ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Tejasvi Surya: ಸತತ 2ನೇ ಬಾರಿ ಐರನ್‌ಮ್ಯಾನ್ 70.3 ಓಟ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ; ಅಣ್ಣಾಮಲೈ ಸಾಥ್‌

ಐರನ್‌ಮ್ಯಾನ್ 70.3 ಓಟ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ

IRONMAN 70.3: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗೋವಾದಲ್ಲಿ ನಡೆದ 5ನೇ ಆವೃತ್ತಿಯ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಓಟವನ್ನು ತೇಜಸ್ವಿ ಸೂರ್ಯ ಪೂರ್ಣಗೊಳಿಸುತ್ತಿರುವುದು ಇದು ಸತತ 2ನೇ ಬಾರಿ. ಈ ಸಲ ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ತಮ್ಮ ಓಟವನ್ನು ಪೂರ್ಣಗೊಳಿಸಿ ಗಮನ ಸೆಳೆದರು.

KUWJ: ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಜಿಲ್ಲಾ ಅಧ್ಯಕ್ಷರಾಗಿ ಪಿ.ಸತ್ಯನಾರಾಯಣ ಆಯ್ಕೆ

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ( Karnataka Working Journalists Association)ದ 2025-28 ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪಿ.ಸತ್ಯ ನಾರಾಯಣ ಅವರು ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ಕೆ.ಲಕ್ಷ್ಮಣ ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಪಿ.ವೆಂಕೋಬ ನಾಯಕ, ಜಿಲ್ಲಾ ಕಾರ್ಯದರ್ಶಿಯಾಗಿ ಕೆ.ಸುರೇಶ್ ಚವ್ಹಾಣ್, ಎಂ.ರವಿಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Priyank Kharge: ಆರ್‌ಎಸ್‌ಎಸ್‌ಗೆ ದೇಣಿಗೆ ನೀಡುವ ಸ್ವಯಂ ಸೇವಕರು ಯಾರು? 11 ಪ್ರಶ್ನೆಗಳನ್ನು ಪಟ್ಟಿ ಮಾಡಿದ ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ಗೆ 11 ಪ್ರಶ್ನೆ ಮುಂದಿಟ್ಟ ಸಚಿವ ಪ್ರಿಯಾಂಕ್‌ ಖರ್ಗೆ

Rashtriya Swayamsevak Sangh: ಆರ್‌ಎಸ್‌ಎಸ್ ಕಾರ್ಯ ವೈಖರಿಯ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ ಎತ್ತಿದ್ದಾರೆ. ಆರ್‌ಎಸ್‌ಎಸ್‌ ಸ್ವಯಂಸೇವಕರು ನೀಡಿದ ದೇಣಿಗೆಯಿಂದ ಕಾರ್ಯ ನಿರ್ವಹಿಸುತ್ತದೆ ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಮೂಡುತ್ತವೆ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Yadgir News: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭರ್ಜರಿ ಗೆಲುವು

ಮಲ್ಲಪ್ಪ ಸಂಕೀನ್ ಸತತ 2ನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ತಮ್ಮ ಎದುರಾಳಿ ಯಾಗಿದ್ದ ದಿನೇಶ್ ವಿ.ಸಿ. ಅವರನ್ನು 9 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಬಿರಿಸಿನಿಂದ ಮತದಾನ ನಡೆಯಿತು. ಜಿಲ್ಲೆಯಲ್ಲಿ ಒಟ್ಟು 142 ಮತದಾರರ ಪೈಕಿ 137 ಮತದಾರರು ಸರದಿಯಲ್ಲಿ ನಿಂತುಕೊಂಡರು ತಮ್ಮ ಮತದಾನ ಹಕ್ಕು ಚಲಾಯಿಸಿದರು.

