ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Gubbi News: ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಅವಶ್ಯ ಸಲಕರಣೆ ವಿತರಣೆ

Gubbi News: ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಅವಶ್ಯ ಸಲಕರಣೆ ವಿತರಣೆ

ಸರ್ಕಾರ ಗ್ರಾಮೀಣ ಶಾಲೆಗಳ ಉಳಿಸುವ ಕೆಲಸಕ್ಕೆ ಪೂರಕವಾಗಿ ಎಲ್ಲಾ ಸವಲತ್ತು ಒದಗಿಸಿದೆ. ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಜೊತೆಗೆ ಪೌಷ್ಟಿಕ ಆಹಾರ, ರಾಗಿ ಅಂಬಲಿ ಹೀಗೆ ಅನೇಕ ರೀತಿ ಮಕ್ಕಳಿಗೆ ಯಾವ ಕೊರತೆ ಬಾರದಂತೆ ಕ್ರಮ ಕೈಗೊಂಡಿದೆ. ಆದರೆ ದಾಖಲಾತಿ ಪ್ರಕ್ರಿಯೆ ಇಳಿಮುಖ ಆಗದಂತೆ ಶಿಕ್ಷಣ ಇಲಾಖೆ ಮಾಡುವ ಎಲ್ಲಾ ಕಾರ್ಯಕ್ಕೆ ಸ್ಥಳೀಯ ಸಮುದಾಯ ಸಹಕಾರ ಅತ್ಯಗತ್ಯ

Chikkaballapur News: ವೃತ್ತಿಪರ ನೈತಿಕತೆ ಕಾಪಾಡಿಕೊಂಡ ವಕೀಲರು ಸಮಾಜಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗುತ್ತಾರೆ: ನ್ಯಾ.ಬಿ.ಶಿಲ್ಪ

ವೃತ್ತಿಪರ ನೈತಿಕತೆ ಕಾಪಾಡಿಕೊಂಡ ವಕೀಲರು ವಿಶೇಷ ಗೌರವಕ್ಕೆ ಪಾತ್ರರು

ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಶಿಲ್ಪ ಮಾತನಾಡಿ, ವಕೀಲಿ ವೃತ್ತಿ ಕೇವಲ ಒಂದು ಉದ್ಯೋಗ ವಲ್ಲ, ಇದು ಸಮಾಜಕ್ಕೆ ಸಲ್ಲಿಸುವ ದೊಡ್ಡ ಸೇವೆ. ಕಾನೂನು ವಿದ್ಯಾರ್ಥಿಗಳಿಗೆ ಕಾನೂನಿನ ರಕ್ಷಣೆ ಜತೆಗೆ ಕಾನೂನಿನ ಅರಿವು ಹಾಗೂ ನೆರವು ನೀಡುವುದರ ಬಗ್ಗೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು

Nirmala Sitharaman: ವಿಕಸಿತ ಭಾರತ ಸಂಕಲ್ಪ: ನಿರ್ಮಲಾ ಸೀತಾರಾಮನ್

ವಿಕಸಿತ ಭಾರತ ಸಂಕಲ್ಪ: ನಿರ್ಮಲಾ ಸೀತಾರಾಮನ್

ಡಿಜಿಟಲ್ ಪಾವತಿ ವ್ಯವಸ್ಥೆ(Digital Payment System), ದೇಶಾದ್ಯಂತ ಸಾರ್ವಜನಿಕ ಮೂಲ ಸೌಕರ್ಯ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಹಾಗೂ ವಾಯುಕ್ಷೇತ್ರದ ಸಂಪರ್ಕದಲ್ಲಿನ ಕ್ರಾಂತಿ- ಇವು ನರೇಂದ್ರ ಮೋದಿಜೀ(Narendra Modi) ಸರಕಾರದ ಪ್ರಮುಖ ಕ್ರಾಂತಿಕಾರಿ ಸಾಧನೆಗಳು ಎಂದು ವಿಶ್ಲೇಷಿಸಿದರು. ಅಮೆರಿಕವು ಬಡ್ಡಿ ದರ ಕಡಿಮೆ ಮಾಡುವುದು, ಅಮೆರಿಕದ ಹಣಕಾಸು ಕ್ಷೇತ್ರದ ಕ್ರಮಗಳು ಕೂಡ ರೂಪಾಯಿಯ ವಿನಿಮಯ ದರ ಏರುಪೇರಿಗೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಘೋರ ಘಟನೆ; ಶಾಲೆಯಲ್ಲಿ ಹೃದಯಾಘಾತದಿಂದ 1ನೇ ತರಗತಿ ಬಾಲಕ ಸಾವು

