Nooru Janmaku Serial: ಕಲರ್ಸ್ ಕನ್ನಡದ ಮತ್ತೊಂದು ಧಾರಾವಾಹಿ ದಿಢೀರ್ ಮುಕ್ತಾಯ: ಬೇಸರಗೊಂಡ ಫ್ಯಾನ್ಸ್
ಕಲರ್ಸ್ ಕನ್ನಡದಲ್ಲಿ ಬಹುದೊಡ್ಡ ಬದಲಾವಣೆಯ ಸೂಚನೆ ಸಿಗುತ್ತಿದೆ. ವೀಕ್ಷಕರು ಇಷ್ಟ ಪಡದ ಮತ್ತು ಟಿಆರ್ಪಿ ಇಲ್ಲದ ಶೋಗಳಿಗೆ ಮತ್ತು ಧಾರಾವಾಹಿಗಳಿಗೆ ಗೇಟ್ಪಾಸ್ ನೀಡಲಾಗುತ್ತಿದೆ. ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮತ್ತೊಂದು ನೂರು ಜನ್ಮಕೂ ಸೀರಿಯಲ್ ಮುಕ್ತಾಯಕಂಡಿದೆ.

nooru janmaku serial

ಕಲರ್ಸ್ ಕನ್ನಡದಲ್ಲಿ (Colors Kannada) ಬಹುದೊಡ್ಡ ಬದಲಾವಣೆಯ ಸೂಚನೆ ಸಿಗುತ್ತಿದೆ. ವೀಕ್ಷಕರು ಇಷ್ಟ ಪಡದ ಮತ್ತು ಟಿಆರ್ಪಿ ಇಲ್ಲದ ಶೋಗಳಿಗೆ ಮತ್ತು ಧಾರಾವಾಹಿಗಳಿಗೆ ಗೇಟ್ಪಾಸ್ ನೀಡಲಾಗುತ್ತಿದೆ. ಈಗಾಗಲೇ ಬಾಯ್ಸ್ vs ಗರ್ಲ್ಸ್, ಮಜಾ ಟಾಕೀಸ್ ಶೋ ಅನ್ನು ಮುಗಿಸಿ ಹೊಸ ರಿಯಾಲಿಟಿ ಶೋ ಶುರು ಮಾಡಿದೆ. ಇದರ ಜೊತೆಗೆ ಧಾರಾವಾಹಿಗಳಿಗೂ ವಾಹಿನಿ ಗೇಟ್ ಪಾಸ್ ನೀಡಿದೆ. ಈ ವರ್ಷ ಮೊದಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಕಂಡಿತು. ಬಳಿಕ ಇತ್ತೀಚೆಗಷ್ಟೆ ವಧು ಧಾರಾವಾಹಿಯನ್ನು ಕೂಡ ಅರ್ಧಕ್ಕೆ ಕೊನೆಗೊಳಿಸಲಾಯಿತು.
ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ತಕ್ಷಣ ಶುರುವಾದ ವಧು ಸೀರಿಯಲ್ ಐದೇ ತಿಂಗಳಿಗೆ ಅಂತ್ಯವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಇದು ಸರಿಯಾಗಿ 100 ಸಂಚಿಕೆಗಳನ್ನೂ ಮುಟ್ಟಿರಲಿಲ್ಲ. ಈ ಆಘಾತದಿಂದ ಹೊರಬರುವ ಮುನ್ನವೆ ಇದೀಗ ಮತ್ತೊಂದು ಪ್ರಸಿದ್ಧ ಧಾರಾವಾಹಿ ದಿಢೀರ್ ಆಗಿ ಕೊನೆಗೊಂಡಿದೆ. ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನೂರು ಜನ್ಮಕೂ ಸೀರಿಯಲ್ ಮುಕ್ತಾಯಕಂಡಿದೆ.
ಹಾರರ್ - ಥ್ರಿಲ್ಲರ್ ಕಥಾಹಂದರ ಹೊಂದಿದ್ದ ನೂರು ಜನ್ಮಕೂ ಧಾರಾವಾಹಿ ಕಳೆದ ವರ್ಷಾಂತ್ಯದಿಂದ ಪ್ರಸಾರ ಕಾಣುತ್ತಿತ್ತು. ಡಿಸೆಂಬರ್ 23, 2024 ರಿಂದ ನೂರು ಜನ್ಮಕೂ ಸೀರಿಯಲ್ ಪ್ರಸಾರ ಆರಂಭವಾಯಿತು. ಮೊದಲು ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತಿತ್ತು. ಆದರೆ, 57 ಎಪಿಸೋಡ್‌ಗಳ ಬಳಿಕ ಏಕಾಏಕಿ ವೀಕೆಂಡ್ ಸ್ಲಾಟ್‌ಗೆ ಇದನ್ನು ಶಿಫ್ಟ್ ಆಯ್ತು. ಮಾರ್ಚ್ ತಿಂಗಳಿನಿಂದ ಬರೀ ಶನಿವಾರ ಹಾಗೂ ಭಾನುವಾರ ಮಾತ್ರ ನೂರು ಜನ್ಮಕೂ ಸೀರಿಯಲ್ ಟೆಲಿಕಾಸ್ಟ್ ಆಗುತ್ತಿತ್ತು.
Divya Uruduga: ದಿವ್ಯಾ ಉರುಡುಗ ಹೊಸ ಸಾಹಸ: ಬರೋಬ್ಬರಿ 13 ಸಾವಿರ ಅಡಿ ಎತ್ತರದಿಂದ ಕೆಳಗೆ ಜಿಗಿತ
ಆದರೀಗ ಕೇವಲ 88 ಸಂಚಿಕೆಗಳಿಗೆ ನೂರು ಜನ್ಮಕೂ ಎಂಡ್ ಆಗಿದೆ. ಈ ಸೀರಿಯಲ್‌ಗೆ ಹೀರೋ ಆಗಿ ಮೊದಲು ಗೀತಾ ಧಾರಾವಾಹಿಯ ಧನುಷ್ ಗೌಡ ಆಯ್ಕೆ ಆಗಿದ್ದರು. ಆದರೆ, ಇವರು ಈ ಧಾರಾವಾಹಿಯಿಂದ ದಿಢೀರ್ ಹೊರನಡೆದರು. ಆನಂತರ ಆ ಜಾಗಕ್ಕೆ ಸ್ನೇಹಿತ್ ಬಂದರು. ನೂರು ಜನ್ಮಕೂ ಸೀರಿಯಲ್‌ನಲ್ಲಿ ಸ್ನೇಹಿತ್, ಶಿಲ್ಪಾ ಕಾಮತ್, ಚಂದನಾ ಗೌಡ, ಅನುಪಲ್ಲವಿ ಗೌಡ, ಗಿರಿಜಾ ಲೋಕೇಶ್, ಶಾಲಿನಿ ಎಸ್ ರಾವ್, ಅರ್ಚನಾ ಉಡುಪಾ ಮುಂತಾದವರು ಅಭಿನಯಿಸುತ್ತಿದ್ದರು. ಟಿಆರ್‌ಪಿಯಲ್ಲಿ ಈ ಧಾರಾವಾಹಿ ಮೋಡಿ ಮಾಡದ ಕಾರಣ ಕೊನೆಗೊಳಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.