Bagepally News: ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠ ಕನಕದಾಸರು

ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠ ಕನಕದಾಸರು

15-16ನೇ ಶತಮಾನದ ಸಂತ ಕವಿ ಕನಕದಾಸರು, ತಮ್ಮ ಕೀರ್ತನೆ, ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆಳವರ್ಗದಲ್ಲಿ ಜನಿಸಿದರೂ, ತಮ್ಮ ಭಕ್ತಿ ಜ್ಞಾನ ದಿಂದ ಜಾತಿ ವ್ಯವಸ್ಥೆ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ಮೌಲ್ಯ ಸಾರಿದ ದಾಸಶ್ರೇಷ್ಠರಾಗಿದ್ದಾರೆ.

Bengaluru News: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಪದಾಧಿಕಾರಿಗಳ ಪದಗ್ರಹಣ

Akhila Bhartiya Brahman Mahasangh: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆ ನೆರವೇರಿತು. ಸಂಘಟನೆಯ ವಿಸ್ತರಣೆ, ಯುವ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಜಿಲ್ಲಾ ಅಧ್ಯಕ್ಷೆಯಾಗಿ ಪೂರ್ಣಿಮಾ ಜಿ.ಎಲ್. ಅವರನ್ನು ನೇಮಿಸಲಾಯಿತು.

Bagepally News: ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿದ ವಿಶ್ವಮಾನ ಕನಕದಾಸರು: ರಾಮಸುಬ್ಬಮ್ಮ

ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿದ ವಿಶ್ವಮಾನ ಕನಕದಾಸರು

ಕನಕದಾಸರು ಒಂದು ವರ್ಗದ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು

ಆರ್.ಎಲ್.ಜಾಲಪ್ಪ ಜಾತಿಧರ್ಮದ ಅಡ್ಡಗೋಡೆಗಳನ್ನು ಕೆಡವಿದ ಧೀಮಂತ ನಾಯಕ : ಎನ್.ಹೆಚ್.ಶಿವಶಂಕರ್‌ರೆಡ್ಡಿ

ಆರ್.ಎಲ್.ಜಾಲಪ್ಪ ಜಾತಿಧರ್ಮದ ಅಡ್ಡಗೋಡೆಗಳ ಕೆಡವಿದ ಧೀಮಂತ ನಾಯಕ

ಜಾಲಪ್ಪನವರು ಸಚಿವರಾಗಿದ್ದ ಸಂಧರ್ಭದಲ್ಲಿ ಸಾವಿರಾರು ಮಂದಿ ರೈತರ ತೆರದ ವಿಫಲ ಬಾವಿಗಳ ಸಾಲವನ್ನು ಮನ್ನಾ ಮಾಡಿ ರೈತರ ಸಂಕಷ್ಟಗಳಿಗೆ ನೆರವಾಗಿದ್ದ ಅವರು ನೇರನುಡಿ ನಿಷ್ಠೂರ ರಾಜಕಾರಣಿಯಾಗಿದ್ದರು. ಇಂದಿನ ರಾಜಕಾರಣಿಗಳಂತೆ ಅವರು ರೈಟು, ಲೆಪ್ಟಿಗೆ ಅಂಟಿಕೊಳ್ಳದೆ ಸ್ಟೆçöÊಟ್ ರಾಜಕಾರಣಿಯಾಗಿದ್ದರು

Mohan Bhagwat: ಮುಸ್ಲಿಮರಿಗೆ ಆರ್‌ಎಸ್‌ಎಸ್‌ನಲ್ಲಿ ಅವಕಾಶವಿದೆಯೇ; ಮೋಹನ್ ಭಾಗವತ್ ಪ್ರತಿಕ್ರಿಯೆ ಹೀಗಿತ್ತು

'ಮುಸ್ಲಿಮರಿಗೆ ಆರ್‌ಎಸ್‌ಎಸ್‌ನಲ್ಲಿ ಅವಕಾಶವಿದೆಯೇ?'