ಶಿವಮೊಗ್ಗದಲ್ಲಿ ಹೃದಯಾಘಾತದಿಂದ 1ನೇ ತರಗತಿ ಬಾಲಕ ಸಾವು

Shivamogga‌ News: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕರೂರು ಹೋಬಳಿ ಹಾಳಸಸಿ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಶಾಲೆ ಆವರಣದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲು ಶಿಕ್ಷಕರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಬಾಲಕ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

MLA Pradeep Eshwar: 21ಕ್ಕೆ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರ ಪದಗ್ರಹಣ : ಶಾಸಕ ಪ್ರದೀಪ್ ಈಶ್ವರ್

21ಕ್ಕೆ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಅವರ ಪದಗ್ರಹಣ

ಕೆಪಿಸಿಸಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಕೆ.ಹರಿಪ್ರಸಾದ್(B K Hariprasad) ಹಿಂದುಳಿದ ವರ್ಗಗಳ ನಾಯಕ.ಅವರ ಪದಗ್ರಹಣ ಕಾರ್ಯಕ್ರಮವು ಜೂ.21ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ನಮ್ಮ ಕ್ಷೇತ್ರದಿಂದ 2.5 ಸಾವಿರ ಮಂದಿ 50 ಬಸ್ಸುಗಳಲ್ಲಿ ಭಾಗಿಯಾ ಗಲಿದ್ದೇವೆ

1999ರಲ್ಲಿ ಕೇವಲ 3 ಎಕರೆ ಪಿತ್ರಾರ್ಜಿತ ಆಸ್ತಿ 2018ಕ್ಕೆ 1400 ಕೋಟಿ ಹೇಗಾಯ್ತು?: ಸಿಎಂ ಡಿಕೆಶಿಗೆ ಎಚ್‌ಡಿಕೆ ಪ್ರಶ್ನೆ

1999ರಲ್ಲಿ 3 ಎಕರೆ ಆಸ್ತಿ 2018ಕ್ಕೆ 1400 ಕೋಟಿ ಹೇಗಾಯ್ತು?: ಎಚ್‌ಡಿಕೆ

ಬಿಡದಿ ಟೌನ್‌ಶೀಪ್‌ ಹೆಸರಲ್ಲಿ ನೇರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜನರ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ನೇರವಾಗಿ ಮುಖ್ಯಮಂತ್ರಿಗಳೇ ರಿಯಲ್ ಎಸ್ಟೇಟ್ ಮಾಫಿಯಾ ದೊರೆಗಳ ಜೊತೆ ಕೈ ಜೋಡಿಸಿ ಈ ದಂಧೆ ನಡಿಸುತ್ತಿದ್ದಾರೆ. ಬಹುಪಾಲು ರೈತರು ಭೂಮಿ ಕೊಡಲು ತಯಾರಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Hemavathi Backwaters Tragedy: ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಬೆಂಗಳೂರಿನ ಮೂವರು ಯುವಕರ ಸಾವು

ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೂವರ ಸಾವು

Hassan News: ಬೆಂಗಳೂರಿನಿಂದ ಹತ್ತು ಯುವಕರ ತಂಡ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ಪ್ರವಾಸಕ್ಕೆಂದು ತೆರಳಿತ್ತು. ದೇವರ ದರ್ಶನ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಹಾಸನ ಜಿಲ್ಲೆಯ ಹೇಮಾವತಿ ಹಿನ್ನೀರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ವೀಕ್ಷಿಸಲು ತೆರಳಿದ ವೇಳೆ ದುರಂತ ನಡೆದಿದೆ.

