ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಬಟ್ಟೆ ಬಿಚ್ಚಿಕೊಂಡು ನಡುರಸ್ತೆಯಲ್ಲಿ ಪುಂಡರ ಅಟ್ಟಹಾಸ; ವಿಡಿಯೊ ನೋಡಿ

ಹರಿದ್ವಾರದ ಹೆದ್ದಾರಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯ ಜೊತೆ ಕಾರಿನಲ್ಲಿ ಬಂದ ಯುವಕರ ಗುಂಪೊಂದು ಅನುಚಿತವಾಗಿ ವರ್ತಿಸಿದೆ. ಈ ಘಟನೆಯನ್ನು ಆಕೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾಳೆ. ಇದು ಈಗ ವೈರಲ್(Viral Video) ಆಗಿದೆ.

ಬಟ್ಟೆ ಬಿಚ್ಚಿಕೊಂಡು ನಡುರಸ್ತೆಯಲ್ಲಿ ಪುಂಡರ ಅಟ್ಟಹಾಸ!

Profile pavithra Jun 16, 2025 4:39 PM

ಡೆಹ್ರಾಡೂನ್‌: ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಯುವಕರ ಗುಂಪೊಂದು ಚುಡಾಯಿಸಿದ ಘಟನೆ ಹರಿದ್ವಾರದ(Haridwar) ಹೈವೆಯಲ್ಲಿ ನಡೆದಿದೆ. ಅರೆನಗ್ನರಾಗಿ(Semi-Naked) ಕಾರಿನಲ್ಲಿ ಹೋಗುತ್ತಿದ್ದ ಯುವಕರು ಬೈಕ್‌ನಲ್ಲಿದ್ದ ಮಹಿಳೆಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟಿದ್ದು ಅಲ್ಲದೇ, ನಿಂದನೆಯನ್ನೂ ಮಾಡಿದ್ದಾರೆ. ಈ ಘಟನೆಯನ್ನು ಆಕೆ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಇದು ಈಗ ವೈರಲ್ (Viral Video) ಆಗಿದೆ.ವಿಡಿಯೊದಲ್ಲಿ ಯುವಕರು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸುವುದು ರೆಕಾರ್ಡ್ ಆಗಿದೆ. ಮಹಿಳೆ ಆ ಕಾರಿನ ನೋಂದಣಿ ಸಂಖ್ಯೆಯನ್ನು ಹಂಚಿಕೊಂಡಿದ್ದು, ಆರೋಪಿಗಳ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾಳೆ.

ವೈರಲ್ ಆದ ವಿಡಿಯೊದಲ್ಲಿ ಮಹಿಳೆಯೊಬ್ಬಳು ಬೈಕ್ ಓಡಿಸಿಕೊಂಡು ಉತ್ತರಾಖಂಡದ ಹರಿದ್ವಾರದ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ, ಕಾರೊಂದು ವೇಗವಾಗಿ ಬಂದಿತ್ತು. ಅದರೊಳಗಿದ್ದ ಯುವಕರು ಶರ್ಟ್ ತೆಗೆದು ಕಾರಿನ ಕಿಟಕಿಯಲ್ಲಿ ಕುಳಿತುಕೊಂಡು ಮಹಿಳೆಯೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.ಆ ಮಹಿಳೆ ವಿಡಿಯೊದಲ್ಲಿ ಅವರು ಉತ್ತರ ಪ್ರದೇಶದ ಗೂಂಡಾಗಳು ಎಂದು ಕೂಗಿದ್ದಳು.

ವಿಡಿಯೊ ಇಲ್ಲಿದೆ ನೋಡಿ...

ಅವಳು ಈ ವಿಡಿಯೊವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾಳೆ. ಆ ಪೋಸ್ಟ್‌ನಲ್ಲಿ ಉತ್ತರಾಖಂಡ ಪೊಲೀಸ್ ಇಲಾಖೆಯನ್ನು ಟ್ಯಾಗ್ ಮಾಡುವುದರೊಂದಿಗೆ, ಆರೋಪಿಗಳನ್ನು ಗುರುತಿಸಲು ಮತ್ತು ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ನೆಟ್ಟಿಗರು ಸಾಧ್ಯವಾದಷ್ಟು ಹೆಚ್ಚು ಈ ವಿಡಿಯೊವನ್ನು ಹಂಚಿಕೊಳ್ಳುವಂತೆ ವಿನಂತಿಸಿದ್ದಾಳೆ. ಆದರೆ ಈ ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಪೊಲೀಸ್ ಕ್ರಮದ ವರದಿಗಳು ಇಲ್ಲ.

ಬೈಕ್ ಓಡಿಸುತ್ತಿದ್ದ ಮಹಿಳೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ "ರೈಡರ್ ನೊನಿ" ಎಂದು ಗುರುತಿಸಲಾಗಿದೆ ಮತ್ತು ಅವಳು ಸುಮಾರು 326K ಫಾಲೋವರ್ಸ್‍ಗಳನ್ನು ಹೊಂದಿದ್ದಾಳೆ. ಆಕೆ ಪೋಸ್ಟ್ ಮಾಡಿದ ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, ನೆಟ್ಟಿಗರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಪೊಲೀಸರ ಬಳಿ ವಿನಂತಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ರೈಲಿನಲ್ಲಿ ಮರ್ಮಾಂಗ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ರಾಹಿಂ ಅರೆಸ್ಟ್‌

ಈ ಹಿಂದೆ ಹರಿದ್ವಾರದ ರೈಲ್ವೆ ನಿಲ್ದಾಣದ ಸುತ್ತಮುತ್ತನ ದಾರಿಹೋಕರಿಗೆ ಅಶ್ಲೀಲ ಸನ್ನೆ ಮಾಡಿದ ಆರು ಮಹಿಳೆಯರನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದರು.ಈ ಘಟನೆಯಲ್ಲಿ ಕೆಲವು ಮಹಿಳೆಯರು ಸಂಜೆಯ ವೇಳೆ ಅಶ್ಲೀಲ ಸನ್ನೆಗಳನ್ನು ಮಾಡುವ ಮೂಲಕ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿದ್ದರು. ಇದರಿಂದ ಪೊಲೀಸರು ಅವರನ್ನು ಬಂಧಿಸಿ ಮತ್ತೆ ಅಂತಹ ಕೆಲಸ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಹಾಗೂ ಮಹಿಳೆಯರಿಗೆ ದಂಡ ವಿಧಿಸಿದ್ದರು ಎನ್ನಲಾಗಿದೆ.