RSS Muslim inclusion: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಸಂಘದಲ್ಲಿ ಮುಸ್ಲಿಮರು ಸೇರಲು ಅವಕಾಶವಿದೆಯೆ? ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಭಾಗವತ್ ಅವರು ಭಾರತೀಯತೆಯ ಕುರಿತ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ  ಐಷಾರಾಮಿ ಸವಲತ್ತು: ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಕೈದಿಗಳಿಗೆ ಐಷಾರಾಮಿ ಸವಲತ್ತು: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ

CM Siddaramaiah: ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿನ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಐಸಿಸ್‌ ಭಯೋತ್ಪಾದಕ ಶಕೀಲ್‌ ಸೇರಿದಂತೆ ಹಲವರಿಗೆ ರಾಜಾತಿಥ್ಯ ದೊರೆಯುತ್ತಿರುವ ವಿಚಾರ ಇತ್ತೀಚೆಗೆ ಬೆಳಕಿಗೆ ಬಂತು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ರಾಜ್ಯವೇ ತಲೆ ತಗ್ಗಿಸುವ ಘಟನೆ; ಅಪ್ರಾಪ್ತೆ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 21 ವರ್ಷದ ಯುವಕ

ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 21 ವರ್ಷದ ಯುವಕ

Koppal News: ಕೊಪ್ಪಳದಲ್ಲಿ 21 ವರ್ಷದ ಯುವಕನೊಬ್ಬ ತನ್ನ ಅಪ್ರಾಪ್ತ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಸುಮಾರು 8 ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಸಹೋದರನಿಂದ ಗರ್ಭ ಧರಿಸಿದ ಸಂತ್ರಸ್ತೆ ಅಕ್ಟೋಬರ್‌ 30ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಕಾಮುಕ ಸಹೋದರನ್ನು ಪೊಲೀಸರು ಬಂಧಿಸಿದ್ದಾರೆ.

ವಾಸ್ಕರ್ ವಾಕಥಾನ್ 2025: “ಅಂಪ್ಯೂಟೇಶನ್-ಫ್ರೀ ಇಂಡಿಯಾ” ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದವರೆಗೆ ಭರ್ಜರಿ ಮೆರವಣಿಗೆ

ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದವರೆಗೆ ಭರ್ಜರಿ ಮೆರವಣಿಗೆ

"ಇಂತಹ ಉಪಕ್ರಮಗಳು ಉತ್ತಮ ಆರೋಗ್ಯ ಸಾಕ್ಷರತೆಯನ್ನು ಉತ್ತೇಜಿಸುವುದಲ್ಲದೆ, ಸಕಾಲಿಕ ವೈದ್ಯಕೀಯ ಹಸ್ತಕ್ಷೇಪವು ಸಾವಿರಾರು ಜನರನ್ನು ಜೀವಮಾನದ ಅಂಗವೈಕಲ್ಯದಿಂದ ರಕ್ಷಿಸುವ ಹೆಚ್ಚು ಸಹಾನುಭೂತಿಯ ಸಮಾಜವನ್ನು ನಿರ್ಮಿಸುತ್ತದೆ" ಎಂದು ಹೇಳುವ ಮೂಲಕ ಅವರು ಸಾರ್ವಜನಿಕ ಜಾಗೃತಿಯ ಮಹತ್ವವನ್ನು ಎತ್ತಿ ತೋರಿಸಿದರು.

Sathyanarayana Rao Gaikwad: ರಜನಿಕಾಂತ್‌ ಸಹೋದರನ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್‌ಚಾರ್ಚ್‌

ರಜನಿಕಾಂತ್‌ ಸಹೋದರನ ಆರೋಗ್ಯದಲ್ಲಿ ಚೇತರಿಕೆ

Superstar Rajinikanth: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಸದ್ಯ ಚೇತರಿಸಿಕೊಂಡಿದ್ದು, ಶನಿವಾರ (ನವೆಂಬರ್‌ 8) ಡಿಸ್‌ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಸತ್ಯನಾರಾಯಣ ರಾವ್‌ ಅವರಿಗೆ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು.

