ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಯೋಗ ಸೂಕ್ಷ್ಮ ಸಿದ್ಧಿಸಿಕೊಂಡವನಿಗೆ ಸರ್ಪದ ವಿಷವೂ ಏನೂ ಮಾಡದು: ರಾಘವೇಶ್ವರ ಭಾರತೀ ಶ್ರೀ

ಯೋಗ ಸೂಕ್ಷ್ಮ ಸಿದ್ಧಿಸಿಕೊಂಡವನಿಗೆ ಸರ್ಪದವಿಷವೂ ಏನೂ ಮಾಡದು

Sri Raghaveshwara Bharathi Swamiji: ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ 'ಅನ್ನಬ್ರಹ್ಮ ಚಾತುರ್ಮಾಸ್ಯ'ದ ಧರ್ಮಸಭೆಯಲ್ಲಿ ರಾಘವೇಶ್ವರ ಶ್ರೀಗಳು ಪ್ರವಚನ ನೀಡಿದ್ದಾರೆ. ಯೋಗ ಸೂಕ್ಷ್ಮವಾದ ಅಮೃತಪಾನವನ್ನು ಸಿದ್ಧಿಸಿಕೊಂಡವನಿಗೆ ತಕ್ಷಕ ಸರ್ಪದ ಮಹಾವಿಷದಿಂದಲೂ ಕೂಡ ಏನೂ ಆಗದು. ಒಮ್ಮೆ ಈ ಅಮೃತವನ್ನು ಆಸ್ವಾದಿಸಲು ಕಲಿತ ಯೋಗಿಯು ಮತ್ತೆ ಮತ್ತೆ ಅದನ್ನು ಬಯಸುತ್ತಾನೆ ಎಂದು ತಿಳಿಸಿದ್ದಾರೆ.

Cauvery Theerthodbhava: ಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ

ಕಾವೇರಿ ತೀರ್ಥೋದ್ಭವ ಆಚರಣೆಗೆ 2 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ

ಕಾವೇರಿ ತೀರ್ಥೋದ್ಭವವು ಕೊಡಗಿನ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾಡಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುದಾನ ಬಿಡುಗಡೆಗೆ ಸೂಚನೆ ನೀಡಿದ್ದಾರೆ.

ಭ್ರಷ್ಟರನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ರಕ್ಷಿಸುತ್ತಿದೆ: ಬಿ.ವೈ. ವಿಜಯೇಂದ್ರ ಆರೋಪ

ಭ್ರಷ್ಟರನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ರಕ್ಷಿಸುತ್ತಿದೆ: ಬಿವೈವಿ

BY Vijayendra: ಭ್ರಷ್ಟಚಾರದ ಕರ್ಮಕಾಂಡ ಬೀದಿಗೆ ಬಂದು ಜನರಿಗೆ ಮುಖ ತೋರಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತಿರುವ ಮುಖ್ಯಮಂತ್ರಿಗಳು ನಾಗೇಂದ್ರ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Dr K Sudhakar: ಮಹಿಳಾ ಕಾರ್ಯಕರ್ತೆಯರು, ತಾಯಂದಿರ ಸಕ್ರಿಯ ಪಾಲ್ಗೊಳ್ಳುವಿಕೆ ಪಕ್ಷದ ಶಕ್ತಿ ಹೆಚ್ಚಿಸಲಿದೆ: ಡಾ.ಕೆ.ಸುಧಾಕರ್

ಪಕ್ಷ ಸಂಘಟನೆಗೆ ಎಲ್ಲರೂ ಕೈಜೋಡಿಸಿ

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಸಂಘಟನೆ ಕೆಲವರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಜವಾಬ್ದಾರಿ ಅರಿತು ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು

Brahmavara Double murder: ಬ್ರಹ್ಮಾವರದಲ್ಲಿ ಭೀಕರ ಕೃತ್ಯ; ಹೆತ್ತ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಮಗ!