Road Accident: ಮಾಡಿಕೆರೆ ಕ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ: ಆಂಧ್ರ ಬಸ್ ಮತ್ತು ಲಾರಿ ನಡುವೆ ಡಿಕ್ಕಿ, 10 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ!

ಮಾಡಿಕೆರೆ ಕ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ

ನೆರೆಯ ಆಂಧ್ರಪ್ರದೇಶದ ಕಡಪದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಉದಯಗಿರಿ ಡಿಪೋಗೆ ಸೇರಿದ ಸಾರಿಗೆ ಬಸ್,ಭಾನುವಾರ ಮುಂಜಾನೆ ಮಾಡಿಕೆರೆ ಕ್ರಾಸ್ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಈ ಅವಗಡ ಸಂಭವಿಸಿದೆ ಲಾರಿಯ ಚಕ್ರ ಪಂಚರ್ ಆಗಿದ್ದ ಹಿನ್ನೆಲೆಯಲ್ಲಿ ಚಾಲಕ ರಸ್ತೆ ಬದಿಯಲ್ಲಿ ಲಾರಿ ಯನ್ನು ನಿಲ್ಲಿಸಿ ಟೈರ್ ಬದಲಾಯಿಸುತ್ತಿದ್ದ ಎನ್ನಲಾಗಿದೆ.

MLA Pradeep Eshwar: ಸಾಧಿಸುವ ಛಲದೊಂದಿಗೆ ನಿರಂತರ ಪರಿಶ್ರಮವಿದ್ದಲ್ಲಿ ಗುರಿ ಮುಟ್ಟಲು ಸಾಧ್ಯ: ಶಾಸಕ ಪ್ರದೀಪ್ ಈಶ್ವರ್

ಸಾಧಿಸುವ ಛಲದೊಂದಿಗೆ ನಿರಂತರ ಪರಿಶ್ರಮವಿದ್ದಲ್ಲಿ ಗುರಿ ಮುಟ್ಟಲು ಸಾಧ್ಯ

ನಮ್ಮ ಸರಕಾರ ಶೀಘ್ರವೇ 56 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತಿದ್ದು ಕ್ಷೇತ್ರದ ವಿದ್ಯಾವಂತ ಯುವಕ ಯುವತಿಯರು ಇದರ ಅನುಕೂಲ ಪಡೆದುಕೊಳ್ಳಲಿ ಎನ್ನುವ ಸದುದ್ದೇಶದಿಂದ ಉಚಿತ ಸ್ಪರ್ಧಾತ್ಮಕ ತರಬೇತಿಗೆ ಚಾಲನೆ ನೀಡಲಾಗಿದೆ. ಪ್ರತಿ ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ರ ತನಕ ಅತ್ಯುತ್ತಮ ಉಪನ್ಯಾಸಕರಿಂದ ತರಬೇತಿ ನಡೆಯಲಿದೆ.

Chikkaballapur News: ಸತ್ಯಸಾಯಿ ಆಸ್ಪತ್ರೆ ಬಳಿ ನಿರ್ಮಾಣವಾಗಲಿರುವ ಪ್ರಯಾಣಿಕರ ತಂಗುದಾಣ ಅಧಿಕಾರಿಗಳಿಂದ ತಡೆ

2023-24ರ ಲೋಕಸಭಾ ಸದಸ್ಯರ 5 ಕೋಟಿ ಅನುದಾನದಲ್ಲಿ ತಂಗುದಾಣಕ್ಕೆ ಚಾಲನೆ

ಮುದ್ದೇನಹಳ್ಳಿ ಗ್ರಾಮದ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ನಾಗರೀಕರಿಗೆ ಅನುಕೂಲಕ್ಕಾಗಿ ಲೋಕಸಭಾ ಸದಸ್ಯರ ವಿಶೇಷ ನಿಧಿಯಲ್ಲಿ ನೂತನ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದಾಗಿದ್ದೆವು. ಈ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಪಂಚಾಯಿತಿ ಯಿಂದ ಅನುಮತಿ ಪಡೆದಿಲ್ಲ ಎಂಬ ನೆಪವೊಡ್ಡಿ ಪಿಡಿಒ ತಿಪ್ಪಯ್ಯ ಮತ್ತು ತಹಶೀಲ್ದಾರ್ ಅವರು ಕಾಮಗಾರಿಗೆ ತಡೆಯೊಡ್ಡಿರುವುದು ಸರಿಯಲ್ಲ