Police Firing: ಆನೇಕಲ್‌ನಲ್ಲಿ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರ ಫೈರಿಂಗ್

ಆನೇಕಲ್‌ನಲ್ಲಿ ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರ ಫೈರಿಂಗ್

Bengaluru Crime News: ಕಿಡ್ನಾಪ್​ ಮತ್ತು ಇಬ್ಬರ ಕೊಲೆ ಪ್ರಕರಣದ ಆರೋಪಿಯಾಗಿರುವ ಆಂಧ್ರ ಮೂಲದ ರವಿ ಪ್ರಸಾದ್ ರೆಡ್ಡಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಉದ್ಯಮಿ ಬಾಲಪ್ಪ ರೆಡ್ಡಿ, ಮಾದೇಶ್ ಎಂಬವರ ಕೊಲೆ ಪ್ರಕರಣದ ಸಂಬಂಧ ಆರೋಪಿ ರವಿ ಪ್ರಸಾದ್ ರೆಡ್ಡಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದರು. ಕೇಸ್​ ಸಂಬಂಧ ಸ್ಥಳ ಮಹಜರಿಗೆ ಪೊಲೀಸರು ಕರೆದೊಯ್ದಿದ್ದ ವೇಳೆ ಆರೋಪಿ, ಹೆಡ್​​ ಕಾನ್‌​ಸ್ಟೇಬಲ್​​ ಅಶೋಕ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾನೆ.

G Parameshwar: ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೆ ರಾಜಾತಿಥ್ಯ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಪರಪ್ಪನ ಅಗ್ರಹಾರದಲ್ಲಿ ಉಗ್ರನಿಗೆ ರಾಜಾತಿಥ್ಯ: ಗೃಹ ಸಚಿವರು ಹೇಳಿದ್ದೇನು?

Parappana Agrahara Jail: ಇಂಥ ಘಟನೆಗಳು ಮಂಗಳೂರು, ಬೆಳಗಾವಿ ಸೇರಿದಂತೆ ಬಹಳ ಕಡೆ ಆದ ಸಂದರ್ಭದಲ್ಲಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪದೇ ಪದೆ ಆಗಿದ್ದು ಕೇಳಿಬಂದಿದೆ. ಇದೇ ರೀತಿಯಾದಾಗ ಕೆಲವರನ್ನು ಸಸ್ಪೆಂಡ್ ಮಾಡಲಾಗಿತ್ತು. ಎಡಿಜಿಪಿ ಬಿ ದಯಾನಂದ ಅವರ ಜೊತೆಗೆ ನಾನು ಮಾತನಾಡಿದ್ದೇನೆ. ಈ ಬೆಳವಣಿಗೆಗೆ ಯಾರು ಹೊಣೆಗಾರರಾಗಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೂಪರಿಟೆಂಡೆಂಟ್ ಮತ್ತು ಕೆಳ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ನುಡಿದಿದ್ದಾರೆ.

Vande Bharat Train: ಪಿಎಂ ಮೋದಿ ಉದ್ಘಾಟಿಸಿದ ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿತಾಯ

ಬೆಂಗಳೂರು- ಎರ್ನಾಕುಲಂ ವಂದೇ ಭಾರತ್ ರೈಲಿನಿಂದ ಎರಡು ಗಂಟೆ ಉಳಿತಾಯ

Bengaluru- Ernakulam Vande Bharat Train: ಪ್ರಸ್ತುತ, ಎರ್ನಾಕುಲಂ ಮತ್ತು ಬೆಂಗಳೂರು ನಡುವಿನ ಇಂಟರ್‌ಸಿಟಿ ಎಕ್ಸ್‌ಪ್ರೆಸ್ 583 ಕಿ.ಮೀ ಮಾರ್ಗವನ್ನು ಕ್ರಮಿಸಲು 11 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೊಸ ವಂದೇ ಭಾರತ್ ರೈಲು ಈ ಪ್ರಯಾಣದ ಸಮಯವನ್ನು ಕೇವಲ 8 ಗಂಟೆ 40 ನಿಮಿಷಗಳಿಗೆ ಇಳಿಸಲಿದ್ದು, ಎರಡೂ ನಗರಗಳ ನಡುವೆ ವೇಗದ ಸಂಪರ್ಕವನ್ನು ಕಲ್ಪಿಸುತ್ತದೆ.

