೆ ಸೀಟು ಹಂಚಿಕೆಯಲ್ಲಿ ಕಡಿಮೆ ಪಾಲು ಪಡೆಯುತ್ತಾರೆ. ಆದರೆ ಉತ್ತರ ಭಾರತದ ರಾಜ್ಯಗಳು ಹೆಚ್ಚು ಜನಸಂಖ್ಯೆ ಹೊಂದಿದ್ದು ದುಪ್ಪಟ ಸೀಟು ಹಂಚಿಕೆ ಪಡೆಯುತ್ತಾರೆ.

Summer Cricket: ಗೌರಿಬಿದನೂರಿನಲ್ಲಿ ಬೇಸಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಗೌರಿಬಿದನೂರಿನಲ್ಲಿ ಬೇಸಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ಬಿಸಿಸಿ ಅಧ್ಯಕ್ಷರಾದ ಯೂನಿಯನ್ ಬ್ಯಾಂಕ್ ಚಂದ್ರಶೇಖರ್ ವಿಜೇತರಾದ ಕ್ರಿಕೆಟ್ ಕ್ರೀಡಾಪಟುಗಳಿಗೆ ಪಾರಿತೋಷಕಗಳನ್ನು ಪ್ರದಾನ ಮಾಡಿ ಮಾತನಾಡಿ, ಗೌರಿಬಿದನೂರಿನಲ್ಲಿ ಸುಮಾರು ಮೂರು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುತ್ತಿದ್ದು, ಆಸಕ್ತ ಸಮಾನ ಮನಸ್ಕ ಕ್ರಿಕೆಟ್ ಪ್ರೇಮಿಗಳನ್ನು ಸೇರಿಸಿಕೊಂಡು ಭಾನುವಾರದ ಬಿಡುವು ಕಾರ್ಯಕ್ರಮದ ಶೀರ್ಷಿಕೆಯ ಅಡಿಯಲ್ಲಿ ನಿರಂತರವಾಗಿ ಕ್ರೀಡಾಭ್ಯಾಸ ಮತ್ತು ಕ್ರೀಡಾಕೂಟಗಳನ್ನು ಮುಂದುವರಿಸುತ್ತಿದ್ದೇವೆ

Karnataka Rains: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ; ಹಲವೆಡೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ; ಹಲವೆಡೆ ಧರೆಗುರುಳಿದ ಮರಗಳು

Karnataka Rains: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಳೆ ಬೀದರ್‌, ವಿಜಯಪುರ, ಯಾದಗಿರಿ, ಬೆಳಗಾವಿ, ಧಾರವಾಡ ಸೇರಿ 12 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ.

Chikkaballapur News: ಬುದ್ಧ, ಬಸವ ಅಂಬೇಡ್ಕರ್ ಅವರ ಬದುಕು ಬರಹವೇ ನಮ್ಮ ಜೀವನಕ್ಕೆ ಸ್ಪೂರ್ತಿ: ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರವಣಪ್ಪ

ಬುದ್ಧ, ಬಸವ ಅಂಬೇಡ್ಕರ್ ಅವರ ಬದುಕು ಬರಹವೇ ನಮ್ಮ ಜೀವನಕ್ಕೆ ಸ್ಪೂರ್ತಿ

ತಾವು ಕಳೆದ 20 ವರ್ಷಗಳಿಂದ ಶೋಷಿತರ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಅದರ ಫಲ ವಾಗಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಸ್ಥಾನ ಲಭಿಸಿದೆ. ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಶೋಷಿ ತರ ಸಂಕಷ್ಟಗಳಿಗೆ ನೆರವಾಗುವ, ನೊಂದವರಿಗೆ ನ್ಯಾಯಕೊಡಿಸುವ ಕೆಲಸ ಮಾಡಲಾಗು ವುದು. ನಡೆಯುವವರು ಎಡಹುವರಲ್ಲದ ಕುಳಿತವರು ಎಡಹುವರೇ ಎಂಬ ಅಣ್ಣ ಬಸವಣ್ಣ ಅವರ ಮಾರ್ಗ ದಲ್ಲಿ ನಡೆಯುವ ಸಂಕಲ್ಪ ತೊಟ್ಟಿದ್ದೇನೆ