ಬ್ರಹ್ಮಾವರದಲ್ಲಿ ತಂದೆ-ತಾಯಿಯನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಮಗ!

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ತಂದೆ ತನಗೆ ಮಾನಸಿಕ ಹಾಗೂ ದೈಹಿಕವಾಗಿ ಟಾರ್ಚರ್‌ ನೀಡುತ್ತಿದ್ದರು. ಅವರಿಗೆ ತಾಯಿ ಬೆಂಬಲ ನೀಡುತ್ತಿದ್ದರು. ಹೀಗಾಗಿ ಅವರನ್ನು ಕೊಂದಿರುವುದಾಗಿ ಪುತ್ರ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

CHIMUL: ಹಾಲಿನ ಖರೀದಿ ದರ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಸಾವಿರಾರು ಹಾಲು ಉತ್ಪಾದಕರ ಪ್ರತಿಭಟನೆ

ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳಕ್ಕೆ ಒಕ್ಕೊರಲ ಆಗ್ರಹ

ಜಿಲ್ಲೆಯಲ್ಲಿ ಬಹುತೇಕ ಸಣ್ಣ ರೈತರಿದ್ದು, ಹೆಚ್ಚಿನವರು ನೀರಾವರಿ ಕೊರತೆಯಿಂದ ಹೈನುಗಾರಿಕೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಸುಮಾರು 38 ಸಾವಿರ ಹಾಲು ಉತ್ಪಾದ ಕರು ಚಿಮುಲ್‌ಗೆ ಹಾಲು ಪೂರೈಸುತ್ತಿದ್ದು, ಪ್ರತಿದಿನ ಸುಮಾರು 5.47 ಲಕ್ಷ ಕೆ.ಜಿ. ಹಾಲು ಸಂಗ್ರಹವಾಗು ತ್ತಿದೆ

ಚಿಂತಾಮಣಿಯಲ್ಲಿ ಡಿಜೆ, ಪಟಾಕಿಗೆ ನಿರ್ಬಂಧ: ಶಾಂತಿಯುತ ಈದ್ ಮಿಲಾದ್‌ಗೆ ಪೊಲೀಸ್ ಬಿಗಿ ಬಂದೋಬಸ್ತ್

ಶಾಂತಿಯುತ ಈದ್ ಮಿಲಾದ್‌ಗೆ ಪೊಲೀಸ್ ಬಿಗಿ ಬಂದೋಬಸ್ತ್

ಜಾಮಿಯಾ ಮಸೀದಿಯಿಂದ ಆರಂಭ ವಾಗುವ ಮೆರವಣಿಗೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಈದ್ಗಾ ಮೈದಾನ ತಲುಪಲಿದೆ. ಅಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದ ಬಳಿಕ ಸಂಜೆ 5 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಶಾಂತಿ ಕಾಪಾಡಲು ಸಂಘಟಕರು ಹಾಗೂ ಮಸೀದಿ ಮುಖಂಡರು ಸಂಪೂರ್ಣ ಸಹಕಾರ ನೀಡಲಿದ್ದಾರೆ

ಕರ್ನಾಟಕ ಧನ ವಿನಿಯೋಗ ವಿಧೇಯಕದಡಿ 7042.69 ಕೋಟಿ ರೂ. ಪೂರಕ ಅಂದಾಜು ಪ್ರಸ್ತಾವನೆಗೆ ಉಭಯ ಸದನಗಳಲ್ಲಿ ಅನುಮೋದನೆ

7042.69 ಕೋಟಿ ಪೂರಕ ಅಂದಾಜು ಪ್ರಸ್ತಾವನೆಗೆ ಉಭಯ ಸದನಗಳಲ್ಲಿ ಒಪ್ಪಿಗೆ

Karnataka Monsoon session: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನ ಮಂಡಲದ ಉಭಯ ಸದನಗಳಲ್ಲಿ ಧನ ವಿನಿಯೋಗ ವಿಧೇಯಕದ ಅಡಿ ಪೂರಕ ಅಂದಾಜುಗಳ ಮೊದಲನೆ ಕಂತಿನ ಪ್ರಸ್ತಾವನೆಯನ್ನು ಮಂಡಿಸಿ, ಅನುಮೋದನೆ ಪಡೆದಿದ್ದಾರೆ. 7,042.69 ಕೋಟಿ ರೂ.ಗಳಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚವಾಗಿದ್ದು, 2718.35 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ.