HD Kumaraswamy: ಕಬ್ಬು ಬೆಳೆಗಾರರ ಕಿವಿಗೆ ಹೂವಿಟ್ಟು ದೊಡ್ಡ ದೋಖಾ ಮಾಡಿದೆ ರಾಜ್ಯ ಸರ್ಕಾರ: ಎಚ್‌ಡಿಕೆ

ಕಬ್ಬು ಬೆಳೆಗಾರರ ಕಿವಿಗೆ ಹೂವಿಟ್ಟ ರಾಜ್ಯ ಸರ್ಕಾರ: ಎಚ್‌ಡಿಕೆ

Sugarcane Farmers Protest‌: ಪ್ರಧಾನಿ ಮೋದಿ ಅವರು ಕಬ್ಬಿಗೆ FRP ದರ ಎಂದು ಕ್ವಿಂಟಲ್‌ಗೆ ₹3,550 ನಿಗದಿ ಮಾಡಿದ್ದಾರೆ. ಆದರೆ ಶುಕ್ರವಾರ ಸಿಎಂ, ಡಿಸಿಎಂ ‌ಮ್ಯಾರಾಥಾನ್ ಸಭೆ ಮಾಡಿದರು. ದಿನಪೂರ್ತಿ ಸಭೆ ನಡೆಸಿ ₹100 ಮಾತ್ರ ಜಾಸ್ತಿ ಮಾಡಿದ್ದಾರೆ. ಕೇಂದ್ರ ಸರ್ಕಾರ ₹3550 FRP ನಿಗದಿ ಮಾಡಿದೆ. ರೈತರು ಕೇಳಿದ್ದು ₹3500 ಬೆಲೆಯನ್ನು. ಸರ್ಕಾರ ಮ್ಯಾರಥಾನ್ ‌ಸಭೆ ಮಾಡಿ ಕೊಟ್ಟಿದ್ದು ₹3,300 ಮಾತ್ರ. ಹಾಗಾದರೆ ಇವರು ರೈತರಿಗೆ ಕೊಟ್ಟಿದ್ದೇನು? ಸರ್ಕಾರ ಮಾಡಿರುವ ಮೋಸವನ್ನು ಪ್ರಶ್ನೆ ಮಾಡದೇ ರೈತರು ಸಂತೋಷಪಟ್ಟರೆ ನನ್ನದೇನು ಅಭ್ಯಂತರ ಇಲ್ಲ. ಆದರೆ, ಸರ್ಕಾರ ರೈತ ಕುಟುಂಬಗಳಿಗೆ ದೋಖಾ ಮಾಡಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

Road Accident: ಚನ್ನಗಿರಿ ಬಳಿ ಭದ್ರಾ ಕಾಲುವೆಗೆ ಕಾರು ಉರುಳಿ ಇಬ್ಬರು ಸಾವು

ಚನ್ನಗಿರಿ ಬಳಿ ಭದ್ರಾ ಕಾಲುವೆಗೆ ಕಾರು ಉರುಳಿ ಇಬ್ಬರು ಸಾವು

Davanagere news: ದಾವಣಗೆರೆ ಮೂಲದ 6 ಜನ ಮಂಗಳೂರು ಕಡೆ ಪ್ರವಾಸಕ್ಕೆ ಹೋಗಿದ್ದರು. ಪ್ರವಾಸ ಮುಗಿಸಿ ವಾಪಸ್ ಬರುವಾಗ ಚಾಲಕ ನಿದ್ರೆ ಮಂಪರಿನಲ್ಲಿದ್ದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಭದ್ರಾ ಕಾಲುವೆಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದು, ನಾಲ್ಕು ಮಂದಿ ಈಜಿ ದಡ ಸೇರಿದ್ದಾರೆ. ಸ್ಥಳಕ್ಕೆ ಸಂತೆಬೆನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Mohan Bhagwat: ಆರೆಸ್ಸೆಸ್‌ನ ಹಣದ ಮೂಲ ಇದು: ಮೋಹನ ಭಾಗವತ್‌ ಸ್ಪಷ್ಟನೆ