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಗೆದ್ದು ಕುಮಾರಣ್ಣ ಸಿಎಂ ಅಗೋದು ಖಚಿತ

ಸಂಸದ ಸುಧಾಕರ್ ಹಿಂಬಾಲಕರು ದುರಹಂಕಾರದ ಮಾತುಗಳು ನಿಲ್ಲಿಸಲಿ

ಜಿಲ್ಲೆಯ ಎನ್‌ಡಿಎ ಮೈತ್ರಿ ಪಕ್ಷಗಳಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಮುಸುಕಿನ ಗುದ್ದಾಟ ಸ್ಪೋಟಗೊಂಡಿರುವುದು ನಿಜ. ಶಾಸಕ ರವಿಕುಮಾರ್ ಮತ್ತು ಸಂಸದ ಡಾ ಕೆ ಸುಧಾಕರ್ ನಡುವೆ ಭಿನ್ನಾಭಿಪ್ರಾಯಗಳಿದ್ದರೆ, ರಾಜ್ಯ ನಾಯಕರ ಗಮನಕ್ಕೆ ಎರಡೂ ಪಕ್ಷಗಳ ಮುಖಂಡರು ತರಬೇಕು. ಅವರು ಅದಕ್ಕೆ ಏನುಬೇಕೋ ಅದನ್ನು ಹೇಳಿ ಸರಿಪಡಿಸುತ್ತಾರೆ.

ಹುಣಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೂಮಳೆಯ ಸ್ವಾಗತ Video

ಹುಣಸೂರಿನಲ್ಲಿ ಬಸವ ಮಹಾದ್ವಾರ ಲೋಕಾರ್ಪಾಣೆಗೊಳಿಸಿದ ಸಿಎಂ

CM Siddaramaiah: ಮೈಸೂರು ಜಿಲ್ಲೆಯ ಹುಣಸೂರಿಗೆ ಸೋಮವಾರ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಹೂಮಳೆಯ ಸುರಿಸುವ ಮೂಲಕ ಸ್ವಾಗತ ಕೋರಿದರು. ಮಾದಳ್ಳಿಯ ಶ್ರೀ ಉಕ್ಕಿನಕಂತೆ ಮಠದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಸವ ಮಹಾದ್ವಾರವನ್ನು ಲೋಕಾರ್ಪಣೆಗೊಳಿಸಿದರು. ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿ, ಶ್ರೀ ನಟರಾಜ ಸ್ವಾಮೀಜಿ, ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು.

ಹೆಲ್ಮೆಟ್ ವಿಚಾರಕ್ಕೆ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ಮಾತಿನ ಚಕಮಕಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ

ಹೆಲ್ಮೆಟ್ ವಿಚಾರಕ್ಕೆ ಮಾತಿನ ಚಕಮಕಿ: ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ

ನಗರದ ಸಂಚಾರಿ ನಿಯಮಗಳ ಪಾಲನೆಗಾಗಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ದಲ್ಲಿ ಈ ಘಟನೆ ಸಂಭವಿಸಿದೆ. ಹೆಲ್ಮೆಟ್ ಧರಿಸದ ಸವಾರರನ್ನು ತಡೆದ ಪೊಲೀಸರು ದಂಡ ವಿಧಿಸಲು ಮುಂದಾದಾಗ,ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

Gauribidanur News: ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದವರು ಬಸವಣ್ಣ: ಮಹೇಂದ್ರ

