Viral News: ಇನ್ನೇನ್ ನೋಡ್ಬೇಕೋ ಈ ಕಣ್ಣಲ್ಲಿ!? ChatGPT ಮಾತು ನಂಬಿ ಪತಿಗೆ ಡಿವೋರ್ಸ್ ಕೊಟ್ಟ ಮಹಿಳೆ ; ಏನಿದು ಘಟನೆ?
ಗ್ರೀಸ್‌ನಲ್ಲಿ ಮಹಿಳೆಯೊಬ್ಬಳು ಪತಿಗೆ ಅನೈತಿಕ ಸಂಬಂಧವಿದೆ ಎಂದು ಚಾಟ್‍ಜಿಪಿಟಿ ಹೇಳಿದ್ದಕ್ಕೆ ಆಕೆ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಈ ಆಘಾತಕಾರಿ ಘಟನೆಯನ್ನು ಪತಿ ಗ್ರೀಕ್ ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾನೆ.ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ಅಥೆನ್ಸ್: ಇತ್ತೀಚೆಗೆ ಚಾಟ್‌ಬಾಟ್‌ಗಳು ಮತ್ತು ಎಐ ಬೇಡಿಕೆ ಹೆಚ್ಚಾಗುತ್ತಿದೆ.ಕೆಲವರು ಒಂಟಿತನ ನೀಗಲು ಚಾಟ್‌ಬಾಟ್ ಮೊರೆ ಹೋಗುತ್ತಿದ್ದಾರೆ. ಗ್ರೀಸ್‌ನಲ್ಲಿ ಇತ್ತೀಚೆಗೆ ಎಐ ಮತ್ತು ಚಾಟ್‌ಬಾಟ್‌ನ ಸಲಹೆಯಿಂದಾಗಿ ಗ್ರೀಕ್ ವ್ಯಕ್ತಿಯೊಬ್ಬನ ವೈವಾಹಿಕ ಜೀವನ ಅಪಾಯಕ್ಕೆ ಸಿಲುಕಿದೆಯಂತೆ. ಆತನ ಪತ್ನಿ ಚಾಟ್‌ಬಾಟ್‌ನ ಮಾರ್ಗದರ್ಶನದ ಆಧಾರದ ಮೇಲೆ ತನ್ನ ವೈವಾಹಿಕ ಜೀವನವನ್ನು ಕೊನೆಗೊಳಿಸಲು ಮುಂದಾಗಿದ್ದಾಳಂತೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿತ್ತು.ಈ ಆಘಾತಕಾರಿ ಘಟನೆಯ ಕುರಿತು ಪತಿ ಗ್ರೀಕ್ ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾನೆ.
ಇತ್ತೀಚೆಗೆ ಆತನ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಭವಿಷ್ಯದ ಘಟನೆಗಳನ್ನು ಊಹಿಸಲು ಚಾಟ್‌ಜಿಪಿಟಿ ಕಾಫಿ ಗ್ರೌಂಡ್‍ನಲ್ಲಿ ಭಾಗವಹಿಸಿದ್ದಳು. ಅವಳು ತನಗಾಗಿ ಮತ್ತು ತನ್ನ ಪತಿಗಾಗಿ ಕಾಫಿ ತಯಾರಿಸಿ, ಕಾಫಿ ಗ್ರೌಂಡ್ ಫೋಟೊ ತೆಗೆದು ಅದನ್ನು ಚಾಟ್‌ಜಿಪಿಟಿಗೆ ಸಲ್ಲಿಸಿದ್ದಳಂತೆ. ಚಾಟ್‌ಬಾಟ್ ಆಕೆಯ ಪತಿ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಿದೆಯಂತೆ. ಇದರಿಂದ ಸಿಟ್ಟಾದ ಮಹಿಳೆ ವೈವಾಹಿಕ ಜೀವನವನ್ನು ಮುರಿದುಕೊಳ್ಳಲು ಮುಂದಾದಳಂತೆ.