SIR in Karnataka: ಎಸ್ಐ‌ಆರ್‌ ಮೊದಲ ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೆ? ಚಿಂತೆ ಬೇಡ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ; ಅದು ಹೇಗೆ ಎನ್ನುವ ವಿವರ ಇಲ್ಲಿದೆ

ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ

Karnataka SIR: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಮೊದಲ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಬರೋಬ್ಬರಿ 1.07 ಕೋಟಿ ಮಂದಿಯ ಹೆಸರನ್ನು ಕೈಬಿಡಲಾಗಿದೆ. ಈ ಪೈಕಿ ನಿಮ್ಮ ಹೆಸರು ಡಿಲೀಟ್‌ ಆಗಿದ್ದರೆ ಚಿಂತೆ ಮಾಡಬೇಕಾಗಿಲ್ಲ. ಇನ್ನೂ ಹೆಸರು ಸೇರಿಸಲು ಅವಕಾಶವಿದ್ದು, ಅದು ಹೇಗೆ ಎನ್ನುವ ವಿವರ ಇಲ್ಲಿದೆ.

Cauvery Water Dispute: ಕರ್ನಾಟಕಕ್ಕೆ ಮತ್ತೆ ಹಿನ್ನಡೆ; ನಿತ್ಯ 9000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWRC ಶಿಫಾರಸು

ಕರ್ನಾಟಕದಿಂದ 9000 ಕ್ಯೂಸೆಕ್ ಕಾವೇರಿ ನೀರು ಹರಿಸಲು CWRC ಶಿಫಾರಸು

ಸಿಡಬ್ಲ್ಯುಆರ್‌ಸಿ ನಿರ್ದೇಶನದ ಪ್ರಕಾರ, ಆಗಸ್ಟ್ 25ರ ಬೆಳಗ್ಗೆ 8 ಗಂಟೆಯಿಂದಲೇ ಈ ಆದೇಶ ಜಾರಿಗೆ ಬರಲಿದ್ದು, ಅಂತಾರಾಜ್ಯ ಗಡಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರಿನ ಹರಿವನ್ನು ಕಾಯ್ದುಕೊಳ್ಳಬೇಕಿದೆ. ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 11.66 ಟಿಎಂಸಿ ನೀರು ಬಿಳಿಗುಂಡ್ಲುವಿಗೆ ಹರಿದುಬರುವಂತೆ ನೋಡಿಕೊಳ್ಳುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದೆ.

ಸುಳ್ಳು ಆರೋಪದ ಕುರಿತು ಚರ್ಚೆಗೆ ಬರಲಿ; ಸಂಜಯ್ ಪಾಟೀಲ್‌ಗೆ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

ಸುಳ್ಳು ಆರೋಪದ ಕುರಿತು ಚರ್ಚೆಗೆ ಬರಲಿ; ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

Lakshmi Hebbalkar: ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ಧೈರ್ಯವಿದ್ದರೆ 5 ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು ಹಾಕಿದ್ದಾರೆ.

Karnataka SIR: ಎಸ್ಐ‌ಆರ್‌ ಮೊದಲ ಕರಡು ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್‌!

ಎಸ್ಐ‌ಆರ್‌ ಕರಡು ಮತದಾರರ ಪಟ್ಟಿ ಪ್ರಕಟ; 1.07 ಕೋಟಿ ಮಂದಿಯ ಹೆಸರು ಡಿಲೀಟ್‌!