ಸಾಮಾಜಿಕ ಅನಿಷ್ಟಗಳ ವಿರುದ್ಧ ಸಮರ ಸಾರಿದ್ದವರು ಬಸವಣ್ಣ: ಮಹೇಂದ್ರ

ವೀರಶೈವ ಸಮಾಜದ ಮುಖಂಡರಾದ ಮೃತ್ಯುಂಜಯ ಮಾತನಾಡಿ ಕಾಯಕವೇ ಕೈಲಾಸ ಎಂದು ಸಮಾಜಕ್ಕೆ ಮಾರ್ಗದರ್ಶನ ಮಾಡಿದ ಅಣ್ಣ ಬಸವಣ್ಣ ಅವರ ಜೀವನ ಸಕಲರಿಗೂ ಆದರ್ಶ. ಬಸವೇಶ್ವ ರರ ವಚನ ಸಾಹಿತ್ಯದ ಸಿರಿಯನ್ನು ಸಕಲರೂ ಅಧ್ಯಯನ ಮಾಡಿದರೆ ಇಂದು ನಾವುಗಳು ಸಮಾಜದಲ್ಲಿ ಎದುರಿಸುತ್ತಿರುವ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಬಹುದು

Basava Jayanti 2026: ಬಸವಣ್ಣನವರ ವಿಚಾರಗಳನ್ನು ನಮ್ಮ ಸರ್ಕಾರ ಅನುಸರಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಬಸವಣ್ಣನವರ ವಿಚಾರಗಳನ್ನು ನಮ್ಮ ಸರ್ಕಾರ ಅನುಸರಿಸುತ್ತಿದೆ: ಸಿಎಂ

CM Siddaramaiah: ವೈರುಧ್ಯತೆಯ ಸಮಾಜದಲ್ಲಿ ಬದಲಾವಣೆ ತರಲು ಬುದ್ಧ, ಬಸವಾದಿ ಶರಣರು ಶ್ರಮಿಸಿದ್ದರು. ಆದರೂ ಇಂದಿಗೂ ಜಾತಿವ್ಯವಸ್ಥೆ ಪ್ರಚಲಿತವಾಗಿದೆ. ಭಾರತದ ಜಾತಿ ವ್ಯವಸ್ಥೆಗೆ ಚಲನೆಯಿಲ್ಲ. ಎಲ್ಲರಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಶಕ್ತಿ ದೊರಕಿದಾಗ ಮಾತ್ರ ಚಲನೆಯಿಲ್ಲದ ಜಾತಿವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

MLA Ravikumar: ಸಾಹಿತ್ಯ ಪರಿಷತ್ ಕಚೇರಿ ಉದ್ಘಾಟನೆಗೆ ಶಾಸಕ ರವಿಕುಮಾರ್ ಚಾಲನೆ

ಸಾಹಿತ್ಯ ಪರಿಷತ್ ಕಚೇರಿ ಉದ್ಘಾಟನೆಗೆ ಶಾಸಕ ರವಿಕುಮಾರ್ ಚಾಲನೆ

ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಸದಾ ಕಾರ್ಯನಿರ್ವಹಿಸುತ್ತಿದ್ದು, ಹೊಸ ಕಚೇರಿ ಆರಂಭವಾಗಿರುವುದು ಸಾಹಿತ್ಯ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.ಗ್ರಾಮೀಣ ಮಟ್ಟದಲ್ಲೂ ಕನ್ನಡ ಸಾಹಿತ್ಯವನ್ನು ವ್ಯಾಪಕವಾಗಿ ಹರಡುವಲ್ಲಿ ಎಲ್ಲರೂ ಕೈಜೋಡಿಸಬೇಕು

Kalaburagi shootout: ಕಲಬುರಗಿಯಲ್ಲಿ ಹಾಡಹಗಲೇ ಗುಂಡು ಹಾರಿಸಿ, ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

ಕಲಬುರಗಿಯಲ್ಲಿ ಹಾಡಹಗಲೇ ಗುಂಡು ಹಾರಿಸಿ ವ್ಯಕ್ತಿಯ ಬರ್ಬರ ಹತ್ಯೆ

Kalaburagi Murder: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ವ್ಯಕ್ತಿಯ ಭೀಕರ ಹತ್ಯೆ ನಡೆದಿದೆ. ಮಧ್ಯಾಹ್ನದ ವೇಳೆ ವ್ಯಕ್ತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡು ಹಾರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇದರಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Loading...