ಆರೆಸ್ಸೆಸ್‌ನ ಹಣದ ಮೂಲ ಇದು: ಮೋಹನ ಭಾಗವತ್‌ ಸ್ಪಷ್ಟನೆ

Rashtriya Swayamsevak Sangh: ಜನರ ಹೃದಯಗಳು ನಮ್ಮೊಂದಿಗಿವೆ. ಇಡೀ ಸಮಾಜವನ್ನು ಸಂಘಟಿಸುವುದು ನಮ್ಮ ಗುರಿ. ನಾವು ಇಲ್ಲಿ ದೋಷಗಳನ್ನು ಹುಡುಕಲು ಬಂದಿಲ್ಲ. ಇಡೀ ಹಿಂದೂ ಸಮಾಜವನ್ನು ಸಂಘಟಿಸುವ ಕಲ್ಪನೆಯನ್ನು ಜನರು ಅರ್ಥಮಾಡಿಕೊಳ್ಳುವುದು ಕಷ್ಟ. ಆರ್‌ಎಸ್‌ಎಸ್ ಸಮಾಜದಲ್ಲಿ ಅಧಿಕಾರ ಅಥವಾ ಪ್ರಾಮುಖ್ಯತೆಯನ್ನು ಬಯಸುವುದಿಲ್ಲ. ಭಾರತ ಮಾತೆಯ ಮಹಿಮೆಗಾಗಿ ಸಮಾಜವನ್ನು ಒಗ್ಗೂಡಿಸುವುದು ಮತ್ತು ಸಂಘಟಿಸುವುದು ನಮ್ಮ ಏಕೈಕ ಗುರಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.

Karnataka Weather: ಇಂದಿನ ಹವಾಮಾನ; ರಾಜ್ಯಾದ್ಯಂತ ಮುಂದುವರಿಯಲಿದೆ ಒಣ ಹವೆ

ಇಂದಿನ ಹವಾಮಾನ; ರಾಜ್ಯಾದ್ಯಂತ ಮುಂದುವರಿಯಲಿದೆ ಒಣ ಹವೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಮುಖ್ಯವಾಗಿ ನಿರ್ಮಲ ಆಕಾಶವಿರಲಿದೆ. ಕೆಲವು ಕಡೆಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29° C ಮತ್ತು 19° C ಆಗಿರಬಹುದು.

DK Shivakumar: ಪಾಲಿಕೆ ಚುನಾವಣೆಗೆ ಮತಪತ್ರಗಳ ಬಳಕೆ: ಡಿಕೆ ಶಿವಕುಮಾರ್‌

ಪಾಲಿಕೆ ಚುನಾವಣೆಗೆ ಮತಪತ್ರಗಳ ಬಳಕೆ: ಡಿಕೆ ಶಿವಕುಮಾರ್‌

Ballet Papers: ಮಹದೇವಪುರ ವಿಧಾನಸಭೆ ಕ್ಷೇತ್ರದ ಮತದಾನದ ಅಧ್ಯಯನ ಮಾಡಿ ಅಲ್ಲಿ ನಡೆದಿರುವ 1 ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಒಂದೇ ಮನೆಯಲ್ಲಿ 80ಕ್ಕೂ ಹೆಚ್ಚು ಮತಗಳನ್ನು ಸೇರಿಸಲಾಗಿತ್ತು. ಒಂದು ಬಾರ್ ನಲ್ಲಿ 70-80 ಮತದಾರರಿರುವುದನ್ನು ದಾಖಲೆ ಸಮೇತ ಬಹಿರಂಗ ಪಡಿಸಿ ರಾಹುಲ್ ಗಾಂಧಿ ಅವರು ದೇಶದ ಗಮನ ಸೆಳೆದಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Minister Dr. M.C. Sudhakar: ಜಾತಿ ಪದ್ದತಿ ಮತ್ತು ಅಸಮಾನತೆಯ ವಿರುದ್ಧ ಸಮರ ಸಾರಿದ್ಧ ಕ್ರಾಂತಿಕಾರಿ ಯುಗಪುರುಷ ಕನಕದಾಸ : ಡಾ.ಎಂ.ಸಿ.ಸುಧಾಕರ್