ಎಸ್‌ಐಆರ್‌ ಭಾಗವಾಗಿ ಗೈರುಹಾಜರಿ, ಶಾಶ್ವತ ಸ್ಥಳಾಂತರ, ಮೃತರು ಹಾಗೂ ನಕಲಿ ಹೆಸರುಗಳು ಸೇರಿದಂತೆ ಒಟ್ಟು 1,07,96,399 ಮತದಾರರ ಹೆಸರುಗಳನ್ನು ಮೊದಲ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸ್ಪಷ್ಟಪಡಿಸಿದ್ದಾರೆ.

ಒಂಬತ್ತು ತಿಂಗಳಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

ಹಾವೇರಿಯಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

Haveri News: ಹಾವೇರಿ ಶಹರದ ಬಸವೇಶ್ವರ ನಗರದಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಭೂಮಿ ಪೂಜೆ ನೆರವೇರಿದರು. ಬಳಿಕ ಮಾತನಾಡಿದ ಅವರು, ಲೋಕಾಯುಕ್ತ ಕಚೇರಿಗಾಗಿ ಸರ್ಕಾರದಿಂದ ನಿವೇಶನ ಒದಗಿಸಲಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಆದೇಶ ಹಾಗೂ ಕಾರ್ಯಾದೇಶವೂ ಆಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗದಂತೆ ತಕ್ಷಣ ಆರಂಭಿಸುವ ಉದ್ದೇಶದಿಂದ ಅಡಿಗಲ್ಲು ಹಾಕಲಾಗಿದೆ ಎಂದು ಹೇಳಿದ್ದಾರೆ.

ಇಂಗ್ಲಿಷ್‌ ಕಲಿಯಲು ಬೆಂಗಳೂರಿಗೆ ಬಂದ ಜಪಾನ್ ಪ್ರಜೆಗೆ ಅಕ್ರಮ ಜೈಲು ಶಿಕ್ಷೆ; 7 ವರ್ಷಗಳ ಬಳಿಕ ಸಿಕ್ತು ಪರಿಹಾರ

ಅಕ್ರಮ ಜೈಲು ಶಿಕ್ಷೆಗೊಳಗಾದ ಜಪಾನ್‌ ವ್ಯಕ್ತಿಗೆ ಸಿಕ್ತು ಪರಿಹಾರ ಧನ

Hirotoshi Tanaka: ಇಂಗ್ಲಿಷ್ ಭಾಷೆ ಕಲಿಯುವ ಆಸೆಯಿಂದ ಬೆಂಗಳೂರಿಗೆ ಬಂದಿದ್ದ ಜಪಾನ್ ಪ್ರಜೆಯೊಬ್ಬರು ಅನಗತ್ಯ ಗೊಂದಲದಿಂದ ಪೋಲಿಸ್ ಪ್ರಕರಣಕ್ಕೆ ಸಿಲುಕಿ 19 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಆಘಾತಕಾರಿ ಘಟನೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಸುದೀರ್ಘ 7 ವರ್ಷಗಳ ಕಾನೂನು ಹೋರಾಟದ ನಂತರ ಕರ್ನಾಟಕ ಸರ್ಕಾರ ಅವರಿಗೆ 75,000 ರುಪಾಯಿ ಪರಿಹಾರ ಒದಗಿಸಿದೆ.

Bantwal civic worker: ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ; ಬಂಟ್ವಾಳದ ಶ್ರಮಿಕನ ವಿಡಿಯೊ ವೈರಲ್‌!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚುನರ್‌ ಕಾರಿನಲ್ಲಿ ಬರುವ ಪೌರ ಕಾರ್ಮಿಕ!