Gubbi News: ಶ್ರೀ ಕೊಲ್ಲಾಪುರದಮ್ಮ ದೇವಿಯ 48ನೇ ದಿನದ ಮಂಡಲ ಪೂಜಾ ಮಹೋತ್ಸವ

ಶ್ರೀ ಕೊಲ್ಲಾಪುರದಮ್ಮ ದೇವಿಯ 48ನೇ ದಿನದ ಮಂಡಲ ಪೂಜಾ ಮಹೋತ್ಸವ

ಸುಮಾರು 135 ವರ್ಷಗಳ ಇತಿಹಾಸವಿರುವ ಈ ಕೊಲ್ಲಾಪುರದಮ್ಮ ದೇವಿಯ ದೇವಸ್ಥಾನವನ್ನು ಗ್ರಾಮಸ್ಥರ ಸಹಕಾರದಿಂದ ಜೀವನೋದ್ಧಾರ ಮಾಡಿ, ಲೋಕಾರ್ಪಣೆ ಮಾಡಲಾಗಿದೆ. 48 ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದು, ಇಂದು ಮಹಾಮಂಡಲ ಪೂಜೆಯನ್ನು ಮಾಡಲಾಯಿತು

CJP protest in Bengaluru: ನೀಟ್‌ ಅಕ್ರಮ ಖಂಡಿಸಿ ಬೆಂಗಳೂರಲ್ಲಿ ಕಾಕ್ರೋಚ್‌ ಪಾರ್ಟಿ ಪ್ರತಿಭಟನೆ; ನಟ ಪ್ರಕಾಶ್‌ ರಾಜ್‌ ಬೆಂಬಲ

ನೀಟ್‌ ಅಕ್ರಮ ಖಂಡಿಸಿ ಬೆಂಗಳೂರಿನಲ್ಲಿ ಕಾಕ್ರೋಚ್‌ ಪಾರ್ಟಿ ಪ್ರತಿಭಟನೆ

ಬೆಂಗಳೂರಿನಲ್ಲಿ ಪ್ರತಿಭಟನೆಗೂ ಮುನ್ನಾ ಸಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಸಂಜೆ ಫ್ರೀಡಂ ಪಾರ್ಕ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.

ಸರ್ಕಾರದ ಜಾಹೀರಾತಲ್ಲಿ ಡಿಸಿಎಂ ಪರಮೇಶ್ವರ್‌ ಫೋಟೊ ಮಾಯ; ಏನಾಯ್ತು ಕಾಂಗ್ರೆಸ್‌ನ ಅಹಿಂದ ಜಪ ಎಂದು ಜೋಶಿ ಟೀಕೆ

ಹಳೇ ರಾಜಕೀಯ ನೀತಿಯನ್ನೇ ಮುಂದುವರಿಸಿದ ಕಾಂಗ್ರೆಸ್: ಜೋಶಿ

Pralhad Joshi: ಅಹಿಂದ ಸಿದ್ಧಾಂತದಡಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಪರ ಹೋರಾಡುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಸದಾ ಈ ಸಮುದಾಯಗಳ ನಾಯಕರನ್ನು ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.

Bidadi Township: ಬಿಡದಿ ಟೌನ್‌ಶಿಪ್ ಸರ್ಕಾರಿ ರಿಯಲ್ ಎಸ್ಟೇಟ್ ಯೋಜನೆ: ಎಚ್.ಡಿ. ಕುಮಾರಸ್ವಾಮಿ ಕಿಡಿ

ಬಿಡದಿ ಟೌನ್‌ಶಿಪ್ ಸರ್ಕಾರಿ ರಿಯಲ್ ಎಸ್ಟೇಟ್ ಯೋಜನೆ: ಎಚ್‌ಡಿಕೆ

ಯಾವುದೇ ಯೋಜನೆ ಕೈಗೊಳ್ಳುವ ಮೊದಲು ರೈತರ ಒಪ್ಪಿಗೆ ಪಡೆಯಬೇಕು. ಅದನ್ನು ಮಾಡದೇ ಈ ಸರ್ಕಾರ ಸಾರ್ವಕಾಧಿಕಾರಿ ಮನೋಭಾವದಿಂದ ರೈತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಬಿಡದಿ ಟೌನ್‌ಶಿಪ್‌ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Guarantee schemes: ಮತ್ತೆ ಅರ್ಜಿ ಸಲ್ಲಿಸಲು ಹೇಳಿದ್ದೇವೆಯೇ ಹೊರತು ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಸ್ಪಷ್ಟನೆ