ಅಸಮಾನತೆಯ ವಿರುದ್ಧ ಸಮರ ಸಾರಿದ್ಧ ಕ್ರಾಂತಿಕಾರಿ ಯುಗಪುರುಷ

ಜಾತಿ ಅಸಮಾನತೆ ಮತ್ತು ಕರ್ಮಠ ಆಚರಣೆಗಳ ವಿರುದ್ಧ ಬಹುದೊಡ್ಡ ಕ್ರಾಂತಿ ಮಾಡಿದ ಅವರು ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರಾಗಿದ್ದಾರೆ. ಇಂತಹ ಮಹಾನ್ ಚೇತನ ತಿಪ್ಪೇನಹಳ್ಳಿ ಬಳಿಯ ರಂಗಸ್ಥಳದ ರಂಗನಾಥ ಸ್ವಾಮಿಯ ದರ್ಶನ ಮಾಡಿದ್ದಲ್ಲದೆ ರಂಗನಾಥಸ್ವಾಮಿಯ ಬಗ್ಗೆ ಹತ್ತಾರು ಕೀರ್ತನೆಗಳನ್ನು ರಚಿಸಿದ್ದಾರೆ.

Pradeep Easwar: ತಿಮಿಂಗಿಲಗಳ ನಡುವೆ ಈಜುತ್ತಿದ್ದೇನೆ ಸಾಧ್ಯವಾದಲ್ಲಿ ಕಾಪಾಡಿಕೊಳ್ಳಿ: ಪ್ರದೀಪ್ ಈಶ್ವರ್

ತಿಮಿಂಗಿಲಗಳ ನಡುವೆ ಈಜುತ್ತಿದ್ದೇನೆ ಸಾಧ್ಯವಾದಲ್ಲಿ ಕಾಪಾಡಿಕೊಳ್ಳಿ

ನಾನು ಎಂ.ಎಲ್.ಎ ಆಗುವವರೆಗೆ ಈ ಕ್ಷೇತ್ರದ ಮತದಾರರು ಬೆಂಗಳೂರಿಗೆ ಹೋಗಿ ಅವರು ಬಂದು ದರ್ಶನ ನೀಡುವವರೆಗೆ ಕಾಯಬೇಕಿತ್ತು. ಆದರೆ ನಾನು ಅವರು ಎದ್ದು ಸೂರ್ಯನ ಮುಖ ನೋಡುವಷ್ಟರಲ್ಲಿಯೇ ಅವರ ಮನೆಬಾಗಿಲಿಗೆ ಬಂದು ಅವರ ಕಷ್ಟಗಳನ್ನು ಕೇಳುತ್ತಿದ್ದೇನೆ. ರಾಜಕಾರಣದಲ್ಲಿ ನಾನು ತಿಮಿಂಗಿಲಗಳ ನಡುವೆ ಈಜುತ್ತಿದ್ದೇನೆ.

MLA Subbareddy: ಕನಕದಾಸರ ವಚನಗಳು ಸರ್ವಕಾಲಿಕವಾದುದು, ಜೀವನದಲ್ಲಿ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ: ಶಾಸಕ ಸುಬ್ಬಾರೆಡ್ಡಿ

ಕನಕದಾಸರ ವಚನಗಳು ಸರ್ವಕಾಲಿಕ

ನಾಡಿನ 250ಕ್ಕೂ ಹೆಚ್ಚಿನ ದಾಸರ ಪೈಕಿ ಶ್ರೇಷ್ಠರಾದವರು ಕನಕದಾಸರು. ಸರಳ ಭಾಷೆಯಲ್ಲಿ ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿ, ಮುಗ್ದ ಜನರಲ್ಲಿ ಜ್ಞಾನ ತುಂಬುತ್ತಿದ್ದರು. ಬಸವಣ್ಣನವರ ನಂತರ ಕನಕದಾಸರು ಜಾತಿಪದ್ದತಿ ಕುರಿತಂತೆ ಹೋರಾಟ ನಡೆಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.

Loading...