ಬಂಟ್ವಾಳದಲ್ಲಿ 50 ರೂ. ದಿನಗೂಲಿಯಿಂದ ಆರಂಭವಾದ ಪೌರ ಕಾರ್ಮಿಕರೊಬ್ಬರ ಬದುಕು ಈಗ ಐಷರಾಮಿ ಕಾರಿನಲ್ಲಿ ಓಡಾಡುವ ಹಂತಕ್ಕೆ ಬಂದಿದೆ. ಸ್ವಂತ ಮನೆಯನ್ನೂ ಹೊಂದಿದ್ದಾರೆ. ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೂ ಅವರು ರಸ್ತೆ ಬದಿ ಕಸ ಗುಡಿಸುವ ಜತೆಗೆ ವಿವಿಧ ಕೆಲಸಗಳನ್ನು ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಇವರ ಕಥೆ ಹಲವರಿಗೆ ಸ್ಫೂರ್ತಿಯಾಗಿದೆ.

Chikkamagaluru Eid Milad controversy: ಚಿಕ್ಕಮಗಳೂರಿನಲ್ಲಿ ಪಾಕ್‌ ಪರ ಹಾಡು ಬಳಸಿ ವಿಡಿಯೊ ಪೋಸ್ಟ್;‌ ಎಫ್‌ಐಆರ್‌ ದಾಖಲು

ಚಿಕ್ಕಮಗಳೂರಿನಲ್ಲಿ ಪಾಕ್‌ ಪರ ಹಾಡು ಬಳಸಿ ವಿಡಿಯೊ;‌ ಎಫ್‌ಐಆರ್‌ ದಾಖಲು

Chikkamagaluru News: ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮುಸ್ಲಿಂ ಯುವಕರು ವಿಡಿಯೋ ಎಡಿಟ್ ಮಾಡಿ ಶೇರ್ ಮಾಡಿದ್ದಾರೆ. ಟಿಪ್ಪು ಸುಲ್ತಾನ್​ ಕಟೌಟ್​ ರೀಲ್ಸ್​​ಗೆ ಪಾಕಿಸ್ತಾನದ ಮುಜಾಹಿದ್‌ಗೆ ಸಂಬಂಧಿಸಿದ ಹಾಡನ್ನು ಹಾಕಿರೋದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ.

BJP Protest: ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಯತ್ನ; ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರು ಪೊಲೀಸ್‌ ವಶಕ್ಕೆ

ವಿಧಾನಸೌಧಕ್ಕೆ ಮುತ್ತಿಗೆ ಯತ್ನ; ಬಿಜೆಪಿ ನಾಯಕರು ಪೊಲೀಸ್‌ ವಶಕ್ಕೆ

ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ವಾಲ್ಮೀಕಿ ನಿಗಮ ಹಗರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದರು.

Viral Video: ಸಾರ್ವಜನಿಕರ ಮುಂದೆಯೇ ನದಿಗೆ ಕಸ ಎಸೆದ ದಂಪತಿ; ನಾಚಿಕೆಯಿಂದ ತಲೆ ತಗ್ಗಿಸಿದ ನಾಗರಿಕ ಸಮಾಜ

ನದಿಯನ್ನೇ ಡಸ್ಟ್ ಬಿನ್ ಮಾಡಿದ ದಂಪತಿ: ದಂಡ ವಿಧಿಸಲು ನೆಟ್ಟಿಗರ ಆಗ್ರಹ

Viral Video: ಕಾರಿನಲ್ಲಿ ಬಂದ ದಂಪತಿ ತ್ಯಾಜ್ಯವನ್ನು ನದಿಗೆ ಎಸೆದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯವು ಮತ್ತೊಮ್ಮೆ ನಾಗರಿಕ ಪ್ರಜ್ಞೆ ಮತ್ತು ಸಾರ್ವಜನಿಕ ಜವಾಬ್ದಾರಿಯ ಬಗ್ಗೆ ಚರ್ಚೆ ಹುಟ್ಟು ಹಾಕಿದೆ. ಪರಿಸರ ಕಾಳಜಿಯ ಹೊಣೆ ತಮ್ಮದಲ್ಲ ಎಂಬಂತೆ ದಂಪತಿ ದೊಡ್ಡ ಪ್ಲಾಸ್ಟಿಕ್ ಚೀಲದಲ್ಲಿದ್ದ ತ್ಯಾಜ್ಯವನ್ನು ನದಿಗೆ ಎಸೆದಿದ್ದಾರೆ.