ಯಾವುದೇ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಸಿಎಂ ಡಿಕೆಶಿ

DK Shivakumar: ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣಕ್ಕಾಗಿ, ಅವರ ಹೆಸರು, ವಿಳಾಸ, ಅಕೌಂಟ್ ನಂಬರ್ ಖಚಿತಪಡಿಸಿಕೊಳ್ಳಲು ಮತ್ತೇ ಅರ್ಜಿ ಸಲ್ಲಿಸಲು ಹೇಳಲಾಗಿದೆಯೇ ಹೊರತು ಯೋಜನೆಗಳನ್ನು ನಿಲ್ಲಿಸಲು ಅಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದ್ದಾರೆ. ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆಗೆ ಫಲಾನುಭವಿಗಳು ಮತ್ತೆ ಅರ್ಜಿ ಸಲ್ಲಿಸಬೇಕಿದೆ.

Bellary Murder Case: ರೇಣುಕಾಸ್ವಾಮಿ ಪ್ರಕರಣ ಮಾದರಿಯಲ್ಲೇ ಬಳ್ಳಾರಿಯಲ್ಲಿ ಯುವಕನ ಕೊಲೆ; ಮೂವರು ಅರೆಸ್ಟ್‌

ರೇಣುಕಾಸ್ವಾಮಿ ಪ್ರಕರಣ ಮಾದರಿಯಲ್ಲೇ ಬಳ್ಳಾರಿಯಲ್ಲಿ ಯುವಕನ ಕೊಲೆ!

ಖಾಸಗಿ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ಬಸನಗೌಡನನ್ನು ಬಳ್ಳಾರಿ ತಾಲೂಕಿನ ಮೋಕಾ ಸಮೀಪ ಕೊಲೆ ಮಾಡಿ, ಮೃತದೇಹವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಲಾಗಿತ್ತು. ಮೋಕಾ ಬಳಿಯ ಎಲ್‌ಎಲ್‌ಸಿ ಕಾಲುವೆ ಪಕ್ಕದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣದ ತನಿಖೆ ವೇಳೆ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.

ಅನೈತಿಕ ಸಂಬಂಧದ ಶಂಕೆ; ಲಿವ್‌ ಇನ್‌ ಪಾರ್ಟ್‌ನರ್‌ ಸಂಗಾತಿಯ ಕತ್ತು ಸೀಳಿದ ವ್ಯಕ್ತಿ

ಲಿವ್‌ ಇನ್‌ ಪಾರ್ಟ್‌ನರ್‌ ಸಂಗಾತಿಯ ಕತ್ತು ಸೀಳಿದ ವ್ಯಕ್ತಿ!

ಸಿಕ್ಕಿಂನ 22 ವರ್ಷದ ಮಹಿಳೆಯನ್ನು ಆಕೆಯ ಗೆಳೆಯನೇ ಕೊಲೆ ಮಾಡಿದ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಮೃತರನ್ನು ಸಿಕ್ಕಿಂ ಮೂಲದ 22 ವರ್ಷದ ಅತಿ ಹಂಗ್ಮಾ ಸುಬ್ಬಾ ಎಂದು ಗುರುತಿಸಲಾಗಿದ್ದು, ಆಕೆ ಸಲೂನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