ಚಾಟ್‌ಜಿಪಿಟಿಯ ಹೇಳಿದ್ದು ಸುಳ್ಳು ಎಂದು ಪತಿ ತಳ್ಳಿಹಾಕಿದರೂ, ಅತನ ಪತ್ನಿ ಮಾತ್ರ ಅದನ್ನು ನಿಜವೆಂದು ನಂಬಿದ್ದಾಳೆ. ಹಾಗಾಗಿ ಅವಳು ಪತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾಳೆ. ಅವಳು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ವಕೀಲರನ್ನು ಸಹ ಭೇಟಿಯಾಗಿದ್ದಾಳಂತೆ. ಆ ವ್ಯಕ್ತಿ ಪರಿಸ್ಥಿತಿಯ ಬಗ್ಗೆ ಎಷ್ಟೇ ತಿಳಿಹೇಳಿದರೂ ಆಕೆ ಕೇಳುತ್ತಿಲ್ಲವಂತೆ. ಹೀಗಾಗಿ ಎಐಯ ಭವಿಷ್ಯವಾಣಿ ಅವರ ಜೀವನದಲ್ಲಿ ಬಿರುಕು ಮೂಡಲು ಕಾರಣವಾಗಿದೆಯಂತೆ. ಆದರೆ AI- ನೀಡಿದ ಸಾಕ್ಷಿ ಕಾನೂನು ಒಪ್ಪದ ಕಾರಣ ಪತಿಯ ವಕೀಲರು ವಿಚ್ಛೇದನವನ್ನು ಪ್ರಶ್ನಿಸಿದ್ದಾರೆ. ಮತ್ತು ಆ ವ್ಯಕ್ತಿ ತಾನು ಎಂದಿಗೂ ಆಕೆಗೆ ದ್ರೋಹ ಮಾಡಿಲ್ಲ ಎಂದು ಒತ್ತಿಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಮಗಳಿಗೆ ಕಿರುಕುಳ ನೀಡಿದ ಯುವಕನಿಗೆ ಚಪ್ಪಲಿ ಸೇವೆ; ಈ ಮಹಾತಾಯಿಯ ವಿಡಿಯೊ ವೈರಲ್!
ಈ ಚಾಟ್‌ಜಿಪಿಟಿಯಿಂದ ಈ ದಂಪತಿಯ ವೈವಾಹಿಕ ಜೀವನ ಹಾಳಾಗಿದ್ದರೆ ಇನ್ನು ಕೆಲವರು ಇದರ ಸಲಹೆಯನ್ನು ಅನುಸರಿಸಿ ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಈ ಹಿಂದೆ ಉತ್ತರ ಕೆರೊಲಿನಾದ ಷಾರ್ಲೆಟ್ ಮೂಲದ ಎಂಟು ತಿಂಗಳ ಗರ್ಭಿಣಿಯೊಬ್ಬಳು ಚಾಟ್‍ಜಿಪಿಟಿಯ ಬಳಿ ಮೋಜಿಗಾಗಿ ಪ್ರಶ್ನೆಯೊಂದನ್ನು ಕೇಳಿದಾಗ ಎಐ ಚಾಟ್‍ಬಾಟ್ ಆಕೆಗೆ ತಕ್ಷಣ ಆಸ್ಪತ್ರೆಗೆ ಹೋಗುವಂತೆ ಹೇಳಿದೆ. ಅದರ ಮಾತನ್ನು ನಿರ್ಲಕ್ಷ್ಯ ಮಾಡದೇ ಆಕೆ ಆಸ್ಪತ್ರೆಗೆ ದಾಖಲಾದ ಕಾರಣ ಅವಳು ಹಾಗೂ ಅವಳ ಮಗು ಇಬ್ಬರ ಜೀವ ಉಳಿದಿದೆ. ಈ ವಿಚಾರವನ್ನು ಆಕೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಇದು ಈಗ ವೈರಲ್ ಆಗಿತ್ತು.