ಸರಕಾರಿ ಭೂಮಿಯಲ್ಲೂ ಮರಳು ಎತ್ತುವಳಿ ಆರೋಪ : ಕೃಷಿ ಭೂಮಿಗೂ ಬಿಡದ ಮರಳುಗಾರಿಕೆ!

ಕೃಷಿ ಭೂಮಿಗೂ ಬಿಡದ ಮರಳುಗಾರಿಕೆ!

ಕೆಲ ಪ್ರಭಾವಿಗಳು ಸೇರಿ ಮಾಡುವ ಮರಳು ಗಣಿಗಾರಿಕೆಯಿಂದ ಅವರಂತೆ ಸರಕಾರದಿಂದ ಭೂಮಿ ಪಡೆದು ಕೃಷಿ ಮಾಡಿಕೊಂಡು ಜೀವನ ಮಾಡುವ ಅಮಾಯಕ ರೈತರು ಸಂಕಷ್ಟ ಎದುರಿಸು ವಂತಾಗಿದೆ. ಇದಕ್ಕೆ ಸದ್ಯ ಕಾರಟಗಿ ತಾಲೂಕು ಸಿದ್ಧಾಪೂರ ಗ್ರಾಮದಲ್ಲಿ ನಡೆದಿರುವ ಮರಳು ಗಣಿಗಾರಿಕೆ ತಾಜಾ ಉದಾಹರಣೆಯಂತಿದೆ.

Hanuman temple Incident: ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು: ಬಸವರಾಜ ಬೊಮ್ಮಾಯಿ

ಶಿಗ್ಗಾವಿ ಬಂದ್‌ಗೆ ಎಲ್ಲ ಕೋಮಿನವರು ಬೆಂಬಲಿಸಬೇಕು: ಬೊಮ್ಮಾಯಿ

ಪೊಲೀಸರು ಅವನ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿ ಕರೆದಿರುವ ಶಿಗ್ಗಾವಿ ಬಂದ್‌(Shiggaon Bandh)ಗೆ ಎಲ್ಲ ಕೋಮಿನವರೂ ಬೆಂಬಲ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ(Basavaraj Bommai) ಮನವಿ ಮಾಡಿದರು

Dr M C Sudhakar: ಅಂಬೇಡ್ಕರ್ ಭವನ, ಅನುಭವ ಕೇಂದ್ರದಿಂದ ಬಾಬಾಸಾಹೇಬರ ಆದರ್ಶಗಳಿಗೆ ಶಕ್ತಿ: ಡಾ.ಎಂ.ಸಿ.ಸುಧಾಕರ್

ಚಿಂತಾಮಣಿ ಅಭಿವೃದ್ಧಿಗೆ ಹೊಸ ಶಕ್ತಿ ತುಂಬಿದ ಐತಿಹಾಸಿಕ ದಿನ

ಬಾಬಾಸಾಹೇಬರು ಶೋಷಿತರು, ದಲಿತರು ಹಾಗೂ ಅವಕಾಶ ವಂಚಿತ ಸಮುದಾಯಗಳ ಹಕ್ಕು ಗಳಿಗಾಗಿ ನಡೆಸಿದ ಹೋರಾಟ ಮತ್ತು ಸಂವಿಧಾನದ ಮೂಲಕ ಸಮಾನತೆಯ ಸಮಾಜ ನಿರ್ಮಿಸುವ ಅವರ ಕನಸನ್ನು ಜನರಿಗೆ ತಿಳಿಸುವಂತಹ ಕೇಂದ್ರವಾಗಿ ಇದು ರೂಪುಗೊಳ್ಳಲಿದೆ. ಯುವಜನರು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅರಿತುಕೊಂಡು ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕು

Eshwar B Khandre: ಕಲುಷಿತ ನೀರು ಪೂರೈಸಿದರೆ ಕಠಿಣ ಕ್ರಮ: ಈಶ್ವರ ಖಂಡ್ರೆ

ಕಲುಷಿತ ನೀರು ಪೂರೈಸಿದರೆ ಕಠಿಣ ಕ್ರಮ: ಈಶ್ವರ ಖಂಡ್ರೆ

ಮುಂದಿನ 30 ವರ್ಷಗಳ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಶುದ್ಧ ಮೇಲ್ಮೈ ಜಲಮೂಲ ದಿಂದ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಸರ್ಕಾರ ಆದ್ಯತೆ ನೀಡಿದೆ. ಬಹುಗ್ರಾಮ ಹಾಗೂ ಏಕಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲಾಗುತ್ತಿದೆ.

ಲೌಕಿಕ ಪ್ರಪಂಚ ತೊರೆದು ಗುರುವಿಗೆ ಶರಣಾದಾಗಲೇ ಮೋಕ್ಷ: ಡಾ.ಎಂ.ಆರ್.ಜಯರಾಮ್

ಲೌಕಿಕ ಪ್ರಪಂಚ ತೊರೆದು ಗುರುವಿಗೆ ಶರಣಾದಾಗಲೇ ಮೋಕ್ಷ

ಸನಾತನ ಗುರು–ಶಿಷ್ಯ ಪರಂಪರೆಯು ವಿಶೇಷತೆಯಿಂದ ಕೂಡಿದ್ದು, ಪರಿಪೂರ್ಣ ಜ್ಞಾನದ ಸಂಪತ್ತನ್ನು ಹೊಂದಿರುವ ಗುರುವಿನ ಅನುಗ್ರಹ ಪಡೆಯುವುದು ಸುಲಭದ ಮಾತಲ್ಲ. ಮೋಕ್ಷದ ಮಾರ್ಗವನ್ನು ತೋರಿಸುವಂತಹ ಬದ್ಧತೆ ಹಾಗೂ ವಿಧೇಯತೆಯಿಂದ ಕೂಡಿರುವ ಶಿಷ್ಯನನ್ನು ಕಾಣುವುದು ಅಪರೂಪ ಎಂದು ತಾತಯ್ಯನವರು ಹೇಳಿದ್ದಾರೆ.

ಪುಸ್ತಕಕ್ಕೆ ಚಿಂತನೆ ಬದಲಿಸುವ ಶಕ್ತಿ ಇದೆ

ಪುಸ್ತಕಕ್ಕೆ ಚಿಂತನೆ ಬದಲಿಸುವ ಶಕ್ತಿ ಇದೆ

ಹಸಿವಾದಾಗ ಊಟ ಮಾಡುವುದು, ದೇಹಕ್ಕೆ ಅಗತ್ಯವಾದ ವಿಶ್ರಾಂತಿ ಪಡೆಯುವುದು ಹಾಗೂ ಉತ್ತಮ ನಿದ್ರೆಗೆ ಆದ್ಯತೆ ನೀಡುವುದು ಸೇರಿದಂತೆ ದೇಹದ ಸಹಜ ಸಂಕೇತಗಳನ್ನು ಅರಿತು ಬದುಕುವ ಅಗತ್ಯವಿದೆ ಎಂದರು. ಗಣಿತದ ಗಮ್ಮತ್ತು ಕೃತಿ ಗಣಿತವನ್ನು ಕೇವಲ ಕಠಿಣ ವಿಷಯವಾಗಿ ನೋಡುವ ಬದಲು ಅದರಲ್ಲಿರುವ ಕುತೂಹಲ, ಪದಗಳ ಆಟ ಹಾಗೂ ಮನರಂಜನೆ ಅರಿಯುವಂತೆ ಮಾಡುವ ಕೃತಿ ಇದಾಗಿದೆ. ಗಣಿತ ಒಮ್ಮೆ ನಮ್ಮದಾದರೆ ಅದು ಸುಲಭವಾಗುತ್ತದೆ, ಇಲ್ಲದಿದ್ದರೆ ಕಷ್ಟವಾಗುತ್ತದೆ.

Loading...