ಬೆಂಗಳೂರಿನಲ್ಲಿ ನಡೆಯಲಿರುವ ಕಾಕ್ರೋಚ್‌ ಜನತಾ ಪಾರ್ಟಿ ಪ್ರತಿಭಟನೆಗೆ ಪ್ರಕಾಶ್‌ ರಾಜ್‌ ಸಾಥ್‌

ಬೆಂಗಳೂರಿನಲ್ಲಿ ನಡೆಯಲಿರುವ CJP ಪ್ರತಿಭಟನೆಗೆ ಪ್ರಕಾಶ್‌ ರಾಜ್‌ ಸಾಥ್‌

ನೀಟ್ ಪರೀಕ್ಷೆಗಳನ್ನು ಸರಿಯಾಗಿ ನಿರ್ವಹಿಸದೇ ಕೋಟ್ಯಂತರ ವಿದ್ಯಾರ್ಥಿಗಳ ಜೀವನದಲ್ಲಿ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿಯು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೂನ್ 14ರಂದು ಪ್ರತಿಭಟನೆ ಹಮ್ಮಿಕೊಂಡಿದೆ.

Bengaluru News: ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾ.ವಿ.ಶ್ರೀಶಾನಂದ

ಭಾರತದ ಜ್ಞಾನಪರಂಪರೆ ಜಗತ್ತಿಗೆ ದಾರಿ ದೀಪವಾಗಬೇಕು: ನ್ಯಾ.ವಿ.ಶ್ರೀಶಾನಂದ

ಎ.ಪಿ.ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಗಳನ್ನು ಉದ್ಘಾಟಿಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಗೌರವಿಸಿ ಮಾತನಾಡಿದ ಅವರು, ಶಿಕ್ಷಣಕ್ಕೂ, ವ್ಯಕ್ತಿ ಅಕ್ಷರ ಕಲಿಯಲಿಯುವುದಕ್ಕೂ ವ್ಯತ್ಯಾಸವಿದೆ. ಅಕ್ಷರ ಕಲಿತವರೆಲ್ಲ ವಿದ್ಯಾವಂತರಲ್ಲ. ಜಗತ್ತಿನ ಹಲವು ದೇಶಗಳು ನಾಗರಿಕತೆಯನ್ನು ಮೈಗೂಡಿಸಿಕೊಳ್ಳದಿದ್ದಾಗ ನಮ್ಮ ದೇಶ ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಇದಕ್ಕೆ ನಳಂದ ವಿಶ್ವವಿದ್ಯಾಲಯ ನಿದರ್ಶನ.

ನಕ್ಸಲರಿಗೆ 92 ರೂ. ಕೋಟಿ ದೇಣಿಗೆ; ಬೆಂಗಳೂರಿನ ನಾಲ್ವರು ಸೇರಿ 7 ಮಂದಿ ಮೇಲೆ FIR

ನಕ್ಸಲರಿಗೆರಿಗೆ 92 ರೂ. ಕೋಟಿ ದೇಣಿಗೆ; 7 ಮಂದಿ ಮೇಲೆ FIR

ನಕ್ಸಲ್ ಚಟುವಟಿಕೆ ನಡೆಸಲು ವಿದೇಶದಿಂದ 92 ಕೋಟಿ ರೂ. ದೇಣಿಗೆ ನೀಡಿರುವ ಆರೋಪ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅಮೆರಿಕ ಮೂಲದ ದಿ ತಿಮೋತಿ ಇನಿಶಿಯೇಟಿವ್ (ಟಿಟಿಐ) ಎಂಬ ಕ್ರಿಶ್ಚಿಯನ್ ಮಿಷಿನರಿ ಸಂಸ್ಥೆ ಹಾಗೂ ಕರ್ನಾಟಕದ ನಾಲ್ವರು ಸೇರಿ ಒಟ್ಟು ಏಳು ಮಂದಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಭೂ ಪರಿಹಾರ ಕೊಡದೇ ಸತಾಯಿಸುತ್ತಿದ್ದ ಅಧಿಕಾರಿ; ಚಪ್ಪಲಿಯಿಂದ ಹೊಡೆದ ರೈತ!

ಭೂ ಪರಿಹಾರ ಕೊಡದೇ ಸತಾಯಿಸುತ್ತಿದ್ದ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ರೈತ!

ಮುಳುಗಡೆ ಭೂಮಿಗೆ ಹಲವು ವರ್ಷಗಳಿಂದ ಪರಿಹಾರ ಕೊಡದೇ ಆಟಾಡಿಸುತ್ತಿದ್ದ ಅಧಿಕಾರಿಗಳ ವರ್ತನೆಗೆ ಬೇಸರಗೊಂಡ ಬಾಗಲಕೋಟೆ ರೈತರೊಬ್ಬರು ಅಧಿಕಾರಿಗೆ ಚಪ್ಪಲಿಯಲ್ಲಿ ಥಳಿಸಿ ಆಕ್ರೋಶ ಹೊರಹಾಕಿದ್ದಾರೆ. ಬಾಗಲಕೋಟೆ ನಗರವನ್ನು ಸಂಪರ್ಕಿಸುವ ರಸ್ತೆ ಯೋಜನೆಗಾಗಿ 2004 ರಲ್ಲಿ ದಾದೇನವರ್ ವೃತ್ತದ ಬಳಿ ಇದ್ದ ರೈತ ಬಸವರಾಜ ದೊಡ್ಡಮನಿ ಎಂಬುವವರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.

Burude Case: ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡಿ: ದೂರು

ಚಿನ್ನಯ್ಯನ ಬ್ರೈನ್ ಮ್ಯಾಪಿಂಗ್ ಮಾಡಿ: ದೂರು

ಹೈಕೋರ್ಟ್‌ಗೆ ನೀಡಿರುವ ಹೇಳಿಕೆಗಳನ್ನು ಯಾವುದೇ ಮಾಧ್ಯಮಗಳಿಗಾಗಲಿ ಅಥವಾ ಸಾಮಾಜಿಕ ಜಾಲತಾಣಗಳಿಗಾಗಲಿ ಬಹಿರಂಗಪಡಿಸಬಾರದು ಎಂಬ ಪ್ರಮುಖ ಷರತ್ತಿನ ಮೇರೆಗೆ ಚಿನ್ನಯ್ಯನಿಗೆ ಜಾಮೀನು ಮಂಜೂರಾಗಿತ್ತು. ಆದರೆ ಪ್ರಸ್ತುತ ಈ ಜಾಮೀನು ಷರತ್ತು ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸ ಲಾಗಿದೆ. ಹೀಗಾಗಿ, ಎಸ್‌ಐಟಿ ತಂಡ ತಕ್ಷಣವೇ ಕಾರ್ಯಪ್ರವೃತ್ತರಾಗಿ ಚಿನ್ನಯ್ಯನ ಜಾಮೀನನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಮಟ್ಟಣ್ಣವರ್ ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ

BJP Ghar Vaapsi: ಈಶ್ವರಪ್ಪ, ಯತ್ನಾಳ್, ಹೆಬ್ಬಾರ್, ಎಸ್‌ಟಿಎಸ್ ಮರಳಿ ಬಿಜೆಪಿಗೆ ?

ಈಶ್ವರಪ್ಪ, ಯತ್ನಾಳ್, ಹೆಬ್ಬಾರ್, ಎಸ್‌ಟಿಎಸ್ ಮರಳಿ ಬಿಜೆಪಿಗೆ ?

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ನಾಯಕತ್ವ ಬದಲಾದಂತೆ ಬಿಜೆಪಿಯಲ್ಲಿನ ರಾಜ್ಯಾ ಧ್ಯಕ್ಷರ ಆಯ್ಕೆ ಹಾಗೂ ಉಚ್ಚಾಟನೆಗೊಂಡವರ ಘರ್‌ವಾಪ್ಸಿಗೆ ವೇದಿಕೆ ಸಜ್ಜುಗೊಂಡಿದೆ. ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್, ಶಿವರಾಮ್ ಹೆಬ್ಬಾರ್ ಹಾಗೂ ಎಸ್.ಟಿ. ಸೋಮಶೇಖರ್‌ಗೆ ಮತ್ತೆ ಪಕ್ಷದ ಬಾಗಿಲುಗಳು ತೆರೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

Karnataka Weather: ಯೆಲ್ಲೋ ಅಲರ್ಟ್;‌ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

ಯೆಲ್ಲೋ ಅಲರ್ಟ್;‌ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ!

ರಾಜ್ಯದ ಕರಾವಳಿಯಲ್ಲಿ ಗಂಟೆಗೆ 40-50 ರಿಂದ 60 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ.

Loading...